• Follow NativePlanet
Share
Menu
» »ಬೆಂಗಳೂರಿನ ಸಮೀಪದ ಮಹಿಮಾನ್ವಿತ ಆಂಜನೇಯ ಸ್ವಾಮಿ ದೇವಾಲಯ ಯಾವುದು ಗೊತ್ತ?

ಬೆಂಗಳೂರಿನ ಸಮೀಪದ ಮಹಿಮಾನ್ವಿತ ಆಂಜನೇಯ ಸ್ವಾಮಿ ದೇವಾಲಯ ಯಾವುದು ಗೊತ್ತ?

Written By:

ಹನುಮಂತನ ದೇವಾಲಯವನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಕೇವಲ ದೇವಾಲಯಗಳಲ್ಲಿಯೇ ಅಲ್ಲದೇ, ಅಲ್ಲಲ್ಲಿ ಮರದ ಬಳಿ ಕೂಡ ಸ್ವಾಮಿ ನೆಲೆಸಿದ್ದು, ಭಕ್ತರನ್ನು ಕಾಪಾಡುತ್ತಾ ಬಂದಿದ್ದಾನೆ. ಆಂಜನೇಯ ಸ್ವಾಮಿಗೆ ಹಲವಾರು ಹೆಸರುಗಳಿವೆ. ಅವುಗಳೆಂದರೆ ಅಜಂನಾ ಸುತ, ಆಂಜನೇಯ, ಹನುಮಂತ, ವಾಯುಪುತ್ರ ಇನ್ನು ಹಲವಾರು ಹೆಸರುಗಳಿಂದ ಸ್ವಾಮಿಯನ್ನು ಕರೆಯುತ್ತಾರೆ.

ಆತನಿಗೆ ನಮ್ಮ ಭಾರತದಾದ್ಯಂತ ಭಕ್ತರು ಇದ್ದಾರೆ ಎಂದೇ ಹೇಳಬಹುದು ಹಾಗಾಗಿಯೇ ಭಾರತದಾದ್ಯಂತ ಆಂಜನೇಯನನ್ನು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಆರಾಧಿಸುತ್ತಾರೆ. ಹನುಮಂತನು ಸ್ವಾಮಿ ನಿಷ್ಟೆಗೆ ಹೆಸರುವಾಸಿ, ಆತನ ಶಕ್ತಿ ಅಪಾರವಾದುದು. ಮಹಾರಾಷ್ಟ್ರದಲ್ಲಿ ಆಂಜನೇಯ ಸ್ವಾಮಿಯನ್ನು ಮೆಹೆಂದಿ ಪೂರ್ ಬಾಲಾಜಿ ಎಂದೇ ಖ್ಯಾತವಾಗಿದ್ದಾನೆ. ಆ ಸ್ವಾಮಿಯು ದುಷ್ಟ ಶಕ್ತಿಗಳಿಂದ ವೇದನೆಯನ್ನು ಅನುಭವಿಸುತ್ತಿರುವ ಹಲವಾರು ಭಕ್ತರನ್ನು ಕಾಪಾಡುತ್ತಿದ್ದಾನೆ.

ಈ ವಿಷಯ ನಿಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ನಮ್ಮ ಕರ್ನಾಟಕದಲ್ಲಿಯೂ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ದೇವಾಲಯದಲ್ಲಿಯೂ ಕೂಡ ಹನುಮಂತನು ನೆಲೆಸಿದ್ದಾನೆ. ಬಂದ ಭಕ್ತರ ಬೇಡಿಕೆಗಳನ್ನು ಸಲುಹುತ್ತಾ, ದುಷ್ಟ ಶಕ್ತಿಗಳಿಂದ ವಿಮುಕ್ತಿಯನ್ನು ನೀಡುತ್ತಿದ್ದಾನೆ. ಹಾಗಾದರೆ ಬನ್ನಿ ಆ ದೇವಾಲಯ ಯಾವುದು? ಆ ದೇವಾಲಯದ ಮಹಿಮೆ ಏನು? ಆ ದೇವಾಲಯಕ್ಕೆ ತೆರಳುವ ಬಗೆ ಹೇಗೆ? ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಆ ಮಹಿಮಾನ್ವಿತವಾದ ಹನುಮಂತನ ದೇವಾಲಯವೆಂದರೆ ಅದು ಹದ್ದಿನಕಲ್ಲು ಹನುಮಂತರಾಯ ದೇವಾಲಯ ಅಥವಾ ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ. ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿಯಲ್ಲಿ ಯಡಿಯೂರನ್ನು ದಾಟಿದಾಗ ಒಂದು ಸುಂದರವಾದ ಬೆಟ್ಟವಿದೆ. ಆ ಬೆಟ್ಟದ ಮೇಲೆ ಒಂದು ದೇವಾಲಯವಿದೆ. ಆ ದೇವಾಲಯದಲ್ಲಿ ಹನುಮಂತನು ನೆಲೆಸಿದ್ದಾನೆ. ಈ ದೇವಾಲಯವು ಅನೇಕ ವಿಶೇಷತೆಗಳನ್ನು ಹೊಂದಿದೆ. ಅವುಗಳು ಏನೆಂದರೆ..

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಈ ಸುಂದರವಾದ ದೇವಾಲಯವು ಸ್ಥಳೀಯರಿಗೆ ತೀರ್ಥಯಾತ್ರಾ ಸ್ಥಳವಾಗಿದೆ. ದೇವಾಲಯಕ್ಕೆ ತೆರಳುವಾಗ ಒಂದು ಸಣ್ಣದಾದ ಕೆರೆಯನ್ನು ಕೂಡ ಕಾಣಬಹುದು. ಸ್ವಾಮಿಯ ದರ್ಶನವನ್ನು ಪಡೆಯಲು ಒಂದು ಸ್ವಾಗತ ಕಮಾನು ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ನಿಮ್ಮ ಪ್ರಯಾಣ ಪ್ರಾರಂಭವಾಗಿರುತ್ತದೆ. ಮೆಟ್ಟಿಲುಗಳ ಸಹಾಯದಿಂದ ಬೆಟ್ಟವನ್ನು ಸುಲಭವಾಗಿ ಹತ್ತಬಹುದಾಗಿದೆ. ಇದೊಂದು ಸುದೀರ್ಘವಾದ ಮೆಟ್ಟಿಲು ಪ್ರಯಾಣ ಎಂದೇ ಹೇಳಬಹುದು.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಈ ದೇವಾಲಯದ ವಿಶೇಷವೆನೆಂದರೆ, ಇಲ್ಲಿ ರಾವಣನ ಮಗ ಇಂದ್ರಜಿತ್‍ನ ಸಣ್ಣದಾದ ಪ್ರತಿಮೆಯನ್ನು ನೀವು ಈ ದೇವಾಲಯದ ಬಲ ಭಾಗದಲ್ಲಿ ಕಾಣಬಹುದಾಗಿದೆ. ಮೆಟ್ಟಿಲುಗಳನ್ನು ಏರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಪಾದರಕ್ಷೆಗಳನ್ನು ಧರಿಸುವಂತೆ ಇಲ್ಲ. ಸ್ವಾಮಿಯನ್ನು ನೆನೆಯುತ್ತಾ ಬೆಟ್ಟವನ್ನು ಹತ್ತಬೇಕಾಗುತ್ತದೆ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಬೆಟ್ಟವನ್ನು ಏರುತ್ತಾ ಒಂದು ಅದ್ಭುತವಾದ ಭೂ ದೃಶ್ಯವನ್ನು ಸವಿಯಬಹುದಾಗಿದೆ. ಇದೊಂದು ಟ್ರೆಕ್ಕಿಂಗ್ ಪ್ರೇಮಿಗಳಿಗೆ, ಸ್ನೇಹಿತರಿಗೆ ಆರಾಮದಾಯಕವಾದ ಪಯಣವಾಗಿರುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿನ ಅಪೂರ್ವವಾದ ಕಲ್ಲಿಗೆ "ಈಗಲ್ ಸ್ಟೋನ್" ಅಂದರೆ "ಹದ್ದಿನ ಕಲ್ಲು" ಎಂದು ಕರೆಯುತ್ತಾರೆ. ಹೀಗಾಗಿ ಈ ಬೆಟ್ಟದ ಮೇಲೆ ನೆಲೆಸಿರುವ ಹನುಮಂತನಿಗೆ ಹದ್ದಿನಕಲ್ಲು ಆಂಜನೇಯ ಸ್ವಾಮಿ ಎಂದು ಹೆಸರು ಬಂದಿತು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಬೆಳಗಿನ ಸೂರ್ಯೋದಯದ ಸಮಯದಲ್ಲಿ ಬೆಟ್ಟ ಹತ್ತುವುದು ಯಾತ್ರಿಕರಿಗೆ ಅದ್ಭುತವಾದ ಅನುಭವವನ್ನು ನೀಡುತ್ತದೆ. ಬೆಟ್ಟದ ಈ ಎಲ್ಲಾ ಸೌಂದರ್ಯವನ್ನು ಕಣ್ಣುತುಂಬಿಕೊಳ್ಳುತ್ತಾ ಕೊನೆಗೆ ದೇವಾಲಯಕ್ಕೆ ತಲುಪಬಹುದು. ಬೆಟ್ಟವನ್ನು ತಲುಪುತ್ತಿದ್ದಂತೆ ಒಂದು ದೇವಾಲಯವನ್ನು ಕಾಣಬಹುದು. ಆ ಒಂದು ದೇವಾಲಯವು ಹನುಮಂತನಿಗೆ ಸಮರ್ಪಿತವಾದ ದೇವಾಲಯವೇ ಆಗಿದೆ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ದೇವಾಲಯದ ಪ್ರವೇಶ ದ್ವಾರದಲ್ಲಿ ಹಲವಾರು ಮಂಗಗಳನ್ನು ನೀವು ಕಾಣಬಹುದು. ಹನುಮಂತನು ಎಲ್ಲೋ ಅಲ್ಲಿ ಕೋತಿಗಳು ಕೂಡ ಇರಲೇಬೇಕು ಅಲ್ಲವೇ? ದೇವಾಲಯದ ಒಳಾಂಗಣ ಅತ್ಯಂತ ಸರಳತೆಯಿಂದ ಕೂಡಿದೆ. ಒಂದು ಕಂಬದ ಮೇಲೆ ಹನುಮಂತನನ್ನು ಕೆತ್ತನೆ ಮಾಡಿದ್ದಾರೆ. ಆ ಸ್ವಾಮಿಯನ್ನೇ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಈ ಶಕ್ತಿವಂತ ಹನುಮಂತನ ದೇವಾಲಯಕ್ಕೆ ಸುತ್ತಮುತ್ತ ಹಳ್ಳಿಯವರೆ ಅಲ್ಲದೇ, ಅನೇಕ ಸ್ಥಳಗಳಿಂದ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಶನಿವಾರದಂದು ವಿಶೇಷವಾಗಿ ಜನರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ಆಂಜನೇಯ ಸ್ವಾಮಿ ನೆಲೆಸಿರುವ ಸ್ತಂಭದ ಕೆಳಗೆ ರಾವಣನ ಮಗ ಇಂದ್ರಜಿತ್ ಕೂಡ ನೆಲೆಸಿದ್ದಾನೆ. ಇದೊಂದು ವಿಭಿನ್ನವಾದ ದೇವಾಲಯ ಎಂದೇ ಹೇಳಬಹುದು. ಇಂತಹ ಆಂಜನೇಯನ ಮೂರ್ತಿಯನ್ನು ನೀವು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಆಂಜನೇಯ ಸ್ವಾಮಿಯ ಜೊತೆ ಜೊತೆಗೆ ಇಂದ್ರಜಿತ್‍ನನ್ನು ಕೂಡ ಭಕ್ತರು ಆರಾಧಿಸುತ್ತಿದ್ದಾರೆ. ನಿಮಗೆ ತಿಳಿದಿರುವಂತೆ ಶ್ರೀ ರಾಮನು ರಾವಣನನ್ನು ಸಂಹಾರ ಮಾಡುತ್ತಾನೆ. ಆ ರಾವಣನ ಮಗನೇ ಈ ಇಂದ್ರಜಿತ್. ಇದು ರಾವಣನ ಮಗ ಇಂದ್ರಜಿತ್‍ಗೆ ಮೀಸಲಾಗಿರುವ ದೇವಾಲಯದಲ್ಲಿ ಇದೊಂದೇ ಆಗಿರಬಹುದು. ಇಲ್ಲಿನ ಸ್ವಾಮಿಯು ಭಕ್ತರ ಎಲ್ಲಾ ಬೇಡಿಕೆಗಳನ್ನು ಪರಿಹಾರ ಮಾಡುತ್ತಾನೆ ಎಂದು ಭಕ್ತರು ನಂಬಿದ್ದಾರೆ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಗೆಯೇ ಈ ದೇವಾಲಯಕ್ಕೆ ಕೆಲವು ದುಷ್ಟ ಶಕ್ತಿಗಳಿಂದ ಬಳಲುತ್ತಿರುವವರು ಭೇಟಿ ನೀಡಿ ಪರಿಹಾರ ಕಂಡುಕೊಂಡಿದ್ದಾರೆ. ಹಾಗಾಗಿಯೇ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ತೆರಳುತ್ತಾರೆ. ಈ ದೇವಾಲಯಕ್ಕೆ ಅನೇಕರು ಮಾಂಸಹಾರಿ ಅಡುಗೆಯನ್ನು ತಯಾರಿಸಿ ಸೇವಿಸುತ್ತಾರೆ. ಈ ಅದ್ಭುತವಾದ, ಶಕ್ತಿವಂತ ದೇವಾಲಯಕ್ಕೆ ತೆರಳಲು ಅನೇಕ ಸಾರಿಗೆ ವ್ಯವಸ್ಥೆಗಳಿವೆ.

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಹದ್ದಿನಕಲ್ಲು ಆಂಜನೇಯಸ್ವಾಮಿ ದೇವಾಲಯ

ಈ ಹದ್ದಿನ ಕಲ್ಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಲು ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಯಡಿಯೂರು ಬಳಿ ಇರುವ ಫ್ಲೈಓವರ್ ದಾಟಿದ ನಂತರ ಸುಮಾರು 7 ಕಿ.ಮೀ ದೂರದಲ್ಲಿದೆ. ಅಲ್ಲೊಂದು ಬೆಟ್ಟವಿದೆ. ಆ ಬೆಟ್ಟವೇ ಹನುಮಂತನು ನೆಲೆಸಿರುವ ಹದ್ದಿನಕಲ್ಲು ಆಂಜನೇಯಸ್ವಾಮಿ ನೆಲೆಸಿರುವ ಸ್ಥಳ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 980 ಮೀಟರ್ ಎತ್ತರದಲ್ಲಿದೆ. ಬೆಂಗಳೂರಿನ ಸಮೀಪದಲ್ಲಿನ ಬೆಟ್ಟಗಳಲ್ಲಿ ಈ ಬೆಟ್ಟವು ಕೂಡ ಒಂದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ