Search
  • Follow NativePlanet
Share
» »ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?

ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?

By Vijay

ನೀವು ಭಾರತದ ಯಾವ ಸ್ಥಳದಲ್ಲೆ ಇರಿ. ಖಂಡಿತವಾಗಿಯೂ ನಿಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಶಿವನ ದೇವಾಲಯ ಇದ್ದೆ ಇರುತ್ತದೆ. ಅಷ್ಟೊಂದು ಪ್ರಖ್ಯಾತನಾಗಿದ್ದಾನೆ ನಮ್ಮ ಶಿವ. ಇನ್ನೊಂದು ವಿಷಯವೆಂದರೆ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಶಿವನ ದೇವಾಲಯದಲ್ಲಿ ಶಿವನ ವಿಗ್ರಹದ ಬದಲು ಶಿವಲಿಂಗವನ್ನೆ ಕಾಣುತ್ತೆವೆ.

ಅಂದರೆ ಶಿವನ ವಿಗ್ರಹವಿರುವ ದೇವಾಲಯ ಇಲ್ಲವಂತೇನಿಲ್ಲ. ಆದರೆ ಶಿವನನ್ನು ಮೂಲ ರುಪದಲಿ ಪ್ರತಿನಿಧಿಸುವ ಶಿವಲಿಂಗವನ್ನೆ ಎಲ್ಲೆಡೆ ಹೆಚ್ಚಾಗಿ ಆರಾಧಿಸಲಾಗುತ್ತದೆ. ಇನ್ನೂ ಶಿವಲಿಂಗದ ರಚನೆಯೂ ಸಹ ಸಾಕಷ್ಟು ಅನನ್ಯ ಹಾಗೂ ವಿಶಿಷ್ಟವಾಗಿದೆ. ಜೀವೋದ್ಭವದ ತತ್ವ ಸಾರುವ ಈ ರಚನೆಯು ತತ್ವಜ್ಞಾನಿಗಳು ವಿಶ್ಲೇಷಿಸುವ ಪ್ರಕಾರ ಲಿಂಗ ಹಾಗೂ ಯೋನಿಯನ್ನು ಒಳಗೊಂಡಿರುವುದೆ ಸಾಕಷ್ಟು ವಿಶೇಷವಾಗಿದೆ.

ನಾವು ಭಾರತೀಯರಿಗೆಲ್ಲ ಅದರಲ್ಲೂ ಹಿಂದು ಧರ್ಮದವರಿಗೆ ಶಿವಲಿಂಗದ ಕುರಿತು ಹುಟ್ಟಿದಾಗಿನಿಂದಲೂ ಬೆಳೆಯುತ್ತ ಬೆಳೆಯುತ್ತ ಸಾಕಷ್ಟು ಶಿವಲಿಂಗದ ಕುರಿತು ಕೇಳಿರುವುದರಿಂದ ಅಷ್ಟೊಂದೇನೂ ಅನಿಸುವುದಿಲ್ಲವಾದರೂ ಪಾಶ್ಚಾತ್ಯರಿಗೆ ಈ ಶಿವಲಿಂಗವು ಒಂದು ಕೌತುಕಮಯ ರಚನೆಯಾಗಿಯೆ ಕಂಡುಬರುತ್ತದೆ.

ಪ್ರಸ್ತುತ ಲೇಖನದ ಮೂಲಕ ಭಾರತದ ವಿವಿಧ ಸ್ಥಳಗಳಲ್ಲಿ ಕಂಡುಬರುವ ಕೆಲವು ಆಯ್ದ, ಅನನ್ಯ ಹಾಗೂ ಶಕ್ತಿಶಾಲಿಯಾಗಿರುವ ಶಿವಲಿಂಗಗಳ ಕುರಿತು ತಿಳಿಯಿರಿ.

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ.

ಚಿತ್ರಕೃಪೆ: Gktambe

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಹಂಪಿಯ ಕಲ್ಲು ಹಾಸಿಗೆಯ ಶಿವಲಿಂಗಗಳು : ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣವಾದ ಬಳ್ಳಾರಿ ಜಿಲ್ಲೆಯ ಹಂಪಿಯ ತುಂಗಭದ್ರಾ ನದಿಯ ತಟದಲ್ಲಿರುವ ಕಲ್ಲು ಬಂಡೆಗಳ ಕಲ್ಲು ಹಾಸಿನ ಮೇಲೆ 1008 ಶಿವಲಿಂಗಗಳನ್ನು ಕೆತ್ತಲಾಗಿದ್ದು ಪ್ರವಾಸಿಗರ ಸಾಕಷ್ಟು ಗಮನ ಸೆಳೆಯುತ್ತವೆ.

ಚಿತ್ರಕೃಪೆ: Pratheepps

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ವೆರಿನಾಗ್ ನಲ್ಲಿರುವ ಒಮೋಹ್ ದೇವಾಲಯದಲ್ಲಿರುವ ವಿಶೇಷವಾಗಿ ಕಂಡುಬರುವ ಶಿವಲಿಂಗ. ಸಾಕಷ್ಟು ಪ್ರಭಾವಶಾಲಿಯಾಗಿರುವ ಈ ಶಿವಲಿಂಗವನ್ನು ಭಕ್ತಿಯಿಂದ ಪೂಜಿಸಿದರೆ ಶಿವನ ಕೃಪೆ ಶೀಘ್ರವಾಗಿ ಲಭಿಸುತ್ತದೆ ಎನ್ನಲಾಗಿತ್ತದೆ.

ಚಿತ್ರಕೃಪೆ: Akshey25

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಹಾಸನ ಜಿಲ್ಲೆಯ ಹೊಯ್ಸಳೇಶ್ವರ ದೇವಾಲಯದ ಗರ್ಭಗೃಹದಲ್ಲಿರುವ ಹೊಯ್ಸಳೇಶ್ವರನಾಗಿ ನೆಲೆಸಿರುವ ಶಿವಲಿಂಗ. ಗರ್ಭಗೃಹದ ಬಾಗಿಲು ತೆರೆಯುತ್ತಿದ್ದಂತೆ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತೆ, ಮೈಮನಗಳು ಪುಳಕಿತಗೊಳುವಂತೆ ರಚನೆ ಮಾಡಲಾದ ಈ ಶಿವಲಿಂಗ ಸಾಕಷ್ಟು ಗಮನ ಸೆಳೆಯುತ್ತದೆ.

ಚಿತ್ರಕೃಪೆ: Anks.manuja

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಕರ್ನಾಟಕದ ಕೋಲಾರದಲ್ಲಿರುವ ಕೋಟಿ ಲಿಂಗೇಶ್ವರನ ಸನ್ನಿಧಿ. ದೊಡ್ಡದಾದ ಶಿವಲಿಂಗದ ಜೊತೆಗೆ ಈ ದೇವಾಲಯ ಸಂಕೀರ್ಣದಲ್ಲಿರುವ ಸ್ಥಳದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಶಿವಲಿಂಗಗಳನ್ನು ಸ್ಥಾಪಿಸಲಾಗಿದ್ದು ನೋಡುಗರನ್ನು ಬೆರುಗುಗೊಳಿಸುತ್ತದೆ.

ಚಿತ್ರಕೃಪೆ: gsnewid

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಹಂಪಿಯಲ್ಲಿರುವ ಬಡವಿ ಲಿಂಗವಿದು. ರೋಚಕವಾದ ಹಿನ್ನಿಲೆ ಹೊಂದಿರುವ ಈ ದೊಡ್ಡ ಗಾತ್ರದ ಶಿವಲಿಂಗವಿರುವ ಕೋಣೆಯು ಸದಾ ನೀರಿನಿಂದಲೆ ತುಂಬಿರುತ್ತದೆ. ಹಂಪಿಗೆ ಭೇಟಿ ನೀಡುವ ಪ್ರವಾಸಿಗರನ್ನು ಗಮನಸೆಳೆಯುವ ರಚನೆಗಳಲ್ಲಿ ಇದೂ ಸಹ ಒಂದು.

ಚಿತ್ರಕೃಪೆ: Arun Varadarajan

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಮಧ್ಯಪ್ರದೇಶದ ಮಹೇಶ್ವರದಲ್ಲಿ ಹರಿದಿರುವ ನರ್ಮದಾ ನದಿಯಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗ ಹಾಗೂ ನಂದಿ. ಪುರುಷ ಹಾಗೂ ಪ್ರಕೃತಿಯ (ನಾರಿ) ಸಮಾಗಮ ಸೂಚಿಸುವ ಈ ಶಿವಲಿಂಗದ ಸ್ಥಳ ಸಾಕಷ್ಟು ಪವಿತ್ರವಾಗಿದ್ದು ಇಲ್ಲಿನ ಸ್ನಾನ ಸಕಲ ಪಾಪಕರ್ಮಗಳನ್ನು ನಿವಾರಿಸುತ್ತದೆ ಎನ್ನಲಾಗಿದೆ.

ಚಿತ್ರಕೃಪೆ: nevil zaveri

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಮಧ್ಯಪ್ರದೇಶದ ಭೋಜಪುರ ಗ್ರಾಮದಲ್ಲಿರುವ ಐತಿಹಾಸಿಕ ಭೋಜೇಶ್ವರ ದೇವಾಲಯದ ಶಿವಲಿಂಗವು ಏಳುವರೆ ಅಡಿಗಳಷ್ಟು ಎತ್ತರವಿದ್ದು ರಾಜ್ಯದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.

ಚಿತ್ರಕೃಪೆ: Yann

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಮಧ್ಯ ಪ್ರದೇಶದ ವಿದಿಶಾದಲ್ಲಿರುವ ಉದಯಗಿರಿ ಗುಹೆಗಳಲ್ಲಿ ಕಂಡುಬರುವ ಮುಖಲಿಂಗ. ಇದು ಸಾಕಷ್ಟು ವಿಶೇಷವಾದ ವಿನ್ಯಾಸ ಹೊಂದಿರುವ ಶಿವಲಿಂಗವಾಗಿದೆ.

ಚಿತ್ರಕೃಪೆ: Zippymarmalade

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಮಹಾರಾಷ್ಟ್ರದ ಹರಿಶ್ಚಂದ್ರಗಡ್ ನಲ್ಲಿರುವ ಕೇದಾರೇಶ್ವರ ದೇವಾಲಯದಲ್ಲಿರುವ ನೀರಿನಿಂದ ಆವೃತವಗಿರುವ ಶಿವಲಿಂಗ. ಈ ಶಿವಲಿಂಗದ ಛಾವಣಿಯ ನಾಲ್ಕು ಖಂಬಗಳು ನಾಲ್ಕು ಯುಗಗಳನ್ನು ಸೂಚಿಸುವುದಾಗಿಯೂ ಅದರಲ್ಲೀಗಾಗಲೆ ಮೂರು ಖಂಬಗಳು ನಶಿಸಿರುವುದು ಮೂರು ಯುಗಗಳು ಸಮಾಪ್ತವಾಗಿರುವುದನ್ನು ಸಂಕೇತಿಸುತ್ತವಂತೆ.

ಚಿತ್ರಕೃಪೆ: rohit gowaikar

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಒಡಿಶಾದ ಬಲಸೋರ್ ಜಿಲ್ಲೆಯ ಭೋಗರೈ ಎಂಬ ಗ್ರಾಮದಲ್ಲಿರುವ ಭೂಸಂದೇಶ್ವರ ದೇವಾಲಯದ ಶಿವಲಿಂಗ. ಇದು ರಾಜ್ಯದ ಅತಿ ದೊಡ್ಡದಾದ ಶಿವಲಿಂಗವಾಗಿದ್ದು ಸಾಕಷ್ಟು ಜಾಗೃತ ಸ್ಥಳ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಕೃಪೆ: Monjit.paul

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ತಮಿಳುನಾಡಿನ ಶ್ರೀರಂಗಂನ ಜಂಬುಕೇಶ್ವರ ದೇವಾಲಯದಲ್ಲಿರುವ ಪ್ರಭಾವಶಾಲಿ ಶಿವಲಿಂಗ. ಈ ಶಿವಲಿಂಗವನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೊ ಅವರಿಗೆ ಸಕಲ ಸಮ್ಪತ್ತುಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಕಾರಣ ಇದನ್ನು ಕುಬೇರಲಿಂಗ ಎಂದು ಕರೆಯುತ್ತಾರೆ.

ಚಿತ್ರಕೃಪೆ: Ilya Mauter

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯ ಜೌನ್ಸಾರ್-ಬವಾರ್ ಪ್ರದೇಶದಲ್ಲಿರುವ ಲಖಮಂಡಲ ದೇವಾಲಯದಲ್ಲಿರುವ ತೆರೆದ ಛಾವಣಿಯ ಶಿವಲಿಂಗ ಇದಾಗಿದೆ.

ಚಿತ್ರಕೃಪೆ: Bpmnnit

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಮಲಕೋಟ ಪಟ್ಟಣದಲ್ಲಿ ಕುಮಾರರಾಮ ಭೀಮೇಶ್ವರ ದೇವಾಲಯದಲ್ಲಿರುವ ಶಿವಲಿಂಗ.

ಚಿತ್ರಕೃಪೆ: Palagiri

ಕೆಲವು ಅನನ್ಯ ಶಿವಲಿಂಗಗಳು:

ಕೆಲವು ಅನನ್ಯ ಶಿವಲಿಂಗಗಳು:

ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿರುವ ವಿಶ್ವ ಖ್ಯಾತಿಯ ಬೃಹದೀಶ್ವರ ದೇವಸ್ಥಾನದಲ್ಲಿರುವ ಬೃಹತ್ ಏಕಶಿಲಾ ಶಿವಲಿಂಗ.

ಚಿತ್ರಕೃಪೆ: Shefali11011

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X