
ಗೋಪಾಲ್ ಪುರ ಕಡಲ ಕಿನಾರೆ ನಿಮ್ಮ ಗೆಳೆಯರು ಮತ್ತು ಕುಟುಂಬದ ಜೊತೆಗೆ ಭೇಟಿ ನೀಡಲು ಸೂಕ್ತವಾದ ತಾಣವಾಗಿದೆ. ಇಲ್ಲಿ ನೀವು ಪ್ರಕೃತಿಯನ್ನು ಬಹಳ ಸಮೀಪದಿಂದ ಕಾಣಬಹುದಾಗಿದೆ.ಇಲ್ಲಿನ ಕಿನಾರೆಯಲ್ಲಿ ಸ್ನಾನ ಮಾಡುವ ಮಜಾನೇ ಬೇರೆ.

ಕಡಲ ಕಿನಾರೆಯಲ್ಲಿ ಮನೋರಂಜನೆ
ಈ ಕಡಲ ಕಿನಾರೆಯಲ್ಲಿ ಮನೋರಂಜನೆಗೂ ಹಲವು ದಾರಿಗಳಿವೆ. ಉದಾಹರಣೆಗೆ ಕುದುರೆ ಸವಾರಿ, ಕ್ರೂಸಿಂಗ್, ದೇಹಕ್ಕೆ ಮಸಾಜ್ ಮಾಡಿಸಿಕೊಳ್ಳುವುದು ಇತ್ಯಾದಿ. ಇಲ್ಲಿನ ಸೂರ್ಯಾಸ್ತದ ದೃಶ್ಯವನ್ನು ಅನುಭವಿಸಿದವರಿಗೆ ಬೇರೆ ಕಡೆಯ ಸೂರ್ಯಾಸ್ತ ಸಪ್ಪೆ ಎನ್ನಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ದ್ವೀಪ ಸ್ತಂಭ
ಇಲ್ಲಿನ ಸಮುದ್ರದ ಅಲೆಗಳು ಒಂದು ಲಯದಲ್ಲಿ ಹೆಚ್ಚು ಕಡಿಮೆ ಆದಂತೆ ಕಾಣಿಸುತ್ತದೆ. ಈ ಅಲೆಗಳನ್ನು ಇಲ್ಲೇ ಸಿಗುವ ಎಳೆನೀರನ್ನು ಸೇವಿಸುತ್ತಾ ಅನುಭವಿಸಿದರೆ ಅದರ ಆನಂದವೇ ಬೇರೆ. ಇಲ್ಲಿ ಬಹಳ ಹಳೆಯ ಕಾಲದ ಒಂದು ದ್ವೀಪ ಸ್ತಂಭ ಇದೆ. ಈ ದ್ವೀಪ ಸ್ತಂಭ ಇಂದಿಗೂ ಬೆಳಗುತ್ತಿದ್ದು ಇಲ್ಲಿ ಸಾಗುವ ಹಡಗುಗಳಿಗೆ ದಾರಿ ದೀಪವಾಗಿದೆ.

ಯಾವಾಗ ಭೇಟಿ ಸೂಕ್ತ
ಗೋಪಾಲ್ ಪುರ ಬೀಚ್ ವರ್ಷಪೂರ್ತಿ ಭೇಟಿ ನೀಡಬಹುದಾಂತಹ ತಾಣವಾಗಿದೆ.ಬೇಸಿಗೆಗಾಲದಲ್ಲಿ ಹವಾಮಾನವು 35 ಡಿಗ್ರಿ ಯಿಂದ 23 ಡಿಗ್ರಿ ವರೆಗೆ ಇರುತ್ತದೆ. ಕಡಲತೀರಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಹವಾಮಾನವು ತಂಪಾಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ. ಕಡಲತೀರದ ವಿವಿಧ ಪ್ರವಾಸಿ ಚಟುವಟಿಕೆಗಳನ್ನು ಆನಂದಿಸಲು ಇದು ಸೂಕ್ತ ಸಮಯವಾಗಿದೆ.

ಉಪಹಾರ ಮಳಿಗೆಗಳು
ಗೋಪಾಲ್‌ಪುರ ಬೀಚ್ ಬಳಿ ಹಲವಾರು ಉಪಹಾರ ಮಳಿಗೆಗಳು ಮತ್ತು ರೆಸ್ಟೊರೆಂಟ್‌ಗಳಿವೆ. ಅಲ್ಲಿ ಜನರು ವಿವಿಧ ಪಾಕಪದ್ಧತಿಗಳಿಂದ ನಾಲಗೆ ಚಪ್ಪರಿಸುವಂತಹ ಭಕ್ಷ್ಯಗಳನ್ನು ಆನಂದಿಸಬಹುದು. ಜನರು ತಮ್ಮ ನಾಲಗೆ ರುಚಿಗೆರುಚಿ ಚಿಕಿತ್ಸೆ ನೀಡುವ ಕೆಲವು ಉತ್ತಮ ರೆಸ್ಟೋರೆಂಟ್‌ಗಳು ಇಲ್ಲಿವೆ.

ತಂಗುವುದು ಎಲ್ಲಿ
ಗೋಪಾಲ್‌ಪುರ ಬೀಚ್ ಬಳಿ ಅನೇಕ ಹೋಟೆಲ್‌ಳು ಮತ್ತು ರೆಸಾರ್ಟ್‌ಗಳು ಲಭ್ಯವಿವೆ. ಮೇಫೇರ್ ಪಾಮ್ ಬೀಚ್ ರೆಸಾರ್ಟ್, ಸಾಂಗ್ ಆಫ್ ದಿ ಸೀ, ಹೋಟೆಲ್ ಗ್ರೀನ್ ಪಾರ್ಕ್, ಸ್ವಸ್ಟಿ ಪಾಮ್ ರೆಸಾರ್ಟ್, ಹೋಟೆಲ್ ಸೈಡ್ ಸೀ ಬ್ರೀಜ್ ಮತ್ತು ಹೋಟೆಲ್ ಸೀ ಪರ್ಲ್ಗಳು ಗೋಪಾಲ್ ಪುರ್ ಬೀಚ್ ಹತ್ತಿರ ಕೆಲವು ಉತ್ತಮ ಸೌಕರ್ಯಗಳು.

ಫ್ಯಾಮಿಲಿ ಪಿಕ್ನಿಕ್‌ಗೆ ಸೂಕ್ತ
ಕಡಲತೀರದ ಶಾಂತಿಯುತ ವಾತಾವರಣವು ನೈಸರ್ಗಿಕ ಸೌಂದರ್ಯದ ಮಧ್ಯೆ ಸ್ವಲ್ಪ ಸಮಯವನ್ನು ಆರಾಮವಾಗಿ ಕಳೆಯಬಹುದು. ಗೋಪಾಲ್‌ಪುರ ಕಡಲ ತೀರವು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾಲಕಳೆಯಲು ಬಯಸುವವರಿಗೆ ಸೂಕ್ತ ಸ್ಥಳವಾಗಿದೆ. ಪ್ರಕೃತಿ ಪ್ರೇಮಿಗಳು, ಸಾಹಸ ಅನ್ವೇಷಕರು ಮತ್ತು ಛಾಯಾಗ್ರಾಹಕರು ಈ ಕಡಲತೀರವನ್ನು ಭೇಟಿ ಮಾಡಲೇಬೇಕು. ಗೋಪಾಲ್ ಪುರದಿಂದ ಸುಮಾರು 45 ಕಿ.ಮೀ ದೂರದಲ್ಲಿ ಚಿಲ್ಕಾ ಕೆರೆ ಇದೆ. 1100ಸ್ಕ್ವೇರ್ ಕಿ.ಮೀ ಹಬ್ಬಿಕೊಂಡಿದ್ದು, ಸಾಕಷ್ಟು ಸಂಖ್ಯೆಯ ಪಕ್ಷಿಗಳನ್ನು ಆಕರ್ಷಿಸುತ್ತದೆ.

ತಲುಪುವುದು ಹೇಗೆ?
ಗೋಪಾಲ್ ಪುರ ಬೀಚ್‌ಗೆ ವಿವಿಧ ಮೂಲೆಗಳಿಂದ ರಸ್ತೆ, ರೈಲು ಮತ್ತು ವಾಯು ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಭುವನೇಶ್ವರ ವಿಮಾನ ನಿಲ್ದಾಣವು 180 ಕಿ.ಮೀ ದೂರದಲ್ಲಿದೆ. ಹೌರಾ-ಚೆನ್ನೈ ಸಾಲಿನಲ್ಲಿ ಬೆರ್ಹಾಮ್ಪುರ್ ಇಲ್ಲಿಗೆ ಹತ್ತಿರ ಇರುವ ರೈಲ್ವೇ ನಿಲ್ದಾಣವಾಗಿದೆ. ಇನ್ನು ಗೋಪಾಲ್ ಪುರವು ರಸ್ತೆಯ ಮೂಲಕ ದೇಶದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಬಾರ್ಕುಲ್ (75 ಕಿಮೀ), ಬೆರ್ಹಾಂಪುರ್ (16 ಕಿಮೀ), ಭುವನೇಶ್ವರ್ (180 ಕಿಮೀ), ಮತ್ತು ಪುರಿ (242 ಕಿ.ಮೀ) ಗೆ ಪ್ರಯಾಣ ಮಾಡಬಹುದಾಗಿದೆ.