Search
  • Follow NativePlanet
Share
» »ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಜನಪ್ರಿಯ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ

ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಜನಪ್ರಿಯ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ

ಘಾಟಿ ಸುಬ್ರಹ್ಮಣ್ಯ - ಕನ್ನಡಿಯಲ್ಲಿ ಕಾಣುವ ವಿಗ್ರಹಗಳ ವಿಶೇಷತೆಗಳು

ghatisubramanya-1

ದೊಡ್ಡಬಳಾಪುರದ ಸಮೀಪದಲ್ಲಿರುವ ಘಾಟಿ ಸುಬ್ರಹ್ಮಣ್ಯವು ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿದೆ ಈ ದೇವಸ್ಥಾನವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದೆ. ಈ ದೇವಾಲಯವು ಕಾಲದ ಕಟ್ಟುಪಾಡು ಇಲ್ಲದೇ ಸದಾ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ. ಈ ದೇವಾಲಯವು ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಯಾತ್ರಾರ್ಥಿಗಳು ಮತ್ತು ಭಕ್ತರಿಂದ ಭೇಟಿ ನೀಡಲ್ಪಡುತ್ತದೆ.

ghati-subramanya-2

ಈ ದೇವಾಲಯದ ವಿಶೇಷತೆಗಳು

ಈ ದೇವಾಲಯದಲ್ಲಿ ಮುಖ್ಯವಾಗಿ ಸುಬ್ರಹ್ಮಣ್ಯ ಮತ್ತು ಲಕ್ಷ್ಮೀ ನಾರಾಯಣ . ಪೂಜಿಸಲಾಗುತ್ತಿದ್ದು, ಈ ವಿಗ್ರಹಗಳಲಿ ಒಂದು ವಿಶಿಷ್ಟತೆ ಇದೆ. ಈ ಎರಡೂ ದೇವರುಗಳನ್ನು ಒಂದೇ ಪ್ರತಿಮೆಯಲ್ಲಿ ಕೆತ್ತಲಾಗಿದ್ದು, ಸುಬ್ರಹ್ಮಣ್ಯನ ವಿಗ್ರಹವು ಪೂರ್ವಭಿಮುಖವಾಗಿಯೂ ಲಕ್ಷ್ಮೀನಾರಾಯಣನ ವಿಗ್ರವು ಪಶ್ಚಿಮಾಭಿಮುಖವಾಗಿಯೂ ಇದೆ. ಇಲ್ಲಿ ಭಕ್ತರು ಆಯಕಟ್ಟಿನ ಕನ್ನಡಿಯ ಮೂಲಕ ಲಕ್ಷ್ಮೀ ನಾರಾಯಣನ ವಿಗ್ರಹವನ್ನು ನೋಡಬಹುದಾಗಿದೆ.
ಈ ದೇವಾಲಯವು ತನ್ನ ವಾಸ್ತುಶಿಲ್ಪ ಮತ್ತು ವಿಶೇಷದಿನಗಳು ಮತ್ತು ಉತ್ಸವ ಮುಂತಾದ ಕಾರಣಗಳಿಂದಾಗಿ ಜನರಿಂದ ತುಂಬಿ ತುಳುಕುತ್ತಿರುತ್ತದೆ.

ghatisubramanya-3
ghatisubramanya-3
Photo Credit:

ಘಾಟಿ ಸುಬ್ರಹ್ಮಣ್ಯ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಘಾಟಿ ಸುಬಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಡುವ ಸಮಯದಲ್ಲಿ ಅದರ ಜೊತೆಗೆ ಹಳ್ಳಿಯ ಸುಂದರ ನೋಟವನ್ನೂ ವೀಕ್ಷಿಸಬಹುದಾಗಿದೆ. ಇದರೊಂದಿಗೆ ಇಲ್ಲಿಂದ 12 ಕಿ.ಮೀ ಅಂತರದಲ್ಲಿರುವ ದೊಡ್ಡಬಳ್ಳಾಪುರದಲ್ಲಿಯ ದೇವಾಲಯಗಳನ್ನು ನೋಡಬಹುದಾಗಿದೆ. ಈ ಪ್ರವಾಸದ ಜೊತೆಗೆ ನಂದಿ ಬೆಟ್ಟಗಳಿಗೆ ಪ್ರವಾಸವನ್ನು ಕೂಡಾ ಮಾಡಬಹುದಾಗಿದೆ.

ಸುಬ್ರಹ್ಮಣ್ಯಕ್ಕೆ ತಲುಪುವುದು ಹೇಗೆ?

ದೇವಸ್ಥಾನಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಬಸ್ಸುಗಳ ಓಡುತ್ತವೆ. ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಹ್ಮಣ್ಯವನ್ನು ತಲುಪಲು ನೀವು ಸ್ಥಳೀಯ ಸಾರಿಗೆಯನ್ನು ಅವಲಂಬಿಸಬೇಕಾಗುತ್ತದೆ ಮತ್ತು ಹತ್ತಿರದ ರೈಲು ನಿಲ್ದಾಣವು ಮಾಕಳಿ ದುರ್ಗದಲ್ಲಿದೆ.

ಘಾಟಿ ಸುಬ್ರಹ್ಮಣ್ಯದ ಭೇಟಿಗೆ ಸೂಕ್ತ ಸಮಯ

ಚಳಿಗಾಲವು ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X