Search
  • Follow NativePlanet
Share
» »ಬಿಹಾರದಲ್ಲಿರುವ ಮಹಾತ್ಮ ಗಾಂಧಿ ಸೇತುವೆ ನೋಡಿದ್ದೀರಾ?

ಬಿಹಾರದಲ್ಲಿರುವ ಮಹಾತ್ಮ ಗಾಂಧಿ ಸೇತುವೆ ನೋಡಿದ್ದೀರಾ?

ದಕ್ಷಿಣದಲ್ಲಿ ಗಂಗಾ ನದಿ,ಪಶ್ಚಿಮದಲ್ಲಿ ನಾರಾಯಣಿ ಮತ್ತು ಗಂಡಕ್ ನದಿಯ ಜೊತೆ ಈ ಪಟ್ಟಣದಲ್ಲಿರುವ ಆಧುನಿಕ ರೈಲ್ವೆ ವಲಯದ ಕಚೇರಿ ಈ ಸ್ಥಳಕ್ಕೆ ಹೆಚ್ಚಿನ ಮೆರುಗನ್ನು ನೀಡಿದೆ.

ಹಾಜಿಪುರ್ ಬಿಹಾರದ ವೈಶಾಲಿ ಜಿಲ್ಲೆಯ ಪ್ರಮುಖ ಕಾರ್ಯಸ್ಥಳ. ಇದು ಬಾಳೆಹಣ್ಣಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಈ ನಗರ ಅತಿ ವೇಗದಲ್ಲಿ ಬೆಳೆಯುತ್ತಿರುವುದರಿಂದ ಇದನ್ನು ಪ್ರಗತಿಶೀಲ ನಗರ ಎನ್ನಬಹುದಾಗಿದೆ. ಹಾಜಿಪುರ ಪ್ರವಾಸಿ ನಕ್ಷೆಯಲ್ಲಿ ಹೆಸರುವಾಸಿಯಾದ ಸ್ಥಳಗಳಲ್ಲಿ ಒಂದಾಗಿದೆ.

ಲಿಚಿ, ಬಾಳೆಹಣ್ಣು ಬೆಳೆಗೆ ಪ್ರಸಿದ್ಧ

ದಕ್ಷಿಣದಲ್ಲಿ ಗಂಗಾ ನದಿ,ಪಶ್ಚಿಮದಲ್ಲಿ ನಾರಾಯಣಿ ಮತ್ತು ಗಂಡಕ್ ನದಿಯ ಜೊತೆ ಈ ಪಟ್ಟಣದಲ್ಲಿರುವ ಆಧುನಿಕ ರೈಲ್ವೆ ವಲಯದ ಕಚೇರಿ ಈ ಸ್ಥಳಕ್ಕೆ ಹೆಚ್ಚಿನ ಮೆರುಗನ್ನು ನೀಡಿದೆ. ಇಲ್ಲಿನ ಲಿಚಿ ಮತ್ತು ಬಾಳೆಹಣ್ಣು ಹೆಚ್ಚು ಪ್ರಖ್ಯಾತಿ ಪಡೆದಿದೆ. ಹಾಜಿ ಇಲ್ಯಾಸ್ ಎಂಬ ಬಂಗಾಳಿ ರಾಜ ಈ ನಗರವನ್ನು ಸ್ಥಾಪಿಸಿದನು. ಪ್ರಾಚೀನ ಕಾಲದಲ್ಲಿ ಈ ನಗರವನ್ನು ಉಕ್ಕಾಕಲ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ನಂಬಲಾಗಿದೆ.

ಪ್ರಮುಖ ತಾಣಗಳು

ಪ್ರಮುಖ ತಾಣಗಳು

PC: Abhishek Singh
ಹಾಜಿಪುರ ಹೊಂದಿರುವ ಅಪಾರ ದೇವಾಲಯಗಳ ನಿಧಿ ಪ್ರವಾಸಿಗರನ್ನು ಇಲ್ಲಿ ಕೈಬೀಸಿ ಕರೆಯುತ್ತದೆ. ಈ ನಗರದಲ್ಲಿ ಭೇಟಿ ನೀಡಲು ಯೋಗ್ಯ ಸ್ಥಳಗಳೆಂದರೆ ರಾಮಚೌರ ಮಂದಿರ, ಕೌನ್ ಹಾರಾ ಘಾಟ್, ನೇಪಾಳಿ ಮಂದಿರ, ಮಹಾತ್ಮ ಗಾಂಧೀ ಸೇತು, ಹಲಬಜಾರ್ ನಲ್ಲಿರುವ ಮಹಾ ಪ್ರಭುಜಿ, ಸೋನಾಪುರ ಫೇರ್, ವೈಶಾಲಿ ಮಹೋತ್ಸವ ಮುಂತಾದವು.

 ಮಹಾತ್ಮ ಗಾಂಧಿ ಸೇತುವೆ

ಮಹಾತ್ಮ ಗಾಂಧಿ ಸೇತುವೆ

PC: Aksveer

ಮಹಾತ್ಮ ಗಾಂಧಿ ಸೇತು (ಸೇತುವೆ) ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಪ್ರಮುಖ ಕೊಂಡಿಯಾಗಿದೆ. ಇದನ್ನು ಜಧುವಾ ಗ್ರಾಮದ ಸಮೀಪ ಗಂಗಾ ಮೇಲೆ ನಿರ್ಮಿಸಲಾಗಿದೆ ಮತ್ತು ಹಾಜಿಪುರವನ್ನು ಪಾಟ್ನಾದೊಂದಿಗೆ ಸಂಪರ್ಕಿಸುತ್ತದೆ. ಇದು 5.75 ಕಿ.ಮೀ ಉದ್ದದ ಏಷ್ಯಾದ ಅತಿ ಉದ್ದದ ನದಿ ಸೇತುವೆಯಾಗಿದೆ. ನಾಲ್ಕು ಲೇನ್ ಪ್ರಿಸ್ಟ್ರೆಸ್ಡ್ ಆರ್ಸಿಸಿ ಸೇತುವೆಯನ್ನು 1982 ರಲ್ಲಿಸೇವೆಗೆ ನಿಯೋಜಿಸಲಾಯಿತು. ಸೇತುವೆಯನ್ನು ದಾಟುವ ಮೂಲಕ ಪ್ರವಾಸಿಗರಿಗೆ ಮನಮೋಹಕ ಅನುಭವ ಮತ್ತು ಸೊಂಪಾದ ಹಸಿರು ಬಾಳೆ ತೋಟಗಳ ವಿಹಂಗಮ ನೋಟ ಸಿಗುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Abhishek Singh
ಈ ನಗರ ಸುತ್ತಲೂ ನದಿಯಿಂದ ಸುತ್ತುವರೆದಿರುವುದರಿಂದ ಅಕ್ಟೋಬರ್ ನಿಂದ ಮಾರ್ಚ್ ಇಲ್ಲಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ರಜೆಯನ್ನು ಕಳೆಯಲು ಬಯಸುವ ಜನರಿಗೆ ಇದು ಸೂಕ್ತವಾದ ನಗರ. ಅನೇಕ ರೀತಿಯ ಸಂತೋಷವನ್ನು ನೀಡುವ ಈ ನಗರದಲ್ಲಿ ಅದ್ಬುತವಾಗಿ ಸಮಯ ಕಳೆಯಬಹುದು. ಭೇಟಿ ನೀಡಲು ಉತ್ತಮ ಕಾಲ ಇಲ್ಲಿಗೆ ಭೇಟಿ ನೀಡಲು ಉತ್ತಮ ಕಾಲ ಚಳಿಗಾಲದ ಅಕ್ಟೋಬರ್ ತಿಂಗಳು.ಉಳಿದ ದಿನಗಳಲ್ಲಿ ಅತಿ ಹೆಚ್ಚು ಮಳೆ ಅಥವಾ ಅತಿ ಬಿಸಿಲು ಇರುವುದರಿಂದ ಪ್ರವಾಸವನ್ನು ಆನಂದಿಸುವುದು ಕಷ್ಟವಾಗಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Abhi.analyst
ಇಲ್ಲಿ ಕೇವಲ 3 ರೀತಿಯ ಸಾರಿಗೆ ವ್ಯಯಸ್ಥೆಯಲ್ಲ 4 ರೀತಿಯ ಸಾರಿಗೆ ವಿಧಾನಗಳ ಸಂಪರ್ಕ ಹೊಂದಿರುವುದು ಪ್ರವಾಸಿಗರಿಗೆ ಸಂತೋಷದ ವಿಷಯ. ರೈಲ್ವೇ ಸಂಪರ್ಕ ಉತ್ತಮವಾಗಿದ್ದು ನಗರದಲ್ಲೇ ಪೂರ್ವ ರೈಲ್ವೇ ಕೇಂದ್ರ ವಲಯವಿದೆ. ಪಾಟ್ನಾ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಈ ನಗರಕ್ಕೆ ಸುಲಭವಾಗಿ ಸಂಪರ್ಕ ಹೊಂದಿದೆ. ಜೊತೆಗೆ ಈ ನಗರ ಹೊಂದಿರುವ ಸಮುದ್ರ ಸಾರಿಗೆ ವ್ಯಯಸ್ಥೆ ಪಟ್ಟಣದ ವಜ್ರದ ಕಿರೀಟದಂತೆ ಎನ್ನಬಹುದು. ಈ ನಗರದಿಂದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಮೂಲಕ ದೇಶದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಹಾಜಿಪುರದಿಂದ ಪಾಟ್ನಾ ಮತ್ತು ಸೋನೆಪುರಕ್ಕೆ ಇಲ್ಲಿನ ನದಿಗೆ ಕಟ್ಟಲಾದ ಸೇತುವೆಯ ಮೂಲಕ ಸುಲಭವಾಗಿ ಸಂಪರ್ಕ ಹೊಂದಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X