» »ಗುರುತ್ವಾಕರ್ಷಣೆ ಇಲ್ಲದ ಪ್ರಪಂಚದ ಏಕೈಕ ಪ್ಯಾಲೆಸ್ ಯಾವುದು ಗೊತ್ತೆ?

ಗುರುತ್ವಾಕರ್ಷಣೆ ಇಲ್ಲದ ಪ್ರಪಂಚದ ಏಕೈಕ ಪ್ಯಾಲೆಸ್ ಯಾವುದು ಗೊತ್ತೆ?

Written By:

ಅರಮನೆಗಳು ನಮ್ಮ ಭಾರತದ ರಾಜರುಗಳ ಕಲಾ ಹಾಗು ವಾಸ್ತುಶಿಲ್ಪ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ. ಅರಮನೆಗಳು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಹಾದು ಹೋಗುವುದು ಮೈಸೂರಿನ ಅರಮನೆ. ಅರಮನೆಗಳು ನೋಡುವುದೇ ಒಂದು ಸಂಭ್ರಮ. ಒಮ್ಮೆಯಾದರು ರಾಜರು ಬಾಳಿದ ಅಂಥಹ ವೈಭವವನ್ನು ಕಾಣಬೇಕು ಎಂಬುದು ಸಾಮಾನ್ಯವಾಗಿ ಪ್ರತಿಯೊಬ್ಬರ ಬಯಕೆಯಾಗಿರುತ್ತದೆ.

ವಿಶಾಲವಾದ ಜಾಗ, ಮಂಟಪ, ಆನೆ, ಸಿಂಹಗಳಂತಹ ದೊಡ್ಡ ದೊಡ್ಡ ಶಿಲ್ಪಗಳು, ಮುಗಿಲೆತ್ತರದ ಗೋಪುರಗಳು, ಆಗಿನ ಕಾಲದ ರಾಜರು ಯುದ್ಧಕ್ಕೆ ಉಪಯೋಗಿಸುತ್ತಿದ್ದ ಖಡ್ಗಗಳು, ಇತರ ವಸ್ತುಗಳು, ಸಿಂಹಾಸನಗಳು ಅಬ್ಬಾ ಒಮ್ಮೆ ಅರಮನೆ ಕಂಡರೆ ನಾವೇ ಧನ್ಯ ಎಂಬ ಅನುಭೂತಿ ನಮ್ಮಲ್ಲಿ ಉಂಟಾಗದೇ ಇರದು. ಆ ಅರಮನೆ ಮತ್ತಷ್ಟು ವಿಶೇಷವಾಗಿದ್ದರೆ?

ಹಾಗಾದರೆ ಕೇಳಿ ಭಾರತದಲ್ಲಿನ ಲಕ್ನೋದ ಒಂದು ಅರಮನೆಯು ಸಂಪೂರ್ಣವಾಗಿ ಗುರುತ್ವಾಕರ್ಷಣೆಯನ್ನು ಇಲ್ಲವಂತೆ. ಇಂಥಹ ಅರಮನೆಯು ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲವಂತೆ. ಆ ಭವ್ಯವಾದ ಅರಮನೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಲೇಖನದ ಮೂಲಕ ಪಡೆಯಿರಿ.

ಎಲ್ಲಿದೆ?

ಎಲ್ಲಿದೆ?

ಗುರುತ್ವಾಕರ್ಷಣೆ ಇಲ್ಲದ ಆ ಅರಮನೆಯು ಉತ್ತರ ಪ್ರದೇಶದಲ್ಲಿನ ಪ್ರಸಿದ್ಧವಾದ ನಗರ ಲಕ್ನೊದಲ್ಲಿದೆ. ಆ ಅರಮನೆಯನ್ನು ಬಾರಾ ಇಮಾಂಬರಾ ಎಂದು ಕರೆಯುತ್ತಾರೆ. ಈ ಅರಮನೆಯು ಲಕ್ನೋದ ಮಚ್ಚಿ ಭವನದ ಸಮೀಪದಲ್ಲಿದೆ.

PC:Amritamitraghosh

ಬಾರಾ ಇಮಾಂಬರಾ ಪ್ಯಾಲೆಸ್

ಬಾರಾ ಇಮಾಂಬರಾ ಪ್ಯಾಲೆಸ್

ಬಾರಾ ಇಮಾಂಬರಾ ಪ್ಯಾಲೆಸ್ ಉತ್ತರ ಪ್ರದೇಶದ ಲಕ್ನೋದಲ್ಲಿನ ಒಂದು ಜನಪ್ರಿಯವಾದ ಪ್ರವಾಸಿತಾಣವಾಗಿದೆ. ಹಾಗಾಗಿ ದೇಶ, ವಿದೇಶಗಳಿಂದ ಆಶ್ಚರ್ಯಕರವಾದ ಈ ಅರಮನೆಯನ್ನು ಕಾಣಲು ಪ್ರವಾಸಿಗರು ಭೇಟಿ ನೀಡುತ್ತಾರೆ.

PC:Pawan Mirchandani

ಯಾರು ನಿರ್ಮಾಣ ಮಾಡಿದರು?

ಯಾರು ನಿರ್ಮಾಣ ಮಾಡಿದರು?

ಈ ಬಾರಾ ಇಮಾಂಬರಾ ಪ್ಯಾಲೆಸ್ ಅನ್ನು 1784 ರಲ್ಲಿ ನಾಲ್ಕನೇ ನವಾಬ್, ಬರಾಕ್ ಇಮಾಂಬರಾ ಅಸಾಫ್-ಉದ್-ದೌಲಾರಿಂದ ನಿರ್ಮಿಸಲ್ಪಟ್ಟಿತು. ಈ ಅರಮನೆಯಲ್ಲಿ ಇತನ ಸಮಾಧಿ ಹಾಗು ಕೀರಿಟವನ್ನು ಕೂಡ ಕಾಣಬಹುದಾಗಿದೆ.

PC:Chakki131

ವಿಶ್ವದಲ್ಲಿಯೇ ಅತಿದೊಡ್ಡದು

ವಿಶ್ವದಲ್ಲಿಯೇ ಅತಿದೊಡ್ಡದು

ಇದು ವಿಶ್ವದಲ್ಲಿಯೇ ಅತಿದೊಡ್ಡದಾದ ಗುರುತ್ವಾರ್ಕಷಣಾ ಇಲ್ಲದ ಕಟ್ಟಡ ಇದಾಗಿದೆ. ಯಾವುದೇ ಬೆಂಬಲವಿಲ್ಲದೇ ನಿರ್ಮಾಣ ಮಾಡಲಾಗಿರುವ ಸ್ಮಾರಕವಾಗಿದೆ. ಇದನ್ನು ಯಾವುದೇ ಲೋಹ, ಮರಗಳನ್ನು ಬಳಸದೆಯೇ ನಿರ್ಮಾಣ ಮಾಡಲಾಗಿದೆ.

PC:Asaf-ud-dowlah

ಅರಮನೆಯಲ್ಲಿ ಏನೆನಿದೆ?

ಅರಮನೆಯಲ್ಲಿ ಏನೆನಿದೆ?

ಈ ಬಾರಾ ಇಮಾಂಬರಾ ಅರಮನೆಯಲ್ಲಿ ರುಮಿ ದರ್ವಾಜಾ, ಶಾಹಿ ಬವಾಲಿ, ತೆಲೆ ವಾಲಿ ಮಸೀದಿ, ಕ್ಲಾಕ್ ಟವರ್, ಛೋಟಾ ಇಮಾಂಬರಾ ಮತ್ತು ಆಸಿಫಿ ಮಸೀದಿಗಳಂತಹ ಕೆಲವು ಅದ್ಭುತವಾದ ಹಾಗು ಪವಿತ್ರ ಕೇಂದ್ರಗಳನ್ನು ಇಲ್ಲಿ ಕಾನಬಹುದಾಗಿದೆ.

PC:Ashusopku

ವಾಸ್ತುಶಿಲ್ಪ

ವಾಸ್ತುಶಿಲ್ಪ

ಈ ಬಾರಾ ಇಮಾಂಬರಾ ಪ್ಯಾಲೆಸ್‍ನ ವಾಸ್ತು ಶಿಲ್ಪವು ಅತ್ಯಂತ ಮನೋಹರವಾಗಿದ್ದು, ಪ್ರವಾಸಿಗರಿಗೆ ಇದರ ವಾಸ್ತು ಶಿಲ್ಪಶೈಲಿಯು ಮತ್ತಷ್ಟು ಆರ್ಕಷಣೆಯಾಗಿದೆ. ಈ ಅರಮನೆಗೆ ಅರೇಬಿಕ್ ಮತ್ತು ಯುರೋಪಿಯನ್ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ.

PC:MohitW1

ಬಾರಾ ಇಮಾಂಬಾರಾ

ಬಾರಾ ಇಮಾಂಬಾರಾ

ಸಾಮಾನ್ಯವಾಗಿ "ಬಾರಾ" ಎಂಬ ಪದವು ದೊಡ್ಡದು ಅಥವಾ ಬೃಹತ್ ಮತ್ತು ಇಮಾಂಬರಾ ಎಂಬ ಪದವು ದೇವಾಲಯವನ್ನು ಸೂಚಿಸುವ ಪದವಾಗಿದೆ. ಇದರ ಸಂಪೂರ್ಣವಾದ ಅರ್ಥ ದೊಡ್ಡದಾದ ದೇವಾಲಯ ಎಂಬುದೇ ಆಗಿದೆ.

PC:Sudhir Herle

ಹೇಗಿದೆ ಅರಮನೆ?

ಹೇಗಿದೆ ಅರಮನೆ?

ಅರಮನೆಯು 50 ಮೀಟರ್ ಉದ್ದ ಹಾಗು 15 ಮೀಟರ್ ಅಗಲವಿದೆ. ಅರಮನೆಯು ಅತ್ಯಂತ ವಿಶಾಲವಾಗಿದ್ದು ಹಲವಾರು ಅಲಂಕಾರಿಕವಾದ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ವಿವಿಧ ಛಾವಣಿಯನ್ನು ಕಾಣಬಹುದಾಗಿದೆ. ಇದನ್ನು ಗ್ರಾವಿಟಿ ಡಿಫೈಯಿಂಗ್ ಅರಮನೆ ಎಂದೇ ಲಕ್ನೋದಲ್ಲಿ ಖ್ಯಾತಿ ಪಡೆದಿದೆ.

PC:Sayed Mohammad Faiz Haide

ಗ್ರಾವಿಟಿ ಡಿಫೈಯಿಂಗ್ ಅರಮನೆ

ಗ್ರಾವಿಟಿ ಡಿಫೈಯಿಂಗ್ ಅರಮನೆ

ಈ ಗ್ರಾವಿಟಿ ಡಿಫೈಯಿಂಗ್ ಅರಮನೆಯನ್ನು ನಿರ್ಮಾಣ ಮಾಡಲು ಸುಮಾರು 20,000 ಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಶ್ರಮ ವಹಿಸಿದ್ದಾರೆ. ಇವರ ಫಲಿತಾಂಶವಾಗಿಯೇ ಇಂಥಹ ಸುಂದರವಾದ ಅರಮನೆಯು ಸೃಷ್ಟಿಯಾಯಿತು ಎಂದೇ ಹೇಳಬಹುದಾಗಿದೆ.

PC:Sayed Mohammad Faiz Haide

ಯಾರಿಂದ ನಿರ್ಮಾಣ ಮಾಡಿಸಲಾಯಿತು?

ಯಾರಿಂದ ನಿರ್ಮಾಣ ಮಾಡಿಸಲಾಯಿತು?

ಈ ನಿಗೂಢ ನಿರ್ಮಾಣವನ್ನು ದೆಹಲಿಯ ಪ್ರಸಿದ್ಧವಾದ ವಾಸ್ತುಶಿಲ್ಪಿಯಾದ ಕಿಫಾಯತುಲ್ಲಾ ಮತ್ತು ಷಹಜಹಾನಾಬಾಡಿಗಳಿಂದ ನಿರ್ಮಾಣ ಮಾಡಿಸಲಾಯಿತು. ಇವರು ಆ ಕಾಲದಲ್ಲಿ ಪ್ರಸಿದ್ಧವಾದ ವಾಸ್ತುಶಿಲ್ಪಿಗಳಾಗಿದ್ದರು.

PC:Sayed Mohammad Faiz Haide

ಗ್ರಾವಿಟಿ ಡಿಫೈಯಿಂಗ್ ಅರಮನೆ

ಗ್ರಾವಿಟಿ ಡಿಫೈಯಿಂಗ್ ಅರಮನೆ

ಈ ಗ್ರಾವಿಟಿ ಡಿಫೈಯಿಂಗ್ ಅರಮನೆಯು ಉತ್ತರ ಪ್ರದೇಶದ ಪೂರ್ವ ಪ್ರಾಂತ್ಯದಲ್ಲಿ ನೆಲೆಗೊಂಡಿದ್ದು, ಕಿರಣಗಳು ಮತ್ತು ಸ್ಥಂಭಗಳ ಏಕೈಕ ಬಾಹ್ಯ ಬೆಂಬಲವಿಲ್ಲದೇ ನಿರ್ಮಾಣ ಮಾಡಲಾಗಿರುವುದು ಎಂದು ನಂಬಾಲಾಗದಂತಹದು.

PC:The sachin trillionaire

ಮೆಟ್ಟಿಲುಗಳು

ಮೆಟ್ಟಿಲುಗಳು

ಗ್ರಾವಿಟಿ ಡಿಫೈಯಿಂಗ್ ಪ್ಯಾಲೆಸ್‍ನಲ್ಲಿ ಸುಮಾರು ಸಾವಿರ ಕಿರಿದಾದ ಮೆಟ್ಟಿಲುಸಾಲುಗಳನ್ನು ಕಾಣಬಹುದಾಗಿದೆ. ದೊಡ್ಡದಾದ ಮಂಟಪದ ಸ್ಥಳದಲ್ಲಿ ಮಸೀದಿ ಕೂಡ ಇದೆ. ಇಲ್ಲಿನ ಸುಂದರವಾದ ಉದ್ಯಾನವನವು ಮತ್ತಷ್ಟು ಮನಸ್ಸಿಗೆ ಮುದ ನೀಡುತ್ತದೆ.

PC:Aditya Akolkar

ಸುರಂಗ ಮಾರ್ಗಗಳು

ಸುರಂಗ ಮಾರ್ಗಗಳು

ಈ ಅರಮನೆಯಲ್ಲಿಯೂ ಕೂಡ ಸಾಕಷ್ಟು ಸುರಂಗ ಮಾರ್ಗಗಳಿವೆ. ಪ್ರಸಿದ್ಧವಾದ ದೆಹಲಿ, ಅಲಹಾಬಾದ್ ಮತ್ತು ಫೈಜಾಬಾದ್ ಮುಂತಾದ ವಿವಿಧ ಪ್ರಮುಖ ನಗರಗಳಲ್ಲಿನ ಅರಮನೆಗಳಿಗೂ ಕೂಡ ಹಲವಾರು ಸುರಂಗ ಮಾರ್ಗಗಳು ಇವೆ. ಆದರೆ ಆಂತಹ ಸುರಂಗ ಮಾರ್ಗಗಳ ಅನ್ವೇಷಣೆ ಎಂದು ಆನೇಕ ಪ್ರವಾಸಿಗರು ಕಳೆದು ಹೋದ ಕಾರಣ, ಅಂತಹ ಸುರಂಗವನ್ನು ಶಾಶ್ವತವಾಗಿ ಮುಚ್ಚಲಾಗಿದೆ.

PC:Aditya Akolkar

ಭೇಟಿ ನೀಡಲು ಉತ್ತಮವಾದ ಕಾಲಾವಧಿ

ಭೇಟಿ ನೀಡಲು ಉತ್ತಮವಾದ ಕಾಲಾವಧಿ

ಬಾರಾ ಇಮಾಂಬರಾ ಪ್ಯಾಲೆಸ್‍ಗೆ ವರ್ಷವಿಡಿ ಭೇಟಿ ನೀಡಬಹುದಾದ ಸ್ಥಳವಾಗಿದೆ. ಆದರೂ ಕೂಡ ಈ ಅದ್ಭುತವಾದ ಸ್ಮಾರಕಕ್ಕೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್‍ನವರೆಗೆ. ಈ ಸಮಯದಲ್ಲಿನ ಹವಾಮಾನವು ಪ್ರವಾಸಿಗರಿಗೆ ಆಹ್ಲಾದಕರವಾಗಿರುತ್ತದೆ.

PC:MohitW1

ಪ್ರವೇಶ ಸಮಯ

ಪ್ರವೇಶ ಸಮಯ

ಈ ಬಾರಾ ಇಮಾಂಬರಾ ಪ್ಯಾಲೆಸ್‍ಗೆ ಪ್ರವೇಶ ಸಮಯವು ಬೆಳಗ್ಗೆ 6:30 ರಿಂದ ಸಂಜೆ 5:00 ಗಂಟೆಯವೆರೆಗೆ. ಈ ಅರಮನೆಗೆ ತೆರಳಲು ಪ್ರವೇಶ ಶುಲ್ಕವನ್ನು ಕೂಡ ಪಾವತಿಸಬೇಕಾಗುತ್ತದೆ. ಭಾರತೀಯರಿಗೆ ತಲಾ 25 ರೂ. ವಿದೇಶಿಯರಿಗೆ ತಲಾ 300 ರೂ ಆಗಿರುತ್ತದೆ.

PC:Karthik Easvur

ಮುಸ್ಲಿಂರ ಯಾತ್ರಾ ಸ್ಥಳ

ಮುಸ್ಲಿಂರ ಯಾತ್ರಾ ಸ್ಥಳ

ವಿಶ್ವದ ಅತಿದೊಡ್ಡ ಕಮಾನು ರಚನೆಯನ್ನು ಹೊಂದಿರುವ ಬಾರಾ ಇಮಾಂಬರಾ ಮುಸ್ಲಿಂರ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ವಿಶೇಷವಾಗಿ ಪವಿತ್ರವಾದ ಮೊಹಾರಂ ಹಬ್ಬದ ಸಮಯದಲ್ಲಿ ಇಲ್ಲಿಗೆ ಬಹು ಸಂಖ್ಯೆಯಲ್ಲಿ ಮುಸ್ಲಿಂ ಯಾತ್ರಿಕರು ಭೇಟಿ ನೀಡುತ್ತಾರೆ.

PC:MohitW1

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಬಾರಾ ಇಮಾಂಬರಾ ಅರಮನೆಗೆ ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಲಕ್ನೊ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಟ್ಯಾಕ್ಸಿಯ ಮೂಲಕ ಸುಮಾರು 1 ಗಂಟೆಯ ಕಾಲಾವಕಾಶದಲ್ಲಿ ಅರಮನೆಗೆ ತಲುಪಬಹುದಾಗಿದೆ.

PC:Amritamitraghosh

ರೈಲ್ವೆ ನಿಲ್ದಾಣ

ರೈಲ್ವೆ ನಿಲ್ದಾಣ

ಬಾರಾ ಇಮಾಂನರಾ ಅರಮನೆಗೆ ಸಮೀಪದ ರೈಲ್ವೆ ನಿಲ್ದಾಣಗಳೆಂದರೆ ಅದು ಚಾರ್ಬಗ್ ಮತ್ತು ಲಕ್ನೋ ನಗರ. ಇಲ್ಲಿಂದ ಅರಮನೆಗೆ ಕೇವಲ 5 ಕಿ.ಮೀ ದೂರದಲ್ಲಿದೆ.

PC:Sayed Mohammad Faiz Haide

Please Wait while comments are loading...