
ನೂರಾರು ಎಕರೆಗಳಷ್ಟು ವಿಸ್ತೀರ್ಣ, 1500 ಕೆ.ಜಿ ಬಂಗಾರ, 400 ಶಿಲ್ಪಗಳು, 6 ವರ್ಷಗಳ ನಿರಂತರ ಶ್ರಮ, ಸುಮಾರು 600 ಕೋಟಿ ರೂಪಾಯಿಗಳ ವಸೂಲಿ. ಇಷ್ಟು ವೆಚ್ಚ ಮಾಡಿ ನಿರ್ಮಾಣ ಮಾಡಿರುವ ದೇವಾಲಯ ಬೇರೆ ಎಲ್ಲೂ ಇಲ್ಲ ಅದು ತಮಿಳುನಾಡಿನ ಶ್ರೀಪುರಂ ಲಕ್ಷ್ಮಿ ನಾರಾಯಣಿ ಅಮ್ಮನ ಸ್ವರ್ಣ ದೇವಾಲಯ. ಅದ್ದರಿಂದಲೇ ಈ ಸ್ವರ್ಣ ದೇವಾಲಯವನ್ನು ಪಂಜಾಬ್‍ನಲ್ಲಿನ ಅಮೃತ್ ಸರ್‍ನಲ್ಲಿನ ಸ್ವರ್ಣ ದೇವಾಲಯವಷ್ಟೇ ಪ್ರಸಿದ್ಧಿಯನ್ನು ಹೊಂದುತ್ತಿದೆ.
ತಿರುಪತಿಗೆ ಭೇಟಿ ನೀಡುವವರಲ್ಲಿ, ಸುಮಾರು 70 ರಷ್ಟು ಭಾಗದ ಪ್ರವಾಸಿಗರು ತಪ್ಪದೆ ಈ ಲಕ್ಷ್ಮೀನಾರಾಯಣಿ ದೇವಿಯ ದೇವಾಲಯಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ಚಿತ್ತೂರಿನಿಂದ ಕೇವಲ 49 ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು ರಾತ್ರಿಯ ಸಮಯದಲ್ಲಿ ಕಾಣುವುದು ಒಂದು ಸ್ವರ್ಗವೇ ಸರಿ. ಇನ್ನು ತಿರುಪತಿಯಿಂದ ಸುಮಾರು 134 ಕಿ.ಮೀ ದೂರದಲ್ಲಿರುವ ಈ ದೇವಾಲಯಕ್ಕೆ ಸಮೀಪದಲ್ಲಿ ಕಾಟ್ಪಾಡಿ ರೈಲ್ವೆ ನಿಲ್ದಾಣವಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೂರ್ತಿಯಾದ ಮಾಹಿತಿಯನ್ನು ಲೇಖನದ ಮೂಲಕ ಪಡೆಯಿರಿ.

1.ಶಕ್ತಿ ಅಮ್ಮ
PC:YOUTUBE
ಈ ದೇವಾಲಯದ ಹಿಂದೆ ಇರುವ ವ್ಯಕ್ತಿ ಶಕ್ತಿ ಅಮ್ಮ. ಈತನ ನಿಜವಾದ ಹೆಸರು ಸತೀಶ್ ಕುಮಾರ್. ಸ್ವಂತ ಊರು ವೆಲೂರು. ಚಿಕ್ಕವಯಸ್ಸಿನಿಂದಲೂ ಭಕ್ತಿ ಮಾರ್ಗದಲ್ಲಿ ನಡೆದ ಆತ 16 ನೇ ಶಕ್ತಿ ಅಮ್ಮನಾಗಿ ತನ್ನ ಹೆಸರನ್ನು ಮಾರ್ಪಾಟು ಮಾಡಿಕೊಂಡರು. 1992ರಲ್ಲಿ ನಾರಾಯಣಿ ಪೀಠವನ್ನು ಸ್ಥಾಪಿಸಿದರು. ಶ್ರೀಪುರಂನ ಸಮೀಪ ದೇವಿಯು ಆತನಿಗೆ ಕಾಂತಿ ರೂಪದಲ್ಲಿ ದರ್ಶನ ನೀಡಿದಳು ಎಂದು ಹೇಳುತ್ತಾರೆ.

2.ವಿದೇಶ ದೇಣಿಗೆಗಳು
PC:YOUTUBE
ಆ ಸ್ಥಳದಲ್ಲಿಯೇ ಆತನು ನಾರಾಯಣಿ ವಿಗ್ರಹವನ್ನು ಪ್ರತಿಷ್ಟಾಪಿಸಿ ಪೂಜೆಗಳನ್ನು, ಆಧ್ಯಾತ್ಮಿಕ ಪ್ರವಚನಗಳು, ಸೇವೆಗಳು ಮಾಡುವುದು ಪ್ರಾರಂಭಿಸಿದರು. ಪ್ರಸ್ತುತ ಅಮೆರಿಕಾ, ಕೆನಡ ದೇಶಗಳಿಂದ ಇತನಿಗೆ ಅನೇಕ ದೇಣಿಗೆಗಳು, ರಿಜಿಸ್ಟರ್ ವಿವಿಧ ಕಾರ್ಯಕ್ರಮಗಳು ನಿರ್ವಹಿಸುತ್ತಿದ್ದಾರೆ. ಈ ಸ್ವರ್ಣ ದೇವಾಲಯಕ್ಕೆ ದೇಣಿಗೆಗಳು ಭಾರತ ದೇಶದಲ್ಲಿನ ಭಕ್ತರಿಗಿಂತ ವಿದೇಶದ ಭಕ್ತರಿಂದಲೇ ಹೆಚ್ಚು-ಹೆಚ್ಚಾಗಿ ಬರುತ್ತವೆ.

3.ವಜ್ರವೈಢೂರ್ಯಗಳು
PC:YOUTUBE
ಗರ್ಭಗುಡಿಯಲ್ಲಿ ವಜ್ರಗಳು, ವೈಢೂರ್ಯಗಳಿಂದ ಕೂಡಿದ ಅಭರಣಗಳು, ಸ್ವರ್ಣಕವಚಗಳೂ. ಕಿರೀಟಗಳಿಂದ ಕೂಡಿದ ಸ್ವರ್ಣತಾವರೆಯ ಮೇಲೆ ಆಸೀನವಾಗಿರುವ ಮಹಾಲಕ್ಷ್ಮಿಯು ದರ್ಶನವನ್ನು ನೀಡುತ್ತಾಳೆ. ಕಾಂತಿಯುತವಾಗಿ ಕಂಗೊಳಿಸುತ್ತಿರುವ ಮಹಾಮಂಟಪದಲ್ಲಿ ನಿಂತುಕೊಂಡಿರುವ ದೇವಿಯನ್ನು ದರ್ಶನ ಮಾಡಿದರೆ ಅಷ್ಟ ಐಶ್ವರ್ಯಗಳು ಸಿದ್ಧಿಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ದೇವಾಲಯದ ಸುತ್ತ 10 ಅಡಿ ವಿಶಾಲವಾದ ನೀರಿನ ಕಂದಕವಿದೆ. ಉಳಿದ ದೇವಾಲಯದಲ್ಲಿ ಇದ್ದ ಹಾಗೆ ಈ ದೇವಾಲಯದಲ್ಲಿ ಪ್ರತ್ಯೇಕವಾದ ದರ್ಶನ ವಿಭಾಗವಿಲ್ಲ. ಯಾರೇ ಆಗಲಿ ಸಾಲಿನಲ್ಲಿ ನಿಂತೇ ದೇವಿಯನ್ನು ದರ್ಶನ ಮಾಡಬೇಕು.

4.ಅಮೃತಸರ್‍ನಲ್ಲಿನ ಸ್ವರ್ಣ ದೇವಾಲಯ
PC:YOUTUBE
ಶ್ರೀಪುರಂನಲ್ಲಿನ ಶ್ರೀ ಲಕ್ಷ್ಮಿ ನಾರಾಯಣಿ ದೇವಾಲಯವು ಖರ್ಚು, ವಿಸ್ತೀರ್ಣಕ್ಕೆ ಹೋಲಿಸಿದರೆ ಅಮೃತ್ ಸರ್‍ನಲ್ಲಿನ ಸ್ವರ್ಣ ದೇವಾಲಯಕ್ಕಿಂತ ದೊಡ್ಡದು. ನಿರ್ಮಾಣಕ್ಕೆ ಅವಶ್ಯಕವಾದ ಬಂಗಾರವನ್ನು ರಿಸರ್ವ ಬ್ಯಾಂಕ್‍ನ ಅನುಮತಿಯನ್ನು ಪಡೆದು ಮಿನರಲ್ಸ್ ಅಂಡ್ ಮೆಟಲ್ ಟ್ರೆಡಿಂಗ್ ಕಾರ್ಪೋರೇಷನ್‍ನಿಂದ ಪಡೆದರು. ಈ ದೇವಾಲಯದ ಸುತ್ತ 36 ಸ್ತಂಭಗಳು ಇವೆ. ಮಧ್ಯದಲ್ಲಿರುವ ಫಾಂಡ್ಲಿಯರ್ ಪೂರ್ತಿಯಾಗಿ ಬಂಗಾರದಿಂದ ಮಾಡಲಾಗಿದೆ.

5.ವಿಶೇಷವಾದ ಲೈಟಿಂಗ್
ದೇವಾಲಯದ ಒಳಭಾಗದ ಗರ್ಭಗುಡಿಯಲ್ಲಿ ದೇವಿಯ ಎದುರಿನಲ್ಲಿ 27 ಅಡಿ ಎತ್ತರವಾದ ಪಂಚಲೋಹದಿಂದ ಮಾಡಿದ 10 ಅಡಿಯ ದೀಪಸ್ತಂಭಗಳಿವೆ. ಇವುಗಳಿಂದ ದೀಪಾರಾಧನೆಯನ್ನು ಮಾಡುತ್ತಾರೆ. ಆಕಾಶದಿಂದ ನೋಡಿದರೆ ಈ ದೇವಾಲಯವು ಶ್ರೀಚಕ್ರ ಆಕಾರದಲ್ಲಿ ಕಾಣಿಸುತ್ತದೆ. ದೇವಾಲಯಕ್ಕೆ ವಿಶೇಷವಾದ ಲೈಟಿಂಗ್ ವ್ಯವಸ್ಥೆ ಏರ್ಪಾಟು ಮಾಡಿದ್ದಾರೆ. ಈ ಕಾಂತಿಯಲ್ಲಿ ದೇವಾಲಯದ ಶಿಲ್ಪಕಲಾ ಚಾತುರ್ಯವು ಅದ್ಭುತವಾಗಿ ಕಾಣುತ್ತದೆ.