Search
  • Follow NativePlanet
Share
» »ಗೋಲ್ಕೊಂಡಾ ಕೋಟೆಯ ಮಹಾಕಾಳಿ ಇವಳು!

ಗೋಲ್ಕೊಂಡಾ ಕೋಟೆಯ ಮಹಾಕಾಳಿ ಇವಳು!

By Vijay

ದುರ್ಗೆಯ ಒಂದು ಅವತಾರವಾದ ಮಹಾಕಾಳಿಯನ್ನು ಅತ್ಯಂತ ಭಕ್ತಿ, ಆದರಗಳಿಂದ ಹಿಂದುಗಳು ಪೂಜಿಸುತ್ತಾರೆ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವ ಭಯಂಕರ ರೂಪವಿರುವ ಮಹಾಕಾಳಿ ಒಬ್ಬ ಶಕ್ತಿ ದೇವಿಯಾಗಿದ್ದು ಈಕೆಗೆ ಮುಡಿಪಾದ ಕೆಲವು ಪ್ರಸಿದ್ಧ ದೇವಾಲಯಗಳನ್ನು ಭಾರತದಾದ್ಯಂತೆ ಎಲ್ಲೆಡೆ ಕಾಣಬಹುದು.

ಗಮನಸೆಳೆವ ಹೈದರಾಬಾದ್ ಕರ್ನಾಟಕದ ಸ್ಥಳಗಳು ಗೊತ್ತೆ?

ಪ್ರಸ್ತುತ ಲೇಖನದಲ್ಲಿ ಮಹಾ ಕಾಳಿಗೆ ಮುಡಿಪಾದ ಒಂದು ವಿಶಿಷ್ಟ ದೇವಾಲಯದ ಕುರಿತು ತಿಳಿಸಲಾಗಿದೆ. ಈ ದೇವಾಲಯದ ವಿಶೇಷತೆ ಎಂದರೆ ಇದು ಆ ಪ್ರದೇಶದ ಪ್ರಖ್ಯಾತವಾದ ಕೋಟೆಯೊಂದರ ಮೇಲೆ ಸ್ಥಿತವಿದ್ದು ಸಾಕಷ್ಟು ಪ್ರಭಾವಶಾಲಿಯಾಗಿದೆ ಎಂದು ನಂಬಲಾಗುತ್ತದೆ. ಅಲ್ಲದೆ ಪ್ರದೇಶದ ವಿಶಿಷ್ಟ ಹಬ್ಬವೊಂದು ಈ ದೇವಾಲಯದಿಂದಲೆ ಮೊದಲು ಪ್ರಾರಂಭವಾಗುವುದು ವಿಶೇಷ.

ಹಾಗಾದರೆ ಕಾಳಿ ಮಾತೆಯ ಆ ಅದ್ಭುತ ದೇವಾಲಯವಿರುವುದು ಎಲ್ಲಿ ಹಾಗೂ ಆ ಸ್ಥಳದ ಕುರಿತು ಕೆಲ ಮಾಹಿತಿಗಳು ನಿಮಗಾಗಿ ಈ ಲೇಖನದ ಮೂಲಕ. ಅವಕಾಶ ಲಭಿಸಿದರೆ ಖಂಡಿತವಾಗಿಯೂ ಆ ಅದ್ಭುತ ಕೋಟೆ ಹಾಗೂ ಅದರ ಮೇಲಿರುವ ಈ ಕಾಳಿ ಮಾತೆಯ ಮಂದಿರಕ್ಕೆ ಭೇಟಿ ನೀಡಿ.

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಈ ಮಹಾಕಾಳಿಯ ದೇವಾಲಯವಿರುವುದು ತೆಲಂಗಾಣ ರಾಜ್ಯದ ರಾಜಧಾನಿಯಾದ ಹೈದರಾಬಾದ್ ನಗರದ ಹೊರವಲಯದಲ್ಲಿರುವ ಹಾಗೂ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾದ ಗೋಲ್ಕೊಂಡಾ ಕೋಟೆಯ ಮೇಲೆ ಸ್ಥಿತವಿದೆ.

ಚಿತ್ರಕೃಪೆ: LASZLO ILYES

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ತೆಲಂಗಾಣ ರಾಜ್ಯದಲ್ಲಿ ಪ್ರಮುಖವಾಗಿ ಆಚರಿಸಲಾಗುವ ಬೊನಾಲು ಉತ್ಸವ ಅದರಲ್ಲೂ ವಿಶೇಷವಾಗಿ ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರಗಳಲ್ಲಿ ಅದ್ದೂರಿಯಿಂದ ಆಚರಿಸಲಾಗುವ ಈ ವಿಶಿಷ್ಟ ಹಬ್ಬವು ಮೊದಲು ಈ ಕಾಳಿಯ ದೇವಾಲಯದಿಂದಲೆ ಪ್ರಾರಂಭವಾಗಿ ನಂತರ ಇತರೆ ಪ್ರದೇಶಗಳಿಗೆ ವಿಸ್ತರಿಸುತ್ತದೆ.

ಚಿತ್ರಕೃಪೆ: Rammohan65

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ತೆಲಂಗಾಣದ ರಾಜ್ಯ ಮಟ್ಟದ ಉತ್ಸವ ಇದಾಗಿರುವುದರಿಂದ ಇದನ್ನು ಬಲು ಅದ್ದೂರಿ ಹಾಗೂ ಸಡಗರಗಳಿಂದ ಹೈದರಾಬಾದ್-ಸಿಕಂದರಾಬಾದ್ ಗಳಲ್ಲಿ ಆಚರಿಸಲಾಗುತ್ತದೆ. ಇದು ಮೂಲತಃ ಶಕ್ತಿ ದೇವಿ ಅಥವಾ ಕಾಳಿ ಮಾತೆಗೆ ಮುಡಿಪಾದ ಉತ್ಸವವಾಗಿದ್ದು, ಜನರು ದೇವಿಯು ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ್ದುದರ ಕೃತಜ್ಞ್ಯಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ.

ಚಿತ್ರಕೃಪೆ: Rammohan65

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಸಾಮಾನ್ಯವಾಗಿ ಆಷಾಢ ಮಾಸದ ಭಾನುವಾರಗಳಂದು ಇದನ್ನು ಆಚರಿಸಲಾಗುತ್ತದೆ. ಮೊದಲನೇಯ ಹಾಗೂ ಕೊನೆಯ ಭಾನುವಾರಗಳು ಪ್ರಮುಖವಾಗಿರುತ್ತವೆ. ಮೊದಲನೇಯ ಭಾನುವಾರದಂದು ಈ ಉತ್ಸವವು ಗೋಲ್ಕೊಂಡಾ ಕೋಟೆಯಲ್ಲಿರುವ ಮಹಾಕಾಳಿ ದೇವಾಲಯದಲ್ಲಿ ಬಲು ಸಡಗರದಿಂದ ಪ್ರಾರಂಭಿಸಲ್ಪಡುತ್ತದೆ.

ಚಿತ್ರಕೃಪೆ: Randhirreddy

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಆಚರಣೆಯು ವಿಶೇಷವಾಗಿದ್ದು ದೇವಿಗೆ ಸಂತೋಷ ಹಾಗೂ ಭಕ್ತಿಯಿಂದ ಅನ್ನ ಹಾಗೂ ಬೆಲ್ಲದಿಂದ ಮಾಡಲಾದ ಸಿಹಿ ಖಾದ್ಯವನ್ನು ಸಮರ್ಪಿಸುವುದಾಗಿರುತ್ತದೆ. ಹೆಂಗಳೆಯರು ಈ ಖಾದ್ಯವನ್ನು ತಯಾರಿಸಿ ಮಡಕೆಯಲ್ಲಿರಿಸಿ ಅದನ್ನು ತಲೆಯ ಮೆಲೆ ಹೊತ್ತು ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಅರ್ಪಿಸುತ್ತಾರೆ.

ಚಿತ್ರಕೃಪೆ: Rammohan65

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಇನ್ನೂ ಗೋಲ್ಕೊಂಡಾ ಕೋಟೆಯ ಈ ಮಹಾಕಾಳಿ ದೇವಾಲಯವು ಸುಮಾರು 900 ವರ್ಷಗಳಷ್ಟು ಪುರಾತನವಾದುದೆಂದು ಹೇಳಲಾಗಿದ್ದು ಮೊದಲಿಗೆ ಈ ದೇವಾಲಯವು ಬೆಟ್ಟ ಏರಿ ದನ-ಕರುಗಳನ್ನು ಮೇಯಿಸುತ್ತಿದ್ದ ಗೊಲ್ಲರಿಂದ ಶೋಧಿಸಲ್ಪಟ್ಟಿತೆಂದು ಹೇಳಲಾಗಿದೆ.

ಚಿತ್ರಕೃಪೆ: Sripathiharsha

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಎರಡು ಬೃಹತ್ತಾದ ಬಂಡೆಗಳ ಮಧ್ಯದಲ್ಲಿರುವ ಈ ದೇವಾಲಯವು ಸಾಕಷ್ಟು ಕುತೂಹಲಕರವಾಗಿದ್ದು ಏರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಬಂಡೆಗಳ ಮೇಲೆ ಕಾಣಸಿಗುವ ಕಾಳಿ ಮಾತೆಯ, ದ್ವಾರಪಾಲಕರ ವರ್ಣಚಿತ್ರಗಳು ಸಾಕಷ್ಟು ಗಮನಸೆಳೆಯುತ್ತವೆ.

ಚಿತ್ರಕೃಪೆ: Bhargavinf

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಪ್ರಸ್ತುತ ದೇವಿಯ ಸನ್ನಿಧಿಗೆ ಭೇಟಿ ನೀಡುವಲ್ಲಿ ಛಾವಣಿಯೊಂದನ್ನು ಮಾತ್ರ ನಿರ್ಮಿಸಲಾಗಿದ್ದು ಬಹುತೇಕ ಪ್ರವಾಸಿಗರು, ಜನರು ಇಲ್ಲಿಯೆ ಭೇಟಿ ನೀಡುತ್ತಾರೆ. ಆದರೆ, ಈ ಸನ್ನಿಧಿಯ ಹಿಂಭಾಗದಲ್ಲಿ ಮತ್ತೆ ಕೆಲವು ಚಿಕ್ಕದಾದ ಮೆಟ್ಟಿಲುಗಳನ್ನು ಏರುತ್ತ ದೇವಿಯ ಇನ್ನೊಂದು ಸನ್ನಿಧಿಗೆ ಪ್ರವೇಶಿಸಬಹುದಾಗಿದ್ದು ಅಲ್ಲಿ ದೇವಿಯ ಮೂಲ ವಿಗ್ರಹಗಳನ್ನು ಸಂರಕ್ಷಿಸಿಡಲಾಗಿದೆ.

ಚಿತ್ರಕೃಪೆ: McKay Savage

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹೇಳಲಾಗುವಂತೆ ಈ ಗುಹಾ ಸನ್ನಿಧಿಯ ಪಕ್ಕದಲ್ಲಿ ಗುಪ್ತ ಸುರಂಗ ಮಾರ್ಗವೊಂದಿದ್ದು ಇದರ ಮೂಲಕ ನೇರವಾಗಿ ಗೋಲ್ಕೊಂಡಾ ಕೋಟೆಯಿಂದ ಹೈದರಾಬಾದ್ ನಗರದ ಚಾರ್ಮಿನಾರ್ ಗೆ ತಲುಪಬಹುದಾಗಿದೆಯಂತೆ. ಪ್ರಸ್ತುತ ಭದ್ರತೆಯ ದೃಷ್ಟಿಯಿಂದ ಆ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ.

ಚಿತ್ರಕೃಪೆ: Rudolph.A.furtado

ಗೋಲ್ಕೊಂಡಾ ಮಹಾಕಾಳಿ:

ಗೋಲ್ಕೊಂಡಾ ಮಹಾಕಾಳಿ:

ಇನ್ನೂ ಗೋಲ್ಕೊಂಡಾ ಕೋಟೆಯು ಹೈದರಾಬಾದ್ ನಗರ ಕೇಂದ್ರದಿಂದ ಸುಮಾರು ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಹೈದರಾಬಾದ್ ನಿಂದ ಸಾಕಷ್ಟು ಬಸ್ಸುಗಳು ಹಾಗೂ ಬಾಡಿಗೆ ಕಾರು ಮತ್ತು ರಿಕ್ಷಾಗಳು ಲಭ್ಯವಿದೆ.

ಚಿತ್ರಕೃಪೆ: Haseeb1608

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X