Search
  • Follow NativePlanet
Share
» »ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

By Staff

ಪ್ರಸಿದ್ಧ ಪ್ರವಾಸ ಸ್ಥಳಗಳಲ್ಲಿ ಹಂಪಿಯ ಸ್ಥಾನವೂ ಒಂದು. ಬೆಂಗಳೂರಿನಿಂದ ಹಂಪಿಗೆ 343 ಕಿ.ಮೀ ಇರುವುದರಿಂದ ಕೇವಲ ಆರು ತಾಸಿನಲ್ಲಿ ತಲುಪಬಹುದು. ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಒಳಗೆ ಹಂಪಿ ಪ್ರವಾಸ ಮಾಡಿದ್ರೆ ಒಳ್ಳೆಯದು. ಉಳಿದ ತಿಂಗಳಲ್ಲಿ ಅತಿಯಾದ ಬಿಸಿಲು, ಮಳೆ ಇರುವ ಸಾಧ್ಯತೆ ಹೆಚ್ಚು. ಇಲ್ಲಿ ಜನ ಸಾಂದ್ರತೆ ಹಾಗೂ ಪ್ರವಾಸದ ವೆಚ್ಚವೂ ಕಡಿಮೆ ಎಂದೇ ಹೇಳಬಹುದು.

ಹಂಪಿಗೆ ಸಾಗುವುದು ಸುಲಭ

ಒಬ್ಬರೆ ಹಂಪಿ ಪ್ರವಾಸ ಮಾಡುವ ಯೋಚನೆಯಲ್ಲಿದ್ದೀರಾ ಅಂತಾದ್ರೆ ಕಾರಲ್ಲಿ ಹೋಗುವುದು ಸ್ವಲ್ಪ ದುಬಾರಿ ಆಗುವುದು. ಬೆಂಗಳೂರಿಂದ ಹಂಪಿಗೆ ಅನೇಕ ಬಸ್‍ಗಳಿವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಎಸಿ, ನಾನ್ ಎಸಿ, ಸ್ಲೀಪರ್ ಬಸ್‍ಗಳು ಇವೆ. ರಾತ್ರಿ ಬಸ್ ಹತ್ತಿದರೆ ಬೆಳಿಗ್ಗೆ ಎಲ್ಲಾ ಹಂಪಿಗೆ ತಲುಪಿರುತ್ತೇವೆ. ಸ್ನೇಹಿತರೊಟ್ಟಿಗೆ ಅಥವಾ ಕುಟುಂಬದವರೊಂದಿಗೆ ಲಾಂಗ್ ಡ್ರೈವ್ ಮಾಡಿಕೊಂಡು ಹೋಗುವ ಮನಸ್ಸಿದ್ದರೆ ಮುಂಜಾನೆ ಬೇಗ ಹೊರಡಬೇಕು.

ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

ವಿರೂಪಾಕ್ಷ ದೇವಾಲಯ ಗೋಪುರ, ಚಿತ್ರಕೃಪೆ: Ilya Mauter

ವಿರೂಪಾಕ್ಷ ದೇವಾಲಯ

ನೀವು ಹಂಪಿಯಲ್ಲಿ ರೂಮ್ ಹುಡುಕಬೇಕೆಂದರೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಕೆಲಸವಿಲ್ಲ. ರಿಕ್ಷಾ ಚಾಲಕನಲ್ಲಿ ಬೇಕಾದಂತಹ ರೂಮ್ ವ್ಯವಸ್ಥೆಯ ಬಗ್ಗೆ ಹೇಳಿದರೆ ಆತ ಅಂತಹದ್ದೇ ರೆಸ್ಟೋರೆಂಟ್ ಮುಂದೆ ನಿಲ್ಲಿಸುತ್ತಾನೆ. ಎಲ್ಲಾ ಊರುಗಳಿಂದಲೂ ದೇವಾಲಯಕ್ಕೆ ಹೋಗಲು ಬಸ್‍ಗಳ ವ್ಯವಸ್ಥೆ ಪೂರಕವಾಗಿವೆ.

ಇಲ್ಲಾ ರಿಕ್ಷಾದಲ್ಲಿ ಪ್ರಯಾಣಿಸುತ್ತೀರಾ ಅಂತಾದರೂ ಸರಿ. 20 ರಿಂದ 30 ನಿಮಿಷದಲ್ಲಿ ದೇವಾಲಯವನ್ನು ತಲುಪಬಹುದು. 7ನೇ ಶತಮಾನದ ಇತಿಹಾಸವನ್ನು ಹೊಂದಿರುವ ಈ ದೇವಾಲಯ ವಿಶೇಷ ಬಗೆಯ ಕೆತ್ತನೆ, ಕಲಾಕೃತಿ, ಕಂಬಗಳಿಂದ ಒಳಗೊಂಡಿದೆ. ವಿಜಯನಗರ ಸಾಮ್ರಾಜ್ಯದ ಆಡಳಿತದ ಸಮಯದಲ್ಲಿ ಈ ದೇವಾಲಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬ ಪ್ರತೀತಿ ಇದೆ.

ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

ಹನುಮಂತ ದೇವಾಲಯ, ಚಿತ್ರಕೃಪೆ: Daniel Hauptstein

ಹನುಮಂತ ದೇವಾಲಯ

ಅಲ್ಲೇ ಸಮೀಪದಲ್ಲಿ ಯಂತ್ರೋದ್ಧಾರಕ ಹನುಮಂತ ದೇವಾಲಯವನ್ನು ನೋಡಬಹುದು. ಬೆಟ್ಟದ ಮೇಲಿರುವ ಈ ದೇವಾಲಯ ಎಲ್ಲಾ ಹನುಮಂತ ದೇವಾಲಯಕ್ಕಿಂತ ವಿಭಿನ್ನವಾಗಿದೆ. ಹನುಮಂತ ದೇವರ ಸುತ್ತ ಮಂಗಗಳು ರಕ್ಷಣೆಗೆ ಇರುವಂತೆ ಸುತ್ತುವರಿದಿರುವ ಚಿತ್ರಗಳಿವೆ.

ಹುದುಗಿರುವ ದೇಗುಲ

ಸಾಮಾನ್ಯವಾಗಿ ಶಿವನೆಂದರೆ ಶಿಖರದಮೇಲೆ ಇರುವುದನ್ನು ನೋಡಿರುತ್ತೇವೆ. ಆದರೆ ಈ ದೇವಾಲಯದಲ್ಲಿ ಹಾಗಿಲ್ಲ. ಶಿವ ಪಾತಾಳದಲ್ಲಿ ಇದ್ದಾನೆ. ಅದೇ ಈ ದೇಗುಲದ ವಿಶೇಷ. ಪುರಾತನ ಕಾಲದ ಕಲ್ಲಿನ ಕಂಬ, ಮಂಟಪ, ಕೆತ್ತನೆಗಳಿಂದ ಕೂಡಿರುವ ಈ ದೇಗುಲಕ್ಕೆ ಕಾಲಿಟ್ಟರೆ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನದ ಅನುಭವ ಆಗುತ್ತದೆ. ಜನ ಜಂಗುಳಿ ಇಲ್ಲದೆ ಪ್ರಶಾಂತವಾದ ಈ ಜಾಗ ಮನಸ್ಸಿಗೊಮ್ಮೆ ವಿಶ್ರಾಂತಿಯನ್ನು ನೀಡುವುರಲ್ಲಿ ಯಾವುದೇ ಸಂದೇಹವಿಲ್ಲ.

ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

ಚಿತ್ರಕೃಪೆ: Jean-Pierre Dalbéra

ಹಂಪಿ ನದಿ

ಈ ನದಿಯಲ್ಲಿ ಟಿಕೆಟ್ ಪಡೆದು ದೋಣಿಯಲ್ಲಿ ಹೋಗಬಹುದು. ವಿಶಾಲವಾದ ಈ ನದಿಯಲ್ಲಿ ಸಂಚರಿಸುವಾಗ ಸುತ್ತ ಪರಿಸರದ ಸೌಂದರ್ಯವನ್ನು ಸೆರೆ ಹಿಡಿಯುತ್ತ ಸಾಗಬಹುದು.

ಸೂರ್ಯಾಸ್ತದ ಸೌಂದರ್ಯ

ಅಲ್ಲೇ ಸಮೀಪದಲ್ಲಿ ಇರುವ ಬೆಟ್ಟದ ಮೇಲೆ ನಿಂತುಕೊಂಡರೆ ಸೂರ್ಯಾಸ್ತದ ಸೌಂದರ್ಯವನ್ನು ಮನಸ್ಸಿನ ಕನ್ನಡಿಯ ಜೊತೆಗೆ ಕ್ಯಾಮೆರಾದ ಮೆಮೋರಿಯಲ್ಲಿಯೂ ಸೆರೆ ಹಿಡಿಯಬಹುದು. ಆ ಕೆಂಬಣ್ಣ ಅಲ್ಲಿರುವ ಬಂಡೆಗಳ ಮೇಲೆ ಬೀಳುವಾಗ ಭೂಮಿಯೆಲ್ಲಾ ಕೆಂಪಾದಂತೆ ಕಾಣುವ ದೃಶ್ಯ ನಯನ ಮನೋಹರ.

ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

ಚಿತ್ರಕೃಪೆ: Manoj M Shenoy

ನಮ್ಮ ಅನುಕೂಲಕ್ಕೆ

ಹಂಪಿಯಲ್ಲಿ ಕಡಿಮೆ ಜನಸಾಂದ್ರತೆ, ವಿಶಾಲವಾದ ಜಾಗ, ಶುದ್ಧವಾದ ಗಾಳಿ ಇರುವುದರಿಂದ ಅಲ್ಲಿ ಬಾಡಿಗೆಗೆ ಸಿಗುವ ಸೈಕಲ್, ಬೈಕ್‍ಗಳನ್ನು ಪಡೆದು ನಾವೇ ಸಂಚರಿಸಬಹುದು. ಇಲ್ಲಿ ರಾತ್ರಿ 8 ಆದರೆ ಸಾಕು ಅಂಗಡಿ, ಹೋಟೆಲ್‍ಗಳ ಬಾಗಿಲು ಮುಚ್ಚುತ್ತವೆ. ಬೆರಳೆಣಿಕೆಯ ಕೆಫೆಗಳು ಮಾತ್ರ ರಾತ್ರಿ 11ರ ವರೆಗೆ ತೆರೆದಿರುತ್ತವೆ.

ಕೆಲವು ಆಹಾರ ಪದಾರ್ಥಗಳು ಕಡಿಮೆ ಬೆಲೆಗೆ ಸಿಗುವುದರಿಂದ ಅದನ್ನೇ ಹೆಚ್ಚು ಸವಿಯಬಹುದು. ಇದು ಶೈಕ್ಷಣಿಕ ಹಾಗೂ ಸಾಂಪ್ರದಾಯಿಕ ಸ್ಥಳವಾದ್ದರಿಂದ ಇಲ್ಲಿ ಮದ್ಯಸೇವನೆಗೆ ಅವಕಾಶವಿಲ್ಲ. ಹಂಪಿ ಬೆಟ್ಟದಲ್ಲಿ ಹೆಚ್ಚು ಶತಪದಿಯಂತಹ ವಿಷ ಜಂತುಗಳು ಹೆಚ್ಚಾಗಿರುವುದರಿಂದ ಬೆಟ್ಟ ಹತ್ತುವಾಗ ಶೂ ಧರಿಸುವುದು ಉತ್ತಮ.

ನಿಮ್ಮ ಜೊತೆ ಇರಲಿ

* ಕೂಲಿಂಗ್ ಗ್ಲಾಸ್

* ಸನ್ಸ್ ಕ್ರೀಮ್

* ಜಾಗಿಂಗ್ ಶೂ

* ಸ್ಕಾರ್ಫ್/ಟೋಪಿ

* ನಿಮ್ಮ ಗುರುತಿನ ಚೀಟಿ (ಐಡಿ ಕಾರ್ಡ್)(ಹೋಂ ಸ್ಟೇಗಳಲ್ಲಿ ತೋರಿಸಲು)

* ಡ್ರೈವಿಂಗ್ ಲೈಸನ್ಸ್ (ಬಾಡಿಗೆ ಬೈಕ್ ಓಡಿಸಲು)

ಮರೆಯದೆ ನೋಡಿ

* ದೇಗುಲದ ಮೇಲಿರುವ ವಿನ್ಯಾಸಗಳು

* ಸೂರ್ಯಾಸ್ತದ ದೃಶ್ಯ

* ಹಂಪಿ ನದಿಯಲ್ಲಿ ಬೋಟ್ ಸಂಚಾರ ಮಾಡುವುದು

* ದಕ್ಷಿಣ ಭಾರತದ ಊಟ ಸವಿಯುವುದು

ನಿಮ್ಮ ಲೆಕ್ಕಕ್ಕೆ:

* ಬಸ್ (ಬೆಂಗಳೂರಿನಿಂದ ಹಂಪಿಗೆ) 500-600 ರೂ.

* ರೋಮ್ ಬಾಡಿಗೆ 400 -500 ರೂ

* ಬೋಟ್ ರೈಡ್ 200-300ರೂ.

* ಸೈಕಲ್ 100-150 ರೂ

* ಸ್ಕೂಟರ್ 300-400 ರೂ

* ಊಟ/ತಿಂಡಿ 250-300 ರೂ. (ದಿನಕ್ಕೆ)

* ಸ್ಮಾರಕಗಳ ದರ್ಶನಕ್ಕೆ 200-300 ರೂ

* ಪ್ರವಾಸಕ್ಕೆ ಪೂರಕವಲ್ಲದ ತಿಂಗಳು ಜುಲೈ-ಆಗಸ್ಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more