• Follow NativePlanet
Share
Menu
» »ಆಂಧ್ರ ಪ್ರದೇಶದಲ್ಲಿನ ದೇವಾಲಯ ರಹಸ್ಯ!!

ಆಂಧ್ರ ಪ್ರದೇಶದಲ್ಲಿನ ದೇವಾಲಯ ರಹಸ್ಯ!!

Written By:

ಗಂಟೂರು ದಕ್ಚಿಣ ಭಾರತ ದೇಶದ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಧಾನವಾದ ನಗರ. ಇದು ಬಂಗಾಳಕೊಲ್ಲಿ ಸಮುದ್ರಕ್ಕೆ ಸುಮಾರು 60 ಕಿ.ಮೀ ದೂರದಲ್ಲಿ ಇದೆ. ಗುಂಟೂರು ಅತ್ಯಂತ ಪ್ರಾಚೀನವಾದ ಚರಿತ್ರೆಯನ್ನು ಹೊಂದಿದೆ. ಕಲಾರಂಗದಲ್ಲಿ, ರಾಜಕೀಯ ರಂಗದಲ್ಲಿ ಈ ಜಿಲ್ಲೆ ಪ್ರಸ್ತುತ ಒಂದು ಮುಖ್ಯವಾದ ಕೇಂದ್ರವಾಗಿ ಮಾರ್ಪಾಟಾಗಿದೆ. ಆಂಧ್ರ ಪ್ರದೇಶ ರಾಷ್ಟ ರಾಜಧಾನಿಯಾಗಿ ಆಯ್ಕೆಯಾದ ಅಮರಾವತಿ ಈ ಜಿಲ್ಲೆಯಲ್ಲಿಯೇ ಇದೆ. ರಾಜ್ಯಗಳು ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಇದು ಕೂಡ ಒಂದಾಗಿ ಗುರುತಿಸಿಕೊಂಡಿದೆ. ಈ ನಗರದಲ್ಲಿ ಆನೇಕ ವಿದ್ವಾಂಸರು ಇದ್ದರು ಹಾಗೆಯೇ ಆಳ್ವಿಕೆಗಳು ನಡೆದಿವೆ.

ಗುಂಟೂರು ಪ್ರಮುಖ ವಿದ್ಯಾ ಕೇಂದ್ರ ಮತ್ತು ವ್ಯಾಪಾರ ಕೇಂದ್ರವಾಗಿದೆ. ಭಾರತ ಧೂಮಪಾನ ನಿಯಂತ್ರಣ ಬೋರ್ಡ್ ಕೂಡ ಗುಂಟೂರಿನಲ್ಲಿದೆ. ಗುಂಟೂರು ನಗರದಲ್ಲಿ ಆಚಾರ್ಯ ನಾಗರ್ಜುನ ವಿಶ್ವವಿದ್ಯಾಲಯ ಇದೆ. ಈ ಪಟ್ಟಣದಲ್ಲಿನ ಕೆಲವು ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆ ಹಾಗು ದೇವಾಲಯಗಳನ್ನು ಲೇಖನದ ಮೂಲಕ ತಿಳಿಯೋಣ.

ಇಡ್ಲಿ-ಖಾರ

ಇಡ್ಲಿ-ಖಾರ

ಗುಂಟೂರು ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಮಿರ್ಚಿ(ಮೆಣಸಿನಕಾಯಿ). ಆಶ್ಚರ್ಯ ಏನೆಂದರೆ ಇಲ್ಲಿ ಹೆಚ್ಚಾಗಿ ಇಡ್ಲಿಗೆ ಖಾರವನ್ನು ಹಾಕಿ ತಿನ್ನುತ್ತಾರೆ. ನಮ್ಮ ಹಾಗೆ ಚಟ್ನಿ ಮಾಡಿಕೊಂಡು ತಿನ್ನುವುದಿಲ್ಲ. ಹಾಗಾದರೆ ಮಾಂಸಹಾರಿಗಳ ಬಗ್ಗೆ ಮಾತಾನಾಡುವುದು ಅನವಸರ. ಏಕೆಂದರೆ ಇಡ್ಲಿಗೆ ಖಾರ ಹಾಕಿ ತಿನ್ನುವವರಿಗೆ ಇನ್ನು ಮಾಂಸಹಾರ ಇನ್ನು ಹೇಗೆ ತಿನ್ನಬಹುದು ಊಹಿಸಿ.

Photo Courtesy: guntur.com

ಕೊಂಡವಿಡು ಕೋಟೆ

ಕೊಂಡವಿಡು ಕೋಟೆ

ಗುಂಟೂರು ನಗರದಲ್ಲಿ ಅತ್ಯಂತ ದೊಡ್ಡದಾದನ ಚರಿತ್ರೆಯ ಭಾಗದಲ್ಲಿ ಈ ಕೊಂಡವಿಡು ಕೋಟೆ ಕೂಡ ಒಂದು. ನಗರದಿಂದ ಸುಮಾರು 12 ಮೈಲಿ ದೂರದಲ್ಲಿನ ಈ ಪ್ರದೇಶಕ್ಕೆ ಸುಸಜ್ಜಿತ ರಸ್ತೆ ಸಾರಿಗೆ ಇದೆ. 14 ನೇ ಶತಮಾನದ ರೆಡ್ಡಿ ರಾಜರ ಪಾಲನೆಯಲ್ಲಿ ಈ ಚಾರಿತ್ರಿಕವಾದ ಕಟ್ಟಡವನ್ನು ನಿರ್ಮಾಣ ಮಾಡಿದರು. ಈ ಕೋಟೆಯಲ್ಲಿ 21 ನಿರ್ಮಾಣಗಳು ಇವೆ.

ಈ ನಿರ್ಮಾಣಗಳು ಹಲವಾರು ಶಿಥಿಲವಾಗಿರುವುದನ್ನು ಕಾಣಬಹುದಾಗಿದೆ. ಈ ಕೋಟೆ ಒಂದು ಸುಂದರವಾದ ಪ್ರದೇಶವಾಗಿದ್ದು, ಈ ಸುಂದರವಾದ ಪ್ರದೇಶವನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲದೇ ಈ ಪ್ರದೇವು ಟ್ರೆಕ್ಕಿಂಗ್ ಪ್ರೇಮಿಗಳಿಗೂ ಕೂಡ ಆನಂದದಾಯಕವಾಗಿರಲಿದೆ. ಇಲ್ಲಿ ಮುಖ್ಯವಾಗಿ ಗೋಪಿನಾಥ ದೇವಾಲಯ ಕೋಟೆಗೆ ಅತ್ಯಂತ ಸಮೀಪದಲ್ಲಿದೆ.

Photo Courtesy: Gireesh Reddy

ಕೊಟಪ್ಪ ಕೊಂಡ

ಕೊಟಪ್ಪ ಕೊಂಡ

ಕೊಟಪ್ಪ ಕೊಂಡ ಅಥವಾ ಬೆಟ್ಟ.. ಸುಮಾರು ಈ ಹೆಸರು ಹಲವಾರು ಮಂದಿಗೆ ತಿಳಿದೇ ಇದೆ. ಗುಂಟೂರು ಜಿಲ್ಲೆ, ನರಸಾರಾವು ಪೇಟದ ಚಿಲಕಲೂರಿಪೇಟೆಗೆ ಅತ್ಯಂತ ಸಮೀಪದಲ್ಲಿ ಇದೆ ಈ ಪ್ರದೇಶ. ಈ ಪ್ರದೇಶಕ್ಕೆ ರಸ್ತೆ ಮಾರ್ಗದ ಮೂಲಕ ಸೇರಿಕೊಳ್ಳಬಹುದು. ಈ ಕ್ಷೇತ್ರ ಮೊದಲು ಬೆಟ್ಟದ ಮೇಲೆ ಮುಸಲಿ ಕೋಟಯ್ಯ ಎಂಬ ದೇವಾಲಯವಿತ್ತಂತೆ. ಪ್ರಸ್ತುತ ಇದು ಶಿಥಿಲಾವಸ್ಥೆಯಲ್ಲಿದೆ.

ಎರಡನೇಯದು ತ್ರಿಕೋಟೇಶ್ವರ ಸ್ವಾಮಿಯವರ ದೇವಾಲಯವಿದೆ. ಇಲ್ಲಿ ಮುಖ್ಯವಾಗಿ ದೊಡ್ಡದಾದ ಧ್ಯಾನ ಮಂದಿರ, ನವಗ್ರಾಲಯ, ದೇವಾಲಯದ ಹಿಂಭಾಗದಲ್ಲಿ ಒಂದು ತಂಗುವ ಕೊಠಡಿ ಇದೆ. ಪ್ರತಿ ಅರ್ಧ ಗಂಟೆಗೆ ಒಮ್ಮೆ ಬಸ್ಸುಗಳ ಸೌಕರ್ಯವಿದೆ.

Photo Courtesy: T.sujatha

ಪ್ರಕಾಶ ಬಾರೆಜ್

ಪ್ರಕಾಶ ಬಾರೆಜ್

ಕೃಷ್ಣಾ ನದಿಯ ಮೇಲೆ ನಿರ್ಮಾಣ ಮಾಡಿರುವ ಬ್ರಿಡ್ಜ್ ಈ ಪ್ರಕಾಶ ಬಾರೆಜ್. ಇದು 1223.5 ಮೀಟರ್ ದೊಡ್ಡದಾಗಿದ್ದು, ಈ ನಿರ್ಮಾಣ ಗುಂಟೂರು ಮತ್ತು ಕೃಷ್ಣಾ ಜಿಲ್ಲೆಯನ್ನು ಸಂಪರ್ಕ ಸಾಧಿಸುತ್ತದೆ. ಈ ಬಾರೆಜ್ ಚಿಕ್ಕದಾದ ನದಿಯ ಮೇಲೆ ರಸ್ತೆ ಬ್ರಿಡ್ಜಿಂಗ್ ಕೂಡ ಉಪಯೋಗಿಸಲಾಗುತ್ತದೆ. ಈ ಬಾರೆಜ್‍ನಿಂದ ಬರುವ 3 ಕಾಲುವೆಗಳು ವಿಜಯವಾಡಗೆ ಸಂಪರ್ಕ ಹೊಂದಿದೆ. ಈ ಸುಂದರವಾದ ಪ್ರದೇಶವು ಹಲವಾರು ಮಂದಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Photo Courtesy: Suresh Kumar

ಮಂಗಳಗಿರಿ ರಹಸ್ಯ ನಿಮಗೆ ಗೊತ್ತ?

ಮಂಗಳಗಿರಿ ರಹಸ್ಯ ನಿಮಗೆ ಗೊತ್ತ?

ಆಂಧ್ರ ಪ್ರದೇಶದಲ್ಲಿನ ಗುಂಟೂರು ಜಿಲ್ಲೆಯಲ್ಲಿರುವ ಈ ಮಂಗಳಗಿರಿ ಒಂದು ಚಿಕ್ಕದಾದ ಗ್ರಾಮವಾಗಿದೆ. ಈ ಪ್ರದೇಶವು ಗುಂಟೂರು ಹಾಗೆಯೇ ವಿಜಯವಾಡ ಪ್ರದೇಶಕ್ಕೆ ಒಂದು ಪ್ರಧಾನವಾದ ಪ್ರವಾಸಿ ಆಕರ್ಷಣೆಯಾಗಿದೆ. ಮಂಗಳಗಿರಿ ಎಂದರೆ ಪವಿತ್ರವಾದ ಬೆಟ್ಟ ಎಂದೇ ಆಗಿದೆ. ಹಲವಾರು ದೇವಾಲಯಗಳಿಗೆ ಈ ಮಂಗಳಗಿರಿ ಪ್ರದೇಶ ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಆನೇಕ ಮಂದಿ ಭಕ್ತರು ಸ್ವಾಮಿಯ ದರ್ಶನ ಕೋರಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಒಂದು ಬೆಟ್ಟದ ಮೇಲೆ ಅದ್ಭುತವಾದ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.

ಈ ಬೆಟ್ಟ ಒಂದು ಕಾಲದಲ್ಲಿ ಅಗ್ನಿಪರ್ವತವಾಗಿತ್ತು. ಇಲ್ಲಿ ಪಾನಕವನ್ನು ಮಾತ್ರ ನೈವೇದ್ಯವಾಗಿ ಇಡುತ್ತಾರೆ. ಏಕೆಂದರೆ ಅಗ್ನಿಪರ್ವತದಲ್ಲಿನ ಈ ಸ್ವಾಮಿಗೆ ಪಾನಕದ ಪ್ರಿಯ ಎಂದೇ ಕರೆಯುತ್ತಾರೆ.

Photo Courtesy: venkatasubbaraokolli / Durgarao Vuddanti

ಉಪ್ಪಲಪಾಡು ನೇಚರ್

ಉಪ್ಪಲಪಾಡು ನೇಚರ್

ಗುಂಟೂರು ನಗರ ಶಿವಾರುವಿನಿಂದ ಕೇವಲ 4 ಕಿ.ಮೀ ದೂರದಲ್ಲಿ ದಕ್ಷಿಣ ಪ್ರದೇಶದಲ್ಲಿ ಈ ಸುಂದರವಾದ ಉಪ್ಪಲಪಾಡು ನೇಚರ್ ಕನ್ಸರ್ವೇಷನ್ ಇದೆ. ವಾಟರ್ ಟ್ಯಾಂಕಿಗೆ ಪ್ರಸಿದ್ಧಿಯಾದ ಈ ಪ್ರದೇಶವನ್ನು ಹಲವಾರು ಸಂಖ್ಯೆಯ ಪಕ್ಷಿಗಳು ವಲಸೆ ಬರುತ್ತವೆ. ಅದ್ಭುತವಾದ ಹಾಗು ವಿವಿಧ ಜಾತಿಯ ಪಕ್ಷಿ ಸಂಕುಲವನ್ನು ಇಲ್ಲಿ ನಾವು ಕಾಣಬಹುದು.

ಪೂರ್ವದಲ್ಲಿ ಈ ಪ್ರದೇಶವನ್ನು 12000 ಪಕ್ಷಿಗಳನ್ನು ಕಾಣಬಹುದಿತ್ತು. ಇಂದು ಅದರ ಸಂಖ್ಯೆ 7000 ಕ್ಕೆ ಇಳಿದಿದೆ. ಗ್ಲೋಬಲ್ ವಾರ್ಮಿಂಗ್‍ನಂತಹ ಕಾರಣದಿಂದ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ ಎಂದೇ ಹೇಳಬಹುದಾಗಿದೆ. ಈ ಪ್ರದೇಶಕ್ಕೆ ಹೆಚ್ಚಾಗಿ ಪಕ್ಷಿ ಪ್ರೇಮಿಗಳು ಭೇಟಿ ನೀಡುತ್ತಾರೆ.

Photo Courtesy: guntur.co.in

ಉಂಡವಲ್ಲಿ ಗುಹೆಗಳು

ಉಂಡವಲ್ಲಿ ಗುಹೆಗಳು

ಉಂಡವಲ್ಲಿ ಗುಹಾಲಯ ಪರ್ವತ ಸಮುದಾಯ ಗುಂಟೂರು ಜಿಲ್ಲೆಯ ಮಂಗಳಗಿರಿ ಪ್ರದೇಶದಿಂದ ಸಮಾರು 5 ಕಿ.ಮೀ ದೂರದಲ್ಲಿದೆ. ಈ ಗುಹಾಲಯವನ್ನು ಒಂದು ಪರ್ವತ ಸಮುದಾಯ ಎಂದು ಕರೆಯುತ್ತಾರೆ. ಈ ಗುಹಾ ದೇವಾಲಯದ ಒಳಭಾಗದಲ್ಲಿ ಒಂದು ಸ್ತಂಭವಿದೆ. ಅವುಗಳ ಮೇಲೆ ಕೆತ್ತನೆ ಮಾಡಿರುವ ಸುಂದರವಾದ ಲತೆಗಳು, ದೇವತಾ ಪ್ರತಿಮೆಗಳು ಅತ್ಯಂತ ಅದ್ಭುತವಾಗಿದೆ. ಇದ್ನು ಕ್ರಿ.ಶ 4 ಅಥವಾ 5 ನೇ ಶತಮಾನಕ್ಕೆ ಸೇರಿದ್ದು ಎಂದು ಗುರುತಿಸಲಾಗಿದೆ. ಇಲ್ಲಿ 4 ಅಂತಸ್ತಿನ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಒಂದು ದೊಡ್ಡ ಕಲ್ಲಿನಲ್ಲಿ ಅನಂತ ಪದ್ಮನಾಭ ಸ್ವಾಮಿಯ ಶಿಲ್ಪವನ್ನು ಕೆತ್ತನೆ ಮಾಡಿದ್ದಾರೆ. ಈ ಗುಹೆಯ ನಿರ್ಮಾಣದ ಶೈಲಿ ಬೌದ್ಧ ವಿಹಾರಗಳ ಹಾಗೆ ಕಂಡುಬರುತ್ತದೆ.

Photo Courtesy: Sekhar Korlapati / guntur.co.in

ಇಸ್ಕಾನ್ ಟೆಂಪಲ್

ಇಸ್ಕಾನ್ ಟೆಂಪಲ್

ಆಂಧ್ರ ಪ್ರದೇಶದಲ್ಲಿನ ಗುಂಟೂರು ಜಿಲ್ಲೆ ಪೆದಕಾಕಾನಿ ಎಂಬಲ್ಲಿ ಇಸ್ಕಾನ್ ದೇವಾಲಯವಿದೆ. ಇದು ಸಮಾರು 500 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ದೇವಾಲಯವೇನದರೂ ಪೂರ್ತಿಯಾದರೆ ದಕ್ಷಿಣ ಭಾರತ ದೇಶದಲ್ಲಿಯೇ ಬಂಗಾರದಿಂದ ತಯಾರಾಗುತ್ತಿರುವ ದೇವಾಲಯ ಎಂದೇ ಪ್ರಸಿದ್ಧಿಯಾಗುತ್ತದೆ. ಈ ದೇವಾಲಯವು ಒಂದು ಅಂತರ್ ಜಾತಿಯ ಸ್ಕೂಲ್, ವೇದಿಕ ಪಾಠಶಾಲೆ, ಕೊಂಡವಿಡು ಚರಿತ್ರೆಯ ಮೇಲೆ ಒಂದು ಮ್ಯೂಸಿಯಂ ಮತ್ತು ಮೆಡಿಕಲ್ ಸೆಂಟರ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ.

Photo Courtesy: iskon

ಗುಂಟೂರುಗೆ ಹೇಗೆ ತೆರಳಬೇಕು?

ಗುಂಟೂರುಗೆ ಹೇಗೆ ತೆರಳಬೇಕು?

ಗುಂಟೂರಿಗೆ ನೇರವಾಗಿ ವಿಮಾನ ನಿಲ್ದಾಣವಿಲ್ಲ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ವಿಜಯವಾಡ ಆಗಿದೆ. ಇದು ಸುಮಾರು 96 ಕಿ.ಮೀ ದೂರದಲ್ಲಿದೆ. ಅಂತರ್ ಜಾತಿಯ ವಿಮಾನ ನಿಲ್ದಾಣವೆಂದರೆ ಅದು ಹೈದ್ರಾಬಾದ್‍ನ ರಾಜೀವ್ ಗಾಂಧಿ ವಿಮಾನ ನಿಲ್ದಾಣವಾಗಿದೆ.

ರೈಲು ಮಾರ್ಗ
ಗುಂಟೂರಿಗೆ ಇರುವ ರೈಲ್ವೆ ನಿಲ್ದಾಣ ಎಲ್ಲಾ ಪ್ರಧಾನವಾದ ನಗರಗಳಿಗೆ ಹಾಗೆ ಪಟ್ಟಣಗಳಿಗೆ ಸುಸಜ್ಜಿತವಾಗಿ ರೈಲ್ವೆ ಮಾರ್ಗಗಳು ಇವೆ. ಗುಂಟೂರು ಮುಖ್ಯವಾಗಿ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತ, ಹೈದ್ರಾಬಾದ್ ಇನ್ನು ಹಲವಾರು ನಗರಗಳಿಂದ ರೈಲ್ವೆ ಸಂಪರ್ಕ ಸಾಧಿಸುತ್ತದೆ.

Photo Courtesy: Kishoresreenidhi

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ