Search
  • Follow NativePlanet
Share
ಮುಖಪುಟ » ಸ್ಥಳಗಳು» ನುಬ್ರಾ ಕಣಿವೆ

ನುಬ್ರಾ ಕಣಿವೆ - ದಿ ಆರ್ಚರ್ಡ್ ಆಫ್ ಲಡಾಖ್

31

ನುಬ್ರಾ ಕಣಿವೆ- ಹೂವುಗಳ ಕಣಿವೆಯೆಂಬ ಅರ್ಥದಲ್ಲಿ ಲುಂಬ್ರ ಕಣಿವೆ ಎಂದೇ ಪ್ರಸಿದ್ದವಾಗಿತ್ತು. ಈ ಕಣಿವೆ ಸಮುದ್ರ ಮಟ್ಟದಿಂದ 10000 ಅಡಿ ಎತ್ತರದಲ್ಲಿದೆ. ಈ ಪ್ರದೇಶ ಲಡಾಖ್ ನ ಹಣ್ಣಿನ ತೋಟವೆಂದೇ ಹೆಸರು ಪಡೆದುಕೊಂಡಿದೆ. ಬೇಸಿಗೆಯ ಸಮಯದಲ್ಲಿ ಗುಲಾಬಿ ಮತ್ತು ಹಳದಿ ಬಣ್ಣದ ಹೂಗಳ ತೋರಣವನ್ನು ನೋಡುವ ಸೌಭಾಗ್ಯ ಪ್ರವಾಸಿಗರಿಗೆ ದಕ್ಕುತ್ತದೆ. ಇಲ್ಲಿನ ಇತಿಹಾಸ 7ನೇ ಶತಮಾನಕ್ಕಿಂತಲೂ ಹಳೆಯದು. ಚೈನೀಸ್, ಮಂಗೋಲಿಯನ್ನರು ಮತ್ತು ಅರಬ್ಬರು ಇಲ್ಲಿಗೆ ದಾಳಿ ಮಾಡಿದ್ದ ಇತಿಹಾಸವಿದೆ. ಇಸ್ಲಾಂಗಿಂತ ಮುಂಚೆ ಬೌದ್ಧ ಧರ್ಮ ಇಲ್ಲಿ ಹರಡಿಕೊಂಡಿತ್ತು.

ನುಬ್ರಾ ಕಣಿವೆಯನ್ನು ಪ್ರವಾಸಿಗರು ತಲುಪುವುದಕ್ಕೆ ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಪಾಸ್ ಲೇಹ್ ನಿಂದ ಖರ್ದಂಗ್ ಪಾಸ್ ಮೂಲಕ ಸಂಚರಿಸಬೇಕು. ಖರ್ದಂಗ್ ಲಾ ಪಾಸ್ ವರ್ಷಪೂರ್ತಿ ಹಿಮದಿಂದ ಆವರಸಿರುತ್ತದೆ. ಹೀಗಾಗಿ, ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಸುಗಮ ಸಾರಿಗೆ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಪನಾಮಿಕ್ ಗ್ರಾಮ, ಎನ್ಸಾ ಆಶ್ರಮ ಮತ್ತು ದಿಸ್ಕಿತ್ ಆಶ್ರಮಗಳು ನುಬ್ರಾ ಕಣಿವೆಯ ಪ್ರಮುಖ ಆಕರ್ಷಣೆಗಳು.

ಪನಾಮಿಕ್ ಹಳ್ಳಿ ಸಮುದ್ರ ಮಟ್ಟದಿಂದ 10442 ಅಡಿ ಎತ್ತರದಲ್ಲಿದೆ ಮತ್ತು ಈ ಪ್ರದೇಶದ ಹೊರಭಾಗದಲ್ಲಿರುವ ಬಿಸಿ ನೀರಿನ ಬುಗ್ಗೆಯಿಂದಾಗಿ ಇದು ಪ್ರಸಿದ್ದಿ ಪಡೆದುಕೊಂಡಿದೆ. ಎನ್ಸಾ ಆಶ್ರಮ ಅಥವಾ ಎನ್ಸಾ ಗೊಂಪ ಗ್ರಾಮದ ನಡುಭಾಗದಲ್ಲಿದೆ. 350 ವರ್ಷಗಳಷ್ಟು ಹಳೆಯ ದಿಸ್ಕಿತ್ ಆಶ್ರಮ ಮತ್ತೊಂದು ಆಕರ್ಷಣೆ.

ಲೇಹ್ ವಿಮಾನ ನಿಲ್ದಾಣ ನುಬ್ರಾ ಕಣಿವೆಯಿಂದ 125 ಕಿಲೋ ಮೀಟರ್ ದೂರದಲ್ಲಿದೆ. ಲೇಹ್ ವಿಮಾನನಿಲ್ದಾಣ ಭಾರತದ ಉಳಿದ ವಿಮಾನ ನಿಲ್ದಾಣಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಏರ್ ಪೋರ್ಟ್ ನಿಂದ ಸ್ಥಳೀಯ ಬಸ್ಸುಗಳು ಮತ್ತು ಟ್ಯಾಕ್ಸಿ ಸೌಲಭ್ಯಗಳಿವೆ. ಇನ್ನು 620 ಕಿ.ಮೀ ದೂರದಲ್ಲಿರುವ ಜಮ್ಮು ತಾವಿ ರೈಲ್ವೇ ನಿಲ್ದಾಣವು ನುಬ್ರಾಗೆ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣ. ಜಮ್ಮು ತಾವಿ ರೈಲ್ವೇ ಜಂಕ್ಷನ್ ಗೆ ಭಾರತದ ಪ್ರಮುಖ ನಗರಗಳಿಂದ ಸಂಪರ್ಕವಿದೆ. ಜಮ್ಮು ತಾವಿ ರೈಲ್ವೇ ನಿಲ್ದಾಣದಿಂದ ಲೋಕಲ್ ಬಸ್ಸು ಮತ್ತು ಕ್ಯಾಬ್ಸ್ ಗಳು ನುಬ್ರಾಗೆ ತಲುಪಲು ದೊರೆಯುತ್ತವೆ.

ನುಬ್ರಾ ಕಣಿವೆ ಪ್ರಸಿದ್ಧವಾಗಿದೆ

ನುಬ್ರಾ ಕಣಿವೆ ಹವಾಮಾನ

ಉತ್ತಮ ಸಮಯ ನುಬ್ರಾ ಕಣಿವೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನುಬ್ರಾ ಕಣಿವೆ

  • ರಸ್ತೆಯ ಮೂಲಕ
    ಜಮ್ಮುವಿನಲ್ಲಿ ಉಳಿದುಕೊಂಡು ನುಬ್ರಾ ಕಣಿವೆಗೆ ಬರಲಿಚ್ಚಿಸುವ ಪ್ರವಾಸಿಗರು ಮೊದಲು ಲೇಹ್ ನಗರವನ್ನು ನೋಡಬಹುದು. ಲೇಹ್ ನಿಂದ ಲೋಕಲ್ ಜೀಪುಗಳು ಸಿಗುತ್ತವೆ. ರಸ್ತೆಗಳು ಬಹಳ ಅಪಾಯಕಾರಿ ಎಂಬ ಅಂಶವನ್ನು ಬದಿಗಿಟ್ಟರೆ ಸ್ವಂತ ವಾಹನದಲ್ಲೂ ಪ್ರಯಾಣಿಸಬಹುದು. ನವೆಂಬರ್ ನಿಂದ ಮೇ ತಿಂಗಳ ನಡುವೆ ಬರುವ ಪ್ರವಾಸಿಗರಿಗೆ ಒಂದ ಉಪಯೋಗಿವಿದೆ: ಮಂಗಳವಾರ, ಗುರುವಾರ ಮತ್ತು ಶನಿವಾರ ನುಬ್ರಾ ಕಣಿವೆಗೆ ತೆರಳಿ ಬುಧವಾರ, ಶುಕ್ರ ಮತ್ತು ರವಿವಾರ ಹಿಂತಿರುಗಬಹುದು. ಸೋಮವಾರವನ್ನು ರಸ್ತೆಯ ರಿಪೇರಿಗಾಗಿ ಮೀಸಲಿಡಲಾಗಿದೆ. ಬೆಳಗಿನ 10 ಘಂಟೆಯೊಳಗೆ ನುಬ್ರಾ ಕಣಿವೆಗೆ ತೆರಳಿ 1 ರಿಂದ 6 ಘಂಟೆಯೊಳಗಾಗಿ ಹಿಂತಿರುಗಬೇಕು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    620 ಕಿಮೀ ದೂರದಲ್ಲಿರುವ ಜಮ್ಮು ತಾವಿ ರೈಲ್ವೇ ನಿಲ್ದಾಣ ನುಬ್ರಾಗೆ ಹತ್ತಿರದ ರೈಲ್ವೇ ನಿಲ್ದಾಣ. ಜಮ್ಮು ತಾವಿ ರೈಲ್ವೇ ಜಂಕ್ಷನ್ ಗೆ ಭಾರತದ ಪ್ರಮುಖ ನಗರಗಳಿಂದ ಸಂಪರ್ಕವಿದೆ. ಜಮ್ಮು ತಾವಿ ರೈಲ್ವೇ ನಿಲ್ದಾಣದಿಂದ ಲೋಕಲ್ ಬಸ್ಸು ಮತ್ತು ಕ್ಯಾಬ್ಸ್ ಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲೇಹ್ ವಿಮಾನ ನಿಲ್ದಾಣ ನುಬ್ರಾ ಕಣಿವೆಯಿಂದ 125 ಕಿಲೋ ಮೀಟರ್ ದೂರದಲ್ಲಿದೆ. ಲೇಹ್ ವಿಮಾನನಿಲ್ದಾಣ ಭಾರತದ ಉಳಿದ ವಿಮಾನ ನಿಲ್ದಾಣಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಏರ್ ಪೋರ್ಟ್ ನಿಂದ ಸ್ಥಳೀಯ ಬಸ್ಸುಗಳು ಮತ್ತು ಟ್ಯಾಕ್ಸಿ ಸೌಲಭ್ಯಗಳಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City