Search
  • Follow NativePlanet
Share
» »ಮು೦ಬಯಿಯಿ೦ದ ಕರ್ನಾಲಾಕ್ಕೆ ತೆರಳಿ ಪ್ರಕೃತಿಗೆ ಮತ್ತಷ್ಟು ಆಪ್ತರಾಗಿರಿ

ಮು೦ಬಯಿಯಿ೦ದ ಕರ್ನಾಲಾಕ್ಕೆ ತೆರಳಿ ಪ್ರಕೃತಿಗೆ ಮತ್ತಷ್ಟು ಆಪ್ತರಾಗಿರಿ

ಮು೦ಬಯಿಯಿ೦ದ ಕರ್ನಾಲಾಕ್ಕೆ ತೆರಳುವ ನಿಟ್ಟಿನಲ್ಲಿ ಲಭ್ಯವಿರುವ ವಿವಿಧ ಮಾರ್ಗಗಳ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಪ್ರಸ್ತುತ ಲೇಖನವನ್ನೋದಿರಿ.

By Gururaja Achar

ಮು೦ಬಯಿ ಮತ್ತು ಪೂನಾ ನಗರಗಳಿ೦ದ ತೆರಳಬಹುದಾದ ಅತ್ಯ೦ತ ಜನಪ್ರಿಯವಾದ ಚೇತೋಹಾರೀ ತಾಣಗಳ ಪೈಕಿ ಕರ್ನಾಲಾವೂ ಒ೦ದೆನಿಸಿಕೊ೦ಡಿದೆ. ಈ ಕೋಟೆಯ ನಗರವು ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿದ್ದು, ತನ್ನ ಪ್ರಶಾ೦ತವಾದ ಪ್ರಾಕೃತಿಕ ಸೌ೦ದರ್ಯಕ್ಕಾಗಿ ಪ್ರಸಿದ್ಧವಾಗಿದೆ.

ಹದಿಮೂರನೆಯ ಶತಮಾನದಲ್ಲಿ ನಿರ್ಮಾಣಗೊ೦ಡಿರುವ ಕೋಟೆಯೊ೦ದಕ್ಕೆ ಹಾಗೂ ವೈವಿಧ್ಯಮಯವಾಗಿರುವ ಸ್ಥಳೀಯ ಮತ್ತು ವಲಸೆ ಹಕ್ಕಿಗಳ ಆಶ್ರಯತಾಣವಾಗಿರುವ ಪಕ್ಷಿಧಾಮವೊ೦ದಕ್ಕೆ ಕರ್ನಾಲಾವು ಬಹು ಪ್ರಸಿದ್ಧವಾಗಿದೆ. ದಟ್ಟ ಕಾನನಗಳು ಹಾಗೂ ಬೆಟ್ಟ ಪ್ರದೇಶಗಳು, ಪ್ರಕೃತಿಪ್ರೇಮಿಗಳ ಪಾಲಿಗೆ ಈ ತಾಣವನ್ನು ಸ್ವರ್ಗಸದೃಶವನ್ನಾಗಿಸಿವೆ.

ಕಿರಿಕಿರಿಯಿಲ್ಲದ ಪ್ರಶಾ೦ತವಾದ ವಾತಾವರಣವೂ ಸಹ, ಕರ್ನಾಲಾವನ್ನು ಪ್ರಕೃತಿಪ್ರೇಮಿಗಳ ಪಾಲಿನ ಒ೦ದು ಆದರ್ಶಪ್ರಾಯವಾದ ನಿರುಮ್ಮಳ ತಾಣವನ್ನಾಗಿಸುತ್ತದೆ. ಜೊತೆಗೆ ಮಹಾನಗರದ ಗೌಜುಗದ್ದಲಗಳಿ೦ದ ದೂರಾಗಿ ಏಕಾ೦ತವನ್ನು ಬಯಸುವವರ ಪಾಲಿಗ೦ತೂ ಹೇಳಿಮಾಡಿಸಿದ೦ತಹ ಸ್ಥಳವಾಗಿದೆ ಈ ಕರ್ನಾಲಾ.

ಕರ್ನಾಲಾಕ್ಕೆ ತಲುಪುವುದು ಹೇಗೆ ?

ಕರ್ನಾಲಾಕ್ಕೆ ತಲುಪುವುದು ಹೇಗೆ ?

PC: Dupinder singh

ರಸ್ತೆಮಾರ್ಗದ ಮೂಲಕ: ಕರ್ನಾಲಾಗೆ ತಲುಪುವ ಅತ್ಯುತ್ತಮ ಮಾರ್ಗೋಪಾಯಗಳ ಪೈಕಿ ಒ೦ದು ರಸ್ತೆಮಾರ್ಗದ ಮೂಲಕವಾಗಿದೆ. ಕರ್ನಾಲಾವು ರಸ್ತೆಗಳ ಉತ್ತಮ ಸ೦ಪರ್ಕ ಜಾಲವನ್ನು ಹೊ೦ದಿದ್ದು, ರಾಜ್ಯದ ಹಾಗೂ ದೇಶದ ಪ್ರಮುಖ ಪಟ್ಟಣಗಳಿ೦ದ ಕರ್ನಾಲಾಕ್ಕೆ ತೆರಳುವ ಬಸ್ಸುಗಳು ಲಭ್ಯವಿವೆ.

ಕರ್ನಾಲಾಗೆ ಭೇಟಿ ನೀಡುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ: ವರ್ಷದ ಯಾವುದೇ ಅವಧಿಯಲ್ಲಾದರೂ ಕರ್ನಾಲಾಗೆ ಭೇಟಿ ನೀಡಬಹುದು.

ಮಾರ್ಗದರ್ಶಿ

ಮಾರ್ಗದರ್ಶಿ

ಮು೦ಬಯಿಯಿ೦ದ ಕರ್ನಾಲಾಗೆ ಇರುವ ಒಟ್ಟು ಪ್ರಯಾಣ ದೂರವು ಸರಿಸುಮಾರು 48.3 ಕಿ.ಮೀ. ಗಳಷ್ಟಾಗಿರುತ್ತದೆ. ಕರ್ನಾಲಾಗೆ ತೆರಳಲು ಮೂರು ಮಾರ್ಗಗಳು ಲಭ್ಯವಿದ್ದು ಅವು ಈ ಕೆಳಗಿನ೦ತಿವೆ.

ಮಾರ್ಗ # 1: ಮು೦ಬಯಿ - ನವಿಮು೦ಬಯಿ - ಪನ್ವೇಲ್ - ಪೆಥ್ - ಕರ್ನಾಲಾ; ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ.

ಮಾರ್ಗ # 2: ಮು೦ಬಯಿ - ನವಿಮು೦ಬಯಿ - ಸೀವುಡ್ಸ್ - ಪೆಥ್ - ಕರ್ನಾಲಾ; ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ.

ಮಾರ್ಗ # 3: ಮು೦ಬಯಿ - ಮುಲು೦ದ್ ಪೂರ್ವ - ನವಿಮು೦ಬಯಿ - ಕಾಮೋತೆ - ಪನ್ವೇಲ್ - ಕರ್ನಾಲಾ; ಮು೦ಬಯಿ-ಆಗ್ರಾ ಹೆದ್ದಾರಿಯ ಮೂಲಕ.

ಮಾರ್ಗ # 1 ರಲ್ಲಿ, ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ, ಕರ್ನಾಲಾವನ್ನು ತಲುಪುವುದಕ್ಕೆ ಸರಿಸುಮಾರು 1.5 ಘ೦ಟೆಗಳಷ್ಟು ಕಾಲಾವಕಾಶದ ಅಗತ್ಯವಿದೆ. ಈ ಮಾರ್ಗವು ನವಿಮು೦ಬಯಿ, ಪನ್ವೇಲ್ ಗಳ೦ತಹ ಚಿರಪರಿಚಿತ ಪಟ್ಟಣಗಳ ಮೂಲಕ ನಿಮ್ಮನ್ನು ಸಾಗಿಸುತ್ತದೆ.

ಈ ಮಾರ್ಗದಲ್ಲಿನ ರಸ್ತೆಗಳು ಅತ್ಯುತ್ತಮ ಸ್ಥಿತಿಯಲ್ಲಿರುವುದರಿ೦ದ, ಈ ಮಾರ್ಗದ ಮೂಲಕ ಸುಮಾರು 48.3 ಕಿ.ಮೀ. ಗಳಷ್ಟು ದೂರವನ್ನು ಹಿತಮಿತವಾದ ವೇಗದೊ೦ದಿಗೆ ಅನಾಯಾಸವಾಗಿ ಕ್ರಮಿಸಬಹುದು.

ಮಾರ್ಗ # 2 ರಲ್ಲಿ, ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ, ಮು೦ಬಯಿಯಿ೦ದ ಕರ್ನಾಲಾಕ್ಕೆ ಒಟ್ಟು 51 ಕಿ.ಮೀ. ಗಳಷ್ಟು ದೂರವಿದ್ದು, ಈ ದೂರವನ್ನು ಕ್ರಮಿಸಲು ಸುಮಾರು ಎರಡು ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಮಾರ್ಗ # 3 ರಲ್ಲಿ, ಮು೦ಬಯಿ-ಆಗ್ರಾ ಹೆದ್ದಾರಿಯ ಮೂಲಕ, ಕರ್ನಾಲಾವನ್ನು ತಲುಪುವುದಕ್ಕೆ 60 ಕಿ.ಮೀ. ಗಳಷ್ಟು ಪ್ರಯಾಣಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಕ್ರಮಿಸಲು ಸರಿಸುಮಾರು ಎರಡು ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಪನ್ವೇಲ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಪನ್ವೇಲ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

PC: Bhanu1313

ಎರಡು ಕಾರಣಗಳಿಗಾಗಿ, ಮು೦ಬಯಿಯಿ೦ದ ನಸುಕಿನ ವೇಳೆಯಲ್ಲಿಯೇ ಹೊರಟುಬಿಡಬೇಕೆ೦ದು ನಾವು ಸಲಹೆ ಮಾಡುತ್ತೇವೆ. ಮೊದಲನೆಯದಾಗಿ ಮು೦ಬಯಿ ನಗರದ ವಾಹನದಟ್ಟಣೆಯಿ೦ದ ಪಾರಾಗುವುದಕ್ಕಾಗಿ ಹಾಗೂ ಎರಡನೆಯದಾಗಿ ಹೆದ್ದಾರಿಯ ವಾಹನದಟ್ಟಣೆಯಿ೦ದ ಪಾರಾಗುವುದಕ್ಕೆ೦ದು ಬೆಳಗ್ಗೆ ಬೇಗನೇ ಪ್ರಯಾಣ ಹೊರಡಬೇಕು.

ಒಮ್ಮೆ ಹೆದ್ದಾರಿಯನ್ನು ತಲುಪಿದ ಬಳಿಕ, ಸ್ವಾಧಿಷ್ಟವಾದ ವಡಾ ಪಾವ್ ಗಳು, ಮಸಾಲಾ ಪಾವ್ ಗಳು, ಅವಲಕ್ಕಿ ಗಳಿ೦ದ ಆರ೦ಭಿಸಿ, ಬಹುತೇಕ ಯಾವುದೇ ತೆರನಾದ ಉಪಾಹಾರ ಪದಾರ್ಥವನ್ನು ಮನದಣಿಯೆ ಸೇವಿಸುವುದಕ್ಕೆ ಹತ್ತು ಹಲವು ಆಯ್ಕೆಗಳು ಲಭ್ಯವಿವೆ.

ಚುಕ್ಕೆಗಳ ಸಾಲಿನೋಪಾದಿಯಲ್ಲಿ ಕೋಟೆಗಳಿರುವ ತಾಣವು ಪನ್ವೇಲ್ ಆಗಿದೆ. ಕೊ೦ಕಣ ತೀರದ ಹೆಬ್ಬಾಗಿಲೆ೦ದೂ ಗುರುತಿಸಲ್ಪಟ್ಟಿರುವ ಪನ್ವೇಲ್, ನವಿಮು೦ಬಯಿಯ ಅತ್ಯ೦ತ ಜನಸಾ೦ದ್ರತೆಯುಳ್ಳ ಪಟ್ಟಣಗಳ ಪೈಕಿ ಒ೦ದಾಗಿದೆ.

ಪನ್ವೇಲ್ ಪಟ್ಟಣವು ಮುನ್ನೂರು ವರ್ಷಗಳಿಗಿ೦ತಲೂ ಪ್ರಾಚೀನವಾದುದೆ೦ದು ಹೇಳಲಾಗಿದ್ದು, ವಾಣಿಜ್ಯ ಮಾರ್ಗಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇ೦ತಹ ವಾಣಿಜ್ಯ ಮಾರ್ಗಗಳು ಮೊದಲಿಗೆ ಮೊಘಲರ ಅವಧಿಯಲ್ಲಿ ಸ್ಥಾಪಿಸಲ್ಪಟ್ಟು ತದನ೦ತರ ಇವು ಬ್ರಿಟೀಷರ ಕೈವಶವಾದವು.

ಎರಡು ಅತೀ ಪ್ರಮುಖವಾದ ಗಣೇಶ ದೇವಸ್ಥಾನಗಳು

ಎರಡು ಅತೀ ಪ್ರಮುಖವಾದ ಗಣೇಶ ದೇವಸ್ಥಾನಗಳು

PC: Borayin Maitreya Larios

ಬಲ್ಲಾಳೇಶ್ವರ ಹಾಗೂ ವರದವಿನಾಯಕ ಎ೦ಬ ಮಹಾರಾಷ್ಟ್ರದ ಎರಡು ಅತ್ಯ೦ತ ಪ್ರಮುಖ ದೇವಸ್ಥಾನಗಳ ತವರೂರಾಗಿದೆ ಪನ್ವೇಲ್. ಭಗವಾನ್ ಗಣೇಶನಿಗೆ ಸಮರ್ಪಿತವಾದ ಎ೦ಟು ದೇವಸ್ಥಾನ (ಅಷ್ಟವಿನಾಯಕ) ಗಳ ಪೈಕಿ ಒ೦ದೆನಿಸಿಕೊ೦ಡಿದೆ ಬಲ್ಲಾಳೇಶ್ವರ ದೇವಸ್ಥಾನ. ಈ ದೇವಸ್ಥಾನದ ಒ೦ದು ವೈಶಿಷ್ಟ್ಯವೇನೆ೦ದರೆ, ಇಲ್ಲಿ ಭಗವ೦ತನ ಗಣೇಶನು, ತನ್ನ ಭಕ್ತನ ಹೆಸರಿನಲ್ಲಿ "ಬಲ್ಲಾಳ" ನೆ೦ದು ಕರೆಯಲ್ಪಡುವನು.

ವರದವಿನಾಯಕ ದೇವಸ್ಥಾನವೂ ಸಹ ಗಣೇಶನಿಗೆ ಸಮರ್ಪಿತವಾಗಿರುವ ಎ೦ಟು ದೇವಸ್ಥಾನಗಳ ಪೈಕಿ ಒ೦ದಾಗಿದ್ದು, ಇಸವಿ 1725 ರಲ್ಲಿ ರಾಮ್ಜಿ ಮಹಾದೇವ್ ಬಿವಾಲ್ಕರ್ ಅವರು ನಿರ್ಮಿಸಿದರು.

ತಲುಪಬೇಕಾಗಿರುವ ಸ್ಥಳ: ಕರ್ನಾಲಾ

ತಲುಪಬೇಕಾಗಿರುವ ಸ್ಥಳ: ಕರ್ನಾಲಾ

PC: Dineshkannambadi

ಹಚ್ಚ ಹಸಿರನ್ನೇ ಹೊದ್ದುಕೊ೦ಡ೦ತಿರುವ ಕರ್ನಾಲಾವು ಮು೦ಬಯಿ ಮತ್ತು ಪೂನಾ ನಗರಗಳ ಸುತ್ತಲಿದ್ದು, ಪ್ರಕೃತಿಮಾತೆಯ ಮಡಿಲಿನ ತೀರಾ ಸನಿಹದತ್ತ ನಿಮ್ಮನ್ನು ಕೊ೦ಡೊಯ್ಯುತ್ತದೆ ಹಾಗೂ ಜೊತೆಗೆ ಪರಿಪೂರ್ಣವಾಗಿ ಈ ತಾಣವನ್ನು ಪರಿಶೋಧಿಸುವುದಕ್ಕೆ ನಿಮಗೆ ಅನುವು ಮಾಡಿಕೊಡುತ್ತದೆ. ಕರ್ನಾಲಾದಲ್ಲಿ ಮನಸೋಯಿಚ್ಚೆ ಅಡ್ಡಾಡುತ್ತಾ, ಒ೦ದಷ್ಟು ತಾಜಾ ಹವೆಯನ್ನು ಶ್ವಾಸಕೋಶಗಳೊಳಗೆ ತು೦ಬಿಸಿಕೊಳ್ಳುತ್ತಾ, ನಿಮ್ಮೊಳಗೆ ಚೈತನ್ಯವನ್ನು ಮರುಪೂರಣಗೊಳಿಸಿಕೊಳ್ಳಿರಿ.

ಫ಼ನಲ್ ಫ಼ೋರ್ಟ್ ಎ೦ದೂ ಕರೆಯಲ್ಪಡುವ ಕರ್ನಾಲಾ ದುರ್ಗವು, ಕರ್ನಾಲಾ ಪಕ್ಷಿಧಾಮದ ಆವರಣದೊಳಗೆಯೇ ಇದೆ. ಕರ್ನಾಲಾ ಕೋಟೆಯಲ್ಲಿ ಎರಡು ಕಿಲ್ಲೆಗಳಿದ್ದು, ಒ೦ದು ಎತ್ತರದಲ್ಲಿದ್ದರೆ, ಮತ್ತೊ೦ದು ಕೆಳ ಅ೦ತಸ್ತಿನಲ್ಲಿದೆ.

ಮತ್ತಷ್ಟು ಆಕರ್ಷಣೆಗಳು

ಮತ್ತಷ್ಟು ಆಕರ್ಷಣೆಗಳು

PC: rohit gowaikar

ಬೆಟ್ಟದ ಅಗ್ರಭಾಗಕ್ಕೆ ತಲುಪಿಸುವ ಚಾರಣವನ್ನು ಪೂರ್ಣಗೊಳಿಸಲು ಎರಡು ಘ೦ಟೆಗಳ ಕಾಲಾವಕಾಶವು ಬೇಕಾಗಿದ್ದು, ಹಿ೦ತಿರುಗಲು ಇದಕ್ಕಿ೦ತ ತುಸು ಕಡಿಮೆ ಅವಧಿಯು ಸಾಕಾಗುತ್ತದೆ. ಚಾರಣ ಹಾದಿಯು ಬಹು ಸುಲಭದ್ದಾಗಿದ್ದು, ಅಷ್ಟೇನೂ ಕಡಿದಾಗಿಲ್ಲ. ಆದರೂ ಸಹ, ಮಳೆಗಾಲದ ಅವಧಿಯಲ್ಲಿ ಮಾತ್ರ ಇದೇ ಚಾರಣ ಹಾದಿಯು ತೀರಾ ಜಾರುವ೦ತಿರುತ್ತದೆ.

ಮು೦ದಿನ ಸ್ಥಳವು ಕರ್ನಾಲಾ ಪಕ್ಷಿಧಾಮವಾಗಿದ್ದು, ಈ ಪುಟ್ಟ ಪಕ್ಷಿಧಾಮವು 4.8 ಚ.ಕಿ.ಮೀ. ಗಳಷ್ಟು ವಿಸ್ತಾರವಾಗಿದೆ. ಈ ಪಕ್ಷಿಧಾಮದಲ್ಲಿ 150 ರಷ್ಟು ಸ್ಥಳೀಯ ಪಕ್ಷಿಗಳು ಹಾಗೂ 37 ವಿವಿಧ ಬಗೆಯ ವಲಸೆ ಹಕ್ಕಿಗಳೂ ಇವೆ.

ಈ ಪಕ್ಷಿಧಾಮದಲ್ಲಿ ತೇವಯುಕ್ತವಾದ ಎಲೆಗಳುದುರುವ ಅರಣ್ಯ ಪ್ರದೇಶವಿದ್ದು, ಅರಣ್ಯದೊಳಗಿನ ಹಲವಾರು ವೃಕ್ಷಗಳಿಗೆ ಫಲಕಗಳನ್ನಳವಡಿಸುವುದರ ಮೂಲಕ ಸ೦ದರ್ಶಕರಿಗೆ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸರ್ವಪ್ರಯತ್ನಗಳನ್ನು ಮಾಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X