Search
  • Follow NativePlanet
Share
» »ಬೆನ್ನಿಗೆ ಕೊಕ್ಕೆ ಹಾಕಿ ಗಾಳಿಯಲ್ಲಿ ತೂಗು ಹಾಕುವ ವಿಚಿತ್ರ ಆಚರಣೆ ನೋಡಿದ್ದೀರಾ?

ಬೆನ್ನಿಗೆ ಕೊಕ್ಕೆ ಹಾಕಿ ಗಾಳಿಯಲ್ಲಿ ತೂಗು ಹಾಕುವ ವಿಚಿತ್ರ ಆಚರಣೆ ನೋಡಿದ್ದೀರಾ?

ದೇವರ ನಾಡು ಎಂದೇ ಕರೆಯಲ್ಪಡುವ ಕೇರಳವು ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಪ್ರಾಚೀನ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಸಂರಕ್ಷಣೆ ಮಾಡಿಕೊಂಡು ಬರುತ್ತಿರುವ ಕೇರಳದಲ್ಲಿ ಸಾಕ್ಷಾರತ ಪ್ರಮಾಣವೂ ಉಳಿದೆಲ್ಲಾ ರಾಜ್ಯಗಳಿಗಿಂತ ಅಧಿಕ ಇದೆ.

ಗರುಡನ್ ತೂಕಮ್

ಗರುಡನ್ ತೂಕಮ್

PC:ranjith kumar

ಗರುಡನ್ ತೂಕಮ್ ಎನ್ನುವುದು ಒಂದು ರೀತಿಯ ಆಕರ್ಷಕ ಮತ್ತು ಅಪಾಯಕಾರಿ ಆಚರಣೆಯಾಗಿದೆ. ಭಕ್ತರು ಅಕ್ಷರಶಃ ತಮ್ಮ ದೇಹಗಳನ್ನು ಗಾಳಿಯಲ್ಲಿ ತೂಗಾಡಲು ಬಿಡುತ್ತಾರೆ. ಇದು ಮುಖ್ಯವಾಗಿ ಕಾಳಿ ದೇವಿಯ ದೇವಸ್ಥಾನಗಳಲ್ಲಿ ನಡೆಸಲ್ಪಡುತ್ತದೆ.

ಗರುಡನ ವೇಷ

ಗರುಡನ ವೇಷ

ಆಚರಣೆಗಳಿಗಾಗಿ ಕಲಾವಿದರು ಮೊದಲು ಗರುಡನರೀತಿಯಲ್ಲಿ ವೇಷಭೂಷಣ ಮಾಡಬೇಕು. ಕೋಪದ ದೇವತೆಗೆ ಸಮಾಧಾನವಾಗುವಂತೆ ದೇವಸ್ಥಾನದ ಆವರಣದಲ್ಲಿ ನೃತ್ಯ ಮಾಡುತ್ತಾರೆ. ಧಾರಿಕಾ ಹೆಸರಿನ ರಾಕ್ಷಸನನ್ನು ಕೊಂದ ನಂತರ ಕಾಳಿಯ ರಕ್ತದ ದಾಹವನ್ನು ತಣಿಸಲು ದಹನವನ್ನು ಗರುಡನನ್ನು ಕಳುಹಿಸಲಾಗಿದೆ ಎನ್ನುತ್ತದೆ ದಂತಕಥೆ.

ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದುಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

 ಬೆನ್ನಿಗೆ ಕೊಕ್ಕೆ

ಬೆನ್ನಿಗೆ ಕೊಕ್ಕೆ

PC: Akhilan

ಈ ಭಕ್ತರನ್ನು ಅವರ ಬೆನ್ನಿನ ಚರ್ಮಕ್ಕೆ ಕೊಕ್ಕೆಯನ್ನು ಸಿಕ್ಕಿಸುವ ಮೂಲಕ ಗಾಳಿಯಲ್ಲಿ ತೂಗುಹಾಕಲಾಗುತ್ತದೆ. ನಂತರ ಅವರನ್ನು ನಗರದ ಸುತ್ತಲೂ ವಿಶೇಷ ವಿನ್ಯಾಸಗೊಳಿಸಿದ ವಾಹನಗಳಲ್ಲಿ ಮೆರವಣಿಗೆ ಮಾಡಿಸಲಾಗುತ್ತದೆ.

ಮೆರವಣಿಗೆ ಮಾಡಲಾಗುತ್ತದೆ

ಮೆರವಣಿಗೆ ಮಾಡಲಾಗುತ್ತದೆ

PC: Akhilan

ಇದು 40 ರಿಂದ 50 ಪುರುಷರು ಕೊಕ್ಕೆಗಳನ್ನು ತಮ್ಮ ಹಿಂಭಾಗದಲ್ಲಿ ಚುಚ್ಚುವ ಮೂಲಕ ನೇತಾಡುತ್ತಾ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಚೆಂಡೆ, ಡ್ರಮ್ ಜೊತೆ ವರ್ಣರಂಜಿತ ಮೆರವಣಿಗೆಯನ್ನು ನಡೆಸಲಾಗುತ್ತದೆ, ಸಾವಿರಾರು ಪ್ರೇಕ್ಷಕರು ತಮ್ಮ ಸ್ವಯಂ-ಹಿಂಸೆಯ ಭಕ್ತಿಗೆ ಭಕ್ತರನ್ನು ಹುರಿದುಂಬಿಸುತ್ತಾರೆ.

ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ<br /> ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

 ಕಾಳಿಗೆ ಕೃತಜ್ಞತೆ ಸಲ್ಲಿಸುವ ಬಗೆ

ಕಾಳಿಗೆ ಕೃತಜ್ಞತೆ ಸಲ್ಲಿಸುವ ಬಗೆ

PC: Sooraj R

ತಮ್ಮ ಸಮಸ್ಯೆಗಳನ್ನು ಪರಿಹರಿಸಿದ ಕಾಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುವ ಭಕ್ತರು ಈ ಆಚರಣೆಯನ್ನು ನಡೆಸುತ್ತಾರೆ. ಈ ಆಚರಣೆಯನ್ನು ಪುರುಷರು ಮಾತ್ರ ನಿರ್ವಹಿಸುತ್ತಾರೆ, ಅವರು ಪ್ರದರ್ಶನ ದಿನಕ್ಕೆ 41 ದಿನಗಳ ಮೊದಲು ಕಠಿಣವಾದ ಪಥ್ಯವನ್ನುಅನುಸರಿಸಬೇಕಾಗುತ್ತದೆ.

ಸಂಪೂರ್ಣವಾಗಿ ತಯಾರಾಗಿರಬೇಕು

ಸಂಪೂರ್ಣವಾಗಿ ತಯಾರಾಗಿರಬೇಕು

PC:Hareesh Haridas

ಮಾನಸಿಕವಾಗಿ, ದೈಹಿಕವಾಗಿ ತಯಾರಾಗಿರಬೇಕಾಗುತ್ತದೆ. ಮಾಂಸ, ಮಾದಕ ದ್ರವ್ಯಗಳು ಮತ್ತು ಲೈಂಗಿಕ ಚಟುವಟಿಕೆಗಳಿಂದ ದೂರವಿರಬೇಕಾಗುತ್ತದೆ. ಕೊಕ್ಕೆಗಳನ್ನು ತಮ್ಮ ಚರ್ಮಕ್ಕೆ ಸಿಕ್ಕಿಸುವವರೆಗೆ ಪ್ರತಿದಿನ ತಮ್ಮ ಮೈಗೆ ವಿಶೇಷ ಎಣ್ಣೆಯನ್ನು ಹಚ್ಚುತ್ತಲೇ ಇರಬೇಕು.

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಯಾವಾಗ ಆಚರಿಸುತ್ತಾರೆ

ಯಾವಾಗ ಆಚರಿಸುತ್ತಾರೆ

ಗರುಡ ತೂಕಂ ಧಾರ್ಮಿಕ ಕ್ರಿಯೆಯನ್ನು ರಾತ್ರಿಯಲ್ಲಿ ಸಾಮಾನ್ಯವಾಗಿ ಕಾಳಿ ದೇವಿಗೆ ಸಮರ್ಪಿತವಾದ ದೇವಸ್ಥಾನಗಳಲ್ಲಿ ನಡೆಸಲಾಗುತ್ತದೆ ಮತ್ತು ಇದನ್ನು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬೀಳುವ ಮೀನಾ ಭರಣಿ ಉತ್ಸವ ಅಥವಾ ಕುಂಭ ಭರಣಿ ಉತ್ಸವದ ಸಮಯದಲ್ಲಿ ಮಾಡಲಾಗುತ್ತದೆ.

 ನಿಗಧಿತ ದಿನಾಂಕದ ಬಗ್ಗೆ ವಿಚಾರಿಸಿ

ನಿಗಧಿತ ದಿನಾಂಕದ ಬಗ್ಗೆ ವಿಚಾರಿಸಿ

PC:Hareesh Haridas

ಇದೊಂದು ವಿಚಿತ್ರ ಹಾಗೂ ಭಯಾನಕ ಆಚರಣೆಯಾಗಿದ್ದರೂ ಜನರು ಭಕ್ತಿಯಿಂದ ಇದನ್ನು ನಿರ್ವಹಿಸುತ್ತಾರೆ. ಈ ಆಚರಣೆ ನೋಡಲು ಬಹಳ ಕುತೂಹಲಕಾರಿಯಾಗಿದೆ. ಕೇರಳಕ್ಕೆ ಈ ಆಚರಣೆಯನ್ನು ನೋಡಲು ಹೋಗುವ ಮೊದಲು ಕೇರಳದ ದೇವಸ್ಥಾನಗಳಲ್ಲಿ ಈ ಆಚರಣೆ ನಡೆಯುವ ದಿನಾಂಕದ ಬಗ್ಗೆ ವಿಚಾರಿಸಿ. ಆ ನಂತರವೇ ಬಸ್ ಟಿಕೇಟ್ ಬುಕ್ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X