Search
  • Follow NativePlanet
Share
» »ಪುರಿಯ ಜಗನ್ನಾಥನಿಗೂ ಗುಂಡಿಚಾ ಮಂದಿರಕ್ಕೂ ಇರುವ ಸಂಬಂಧವೇನು ಗೊತ್ತಾ?

ಪುರಿಯ ಜಗನ್ನಾಥನಿಗೂ ಗುಂಡಿಚಾ ಮಂದಿರಕ್ಕೂ ಇರುವ ಸಂಬಂಧವೇನು ಗೊತ್ತಾ?

ಪುರಿಯಲ್ಲಿರುವ ಗುಂಡಿಚಾ ಮಂದಿರವು ಕೃಷ್ಣನ ಚಿಕ್ಕಮ್ಮ 'ಗುಂಡಿಚಾ' ದೇವಿಗೆ ಸೇರಿದ ಪವಿತ್ರ ವಾಸಸ್ಥಾನವಾಗಿದೆ.

ಒರಿಸ್ಸಾದಲ್ಲಿರುವ ಪುರಿ ಜಗನ್ನಾಥ ಮಂದಿರವು ಬಹಳ ಪುರಾತನ ಹಾಗೂ ಪ್ರಸಿದ್ಧ ದೇವಸ್ಥಾನವಾಗಿದೆ. ಈ ಜಗನ್ನಾಥನ ಚಿಕ್ಕಮ್ಮನ ದೇವಸ್ಥಾನವೂ ಅಲ್ಲೇ ಸಮೀಪದಲ್ಲಿದೆಯಂತೆ. ಅದುವೇ ಗುಂಡಿಚಾ ಮಂದಿರ. ಬಹಳಷ್ಟು ಜನರಿಗೆ ಈ ಗುಂಡಿಚಾ ಮಂದಿರದ ಬಗ್ಗೆ ತಿಳಿದಿರಲಿಕ್ಕಿಲ್ಲ. ಶ್ರೀ ಗುಂಡಿಚಾ ದೇವಸ್ಥಾನ ಪುರಿ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಗುಂಡಿಚಾ ವೃತ್ತದಲ್ಲಿದ್ದು, ಇದು ರಥಯಾತ್ರೆಗೆ ಪ್ರಸಿದ್ಧಿಯಾಗಿದೆ. ಈ ಮಂದಿರವನ್ನು ಗುಂಡಿಚಾ ಘರ್ ಅಥವಾ ಗುಂಡಿಚಾ ಮಂದಿರವೆಂದು ಕರೆಯಲಾಗುತ್ತದೆ.

ದೇವಸ್ಥಾನದ ವಾಸ್ತುಶಿಲ್ಪ

ದೇವಸ್ಥಾನದ ವಾಸ್ತುಶಿಲ್ಪ

PC:Aditya Mahar
ದೇವಸ್ಥಾನದ ವಾಸ್ತುಶಿಲ್ಪವು ಅದ್ಭುತವಾಗಿದೆ. ತಿಳಿ ಬೂದು ಮರಳು ಕಲ್ಲಿನಿಂದ ನಿರ್ಮಿಸಲ್ಪಟ್ಟಿರುವ 75 ಅಡಿ ಎತ್ತರ ಮತ್ತು 430 ಅಡಿ ಉದ್ದದ ದೇವಸ್ಥಾನವು ಉದ್ಯಾನದ ಮಧ್ಯಭಾಗದಲ್ಲಿದೆ ಮತ್ತು ಒಂದು ಗೋಡೆ ಇದನ್ನು ಸುತ್ತುವರಿದಿದೆ. ರಥಯಾತ್ರೆ ವೇಳೆ ಜಗನ್ನಾಥ ಮಂದಿರದಿಂದ ಗುಂಡಿಚಾ ದೇವಸ್ಥಾನಕ್ಕೆ ಮೂರ್ತಿಗಳನ್ನು ತಂದಾಗ ರತ್ನವೇದಿ ಪೀಠದಲ್ಲಿಡಲಾಗುತ್ತದೆ. ಪಶ್ಚಿಮ ದ್ವಾರದ ಮೂಲಕ ಒಳಬರುವ ಮೂರ್ತಿಗಳು ಪೂರ್ವ ದ್ವಾರದ ಮೂಲಕ ನಿರ್ಗಮಿಸುತ್ತದೆ.

ಕೃಷ್ಣನ ಚಿಕ್ಕಮ್ಮ

ಕೃಷ್ಣನ ಚಿಕ್ಕಮ್ಮ

PC: Ben30ghosh

ಪುರಿಯಲ್ಲಿರುವ ಗುಂಡಿಚಾ ಮಂದಿರವು ಕೃಷ್ಣನ ಚಿಕ್ಕಮ್ಮ 'ಗುಂಡಿಚಾ' ದೇವಿಗೆ ಸೇರಿದ ಪವಿತ್ರ ವಾಸಸ್ಥಾನವಾಗಿದೆ. ದೇವಾಲಯದ ವಾರ್ಷಿಕ 9 ದಿನಗಳ ರಥ ಯಾತ್ರೆಯ ಸಂದರ್ಭದಲ್ಲಿ ಬಹಳ ಮಹತ್ವ ನೀಡಲಾಗುತ್ತದೆ.

ನಂಬಿಕೆಗಳ ಪ್ರಕಾರ

ನಂಬಿಕೆಗಳ ಪ್ರಕಾರ

PC:G-u-t
ಜಗನ್ನಾಥನು ತನ್ನ ಸಹೋದರ ಬಾಲಭದ್ರ ಮತ್ತು ಸಹೋದರಿ ಸುಭದ್ರಾ ಅವರೊಂದಿಗೆ 7 ದಿನಗಳ ಕಾಲ ಈ ಪೂಜ್ಯ ಸ್ಥಳದಲ್ಲಿ ಇರುತ್ತಾರೆ. ಈ ಮೂರು ದೇವರ ವಿಗ್ರಹವನ್ನು ಚೆನ್ನಾಗಿ ಅಲಂಕಾರ ಮಾಡಿ ಮರದ ರಥದಲ್ಲಿ ಗುಂಡಿಚಾ ಮಂದಿರಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿ ಗುಂಡಿಚಾ ದೇವಿಯು ಅವರನ್ನು ಆದರರಿಂದ ಸ್ವಾಗತಿಸಿ ಚೆನ್ನಾಪಾಡಾವನ್ನು ನೀಡುತ್ತಾಳೆ.

 ದೊಡ್ಡ ಆಮೆ

ದೊಡ್ಡ ಆಮೆ

PC: Ben30ghosh
ಗುಂಡಿಚಾ ದೇವಸ್ಥಾನವು ಅಲ್ಲಿರುವ ಜಗನ್ನಾಥ್ ಗಾರ್ಡನ್ ಹೌಸ್ ನಿಂದಾಗಿ ಪ್ರವಾಸಿಗರು ಮತ್ತು ಭಕ್ತಾದಿಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ಅಲ್ಲಿ ಒಂದು ದೊಡ್ಡ ಆಮೆ ಇದೆ. ಇದು ಭಕ್ತರು ನೀಡುವ ಆಹಾರವನ್ನು ಸೇವಿಸುತ್ತದೆ. ಈ ಆಮೆಗಳು ದೇವಾಲಯಕ್ಕೆ ಸಮರ್ಪಿತವಾದವುಗಳಾಗಿವೆ. ಆದ್ದರಿಂದ ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.

ಇತರ ಪ್ರಮುಖ ಉತ್ಸವಗಳು

ಇತರ ಪ್ರಮುಖ ಉತ್ಸವಗಳು

PC: Kamalakanta777
ಹೇರಾ ಪಂಚಮಿ, ದಕ್ಷಿಣ ಮೋಡ, ರಾಸ ಲೀಲಾ, ಸಂಧ್ಯಾ ದರ್ಶನ್ ಮತ್ತು ಮಹಾಪ್ರಸಾದ್ ಮತ್ತು ಬೌದ್ಧ ಯಾತ್ರೆಗಳಂತಹ ಪ್ರಮುಖ ಉತ್ಸವಗಳನ್ನು ಆಚರಿಸಲಾಗುತ್ತದೆ. ಒರಿಸ್ಸಾ ಪ್ರವಾಸದ ಸಮಯದಲ್ಲಿ ಹಲವು ಪುರಾಣಗಳು ಪವಿತ್ರ ದೇವಾಲಯಕ್ಕೆ ಸಂಬಂಧಿಸಿವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಪುರಿಗೆ ಹತ್ತಿರದ ವಿಮಾನ ನಿಲ್ದಾಣ ಭುವನೇಶ್ವರದಲ್ಲಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಪುರಿಯನ್ನು ತಲುಪಲು ಸುಮಾರು 3 ರಿಂದ 4 ಗಂಟೆಗಳಷ್ಟು ತೆಗೆದುಕೊಳ್ಳುತ್ತದೆ. ಇಂಡಿಯನ್ ಏರ್ಲೈನ್ಸ್ ವಿಮಾನಗಳು ಭುವನೇಶ್ವರವನ್ನು ಹೈದರಾಬಾದ್, ಮುಂಬೈ, ದೆಹಲಿ, ಕಲ್ಕತ್ತಾ ಮತ್ತು ಚೆನ್ನೈಗೆ ಸಂಪರ್ಕಿಸುತ್ತವೆ.
ಭುವನೇಶ್ವರ್ ಕಲ್ಕತ್ತಾ-ಚೆನ್ನೈ ಸಾಲಿನಲ್ಲಿ ಬರುತ್ತದೆ ಮತ್ತು ಬಹುತೇಕ ರೈಲುಗಳು ಇಲ್ಲಿ ನಿಲ್ಲುತ್ತವೆ. ನೀವು ಪುರಿಗೆ ಕಲ್ಕತ್ತಾದಿಂದ ಪ್ರಯಾಣಿಸಲು ಯೋಜಿಸಿದರೆ, ಕೋರಮಂಡಲ್ ಎಕ್ಸ್ಪ್ರೆಸ್ ನಿಮಗೆ ಹೆಚ್ಚು ಅನುಕೂಲಕರ ಆಯ್ಕೆಯಾಗಿದೆ. ಹೌರ ಸ್ಟೇಷನ್‌ನಿಂದ ಹೊರಬರುವ ಪುರಿ ರೈಲಿನಲ್ಲೂ ನೀವು ಪ್ರಯಾಣಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X