Search
  • Follow NativePlanet
Share
» »ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !

ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !

ಹಾಸನಾಂಬೆ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರು ವ ದೇವಸ್ಥಾನ ಇದಾಗಿದೆ. ಹಾಸನದ ಗ್ರಾಮ ದೇವತೆಯೂ ಇದಾಗಿದೆ. ಪ್ರತಿವರ್ಷ ವಿಜಯದಶಮಿ ಕಳೆದ ಹನ್ನೊಂದು ದಿನಗಳ ನಂತರ ಆಶ್ಲೇಷ ಮಾಸದ ಮ ಮೊದಲ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.

ಕಂಕಣ ಭಾಗ್ಯ ಕೂಡಿಬರುತ್ತದೆ

ಕಂಕಣ ಭಾಗ್ಯ ಕೂಡಿಬರುತ್ತದೆ

PC: Kishore328

ಚೋಳರ ಅರಸ ಪಾಳೆಗಾರ ಕೃಷ್ಣಪ್ಪ ನಾಯಕನ ನಂತರ ಬಂದ ಸಂಜೀವ ನಾಯಕ ಕೆಲಸವೊಂದರ ಮೇಲರೆ ಹೊರಟಿದ್ದಾಗ ಆತನ ಮುಂದೆ ಮೊಲವೊಂದು ಅಡ್ಡ ಬರುತ್ತದೆ. ಅದನ್ನು ಅಪಶಕುನವೆಂದು ತಿಳಿದು ಆತ ಅಲ್ಲೇ ಕುಳಿತುಕೊಳ್ಳುತ್ತಾನೆ. ಆಗ ಆತನಿಗೆ ಹಾಸನಾಂಬೆಯು ದರ್ಶನ ನೀಡಿ ಇಲ್ಲಿ ದೇವಸ್ಥಾನವನ್ನು ನಿರ್ಮಿಸುವಂತೆ ಕೋರಿದಳಂತೆ.

ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ

ಒಗ್ಗರಣೆ ಹಾಕೋಹಾಗಿಲ್ಲ

ಒಗ್ಗರಣೆ ಹಾಕೋಹಾಗಿಲ್ಲ

ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಯ ಪೂಜೆ ಸಲ್ಲಿಸಿದ ನಂತರ ಹಾಸನಾಂಬೆಯ ಬಾಗಿಲು ಮುಚ್ಚಲಾಗುತ್ತದೆ. ದೇವಸ್ಥಾನದ ಬಾಗಿಲು ತೆರೆದ ನಂತರ ಆ ಪ್ರದೇಶದಲ್ಲಿ ಯಾರ ಮನೆಯಲ್ಲೂ ಅಡುಗೆಗೆ ಒಗ್ಗರಣೆ ಹಾಕೋಹಾಗಿಲ್ಲವಂತೆ. ಒಗ್ಗರಣೆ ಹಾಕಿದರೆ ದೇವಿಗೆ ಕಣ್ಣು ತೆರೆಯಲಾಗುವುದಿಲ್ಲ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಹಾಸನಾಂಬೆಯ ಬಾಗಿಲು ತೆರೆದ ನಂತರ ಮುಚ್ಚುವವರೆಗೆ ಯಾರು ಒಗ್ಗರಣೆ ಹಾಕೋದಿಲ್ಲ.

ವರ್ಷದ ಹಿಂದೆ ಹಾಕಿರುವ ಹೂವು ಬಾಡೋದಿಲ್ಲ

ವರ್ಷದ ಹಿಂದೆ ಹಾಕಿರುವ ಹೂವು ಬಾಡೋದಿಲ್ಲ

ಏಳು ದಿನಗಳಿಗಿಂತ ಕಡಿಮೆ ೧೫ ದಿನಗಳಿಗಿಂತ ಹೆಚ್ಚು ದಿನ ಬಾಗಿಲು ತೆರೆಯುವುದಿಲ್ಲ. ದೇವಾಲಯದಲ್ಲಿ ಬಾಗಿಲು ಹಾಕುವಾಗ ದೇವರಿಗೆ ಪೂಜೆ ಮಾಡಿ, ದೀಪ ಬೆಳಗಿಸಿ ನಂತರ ಮುಚ್ಚಲಾಗುತ್ತದೆ. ದೇವಾಲಯದಲ್ಲಿ ಉರಿಸಿದ ದೀಪ ವರ್ಷವಿಡೀ ಉರಿಯುತ್ತದೆ. ಹೂವು ಬಾಡುವುದಿಲ್ಲ. ಮುಂದಿನ ವರ್ಷ ದೇವಸ್ಥಾನದ ಬಾಗಿಲಯ ತೆರೆದಾಗ ದೀಪ ಹಾಗೆಯೇ ಉರಿಯುತ್ತಿರುತ್ತದೆ. ಹೂವು ಬಾಡಿರುವುದಿಲ್ಲ. ದೇವಿಗೆ ಅರ್ಪಿಸಲಾದ ನೈವೇದ್ಯ ಕೂಡಾ ಹಾಗೆಯೇ ಹಾಳಗದೇ ಇರುತ್ತದೆ.

ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?

ಪಿಂಡಿ ರೂಪದಲ್ಲಿದ್ದಾಳೆ

ಪಿಂಡಿ ರೂಪದಲ್ಲಿದ್ದಾಳೆ

PC:Kishore328

ಹಾಸನಾಂಬೆಯು ಹಾಸನದ ಗ್ರಾಮ ದೇವತೆಯಾಗಿದ್ದಾಳೆ. ಹಾಸನಾಂಬೆಯು ಪಿಂಡಿ ರೂಪದಲ್ಲಿದ್ದಾಳೆ. ಅಂದರೆ ಇಲ್ಲಿ ಯಾವುದೇ ಮೂರ್ತಿ ಇಲ್ಲ. ಬದಲಾಗಿ ಕಲ್ಲಿನ ರೂಪದಲ್ಲಿ ಮಹಾಲಕ್ಷ್ಮೀ, ಸರಸ್ವತಿ, ಕಾಳಿ ಇದ್ದಾಳೆ. ಕಲ್ಲಿಗೆ ಕುಂಭರೂಪ ನೀಡಲಾಗಿದ್ದು ಅದಕ್ಕೆ ಮುಖವಾಡ ಹಾಕಿ ಚೆನ್ನಾಗಿ ಅಲಂಕರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X