• Follow NativePlanet
Share
» »ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!

ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!

Written By:

ತಮಿಳುನಾಡಿನಲ್ಲಿ ವಿಷ್ಣುವಿನ ದೇವಸ್ಥಾನವೊಂದಿದೆ. ಅಲ್ಲಿ ಎರಡು ಹಲ್ಲಿಗಳಿವೆ. ಒಂದು ಚಿನ್ನದ ಹಲ್ಲಿ ಇನ್ನೊಂದು ಬೆಳ್ಳಿಯ ಹಲ್ಲಿ. ಈ ದೇವಸ್ಥಾನಕ್ಕೆ ಭೇಟಿ ನೀಡಿದವರು ಆ ಹಲ್ಲಿಯನ್ನು ಮುಟ್ಟುತ್ತಾರೆ. ಯಾಕೆಂದರೆ ಈ ಹಲ್ಲಿಯನ್ನು ಮುಟ್ಟಿದರೆ ಅವರಿಗಿರುವ ದೀರ್ಘಕಾಲದ ಕಾಯಿಲೆಗಳು ವಾಸಿಯಾಗುತ್ತವಂತೆ. ಹಾಗಾಗಿ ಭಕ್ತರು ಆ ದೇವಸ್ಥಾನಕ್ಕೆ ಹೋಗುತ್ತಾರೆ.

ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?

 ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

PC:H. Grobe

ತಮಿಳುನಾಡಿನ ಕಂಚೀಪುರಂನ ವಿಷ್ಣು ಕಂಚಿಯಲ್ಲಿ ವರದರಾಜ ಪೆರುಮಲ್ ಎನ್ನುವ ವಿಷ್ಣವಿನ ದೇವಸ್ಥಾನವಿದೆ. ಈ ದೇವಸ್ಥಾನವನ್ನು 25 ಎಕರೆ ಜಮೀನಿನಲ್ಲಿ ನಿರ್ಮಾಣ ಮಾಡಲಾಗಿದೆ. ಇದು ವಿಷ್ಣುವಿನ 108 ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.

 ಈ ದೇವಾಲಯ ಮೂರ್ತಿ ಹೇಗಿದೆ?

ಈ ದೇವಾಲಯ ಮೂರ್ತಿ ಹೇಗಿದೆ?

PC: Fahad Faisal

ಇಲ್ಲಿ ವಿಷ್ಣುವಿನ ನಿಂತಿರುವ ಮೂರ್ತಿ ಇದ್ದು ನಾಲ್ಕು ಕೈಗಳಲ್ಲಿ ಒಂದರಲ್ಲಿ ಶಂಖ, ಇನ್ನೊಂದರಲ್ಲಿ ಚಕ್ರ, ಇನ್ನೆರಡರಲ್ಲಿ ಗಧೆ ಹಾಗೂ ತಾವರೆಯನ್ನು ಹಿಡಿದಿದ್ದಾನೆ, ಸುಮಾಆರು ನೂರು ವರ್ಷಗಳ ಹಿಂದೆ ಮರದ ವರದರಾಜನ ವಿಗ್ರಹವು ಡ್ಯಾಮೇಜ್ ಆದ ಕಾರಣ ಕಲ್ಲಿನ ವಿಗ್ರಹವನ್ನು ಮಾಡಲಾಯಿತು. 40 ವರ್ಷದಲ್ಲಿ ಒಮ್ಮೆ ಈ ಮರದ ವರದರಾಜನ ವಿಗ್ರಹವನ್ನು ಮೆರವಣಿಗೆ ಮಾಡಲಾಗುತ್ತದೆ.

ಚಿನ್ನದ ಹಾಗೂ ಬೆಳ್ಳಿಯ ಹಲ್ಲಿ

ಚಿನ್ನದ ಹಾಗೂ ಬೆಳ್ಳಿಯ ಹಲ್ಲಿ

PC: IM3847

ವರದರಾಜ ಪೆರುಮಾಲ್ ದೇವಸ್ಥಾನದಲ್ಲಿ ಚಿನ್ನದ ಹಾಗೂ ಬೆಳ್ಳಿಯ ಹಲ್ಲಿಗಳಿವೆ . ಗೌತಮ ಋಷಿಯ ಇಬ್ಬರು ಶಿಷ್ಯಂದಿರು ಪೂಜೆಯ ಪಾತ್ರೆಂiÀiಲ್ಲಿ ನೀರನ್ನು ತುಂಬುತ್ತಿದ್ದಾಗ ಹಲ್ಲಿಯೊಂದು ಅದರೊಳಗೆ ಬೀಳುತ್ತದೆ. ಅದನ್ನು ಗಮನಿಸದ ಶಿಷ್ಯರು ಅದೇ ಪಾತ್ರೆಯನ್ನು ಋಷಿಗೆ ತಂದು ಕೊಡುತ್ತಾರೆ. ಇದರಿಂದ ಪಾತ್ರೆಯಲ್ಲಿ ಹಲ್ಲಿ ಬಿದ್ದಿರುವುದನ್ನು ಗಮನಿಸಿದ ಋಷಿ ಕೋಪಗೊಂಡು ಶಿಷ್ಯರಿಗೆ ಹಲ್ಲಿಯಾಗುವಂತೆ ಶಾಪ ನೀಡುತ್ತಾರೆ. ಆ ನಂತರ ಈ ಶಿಷ್ಯರು ಕಂಚೀಪುರಂಗೆ ಬಂದು ಅಲ್ಲಿ ಹಲವು ವರ್ಷಗಳ ಕಾಲ ಹಲ್ಲಿಯಾಗಿದ್ದರು.

ಕಾಯಿಲೆ ವಾಸಿಯಾಗುತ್ತದಂತೆ

ಕಾಯಿಲೆ ವಾಸಿಯಾಗುತ್ತದಂತೆ

PC:Fahad Faisal

ಇಂದ್ರ ದೇವನು ಸರಸ್ವತಿಯಿಂದ ಶಾಪಗ್ರಸ್ಥನಾಗಿ ಆನೆಯ ರೂಪದಲ್ಲಿ ಬಂದು ವರದರಾಜ ದೇವರನ್ನು ಬೇಡಿಕೊಂಡನು. ಶಿಷ್ಯರಿಗೆ ಮೋಕ್ಷ ಸಿಕ್ಕಿತು ಆದ್ರೆ ಅದರ ಗುರುತು ಮಾತ್ರ ಹಾಗೆಯೇ ಉಳಿದಿದೆ. ವರದಾಜನ ದೇವಸ್ಥಾನಕ್ಕೆ ಬಂದು ಇಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ಈ ಹಲ್ಲಿಗಳನ್ನು ಮುಟ್ಟುತ್ತಾರೋ ಅವರ ದೀರ್ಘಕಾಲಿನ ಕಾಯಿಲೆ ವಾಸಿಯಾಗುತ್ತದಂತೆ.

ಇಲ್ಲಿಗೆ ತಲುಪುವುದು ಹೇಗೆ?

ಇಲ್ಲಿಗೆ ತಲುಪುವುದು ಹೇಗೆ?

PC: கி. கார்த்திகேயன்

ಈ ದೇವಸ್ಥಾನವು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಸಂಜೆ 4.30 ರಿಂದ ರಾತ್ರಿ 8.30 ವರೆಗೆ ಈ ದೇವಾಲಯ ತೆರೆದಿರುತ್ತದೆ. ಈ ದೇವಸ್ಥಾನವು ತಿರುಪತಿಯಿಂದ 112 ಕಿ.ಮೀ ದೂರದಲ್ಲಿದೆ. ತಿರುಪತಿ ಸೆಂಟ್ರಲ್ ಬಸ್ ಸ್ಟ್ಯಾಂಡ್‍ನಿಂದ ಕಂಚೀಪುರಂಗೆ ಬಸ್ ಇದೆ. ಕಂಚೀಪುರಂ ಬಸ್ ನಿಲ್ದಾಣದಿಂದ 3.6 ಕಿ.ಮೀ ದೂರದಲ್ಲಿದೆ. ಕಂಚೀಪುರಂ ರೈಲ್ವೆ ಸ್ಟೇಶನ್ನಿನಿಂದ 4.8 ಕಿ.ಮೀ ದೂರದಲ್ಲಿದೆ.

Read more about: india tamilnadu temple

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ