Search
  • Follow NativePlanet
Share
» »ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು

ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು

By Manjula Balaraj Tantry

ಮಕ್ಕಳಾಗಿರುವಾಗ ನಾವೆಲ್ಲರೂ ಆಕಾಶದಲ್ಲಿ ಹೊಳೆಯುತ್ತಿರುವ ಆ ಬೆಳ್ಳಿ ಚುಕ್ಕಿ ಏನೆಂದು ಆಶ್ಚರ್ಯ ಪಟ್ಟಿರುತ್ತೇವೆ. ಆ ಚಂದಿರ, ನಕ್ಷತ್ರಗಳು ಮತ್ತು ಉಪಗ್ರಹಗಳನ್ನು ತೋರಿಸುತ್ತಾ ನಮ್ಮ ಅಜ್ಜಿ ತಾತಂದಿರು ನಮಗೆ ತಿನ್ನಿಸುತ್ತಿದ್ದರು. ಆದರೆ ಪ್ರಪಂಚದ ಕೆಲವು ಭಾಗವನ್ನು ನಾವು ನಿಜವಾಗಿಯೂ ಅರ್ಥ ಮಾಡಿಕೊಂಡಿದ್ದೇವಾ ಎನ್ನುವ ಪ್ರಶ್ನೆ ಇಂದಿಗೂ ನಮ್ಮನ್ನು ಕಾಡುವುದು ಸಹಜ.

ಬಾಹ್ಯಾಕಾಶ ಸಿನೆಮಾ ಮತ್ತು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸುವ ಮೂಲಕ ನಿಗೂಢ ಆಕಾಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ನಮ್ಮ ವಯಸ್ಕರಿಗಿಂತ ಸ್ವಲ್ಪ ಉತ್ತಮ ಮಟ್ಟದಲ್ಲಿದ್ದೇವೆ ಇದನ್ನು ನಮಗೆ ಅರ್ಥ ಮಾಡಿಸುವಲ್ಲಿ ನಾಸಾ ಅನುಕೂಲಮಾಡಿಕೊಟ್ಟಿವೆ. ಒಮ್ಮೆ ನೀವು ದೂರದ ಗ್ರಹಗಳು ನಕ್ಷತ್ರಗಳು ಮತ್ತು ಅವುಗಳಿಗೆ ಸಂಭಂಧಿಸಿದ ಅಂಟಿಕೊಂಡಿರುವ ವಿಷಯಗಳ ಬಗ್ಗೆ ತಿಳಿಯುವ ಕುತೂಹಲಕರ ಮಕ್ಕಳಲ್ಲಿ ಒಬ್ಬರಾಗಿದ್ದರೆ ಭಾರತದ ಈ ಅದ್ಭುತವಾದ ಸ್ಥಳಗಳಲ್ಲಿ ನಕ್ಷತ್ರ ವೀಕ್ಷಣೆ ಮಾಡುವುದರ ಮೂಲಕ ನಕ್ಷತ್ರದೊಂದಿಗೆ ನಿಮ್ಮ ಗುಪ್ತ ಸಂಭಾಷಣೆ ನಡೆಸಿ.

1. ನುಬ್ರಾ ಕಣಿವೆ- ಲೇಹ್ ಲಡಾಖ್

1. ನುಬ್ರಾ ಕಣಿವೆ- ಲೇಹ್ ಲಡಾಖ್

Ashwin Kumar

ನೀವು ನಿಗೂಢವಾದ ಬಾಹ್ಯಾಕಾಶದ ಚಿಂತನೆಯಿಂದ ಆಕರ್ಷಿತರಾದರೆ ಮತ್ತು ಅದಕ್ಕಿಂತಲೂ ಹೆಚ್ಚಾಗಿರುವುದು ನುಬ್ರಾ ಕಣಿವೆ ಖಂಡಿತವಾಗಿ ನಿಮ್ಮ ಸಮಯವನ್ನು ಉತ್ಸಾಹದಿಂದ ಕಳೆಯಲು ಉತ್ತಮವಾದ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಯಾವುದೇ ಮಾಲಿನ್ಯವಿಲ್ಲದೆ, ಲೇಹ್ ಲಡಾಖ್ ನ ನುಬ್ರಾದ ಸುಂದರವಾದ ಕಣಿವೆ ಅದ್ಭುತ ಅವಕಾಶಗಳನ್ನು ನೀಡುತ್ತದೆ. ಈ ಪ್ರದೇಶವು ಮಾಲಿನ್ಯರಹಿತವಾಗಿದ್ದು ನಕ್ಷತ್ರ ವಿಕ್ಷಣೆ ಮಾಡಲು ಲೇಹ್ ಲಡಾಖ್ ನಲ್ಲಿರುವ ಈ ಸುಂದರವಾದ ನುಬ್ರಾ ಕಣಿವೆಯು ಒಂದು ಅತ್ಯಂತ ಉತ್ತಮವಾದ ಅವಕಾಶಗಳನ್ನು ಒದಗಿಸಿಕೊಡುತ್ತದೆ.

ನೀವು ಇಲ್ಲಿ ಮೇಲೆ ನೋಡಿದರೆ ಚಂದ್ರನು ಹೊಳೆಯುವ ನಕ್ಷತ್ರಗಳು ಮತ್ತು ಮೋಡಗಳ ಜೊತೆಗೆ ಆಟವಾಡುವುದನ್ನು ಕಾಣಬಹುದಾಗಿದೆ. ಈ ಸುಂದರವಾದ ನೋಟವನ್ನು ನೋಡಲು ಉತ್ತಮವಾದ ಮಾರ್ಗವೆಂದರೆ ಈ ಪ್ರದೇಶಗಳಲ್ಲಿ ಶಿಬಿರ ಹೂಡುವುದಾಗಿದೆ. ತೆರೆದ ಟೆಂಟ್ ಗಳನ್ನು ಹಾಕಿಕೊಂಡು ಈ ನಕ್ಷತ್ರಗಳನ್ನು ರಾತ್ರಿಯೆಲ್ಲಾ ನೋಡಬಹುದಾಗಿದೆ. ಇದೊಂದು ದೇಶದ ಪ್ರಮುಖವಾದ ನಕ್ಷತ್ರವೀಕ್ಷಣೆಯ ಸ್ಥಳವಾಗಿದೆ. ರಾತ್ರಿಯನ್ನು ನಕ್ಷತ್ರಗಳ ಅಡಿಯಲ್ಲಿ ಕಳೆಯಲು ನುಬ್ರಾ ಕಣಿವೆಯು ಅಸಂಖ್ಯಾತ ಆಯ್ಕೆಗಳನ್ನು ನೀಡುತ್ತದೆ.

2. ಕೂರ್ಗ್- ಕರ್ನಾಟಕ

2. ಕೂರ್ಗ್- ಕರ್ನಾಟಕ

M. A. Kaleem

ಕೂರ್ಗ್ ನಲ್ಲಿ ನೀವು ನಕ್ಷತ್ರ ವೀಕ್ಷಣೆ ಮಾಡಿಕೊಂಡು ಅನೇಕ ರಾತ್ರಿಗಳನ್ನು ಕಳೆಯಬಹುದಾಗಿದೆ ಇಲ್ಲಿ ಇದು ಅತ್ಯಂತ ಸುಂದರವಾದುದಾಗಿದೆ! ನಿಮ್ಮ ಕಣ್ಣಿಗೆ ತಂಪನ್ನು ನೀಡುವ ಒಂದು ಸುಂದರವಾದ ಸ್ಥಳದ ಜೊತೆಗೆ ಹೊಳೆಯುವ ನಕ್ಷತ್ರಗಳನ್ನೂ ಇಲ್ಲಿ ವೀಕ್ಷಿಸಬಹುದಾಗಿದೆ. ಕೂರ್ಗ್ ನಿಮಗೆ ಕೆಲವು ಅವಕಾಶಗಳನ್ನು ನೀಡುತ್ತವೆ ಇದರಿಂದಾಗಿ ನೀವು ನಕ್ಷತ್ರಭರಿತ ಆಕಾಶದ ಭವ್ಯ ಮೇಲಾವರಣದಲ್ಲಿ ನಿಮ್ಮ ರಾತ್ರಿಯನ್ನು ಶಾಂತಿಯುತವಾಗಿ ಕಳೆಯಬಹುದಾಗಿದೆ. ಸ್ವಲ್ಪ ಕ್ಷಣ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸುಂದರವಾದ ಪರ್ವತಗಳ ಮರೆಯಿಂದ ನಕ್ಷತ್ರಗಳು ಇಣುಕುವ ದೃಶ್ಯಗಳು, ಜಲಪಾತದಿಂದ ಕೆಳಗೆ ಬೀಳುವಾಗ ಆಗುವ ನೀರಿನ ಸದ್ದು, ನಿಮ್ಮ ಮೂಗಿಗೆ ಬಡಿಯುವ ಕಾಫಿ ಬೀಜದ ಸುವಾಸನೆ ಇವೆಲ್ಲವನ್ನೂ ಒಂದು ಕ್ಷಣ ಕಲ್ಪನೆ ಮಾಡಿಕೊಳ್ಳಿ .

ಈ ಅಸಾಧಾರಣವಾದ ಸೌಂದರ್ಯತೆಯಲ್ಲಿ ನೀವು ನಿಮ್ಮ ಎಲ್ಲಾ ಚಿಂತೆಗಳನ್ನೂ ಮರೆತುಬಿಡುವಿರಿ. ನೀವು ಕೂರ್ಗ್ ನ ಕಾಡಿನ ತೆರೆದ ಛಾವಣಿಯಲ್ಲಿ ಕ್ಯಾಂಪಿಂಗ್ ಮಾಡುವಿರಿ ಎಂದಾದರೆ ನಿಮ್ಮ ಜೊತೆ ಟೆಂಟ್ ಹಾಕುವ ಸಾಮಗ್ರಿಗಳನ್ನು ನಿಮ್ಮೊಂದಿಗೆ ಒಯ್ಯಿರಿ.

3. ನೀಲ್ ದ್ವೀಪ- ಅಂಡಮಾನ್ ಮತ್ತು ನಿಕೋಬಾರ್

3. ನೀಲ್ ದ್ವೀಪ- ಅಂಡಮಾನ್ ಮತ್ತು ನಿಕೋಬಾರ್

Srikantamedia

ಜೀವನದಲ್ಲಿ ಕೆಲವೇ ಕೆಲವು ಅನುಭವಗಳು ಅಗಾಧವಾದೂದಾಗಿರುತ್ತವೆ ಮತ್ತು ನೀವು ಈ ತಿಳಿಯದೇ ಇರುವ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿರುವಿರಿ ಎಂಬ ಅನುಭವಕ್ಕೆ ಒಳಗಾಗುವಿರಿ. ಅಂಡಮಾನ್ ಮತ್ತು ನಿಕೋಬಾರಿನ ನೀಲ್ ದ್ವೀಪದಲ್ಲಿ ನಕ್ಷತ್ರ ವೀಕ್ಷಣೆ ಮಾಡುವಾಗ ಇಂತಹುದೇ ಒಂದು ಅನುಭವಕ್ಕೊಳಗಾಗುವಿರಿ.

ಒಂದು ನಿಗೂಢವಾದ ಚೌಕಟ್ಟು, ಬಿಳಿ ಮಣ್ಣಿನ ಬೀಚ್ ಗಳು, ದಟ್ಟವಾದ ಹಸಿರು ಕಾಡುಗಳು ಸಮುದ್ರದ ಶಬ್ದ ಮತ್ತು ಆಕಾಶದ ಮೇಲಿರುವ ಲಕ್ಷ ಕೋಟಿ ನಕ್ಷತ್ರಗಳು ಅದ್ಭುತ ದೃಶ್ಯಕ್ಕೆ ಕಾರಣವಾಗುತ್ತವೆ. ಇಲ್ಲಿ ಆಕಾಶವು ರಾತ್ರಿಯಲ್ಲಿ ಕಪ್ಪನೆ ಬಣ್ಣಕ್ಕೆ ತಿರುಗುವ ಬದಲು ನೀಲಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಈ ಬಣ್ಣವು ನಿಮ್ಮ ಹೃದಯವನ್ನು ಕದಿಯುವುದರಲ್ಲಿ ಸಂಶಯವೇ ಇಲ್ಲ! ಈ ದ್ವೀಪವು ಇದು ನಕ್ಷತ್ರದ ಬೆಳಕಿನಲ್ಲಿರುವ ಹೊಳೆಯುವ ಆಕಾಶಕ್ಕೆ ಪ್ರಸಿದ್ಧವಾಗಿದೆ .

ಈ ತಾಣವು ನಕ್ಷತ್ರ ವೀಕ್ಷಣೆ ಮಾಡುವ ಜಗತ್ತಿನಾದ್ಯಂತದ ಜನರಿಂದ ತುಂಬಿರುತ್ತದೆ. ಇಲ್ಲಿಗೆ ಜನರು ನೀಲಾಕಾಶಯುಕ್ತ ಪರಿಸರವನ್ನು ವೀಕ್ಷಣೆ ಮಾಡುವ ಸಲುವಾಗಿ ಭೇಟಿ ಕೊಡುತ್ತಾರೆ. ಸಮುದ್ರದ ವೈಶಾಲ್ಯತೆಯು ಆಕಾಶದಲ್ಲಿ ನೀಲಿ ಬಣ್ಣದ ಜೊತೆ ಮಿಲನವಾದಾಗ, ಈ ದ್ವೀಪವನ್ನು ನೀಲಿ ಮತ್ತು ಸುಂದರವಾಗಿಸುವುದಲ್ಲದೆ ಈ ಸ್ಥಳದಲ್ಲಾಗುವ ಕಂಗೆಡಿಸುವ ಸೌಂದರ್ಯವನ್ನು ನೀವು ಕಲ್ಪಿಸಿಕೊಳ್ಳಬಹುದು.

4. ಪಾಂಗೊಂಗ್ ಟಸ್ಸೋ - ಲೇಹ್, ಲಡಾಖ್

4. ಪಾಂಗೊಂಗ್ ಟಸ್ಸೋ - ಲೇಹ್, ಲಡಾಖ್

dipak123

ನಕ್ಷತ್ರಗಳನ್ನು ಮತ್ತು ಚಂದ್ರನನ್ನು ವೀಕ್ಷಿಸುವ ಅಭಿಮಾನಿಗಳಿಗೆ ಲೇಹ್ ಲಡಾಖ್ ನಲ್ಲಿರುವ ಪಾಂಗೋಂಗ್ ಟಸ್ಸೊ ಒಂದು ಕನಸ್ಸಿನ ಸ್ಥಳವಾಗಿದೆ. ಕ್ಷೀರ ಪಥವನ್ನು ವೀಕ್ಷಿಸುವ ದೇಶದ ಪ್ರಮುಖ ಸ್ಥಳಗಳಲ್ಲಿ ಈ ಸ್ಥಳವೂ ಒಂದಾಗಿದೆ. ಹಿಮಾಲಯ ಪರ್ವತವನ್ನು ಬಿಟ್ಟು ನಿಮ್ಮ ಮತ್ತು ನಕ್ಷತ್ರಗಳ ನಡುವೆ ಇನ್ನೊಂದು ಯಾವುದೂ ಇಲ್ಲಿ ಇರುವುದಿಲ್ಲ.

ನಕ್ಷತ್ರಭರಿತ ನೋಟವು ನಿಮ್ಮನ್ನು ಭೂಮಿಯ ಒಂಟಿತನದ ಜೀವನವನ್ನು ಮರೆಸುವಂತೆ ಮಾಡುತ್ತದೆ ಮತ್ತು ನೀವು ಜೀವಂತವಾಗಿರುವ ಅನುಭವನನ್ನು ನೀಡುತ್ತದೆ. ಮಂಜುಗಡ್ಡೆಯ ಮೋಡಗಳಲ್ಲಿ ಎತ್ತರವಾಗಿ ಮತ್ತು ಮುಕ್ತವಾಗಿ ಹಾರುವ ಹಕ್ಕಿಗಳಂತೆ ಮತ್ತು ಆಕಾಶದೆತ್ತರದಲ್ಲಿಯ ಆ ಹೊಳೆಯುವ ಚುಕ್ಕೆಗಳನ್ನು ಸಂಪರ್ಕಿಸುವಂತೆ ನೀವು ಆಕಾಶದಲ್ಲಿ ನಿಮ್ಮ ಸ್ವಂತವಾದ ಒಂದು ರಚನೆಯನ್ನು ರಚಿಸುವ ಅನುಭವವನ್ನು ನೀಡುತ್ತದೆ. ಕೆಲವು ವಿವರಿಸಲಾಗದ ವಸ್ತುಗಳ ಚಿತ್ರಗಳನ್ನು ರಚಿಸುವುದು ಅಥವಾ ನಿಮ್ಮ ಪ್ರೀತಿ ಪಾತ್ರರ ಹೆಸರನ್ನು ಆ ನಕ್ಷತ್ರಗಳಲ್ಲಿ ಒಂದಕ್ಕೆ ಇಡಬಹುದು ಒಟ್ಟಿಗೆ ಇಡೀ ಆಕಾಶವೇ ಇಲ್ಲಿ ನಿಮ್ಮದಾಗಿರುತ್ತದೆ !

5. ಸ್ಪಿತಿ ಕಣಿವೆ- ಹಿಮಾಚಲ ಪ್ರದೇಶ

5. ಸ್ಪಿತಿ ಕಣಿವೆ- ಹಿಮಾಚಲ ಪ್ರದೇಶ

Wazzername9

ಅಸಂಖ್ಯಾತ ನಕ್ಷತ್ರಗಳು ಇಡೀ ಆಕಾಶದಲ್ಲಿ ಆವರಿಸಿಕೊಂಡಿರುವಾಗ ಇಡೀ ಆಕಾಶವು ಹೊಳೆಯುವಂತೆ ಕಾಣುತ್ತದೆ. ಇದಕ್ಕಾಗಿ ನೀವು ಮಾಡಬೇಕಾದುದೇನೆಂದರೆ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಇಲ್ಲಿಯ ಚಿತ್ರಣವನ್ನು ನಿಮ್ಮ ಮನಸ್ಸಿನಲ್ಲಿ ಖಾಯಂ ಆಗಿ ಸೆರೆಹಿಡಿಯಬೇಕಾದುದು! ಹಿಮಾಚಲ ಪ್ರದೇಶದಲ್ಲಿರುವ ಸ್ಪಿತಿ ಕಣಿವೆಯು ತನ್ನ ಕನಸಿನ ಲೋಕವನ್ನು ತನ್ನ ಸ್ವಚ್ಚವಾದ ಆಕಾಶ ಮತ್ತು ಕಡಿಮೆ ಜನಸಂಖ್ಯೆಯಿರುವ ಈ ಸ್ಥಳವು ಇಂತಹುದೇ ಒಂದು ಅವಕಾಶವನ್ನು ನೀಡುತ್ತದೆ

ಈ ಅನುಭವವನ್ನು ಹೊಂದಲು ಸಾಕಷ್ಟು ಜನರು ನಕ್ಷತ್ರಗಳ ಸೌಂದರ್ಯವನ್ನು ವೀಕ್ಷಿಸುವ ಪ್ರತಿಕ್ಷೆ ಮಾಡುತ್ತಾರೆ. ನಕ್ಷತ್ರ ವೀಕ್ಷಕರು ಮತ್ತು ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಜಾಗಕ್ಕೆ ಭೇಟಿ ನೀಡುತ್ತಾರೆ ಮತ್ತು ಇಲ್ಲಿ ಇಡೀ ರಾತ್ರಿ ಇದ್ದು ನಕ್ಷತ್ರ ಅಥವಾ ಕ್ಷೀರ ಪಥದ ಶೂಟಿಂಗ್ ಮಾಡಲು ಸೂಕ್ತವಾದ ಅವಕಾಶಕ್ಕೆ ಕಾಯುತ್ತಿರುತ್ತಾರೆ. ಪದಗಳು ನಿಜವಾಗುವ ಈ ಸ್ಪಿತಿ ಕಣಿವೆಗೆ ಭೇಟಿ ಕೊಟ್ಟು ಇಲ್ಲಿಯ ಸಹಜವಾದ ಸೌಂದರ್ಯವನ್ನು ನೋಡಲು ಬನ್ನಿ!

6. ಜೈಸಲ್ಮೇರ್ , ರಾಜಸ್ಥಾನ

6. ಜೈಸಲ್ಮೇರ್ , ರಾಜಸ್ಥಾನ

Const.crist

ಜೈಸಲ್ಮೇರ್‍ ಅಂದರೆ ಹೊಂಬಣ್ಣದ ಮರಳು ಮತ್ತು ಸೂರ್ಯಾಸ್ತ ಮತ್ತು ಒಂಟೆಗಳು ಮಾತ್ರ ಎಂದು ಕೊಂಡಿರುವಿರಾ! ಹಾಗಿದ್ದಲ್ಲಿ ಜೈಸಲ್ಮೇರ್‍ ಇದಕ್ಕಿಂತಲೂ ಹೆಚ್ಚಿನದನ್ನು ಹೊಂದಿದೆ. ಈ ಸ್ಥಳದಲ್ಲಿಯೇ ನಕ್ಷತ್ರಗಳು ಮರುಭೂಮಿಯ ವಿಸ್ತಾರವಾದ ತೋಳಿನಲ್ಲಿ ಕಾಣಿಸಿಕೊಳ್ಳುವಂತಹುದು. ಇದೊಂದು ಸುವರ್ಣಾವಕಾಶವಾದ ದೃಶ್ಯವನ್ನು ಒದಗಿಸುತ್ತದೆ ಮತ್ತು ನಿಮಗೆ ಮರುಭೂಮಿಗಳಲ್ಲಿ ಕ್ಯಾಂಪಿಂಗ್ ಮಾಡುವ ಅನುಭವವನ್ನು ಒದಗಿಸುತ್ತದೆ.

ಜೈಸಲ್ಮೇರ್ನಲ್ಲಿರುವ ಥಾರ್ ಮರುಭೂಮಿ ರಾತ್ರಿಯಲ್ಲಿ ಅತ್ಯಂತ ಶಾಂತಿಯುತವಾದುದಾಗಿದ್ದು ಚಂದ್ರ ಮತ್ತು ಲಕ್ಷಾಂತರ ನಕ್ಷತ್ರಗಳು ರಾತ್ರಿ ಆಕಾಶವನ್ನು ಆವರಿಸಿದಾಗ, ಮರುಭೂಮಿಯ ಉತ್ಕೃಷ್ಟತೆಯು ಜಾಸ್ತಿ ಯಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಆಕಾಶವನ್ನು ವೀಕ್ಷಿಸುವ ಪ್ರೇಮಿಗಳು ರಾತ್ರಿ ಸಫಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಅವರು ಬಯಸಿದಲ್ಲಿ ಇಲ್ಲಿಯ ಮರಳಿನಲ್ಲಿ ಕ್ಯಾಂಪ್ ಕೂಡಾ ಮಾಡಬಹುದು. ಮತ್ತು ಮನಮೋಹಕ ದೃಶ್ಯವನ್ನು ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X