» »ವಧುವಿಗೆ ನಾಯಿಯೇ ವರ...ಗುಡ್‌ಲಕ್ ಬೇಕಾದ್ರೆ ಇಲ್ಲಿ ನಾಯಿ ಜೊತೆ ಮದ್ವೆ ಆಗ್ಲೇ ಬೇಕು

ವಧುವಿಗೆ ನಾಯಿಯೇ ವರ...ಗುಡ್‌ಲಕ್ ಬೇಕಾದ್ರೆ ಇಲ್ಲಿ ನಾಯಿ ಜೊತೆ ಮದ್ವೆ ಆಗ್ಲೇ ಬೇಕು

Written By: Rajatha

ಭಾರತದ ಕೆಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಮೂಢನಂಬಿಕೆಗಳನ್ನು, ಆಚರಿಸುತ್ತಾ ಬರುತ್ತಿದ್ದಾರೆ. ಹುಡುಗಿಗೆ ನಾಯಿ ಜೊತೆ ಮದುವೆ ಮಾಡಿಸುವ ಹಳ್ಳಿಗಳು ಇಂದಿಗೂ ಇವೆ ಎಂದರೆ ನಂಬಲಸಾಧ್ಯ. ಇಂತಹ ಘಟನೆಗೆ ಉದಾಹರಣೆಯಾಗಿದೆ ಜಾರ್ಖಂಡ್‌ನ ಒಂದು ಹಳ್ಳಿ.

ಈ ಮಂದಿರಕ್ಕೆ ಪತಿ-ಪತ್ನಿ ಜೊತೆಯಾಗಿ ಹೋಗುವಂತಿಲ್ಲ..ಯಾಕೆ?

ದುರಾದೃಷ್ಟವನ್ನು ಹೋಗಲಾಡಿಸಲು ನಾಯಿ ಜೊತೆ ಮದುವೆ

ದುರಾದೃಷ್ಟವನ್ನು ಹೋಗಲಾಡಿಸಲು ನಾಯಿ ಜೊತೆ ಮದುವೆ

PC: youtube

ದುಷ್ಟ ಶಕ್ತಿಗಳಿಂದ , ಹುಡುಗಿಗೆ ಇರುವ ದುರಾದೃಷ್ಟವನ್ನು ದೂರಮಾಡಲು ಇಲ್ಲಿ ನಾಯಿ ಜೊತೆ ಮದುವೆ ಮಾಡಿಸಲಾಗುತ್ತದೆ. ಜಾರ್ಖಂಡ್‌ನ ಹಳ್ಳಿಯಲ್ಲ ಈಗಲೂ ಈ ಸಂಪ್ರದಾಯ ಆಚರಣೆಯಲ್ಲಿದೆ. ಇಲ್ಲಿ ಊರಿನ ಹಿರಿಯರು ಸೇರಿ ವಿವಾಹ ಮಾಡಿಸುತ್ತಾರೆ. ಮೊದಲು ನಾಯಿ ಜೊತೆ ಮದುವೆ ಮಾಡಿಸದೇ ಪುರುಷನನ್ನು ವಿವಾಹವಾಗುವುದರಿಂದ ಅದು ಕುಟುಂಬವನ್ನು ಹಾಗೂ ಸಮುದಾಯವನ್ನು ನಾಶ ಮಾಡಬಹುದು ಎನ್ನುವುದು ಅಲ್ಲಿನ ಜನರ ನಂಬಿಕೆ.

ನಾಯಿಗೂ ಆದರದ ಸ್ವಾಗತ

ನಾಯಿಗೂ ಆದರದ ಸ್ವಾಗತ

PC: youtube
ವಧುವಿನ ತಂದೆ ನಾಯಿಯನ್ನು ಕಾರ್‌ನಲ್ಲಿ ಮಂಟಪಕ್ಕೆ ಕರೆತರುತ್ತಾರೆ. ವರನನ್ನು ಯಾವ ರೀತಿ ಸ್ವಾಗತಿಸಲಾಗುತ್ತದೆಯೋ ಅದೇ ರೀತಿ ಆ ನಾಯಿಯನ್ನು ಆದರದಿಂದ ಸ್ವಾಗತಿಸಲಾಗುತ್ತದೆ. ವರನಿಗೆ ನೀಡುವ ಮರ್ಯಾದೆಯನ್ನು ನಾಯಿಗೂ ನೀಡಲಾಗುತ್ತದೆ.

ನಾಯಿಯನ್ನು ಮದುವೆಯಾದರೆ ಅದೃಷ್ಟ ಬದಲಾಗುತ್ತದಂತೆ

ನಾಯಿಯನ್ನು ಮದುವೆಯಾದರೆ ಅದೃಷ್ಟ ಬದಲಾಗುತ್ತದಂತೆ

PC: youtube
ನಾಯಿಯನ್ನು ಮದುವೆಯಾದರೆ ಅವರ ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಇಲ್ಲಿಯ ಜನರದ್ದು. ವಧುವಿನ ಮೇಲೆ ಇದ್ದ ದುಷ್ಟ ಶಕ್ತಿಗಳು ನಾಯಿಗೆ ಬದಲಾಗುತ್ತದೆ ಎನ್ನುವ ನಂಬಿಕೆ ಆ ಊರಿನ ಹಿರಿಯರದ್ದು. ನಂತರ ಅವರ ಜೀವನ ಸುಖಮಯವಾಗಿರುತ್ತದೆ ಎನ್ನುವ ಕಾರಣಕ್ಕೆ ನಾಯಿ ಜೊತೆ ಮದುವೆ ಮಾಡಿಸಲಾಗುತ್ತದೆ.

ಪುರುಷನ ಜೊತೆ ಎರಡನೇ ಮದುವೆ

ಪುರುಷನ ಜೊತೆ ಎರಡನೇ ಮದುವೆ

PC: youtube
ಒಮ್ಮೆ ನಾಯಿ ಜೊತೆ ಮದುವೆಯಾದ ನಂತರ ಆಕೆಗಿದ್ದ ದುರಾದೃಷ್ಟವೆಲ್ಲಾ ನಾಯಿಗೆ ಹೋಗುತ್ತದೆ. ಆನಂತರ ಮನುಷ್ಯನ ಜೊತೆ ಮದುವೆ ಮಾಡಿಸುತ್ತಾರಂತೆ. ಇದರಿಂದ ಆಕೆ ಮದುವೆಯಾಗುವ ಪುರುಷನ ಆಯುಷ್ಯ ಉತ್ತಮವಾಗಿರುತ್ತದಂತೆ.

ನಾಯಿ ಮದವೆಯಲ್ಲೂ ಇರುತ್ತೆ ಡ್ಯಾನ್ಸ್‌

ನಾಯಿ ಮದವೆಯಲ್ಲೂ ಇರುತ್ತೆ ಡ್ಯಾನ್ಸ್‌

PC: youtube
ಈ ನಾಯಿಯ ಜೊತೆ ನಡೆದ ಮದುವೆಯಲ್ಲೂ ಮದುವೆಗೆ ಬಂದವರು, ಸಂಬಂಧಿಕರು ಡ್ಯಾನ್ಸ್ ಮಾಡುತ್ತಾರೆ. ಊರಿನವರೆಲ್ಲಾ ಈ ಮದುವೆಯಲ್ಲಿ ಭಾಗಿಯಾಗುತ್ತಾರೆ.

ವಧು ನಾಯಿಯನ್ನು ನೋಡಿಕೊಳ್ಳಬೇಕಂತೆ

ವಧು ನಾಯಿಯನ್ನು ನೋಡಿಕೊಳ್ಳಬೇಕಂತೆ

PC: youtube
ಮದುವೆಯಾದ ನಂತರ ಕೆಲವು ತಿಂಗಳುಗಳ ಕಾಲ ವಧು ತಾನು ಮದುವೆಯಾದ ನಾಯಿಯನ್ನು ಪ್ರೀತಿಯಿಂದ ಸಾಕಬೇಕಂತೆ.