Search
  • Follow NativePlanet
Share
» »ಪಾಂಡವರಿಗೆ ಸಿಕ್ಕದೇ ಪರಮೇಶ್ವರನು ಅಡಗಿಕೊಂಡ ಪ್ರದೇಶವಿದು....

ಪಾಂಡವರಿಗೆ ಸಿಕ್ಕದೇ ಪರಮೇಶ್ವರನು ಅಡಗಿಕೊಂಡ ಪ್ರದೇಶವಿದು....

ಕಾಶಿ ನಂತರ ಪರಮೇಶ್ವರನು ನೆಲೆಸಿರುವ ಪ್ರದೇಶವೆಂದರೆ ಅದು ಗುಪ್ತಕಾಶಿ. ಇದು ಹಿಂದೂಗಳಿಗೆ ಪರಮ ಪುಣ್ಯ ಕ್ಷೇತ್ರವಾಗಿ ಮಾರ್ಪಾಟಾಗಿದೆ. ಚಾರ್ ಧಾಮ್ ಯಾತ್ರೆಯ ಭಾಗವಾಗಿ ಈ ಪುಣ್ಯ ಕ್ಷೇತ್ರವನ್ನು ಹಿಂದುಗಳು ಭೇಟಿ ನೀಡುತ್ತಿರುತ್ತಾರೆ. ಪಾಂಡವರಿಗೆ

ಕಾಶಿ ನಂತರ ಪರಮೇಶ್ವರನು ನೆಲೆಸಿರುವ ಪ್ರದೇಶವೆಂದರೆ ಅದು ಗುಪ್ತಕಾಶಿ. ಇದು ಹಿಂದೂಗಳಿಗೆ ಪರಮ ಪುಣ್ಯ ಕ್ಷೇತ್ರವಾಗಿ ಮಾರ್ಪಾಟಾಗಿದೆ. ಚಾರ್ ಧಾಮ್ ಯಾತ್ರೆಯ ಭಾಗವಾಗಿ ಈ ಪುಣ್ಯ ಕ್ಷೇತ್ರವನ್ನು ಹಿಂದುಗಳು ಭೇಟಿ ನೀಡುತ್ತಿರುತ್ತಾರೆ. ಪಾಂಡವರಿಗೆ ದರ್ಶನ ನೀಡುವುದು ಇಷ್ಟವಿಲ್ಲದ ಪರಮೇಶ್ವರನು ಇಲ್ಲಿ ರಹಸ್ಯವಾಗಿ ನೆಲೆಸಿದನು ಎಂದು ಹೇಳುತ್ತಾರೆ.

ಆದ್ದರಿಂದಲೇ ಇದಕ್ಕೆ ಗುಪ್ತಕಾಶಿ ಎಂದು ಹೆಸರು ಬಂದಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಲೇಖನದ ಮೂಲಕ ತಿಳಿದು ಕೊಳ್ಳಿ. ಅದೇ ವಿಧವಾಗಿ ಹಿಮಾಲಯ ರಾಜ್ಯ ಎಂದೇ ಹೆಸರು ಪಡೆದಿರುವ ಉತ್ತರಖಂಡದಲ್ಲಿನ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ ಸುಮಾರು 4,327 ಅಡಿ ಎತ್ತರದಲ್ಲಿ ಈ ಗುಪ್ತಕಾಶಿ ಇದೆ. ರಿಷಿಕೇಶ್ ನಿಂದ 178 ಕಿಲೋಮೀಟರ್ ದೂರ ಪ್ರಯಾಣಿಸಿದರೆ ಗುಪ್ತಕಾಶಿಗೆ ಸೇರಿಕೊಳ್ಳಬಹುದು.

1.ಮಹಾಭಾರತ ಯುದ್ಧದ ನಂತರ

1.ಮಹಾಭಾರತ ಯುದ್ಧದ ನಂತರ

PC:YOUTUBE

ಮಹಾಭಾರತ ಯುದ್ಧದ ನಂತರ ತಮಗೆ ಅಂಟಿದ ಬ್ರಹ್ಮಹತ್ಯಾಪಾತಕ, ಗೋಹತ್ಯಾಪಾತಕವನ್ನು ನಿವಾರಿಸಿಕೊಳ್ಳುವ ಸಲುವಾಗಿ ಶಿವನನ್ನು ಆರಾಧಿಸುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಪಾಂಡವರು ಶ್ರೀಕೃಷ್ಣನ ಮೂಲಕ ತಿಳಿದುಕೊಳ್ಳುತ್ತಾರೆ. ಇದರಿಂದಾಗಿ ಪರಮೇಶ್ವರನು ಕಾಶಿಯಲ್ಲಿ ನೆಲೆಸಿರುವ ಪರಮೇಶ್ವರನನ್ನು ದರ್ಶಿಸಿ ಆರಾಧಿಸಬೇಕು ಎಂದು ಅಂದುಕೊಂಡು ತೆರಳುತ್ತಾರೆ.

2.ಇಷ್ಟವಿಲ್ಲದ ಪರಮೇಶ್ವರನು

2.ಇಷ್ಟವಿಲ್ಲದ ಪರಮೇಶ್ವರನು

PC:YOUTUBE

ಆದರೆ ಲಕ್ಷಾದಿ ಮಂದಿ ಪ್ರಜೆಗಳ ಪ್ರಾಣಗಳನ್ನು ತೆಗೆದ ಪಾಂಡವರಿಗೆ ದರ್ಶನಭಾಗ್ಯವನ್ನು ಕಲ್ಪಿಸಲು ಇಷ್ಟವಿಲ್ಲದ ಪರಮೇಶ್ವರನು ಉತ್ತರಖಂಢದಲ್ಲಿನ ಗುಪ್ತಕಾಶಿಗೆ ಹೋಗುತ್ತಾನೆ. ವಿಷಯವನನ್ನು ತಿಳಿದುಕೊಂಡ ಪಾಂಡವರು ಗುಪ್ತಕಾಶಿಗೆ ಸೇರಿಕೊಳ್ಳುತ್ತಾರೆ. ಆದರೆ ಅಲ್ಲಿಯೂ ಕೂಡ ಅವರಿಗೆ ದರ್ಶನವನ್ನು ನೀಡಲು ಪರಮೇಶ್ವರನು ನಿರಾಕರಿಸಿ ನಂದಿಯ ರೂಪದಲ್ಲಿ ಪಾತಾಳಕ್ಕೆ ಹೋಗಬೇಕು ಎಂದು ತೀರ್ಮಾನಿಸುತ್ತಾನೆ.

3.ಭೀಮ

3.ಭೀಮ

PC:YOUTUBE

ಇದರಿಂದಾಗಿ ಭೀಮನು ಆ ನಂದಿ ಕಾಲುಗಳನ್ನು ಗಟ್ಟಿಯಾಗಿ ಮೇಲೆ ಎಳೆಯುತ್ತಾನೆ. ಇದರಿಂದಾಗಿ ಆ ನಂದಿ 5 ಖಂಡಗಳಾಗಿ ಖಂಡಿಸಿಕೊಂಡು ಗುಪ್ತಕಾಶಿಯ ಸುತ್ತಮುತ್ತಲ 5 ಭಾಗಗಳಲ್ಲಿ ಬೀಳುತ್ತದೆ. ಆ ಐದು ಪ್ರದೇಶಗಳೇ ಪಂಚ ಕೇದಾರಗಳಾಗಿ ಮಾರ್ಪಾಟಾಯಿತು ಎಂದು ಒಂದು ಕಥನವಿದೆ. ಮೊದಲ ಕಾಲು ಬಿದ್ದ ಪ್ರದೇಶವನ್ನು ತುಂಗನಾಥ್ ಪುಣ್ಯಕ್ಷೇತ್ರವಾಯಿತು.

4.ಪಂಚ ಕೇದಾರಗಳು

4.ಪಂಚ ಕೇದಾರಗಳು

PC:YOUTUBE

ಅದೇ ವಿಧವಾಗಿ ಕೇದಾರನಾಥ್, ಹೊಟ್ಟೆ ಬಿದ್ದ ಪ್ರದೇಶ ಮಥ್ಯ ಮಹೇಶ್ವರವಾಗಿ, ಹಿಂದಿನ ಕಾಲು ಬಿದ್ದ ಪ್ರದೇಶವನ್ನು ರುದ್ರನಾಥ್ ಆಗಿ, ತಲೆ ಬಿದ್ದ ಪ್ರದೇಶ ಕಲ್ಪೇಶ್ವರವಾಗಿ ಮಾರ್ಪಾಟಾಯಿತು. ಇವುಗಳನ್ನೇ ಪಂಚ ಕೇದಾರಗಳು ಎಂದು ಕರೆಯುತ್ತಾರೆ. ಭೀಮನ ಆ ಚಟುವಟಿಕೆಯಿಂದಾಗಿ ಕೋಪಗೊಂಡ ಪರಮೇಶ್ವನು ಪಾಂಡವರಿಗೆ ದರ್ಶನವನ್ನು ನೀಡದಯೇ ಕೈಲಾಸಕ್ಕೆ ಹೋಗಿಬಿಡುತ್ತಾನೆ.

5.ಪಾರ್ವತಿ

5.ಪಾರ್ವತಿ

PC:YOUTUBE

ಇನ್ನು ಪಾಂಡವರು ಕೃಷ್ಣನ ಸೂಚನೆಯ ಮೇರೆಗೆ ಪಾರ್ವತಿಯ ಬಗ್ಗೆ ತಪಸ್ಸು ಮಾಡಿ ಆಕೆಯ ಮೂಲಕ ಪರಮೇಶ್ವರನ ಅನುಗ್ರಹವನ್ನು ಪಡೆಯುತ್ತಾರೆ. ಕೊನೆಗೆ ಪಾಂಡವರಿಗೆ ಪರಮೇಶ್ವರನು ಅರ್ಥನಾರೀಶ್ವನ ರೂಪದಲ್ಲಿ ಗುಪ್ತಕಾಶಿಯಲ್ಲಿ ದರ್ಶನವನ್ನು ನೀಡುತ್ತಾನೆ ಎಂದು ಪುರಾಣಗಳು ತಿಳಿಸುತ್ತವೆ. ಅದ್ದರಿಂದಲೇ ಗುಪ್ತಕಾಶಿಯಲ್ಲಿ ನಮಗೆ ಪ್ರಧಾನವಾದ ಕಾಶಿ ವಿಶ್ವೇಶ್ವರನ ದೇವಾಲಯದ ಪಕ್ಕದಲ್ಲಿಯೇ ಅರ್ಥನಾರೀಶ್ವರ ದೇವಾಲಯವು ಕೂಡ ಕಾಣಿಸುತ್ತದೆ.

6.ಎರಡು ನದಿಗಳು

6.ಎರಡು ನದಿಗಳು

PC:YOUTUBE

ಇನ್ನು ಈ ದೇವಾಲಯದ ಮುಂದೆ 2 ನದಿಗಳಿಂದ ನಿತ್ಯವು ನೀರಿನ ಧಾರೆಯು ಬರುತ್ತಿರುತ್ತದೆ. ಅದರಲ್ಲಿ ಒಂದು ಗಂಗಾ ನದಿಯಾದರೆ ಮತ್ತೊಮದು ಯಮುನಾ ನದಿ. ಈ ನೀರು. ಈ ನೀರು ಎಲ್ಲಿಂದ ಬರುತ್ತಿದೆ ಎಂಬ ವಿಷಯ ಮಾತ್ರ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಈ ನಿಗೂಢದ ಬಗ್ಗೆ ಬ್ರಿಟೀಷರಿಂದ ಹಿಡಿದು ಪ್ರಸ್ತುತ ಶಾಸ್ತ್ರಕಾರರವರೆವಿಗೂ ಎಷ್ಟೊ ಪರಿಶೋಧನೆಗಳು ನಡೆದಿವೆ ಆದರೂ ಕೂಡ ಯಾವುದೇ ಪ್ರಯೋಜನಗಳು ನಡೆದಿಲ್ಲ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+