Search
  • Follow NativePlanet
Share
» »ತಿರುಪತಿಯ ಅತ್ಯಂತ ಹಳೆಯ ದೇವಾಲಯವೆನಿಸಿದ ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ಕೊಡಲೇ ಬೇಕು ಏಕೆ?

ತಿರುಪತಿಯ ಅತ್ಯಂತ ಹಳೆಯ ದೇವಾಲಯವೆನಿಸಿದ ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ಕೊಡಲೇ ಬೇಕು ಏಕೆ?

ತಿರುಪತಿಯ ಈ ಪ್ರಾಚೀನ ದೇವಾಲಯಕ್ಕೆ ನೀವು ಭೇಟಿ ನೀಡಲೇಬೇಕು

ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿರುವ ಸುಂದರ ನಗರವಾದ ತಿರುಪತಿಯು ಇಲ್ಲಿಯ ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ದೇವಾಲಯಕ್ಕಾಗಿ ಸ್ಥಳೀಯರಲ್ಲಿ ಮತ್ತು ಪ್ರವಾಸಿಗರಲ್ಲಿ ಅತ್ಯಂತ ಹೆಸರುವಾಸಿಯಾರುವ ಹಾಗೂ ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳವಾಗಿದೆ. ಅದಕ್ಕಾಗಿಯೇ ತಿರುಪತಿಯನ್ನು ಆಂಧ್ರಪ್ರದೇಶದ ಆಧ್ಯಾತ್ಮಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಜಗತ್ತಿನಾದ್ಯಂತದ ಪ್ರವಾಸಿಗರು ತಿರುಪತಿಯಲ್ಲಿ ನೆಲೆಸಿರುವ ವಿಷ್ಣು ದೇವರಿಗರ್ಪಿತವಾದ ವೈಭವೋಪೇತವಾದ ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡಲು ಬರುತ್ತಾರೆ.

govindarajatemple-1663307598.jpg -Properties

ಆದರೆ ಕೇವಲ ತಿರುಮಲದ ವೆಂಕಟೇಶ್ವರ ದೇವಾಲಯ ಮಾತ್ರವಲ್ಲದೆ ತಿರುಪತಿಯಲ್ಲಿ ಭೇಟಿ ಕೊಡಬಹುದಾದ ಮತ್ತ್ನು ಇನ್ನೂ ಅನ್ವೇಷಣೆಗೆ ಯೋಗ್ಯವಾದಂತಹ ಹಲವಾರು ದೇವಾಲಯಗಳಿರುವುದು ನಿಮಗೆ ಗೊತ್ತೆ? ತಿರುಪತಿಯಲ್ಲಿರುವ ಇನ್ನಿತರ ದೇವಾಲಯಗಳಿಗೆ ಅಥವಾ ಅಲ್ಲಿಯ ಸೌಂದರ್ಯತೆಗಳಿಗೆ ಭೇಟಿ ಕೊಡಲು ಇಚ್ಚಿಸುವಿರಾದಲ್ಲಿ ನೀವು ಇಲ್ಲಿಯ ಅತ್ಯಂತ ಸುಂದರವಾದ ಭವ್ಯವಾದ ಗೋವಿಂದರಾಜ ದೇವಾಲಯಕ್ಕೆ ಭೇಟಿ ಕೊಡಲು ಪ್ರಯತ್ನಿಸಿ. ಈ ದೇವಾಲಯದ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ.

kapilatheertam-1541335098-1663307607.jpg -Properties

ಈ ಸ್ಥಳ ಮತ್ತು ಗೋವಿಂದರಾಜ ದೇವಾಲಯದ ಇತಿಹಾಸದ ಬಗ್ಗೆ ತಿಳಿಯೋಣ

ಪ್ರಸಿದ್ದ ವೆಂಕಟೇಶ್ವರ ದೇವಾಲಯದಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿ ತಿರುಪತಿಯ ಮಧ್ಯದಲ್ಲಿ ನೆಲೆಸಿರುವ ಗೋವಿಂದರಾಜ ದೇವಾಲಯವು ರಾಜ್ಯದ ವಿಷ್ಣು ದೇವರಿಗೆ ಅರ್ಪಿತವಾದ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ದೇವಾಲಯ ಸಂಕೀರ್ಣಗಳನ್ನು ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು 12 ನೇ ಶತಮಾನದಲ್ಲಿ ಸಂತ ರಾಮಾನುಜಾಚಾರ್ಯರು ನಿರ್ಮಿಸಿದರು ಆದರೂ ಈ, ದೇವಾಲಯದ ಗರ್ಭಗುಡಿಯು 9 ನೇ ಶತಮಾನದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತದೆ.

ಇಂದು ಈ ದೇವಾಲಯವನ್ನು ಸಾವಿರಾರು ಸ್ಥಳೀಯರಿಂದ ಭೇಟಿ ಕೊಡಲ್ಪಡುತ್ತದೆ ಹಾಗೂ ವೈಷ್ಣವರಿಗೆ ಇದು ಪೂಜ್ಯನೀಯ ಯಾತ್ರಾ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಈ ದೇವಾಲಯವು ಇದರ ವಾಸ್ತುಶಿಲ್ಪಕ್ಕಾಗಿ ಯೂ ಗುರುತಿಸಲ್ಪಟ್ಟಿದೆ. ಇಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಬ್ರಹ್ಮೋತ್ಸವ ಮತ್ತು ಏಕಾದಶಿ ಸೇರಿವೆ. ಹಾಗಾದರೆ, ಈ ಅದ್ಭುತ ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

-koneru-govindaraja-temple-tirupati-1541335104-1663307615.jpg -Properties

ನೀವು ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಡಲೇ ಬೇಕು ಏಕೆ?

ಈ ಅತ್ಯಂತ ಪ್ರಾಚೀನ ದೇವಾಲಯಕ್ಕೆ ನೀವು ಭೇಟಿ ಕೊಟ್ಟು ಇಲ್ಲಿಯ ಅಸ್ಪೃಶ್ಯ ತಾಣಗಳ ಸೌಂದರ್ಯಕ್ಕೆ ಭೇಟಿ ಕೊಡಲೇ ಬೇಕು. ಇಲ್ಲಿಯ ದೈವಿಕ ವಾತಾವರಣದ ಹೊರತಾಗಿಯೂ ಇದರ ಗಡಿಯೊಳಗೆ ಪ್ರಶಾಂತತೆಯ ಸಾರವನ್ನು ಅನುಭವಿಸಬಹುದಾಗಿದೆ ಅಲ್ಲದೆ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಶೈಲಿಯ ಅನ್ವೇಷಣೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ.

ದೇವಾಲಯದ ಗೋಡೆಗಳ ಮೇಲಿನ ಪೌರಾಣಿಕ ದೃಶ್ಯಗಳ ಸೌಂದರ್ಯವನ್ನು ಸೆರೆಹಿಡಿಯುವುದರಿಂದ ಹಿಡಿದು ಅದರ ಸಂಕೀರ್ಣ ಕೆತ್ತನೆಗಳನ್ನು ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುವವರೆಗೆ, ಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ ಮಾಡಲು ಬಹಳಷ್ಟು ಇದೆ. ಈ ದೇವಾಲಯದ ಗಡಿಯನ್ನು ಮೀರಿ ಅನ್ವೇಷಿಸಲು ನೀವು ಬಯಸಿದರೆ, ನಂತರ ನೀವು ತಿರುಮಲ ಬೆಟ್ಟಗಳು, ಕಪಿಲ ತೀರ್ಥಂ ಮತ್ತು ಪದ್ಮಾವತಿ ದೇವಸ್ಥಾನ ಇತ್ಯಾದಿ ಹತ್ತಿರದ ಆಕರ್ಷಣೆಗಳಿಗೆ ಭೇಟಿ ನೀಡಬಹುದು.

ಈ ದೇವಾಲಯಕ್ಕೆ ಭೇಟಿ ಕೊಡಲು ಉತ್ತಮ ಸಮಯ

ತಿರುಪತಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳು ಬಿಸಿಲಿನ ವಾತಾವರಣವನ್ನು ಬೇಸಿಗೆಯಲ್ಲಿ ಹೊಂದುವುದರಿಂದ ಈ ಸ್ಥಳಗಳಿಗೆ ಬೇಸಿಗೆಯಲ್ಲಿ ಭೇಟಿ ಕೊಡುವುದು ಅಷ್ಟೊಂದು ಸೂಕ್ತವಲ್ಲ. ಅಕ್ಟೋಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಹವಾಮಾನವು ಸಂಪೂರ್ಣವಾಗಿ ಉತ್ತಮವಾಗಿದ್ದು ಭೇಟಿಗೆ ಯೋಗ್ಯವಾದ ಆದರೂ ಕೂಡಾ ವಿಷ್ಣುವಿನ ಭಕ್ತರಿಗೆ, ಈ ದೇವಾಲಯವು ವರ್ಷಪೂರ್ತಿ ಭೇತಿ ನೀಡುವ ಪ್ರವಾಸಿ ತಾಣವಾಗಿದೆ.
ತಿರುಪತಿಯನ್ನು ತಲುಪುವುದು ಹೇಗೆ ?

ವಿಮಾನದ ಮೂಲಕ: ತಿರುಪತಿ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿದೆ.ವಿಮಾನ ನಿಲ್ದಾಣ ಮತ್ತು ದೇವಾಲಯದ ನಡುವಿನ ಅಂತರ 15 ಕಿ.ಮೀ. ಆದ್ದರಿಂದ, ನೀವು ವಿಮಾನದ ಮೂಲಕ ನೇರವಾಗಿ ತಲುಪಬಹುದು. ಇದು ಹೈದರಾಬಾದ್, ದೆಹಲಿ, ಬೆಂಗಳೂರು ಮುಂತಾದ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ರೈಲುಮಾರ್ಗದ ಮೂಲಕ: ತಿರುಪತಿಯು ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ ಮತ್ತು ಆದ್ದರಿಂದ ಇಲ್ಲಿಗೆ ತಲುಪಲು ಭಾರತದ ಇತರ ಪ್ರಮುಖ ನಗರಗಳಿಂದ ನೇರ ರೈಲಿನ ಮೂಲಕ ಹೋಗಬಹುದು. ರೈಲ್ವೆ ನಿಲ್ದಾಣದಿಂದ, ನೀವು ದೇವಸ್ಥಾನವನ್ನು ತಲುಪಲು ಸಾರ್ವಜನಿಕ ಸಾರಿಗೆಯನ್ನು ಬಳಸಬಹುದು.

ರಸ್ತೆಯ ಮೂಲಕ: ತಿರುಪತಿಯು ಜನಪ್ರಿಯ ಯಾತ್ರಾ ಸ್ಥಳವಾಗಿರುವುದರಿಂದ, ಇದು ಸುಸಜ್ಜಿತವಾದ ರಸ್ತೆ ಜಾಲವನ್ನು ಹೊಂದಿದೆ ಮತ್ತು ಆದ್ದರಿಂದ ಇದನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+