Search
  • Follow NativePlanet
Share
» » ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?

ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಕುವೆಂಪು ಅವರ ಮನೆಯನ್ನು ನೋಡಿದ್ದೀರಾ? ಕುವೆಂಪು ಅವರಿಗೆ ಸಂಬಂಧಿಸಿದ ಎಲ್ಲಾ ರೀತಿಯ ವಸ್ತುಗಳು, ಅವರ ನೆನಪುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಕುವೆಂಪು ಅವರ ಕವಿತೆಗಳ ಹಾಡು ಎಲ್ಲರ ಕಿವಿಗೆ ಕಂಪನ್ನು ನೀಡುತ್ತದೆ. ಒಂದು ವೇಳೆ ನೀವು ಕುವೆಂಪು ಅವರ ಮನೆ ಹೇಗಿದೆ ಎನ್ನುವುದನ್ನು ನೋಡಿಲ್ಲವೆಂದಾದಲ್ಲಿ ಇಲ್ಲಿದೆ ಕುವೆಂಪು ಅವರ ಮನೆಯ ಒಂದು ನೋಟ.

ಕುವೆಂಪು ಜನಿಸಿದ ಊರು

ಕುವೆಂಪು ಜನಿಸಿದ ಊರು

PC: Amarrg

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪುರವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಿಡಲಾಗಿದೆ . 150ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆಯನ್ನು 2001 ರಲ್ಲಿ ಪುನರ್ ನಿರ್ಮಿಸಲಾಯಿತು.

ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಕವಿ ಮದುವೆಯಾದ ಮಂಟಪವನ್ನೂ ಕಾಣಬಹುದು

ಕವಿ ಮದುವೆಯಾದ ಮಂಟಪವನ್ನೂ ಕಾಣಬಹುದು

PC:Amarrg

ಮುಖ್ಯದ್ವಾರದ ಮೂಲಕ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮೂರು ದಿಕ್ಕಿಗೂ ಚೌಕಿಗಳುಳ್ಳ ಮೂರು ಅಂತಸ್ತಿನ ಹೆಮ್ಮನೆಯ ಒಳಾಂಗಣದ ದರ್ಶನವಾಗುತ್ತದೆ. ಅಂಗಳದ ನಡುವಿನ ತುಳಸಿ ಕಟ್ಟೆ ಗಮನ ಸೆಳೆಯುತ್ತದೆ. ಮನೆಯಲ್ಲಿ ದೊಡ್ಡ ಕಲಬಿಗಲು, ಕವಿ ಮದುವೆಯಾದ ಮಂಟಪ, ದಂಡಿಗೆ, ಕವಿಮನೆಯ ಹಳೆಯಬಾಗಿಲು ಮುಂತಾದ ದೊಡ್ಡ ವಸ್ತುಗಳನ್ನು ಇಡಲಾಗಿದೆ. ಇವುಗಳನ್ನು ನೋಡುತ್ತಾ ಮುಂದೆ ಸಾಗಿ ಎಡಕ್ಕಿರುವ ಬಾಗಿಲಿನಿಂದ ಆಚೆ ದಾಟಿದರೆ ಕವಿಯ ಅಜ್ಜಯ್ಯ ಅಭ್ಯಂಜನ ಮಾಡಿದಂಥ ಮಲೆನಾಡ ಬಚ್ಚಲು ಮನೆಯ ಮಾದರಿಯನ್ನು ನೋಡಬಹುದು.

ಇದನ್ನೂ ಓದಿ: ಬಾಹುಬಲಿಯ ಮಾಹಿಷ್ಮತಿ ಸಾಮ್ರಾಜ್ಯವನ್ನು ಕಣ್ಣಾರೆ ನೋಡ್ಬೇಕಾ....ಹಾಗಾದ್ರೆ ಇಲ್ಲಿಗೆ ಹೋಗಿ

ಪೂರ್ಣಚಂದ್ರ ತೇಜಸ್ವಿ ಸ್ಮಾರಕ

ಪೂರ್ಣಚಂದ್ರ ತೇಜಸ್ವಿ ಸ್ಮಾರಕ

PC:Manasagn

ಬೆಟ್ಟವನ್ನು ತಾರು ರಸ್ತೆಯ ಮೂಲಕ ಇಳಿದು ಬಂದರೆ ಅಡ್ಡರಸ್ತೆಗೆ ಸೇರುವಲ್ಲಿ ಎದುರಿಗೆ, ಕವಿಶೈಲದ ತಪ್ಪಲಿನಲ್ಲಿ, ಕವಿಪುತ್ರ ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕವಿದೆ. ತೇಜಸ್ವಿಯವರ ಅಂತ್ಯ ಸಂಸ್ಕಾರ ಮಾಡಿದ ಸ್ಥಳ ಇದಾಗಿದೆ.

ಮಲೆನಾಡ ಶೈಲಿಯ ಶತಮಾನೋತ್ಸವ ಭವನ

ಮಲೆನಾಡ ಶೈಲಿಯ ಶತಮಾನೋತ್ಸವ ಭವನ

PC: Manasagn

ಮಲೆನಾಡ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿತವಾಗಿರುವ ಕಟ್ಟಡವೇ ಶತಮಾನೋತ್ಸವ ಭವನ. ಕವಿಯ ಜನ್ಮಶತಾಬ್ದಿಯ ಸ್ಮಾರಕವಾಗಿ 2004 ರಲ್ಲಿ ಈ ಬಹೂಪಯೊಗಿ ಕಟ್ಟಡವನ್ನು ಕಟ್ಟಲಾಗಿದೆ. ಕಟ್ಟಡದೆದುರಿನ ಇಳಿಜಾರನ್ನು ಬಯಲು ರಂಗವನ್ನಾಗಿ ಮಾಡಲಾಗಿದೆ. ಹಂಪಿ ಕನ್ನಡ ವಿ.ವಿ.ಯ ಅಧ್ಯಯನ ಕೇಂದ್ರ ಇಲ್ಲಿ ಕೆಲಸ ಮಾಡುತ್ತಿದೆ. ಒಳನಡೆದರೆ ವಿಶಾಲ ತೊಟ್ಟಿ, ಎದುರಿಗೆ ಹೇಮಾಂಗಣ, ನೇಪಥ್ಯ, ದ್ವನಿ ಬೆಳಕಿನ ವ್ಯವಸ್ಥೆ ಹೊಂದಿ ಸಭೆ, ಗೋಷ್ಠಿ, ನಾಟ್ಯ, ನಾಟಕಗಳಿಗೆ ಅನುಕೂಲತೆ ಒದಗಿಸಿದೆ. ಬಲಭಾಗದ ಚೌಕಿಯ ಅರ್ಧ ಭಾಗದಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ವಸತಿಗೆ ಮುಂಚಿತವಾಗಿ ಕಾದಿರಿಸುವ ಸೌಲಭ್ಯವು ಇದೆ. ಕುವೆಂಪು ತತ್ವ ಆದರ್ಶಗಳನ್ನು ಒಪ್ಪಿ ಮಂತ್ರ ಮಾಂಗಲ್ಯ ವಿಧಾನದಲ್ಲಿ ಮದುವೆಯಾಗಲಿಚ್ಚಿಸುವವರಿಗೆ ಹೇಮಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕವಿ ಸಮಾಧಿ

ಕವಿ ಸಮಾಧಿ

ಕವಿ ಮನೆಯ ಹಿಮ್ಮಗ್ಗುಲಲ್ಲಿರುವ ಬೆಟ್ಟಕ್ಕೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕಲ್ಲು ಮಂಟಪಗಳಿವೆ. ಗುಡ್ಡವನ್ನು ತಲುಪುತ್ತಿದ್ದಂತೆ ಕವಿ ಸಮಾಧಿ ಕಾಣಸಿಗುತ್ತದೆ. ಈ ತಾಣದ ಸುತ್ತಲೂ ಹಸಿರು ಹಾಸನ್ನು ಬೆಳೆಸಲಾಗಿದೆ. ಇಲ್ಲಿ ದೊಡ್ಡ ವೃತ್ತಾಕಾರದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿ ನಿಲ್ಲಿಸಿರುವ ಶಿಲಾಸ್ಮಾರಕಗಳಿವೆ.

ಬಣ್ಣ ಬದಲಾಯಿಸುವ ಗಣಪನ ಬಗ್ಗೆ ಕೇಳಿದ್ದೀರಾ?

ಮನೆಇಡೀ ಕುವೆಂಪು ಕವಿತೆಗಳ ಸುಮಧುರ ಸಂಗೀತ

ಮನೆಇಡೀ ಕುವೆಂಪು ಕವಿತೆಗಳ ಸುಮಧುರ ಸಂಗೀತ

PC:Rayabhari

ನಮ್ಮ ಕಿವಿಯ ಮೇಲೆ ಕುವೆಂಪು ಕವಿತೆಗಳ ಸುಮಧುರ ಸಂಗೀತ ಬೀಳುತ್ತಿರುತ್ತದೆ. ವೀಕ್ಷಕ ಮನೆಯ ಯಾವ ಭಾಗದಲ್ಲಿದ್ದರೂ ಇದು ಅವನಿಗೆ ಕೇಳಿಬರುವಂತೆ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಕುವೆಂಪು ಅಭಿಮಾನಿಗಳಿಗಾಗಿ ಎಡಚೌಕಿಯ ತುದಿಯ ಚಿಕ್ಕಕೋಣೆಯಲ್ಲಿ ಕುವೆಂಪು ಕೃತಿಗಳು, ಅವರ ಕುರಿತ ಪುಸ್ತಕ, ಧ್ವನಿ ಮುದ್ರಿಕೆ, ದೃಶ್ಯಮುದ್ರಿಕೆ, ಛಾಯಾಚಿತ್ರ ಮುಂತಾದವುಗಳ ಸೌಕರ್ಯವಿದೆ.

Read more about: india shimoga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X