Search
  • Follow NativePlanet
Share
» » ಸೂರ್ಯಾಸ್ತದ ನಂತರ ಇಲ್ಲಿಗೆ ಹೋದವರು ಹಿಂದಿರುಗಿ ಬರೋಲ್ಲ !

ಸೂರ್ಯಾಸ್ತದ ನಂತರ ಇಲ್ಲಿಗೆ ಹೋದವರು ಹಿಂದಿರುಗಿ ಬರೋಲ್ಲ !

ರಾಜಸ್ತಾನದ ಬಾನ್‌ಘಡ್ ಕೋಟೆಯ ಕಥೆ ಬಹಳ ರೋಚಕವಾದುದು. ಬಾನ್‌ಘಡ್‌ನ ಭಯಾನಕ ಕಥೆಯ ಬಗ್ಗೆ ನೀವು ಕೇಳಿರಬಹುದು. ಇಲ್ಲಿ ಅತೃಪ್ತ ಆತ್ಮಗಳು ಅಲೆದಾಡುತ್ತಿವೆ ಎನ್ನುವುದು ಅಲ್ಲಿನ ಜನರ ಅಭಿಪ್ರಾಯ. ಹಿಂದೊಮ್ಮೆ ವೈಭವದ ಕೋಟೆಯಾಗಿದ್ದ ಇದು ಇಂದು ಒಂದು ಭಯಾನಕ ಕೋಟೆಯಾಗಿ ಉಳಿದಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ನಾವು ತಿಳಿಯೋಣ.

ಯಾರು ನಿರ್ಮಿಸಿದ್ದು ಈ ಕೋಟೆ?

ಯಾರು ನಿರ್ಮಿಸಿದ್ದು ಈ ಕೋಟೆ?

PC: Arindambasu2

ಬಾನ್‌ಘಡ್ ಕೋಟೆಯನ್ನು ಭಗವತ್‌ದಾಸ್‌ ತನ್ನ ಮಗ ಮಾದೋ ಸಿಂಗ್‌ಗಾಗಿ ನಿರ್ಮಿಸಿದ್ದು. ಬಾನಘಡ್‌ನ ರಾಜಕುಮಾರಿ ರತ್ನಾವತಿ ರೂಪವತಿಯಾಗಿದ್ದಳು. ಅನೇಕ ರಾಜ್ಯದಿಂದ ರಾಜಕುಮಾರರು ಆಕೆಯನ್ನು ವರಿಸಲು ಸಿದ್ಧರಿದ್ದರು. ಸಾಕಷ್ಟು ವಿವಾಹ ಪ್ರಸ್ತಾವನೆಗಳು ಬರುತ್ತಿದ್ದವು.

ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!

ಪ್ರವಾಸಿ ಕೇಂದ್ರ

ಪ್ರವಾಸಿ ಕೇಂದ್ರ

PC: Manan2707

ಇದೊಂದು ರಾಜಸ್ತಾನದ ಪ್ರವಾಸಿ ಕೇಂದ್ರವೂ ಹೌದು. ಭಾರತೀಯರಷ್ಟೇ ಅಲ್ಲ ವಿದೇಶಿಯರು ಈ ಕೋಟೆಯನ್ನು ನೋಡಲು ಬರುತ್ತಾರೆ. ಈ ಕೋಟೆಯ ಬಗೆಗಿನ ಕಥೆಯು ಬಹಳ ಆಸಕ್ತಿದಾಯಕವಾಗಿದೆ.

ರಾಜಕುಮಾರಿಯ ಮೋಹಕ್ಕೊಳಗಾದ ಮಂತ್ರವಾದಿ

ರಾಜಕುಮಾರಿಯ ಮೋಹಕ್ಕೊಳಗಾದ ಮಂತ್ರವಾದಿ

PC:C980040

ರಾಜಕುಮಾರಿ ಒಮ್ಮೆ ತನ್ನ ಸಖಿಯರ ಜೊತೆ ಮಾರುಕಟ್ಟೆಗೆ ಹೋಗಿದ್ದಳು. ಅಲ್ಲಿ ಸುಗಂಧದೃವ್ಯದ ಸುವಾಸನೆಯನ್ನು ತೆಗೆದುಕೊಳ್ಲುತ್ತಿದ್ದಳು ಇದನ್ನು ಮಾಂತ್ರಿಕನೊಬ್ಬ ನೋಡುತ್ತಾನೆ, ರಾಜಕುಮಾರಿಯ ರೂಪಕ್ಕೆ ಮರುಳಾಗಿ ಆಕೆಯನ್ನು ವಶೀಕರಣದ ಮೂಲಕ ತನ್ನವಳನ್ನಾಗಿಸಲು ಯತ್ನಿಸುತ್ತಾನೆ. ಆದರೆ ಅದು ಸಫಲವಾಗದೆ ತನ್ನ ಜಾಲದಲ್ಲಿ ತಾನೇ ಬಿದ್ದು ಸಾಯುತ್ತಾನೆ.

ಬಾನ್‌ಘಡ್‌ ನಾಶದ ಶಾಪ

ಬಾನ್‌ಘಡ್‌ ನಾಶದ ಶಾಪ

PC:Shahnawaz Sid

ಸಾಯುವ ಮುನ್ನ ಮಾಂತ್ರಿಕ ಬಾನ್‌ಘಡ್‌ ನಾಶವಾಗುವ ಶಾಪನೀಡುತ್ತಾನೆ. ಆ ಕೋಟೆಯಲ್ಲಿ ಇರುವ ಯಾರೂ ನೆಮ್ಮದಿಯಾಗಿರಬಾರದು , ಎಲ್ಲರೂ ಸಾಯಬೇಕು. ಅವರ ಆತ್ಮ ಮೋಕ್ಷಕ್ಕಾಗಿ ಅಲೆದಾಡಬೇಕು ಎಂದು ಶಾಪ ನೀಡಿದ್ದನು. ಅದರಂತೆಯೇ ಇಂದಿಗೂ ಆ ಕೋಟೆಯಲ್ಲಿ ಆತ್ಮಗಳು ಅಲೆದಾಡುತ್ತಿವೆ ಎನ್ನಲಾಗುತ್ತದೆ.

ಧಾರವಾಡದ ನುಗ್ಗೇಕೇರಿ ಆಂಜನೇಯನ ಸನ್ನಿಧಿಗೆ ಹೋದ್ರೆ ಇಷ್ಟಾರ್ಥ ಸಿದ್ಧಿಧಾರವಾಡದ ನುಗ್ಗೇಕೇರಿ ಆಂಜನೇಯನ ಸನ್ನಿಧಿಗೆ ಹೋದ್ರೆ ಇಷ್ಟಾರ್ಥ ಸಿದ್ಧಿ

ಯುದ್ಧದಲ್ಲಿ ಎಲ್ಲರೂ ಸಾವನ್ನಪ್ಪುತ್ತಾರೆ

ಯುದ್ಧದಲ್ಲಿ ಎಲ್ಲರೂ ಸಾವನ್ನಪ್ಪುತ್ತಾರೆ

ತಾಂತ್ರಿಕ ಸಾವನ್ನಪ್ಪಿದ ಕೆಲವೇ ಸಮಯದಲ್ಲಿ ಯುದ್ಧದಲ್ಲಿ ಈ ಕೋಟೆಯಲ್ಲಿದ್ದ ಎಲ್ಲರೂ ಸಾವನ್ನಪ್ಪುತ್ತಾರೆ. ರಾಜಕುಮಾರಿಯೂ ಸಾವನ್ನಪ್ಪುತ್ತಾಳೆ. ಇಂದಿಗೂ ಆ ಕೋಟೆಯಲ್ಲಿ ಅವರ ಆತ್ಮಗಳು ಇವೆ ಎನ್ನಲಾಗುತ್ತದೆ. ಜನರು ಚೀರಾಟ, ಬಳೆ ಸದ್ದು ಕೇಳಿಸುತ್ತದೆ.

ಸತ್ಯಾಂಶ ತಿಳಿದಿಲ್ಲ

ಸತ್ಯಾಂಶ ತಿಳಿದಿಲ್ಲ

ಭಾರತ ಸರ್ಕಾರ ವು ಬಾನ್‌ಘಡ್‌ ಕೋಟೆಯಲ್ಲಿ ಭೂತ ಪ್ರೇತಗಳು ಇವೆಯೋ ಇಲ್ಲವೋ ಸತ್ಯಾಂಶವನ್ನು ಕಂಡುಹಿಡಿಯಲು ಸೇನೆಯನ್ನು ನೇಮಿಸಿತ್ತು . ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಸೂಯ್ತಾಸ್ತದ ನಂತರ ಹೋದ್ರೆ ಹಿಂದೆ ಬರೋದಿಲ್ಲ

ಸೂಯ್ತಾಸ್ತದ ನಂತರ ಹೋದ್ರೆ ಹಿಂದೆ ಬರೋದಿಲ್ಲ

ಸಂಜೆಯ ನಂತರ ಶಾಂತವಾಗಿರುತ್ತದೆ. ಅಚಾನಕ್ಕಾಗಿ ಯಾರೋ ಕಿರುಚಾಡುವ ಸದ್ದು ಕೇಳಿಸುತ್ತದೆ. ಸೂರ್ಯಾಸ್ತದ ನಂತರ ಈ ಕೋಟೆಯಲ್ಲಿ ನಿಲ್ಲಲು ಅವಕಾಶವಿಲ್ಲ. ಒಂದು ವೇಳೆ ಯಾರಾದರೂ ಸೂರ್ಯಾಸ್ತದ ನಂತರ ಆ ಕೋಟೆಯಲ್ಲಿ ಉಳಿಯುತ್ಥಾತ್ತಾರೋ ಅವರು ಜೀವಂತವಾಗಿ ಹಿಂದೆಬರೋದಿಲ್ಲ.

ಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್‌ ಮಾರ್ಕೇಟ್ ಇಲ್ಲಿದೆಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್‌ ಮಾರ್ಕೇಟ್ ಇಲ್ಲಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X