Search
  • Follow NativePlanet
Share
» » ಕುದುರೆಯ ಶೂವಿನ ಆಕಾರದಲ್ಲಿರುವ ಈ ಜಲಪಾತ ಎಲ್ಲಿದೆ ಗೊತ್ತಾ?

ಕುದುರೆಯ ಶೂವಿನ ಆಕಾರದಲ್ಲಿರುವ ಈ ಜಲಪಾತ ಎಲ್ಲಿದೆ ಗೊತ್ತಾ?

ಗೋಕಾಕ್ ಬೆಳಗಾವಿ ಜಿಲ್ಲೆಯ ತಾಲೂಕು ಪ್ರಧಾನ ಕಚೇರಿಯಾಗಿದ್ದು, ಇದು ಬೆಳಗಾವಿಯಿಂದ ಸುಮಾರು 70 ಕಿ.ಮೀ ದೂರದಲ್ಲಿ ಘಟಪ್ರಭಾ ನದಿಯಿಂದ ಈ ಜಲಪಾತ ಉಂಟಾಗಿದೆ. ಜಲಪಾತವು 170 ಫೀಟ್‌ ಎತ್ತರದಿಂದ ಧುಮ್ಮುಕ್ಕುತ್ತಿದೆ.

ಕರದಂಟು ಹೆಸರು ಕೇಳಿದ್ದೀರಾ? ಬಹಳಷ್ಟು ಜನರಿಗೆ ಕರದಂಟು ಹೇಗಿರುತ್ತೇ ಹಾಗಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಕರದಂಟು ಎಂದಾಕ್ಷಣ ನೆನಪಿಗೆ ಬರೋದೇ ಗೋಕಾಕ್. ಗೋಕಾಕ್ ಕರದಂಟು ಎನ್ನುವ ಸ್ವೀಟ್‌ಗೆ ಬಹಳ ಫೇಮಸ್‌. ಅಂತಹ ಗೋಕಾಕ್‌ನಲ್ಲಿ ಒಂದು ಪ್ರಸಿದ್ಧ ಜಲಪಾತವಿದೆ. ಅದುವೇ ಗೋಕಾಕ್ ಜಲಪಾತ. ಇದನ್ನು ಸಣ್ಣ ನಯಾಗರ ಫಾಲ್ಸ್‌ ಅಂತನೂ ಹೇಳಲಾಗುತ್ತದೆ. ಮೊತ್ತ ಮೊದಲ ಬಾರಿಗೆ ಈ ಜಲಪಾತದಿಂದಲೇ ವಿದ್ಯುತ್‌ ತಯಾರಿಸಲಾಗಿತ್ತು.

ಘಟಪ್ರಭಾ ನದಿ

ಘಟಪ್ರಭಾ ನದಿ

PC: Shil.4349
ಗೋಕಾಕ್ ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿಯ ನಂತರ ಎರಡನೇ ಅತಿ ದೊಡ್ಡ ನಗರವಾಗಿದ್ದು ಪಶ್ಚಿಮ ಘಟ್ಟಗಳಿಂದ ಸುತ್ತುವರಿದಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ಸ್ಥಳೀಯ ಜನರಿಗೆ ಕೃಷಿ ಮತ್ತು ಕುಡಿಯುವ ನೀರಿನ ಮುಖ್ಯ ಮೂಲವೆಂದರೆ ಇಲ್ಲಿನ ಘಟಪ್ರಭಾ ನದಿ.

 ಕುದುರೆಯ ಶೂವಿನ ಆಕಾರದಲ್ಲಿದೆ

ಕುದುರೆಯ ಶೂವಿನ ಆಕಾರದಲ್ಲಿದೆ

PC:Om98
ಗೋಕಾಕ್ ಬೆಳಗಾವಿ ಜಿಲ್ಲೆಯ ತಾಲೂಕು ಪ್ರಧಾನ ಕಚೇರಿಯಾಗಿದ್ದು, ಇದು ಬೆಳಗಾವಿಯಿಂದ ಸುಮಾರು 70 ಕಿ.ಮೀ ದೂರದಲ್ಲಿ ಘಟಪ್ರಭಾ ನದಿಯಿಂದ ಈ ಜಲಪಾತ ಉಂಟಾಗಿದೆ. ಜಲಪಾತವು 170 ಫೀಟ್‌ ಎತ್ತರದಿಂದ ಧುಮ್ಮುಕ್ಕುತ್ತಿದೆ, ಪ್ರವಾಹದಿಂದಾಗಿ ಈ ಕುದುರೆಯ ಶೂವಿನ ಆಕಾರದಲ್ಲಿದೆ ಕಾಣಿಸುತ್ತದೆ.

 201 ಮೀಟರ್ ಉದ್ದದ ತೂಗು ಸೇತುವೆ

201 ಮೀಟರ್ ಉದ್ದದ ತೂಗು ಸೇತುವೆ

PC: Surmeena
ಮಳೆಗಾಲದಲ್ಲಿ ದಟ್ಟವಾದ ಕೆಂಪು ಕಂದುಬಣ್ಣದ ನೀರಿನಿಂದ ಮಂದವಾದ ಘರ್ಜನೆಯ ಮೂಲಕ ಹರಿಯುತ್ತದೆ. ನದಿಯ ಉದ್ದಕ್ಕೂ ಸುಮಾರು 201 ಮೀಟರ್ ಉದ್ದದ ತೂಗು ಸೇತುವೆ ಇದೆ. ಇಲ್ಲಿ ಒಮ್ಮೆಗೆ 30 ಜನರಿಗೆ ಮಾತ್ರ ಹೋಗಲು ಅವಕಾಶವಿದೆ. ಮಳೆಗಾಲದಲ್ಲಿ ಈ ಜಲಪಾತವು ನೀರಿನಿಂದ ತುಂಬಿದ್ದು, ನೀರಿನ ಪ್ರವಾಹವು ಅಧೀಕವಿರುತ್ತದೆ. ಈ ಜಲಪಾತದಲ್ಲಿ ಮಳೆಗಾಲದಲ್ಲಿ ನೀರಿಗೆ ಇಳಿಯುವುದು ಬಹಳ ಅಪಾಯಕಾರಿ.

ಮಹಾಲಿಂಗೇಶ್ವರನ ದೇವಸ್ಥಾನ

ಮಹಾಲಿಂಗೇಶ್ವರನ ದೇವಸ್ಥಾನ

PC: Rohan P. Shahapurkar
ಈ ಸ್ಥಳದ ಒಂದು ಕುತೂಹಲಕಾರಿ ಅಂಶವೆಂದರೆ ಚಾಲುಕ್ಯರ ಕಾಲಕ್ಕೆ ಸೇರಿದ ಸ್ಮಾರಕಗಳು ಇಲ್ಲಿನ ಕಲ್ಲಿನ ಕಣಿವೆಯ ಎರಡೂ ದಂಡೆಗಳಲ್ಲಿ ದೊರೆತಿರುವುದು. ಈ ಸ್ಥಳದ ಮತ್ತೊಂದು ಆಕರ್ಷಣೆ ಎಂದರೆ ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಮಹಾಲಿಂಗೇಶ್ವರನ ದೇವಸ್ಥಾನ. ಜುಲೈಯಿಂದ ಅಕ್ಟೋಬರ್‌ ತಿಂಗಳುಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ವಿದ್ಯುಚ್ಛಕ್ತಿ ಉತ್ಪಾದಿಸಲಾಗಿದೆ

ವಿದ್ಯುಚ್ಛಕ್ತಿ ಉತ್ಪಾದಿಸಲಾಗಿದೆ

PC:Akshatha Inamdar
1887 ರಲ್ಲಿ ಮೊದಲ ಬಾರಿಗೆ ವಿದ್ಯುಚ್ಛಕ್ತಿ ಉತ್ಪಾದಿಸಲ್ಪಟ್ಟಿತ್ತು. ಉತ್ಪಾದನಾ ಕೇಂದ್ರವನ್ನು ರೋಪ್ ವೇ ಮೇಲೆ ತಲುಪಬಹುದು. ಗೊಕಾಕ್ ಜಲಪಾತದಿಂದ 10 ಕಿ.ಮೀ. ದೂರದಲ್ಲಿರುವ ಗೋಧಿಚಿಮಕ ಎಂಬ ಗ್ರಾಮವು ಇಲ್ಲಿಂದ 2 ಕಿ.ಮೀ ದೂರದಲ್ಲಿರುವ ಒಂದು ಹಳ್ಳಿಯಾಗಿದೆ. ಇದು ನಿಧಾನವಾದ ಲಯದಲ್ಲಿ ಹರಿಯುತ್ತದೆ. ಈ ಸ್ಥಳವು ಒಂದು ನಿಧಾನಗತಿಯ ಲಯದಲ್ಲಿ ಬೀಳುತ್ತದೆ.

ರಸ್ತೆ ಮೂಲಕ ತಲುಪವುದು

ರಸ್ತೆ ಮೂಲಕ ತಲುಪವುದು

PC: Shishirmk
ಗೊಕಾಕ್ ರಾಜ್ಯ ಹೆದ್ದಾರಿ 31 ಮತ್ತು ರಾಷ್ಟ್ರೀಯ ಹೆದ್ದಾರಿ ಮೂಲಕ ರಸ್ತೆ ಮೂಲಕ ಸಂಪರ್ಕ ಹೊಂದಿದೆ. ಕೆ.ಎಸ್.ಆರ್.ಟಿಸಿಯ ಉಪವಿಭಾಗವಾದ ಎನ್‌ಡಬ್ಲ್ಯು ಕೆಆರ್‌ಟಿಸಿ ಗೋಕಾಕ್‌ನಿಂದ ಕರ್ನಾಟಕದ ಎಲ್ಲಾ ಮೂಲೆಗಳಿಗೆ ಹಾಗೂ ನೆರೆಯ ರಾಜ್ಯಗಳಿಗೆ ಬಸ್‌ಗಳನ್ನು ನಡೆಸುತ್ತದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಎಲ್ಲಾ ಪ್ರಮುಖ ಸ್ಥಳಗಳಾದ್ಯಂತ ಕಾರ್ಯನಿರ್ವಹಿಸುವ ಅನೇಕ ಪ್ರಮುಖ ಖಾಸಗಿ ಬಸ್ ಸೇವೆಗಳು ಇವೆ. ಬೆಳಗಾವಿಯಿಂದ ಗೋಕಾಕ್ ಗೆ ಪ್ರತಿದಿನ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯವಿದೆ.

ರೈಲಿನ ಮೂಲಕ

ಗೋಕಾಕ್ ರೋಡ್ ಕೊನ್ನೂರ್ ಮತ್ತು ಘಟಪ್ರಭಾವು ಗೋಕಾಕ್ ಬಳಿ ಇರುವ ಎರಡು ಮುಖ್ಯ ರೈಲು ನಿಲ್ದಾಣಗಳಾಗಿವೆ. ಇದು ಸುಮಾರು 12 ಕಿಮೀ ಮತ್ತು 14 ಕಿ.ಮೀ ದೂರದಲ್ಲಿದೆ. ಈ ನಿಲ್ದಾಣಗಳು ಭಾರತೀಯ ರೈಲ್ವೆ ಗ್ರಿಡ್ನಲ್ಲಿ ಬರುತ್ತವೆ ಮತ್ತು ದಕ್ಷಿಣದ ಪಶ್ಚಿಮ ವಿಭಾಗದ ಭಾಗವಾಗಿದೆ. ದಕ್ಷಿಣ ಪಶ್ಚಿಮದ ರೈಲ್ವೆಯ ವಲಯ ಮತ್ತು ಮಧ್ಯ ರೈಲ್ವೇ ವಲಯದಲ್ಲಿ ಬರುವ ಹುಬ್ಬಳ್ಳಿ ಜಂಕ್ಷನ್ (ಯುಬಿಎಲ್) ಮತ್ತು ಮಿರಾಜ್ ಜಂಕ್ಷನ್ (ಎಮ್‌ಆರ್‌ಜೆ) ಗೋಕಾಕ್ ರೋಡ್ ನಿಲ್ದಾಣಕ್ಕೆ ಹತ್ತಿರದ ರೈಲ್ವೇ ಜಂಕ್ಷನ್‌ಗಳಾಗಿವೆ. ಅವರು ಬೆಂಗಳೂರು, ಮೈಸೂರು, ಮಂಗಳೂರು, ಪುಣೆ, ಮುಂಬೈ, ಹೈದರಾಬಾದ್, ಗೋವಾ, ನವದೆಹಲಿ ಮತ್ತು ಚೆನ್ನೈಗಳಂತಹ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿವೆ.

ವಿಮಾನದ ಮೂಲಕ

ಗೋಕಾಕ್‌ಗೆ ಸಮೀಪವಿರುವ ಏರ್‌ಪೋರ್ಟ್‌ ಅಂದರೆ ಬೆಳಗಾವಿ ಏರ್‌ಪೋರ್ಟ್‌. ಇದು ಉತ್ತರ ಕರ್ನಾಟಕದ ಅತ್ಯಂತ ಹಳೆಯ ಏರ್‌ಪೋರ್ಟ್‌ ಆಗಿದೆ. ಬೆಳಗಾವಿಯಿಂದ 10 ಕಿ.ಮೀ ದೂರದಲ್ಲಿ ಏರ್‌ಪೋರ್ಟ್‌ ಇದೆ. ಇದು ಮುಂಬೈ ಹಾಗೂ ಬೆಂಗಳೂರಿಗೆ ನೇರ ಸಂಪರ್ಕವನ್ನು ಹೊಂದಿದೆ. ಇನ್ನು ಅಲ್ಲಿ ಆಟೋ ರಿಕ್ಷಾಗಳು ಲಭ್ಯವಿದೆ. ರಿಕ್ಷಾದ ಮೂಲಕ ಗೋಕಾಕ್ ಫಾಲ್ಸ್‌ನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X