Search
  • Follow NativePlanet
Share
» »6 ತಿಂಗಳು ಬಿಳಿ ಬಣ್ಣ, ಉಳಿದ 6 ತಿಂಗಳು ಕಪ್ಪು ಬಣ್ಣವಾಗಿ ಪರಿರ್ವತನೆಗೊಳ್ಳುವ ವಿಸ್ಮಯ ಗಣಪತಿ

6 ತಿಂಗಳು ಬಿಳಿ ಬಣ್ಣ, ಉಳಿದ 6 ತಿಂಗಳು ಕಪ್ಪು ಬಣ್ಣವಾಗಿ ಪರಿರ್ವತನೆಗೊಳ್ಳುವ ವಿಸ್ಮಯ ಗಣಪತಿ

ಇದೇನೂ ಗಣಪತಿ ಹಬ್ಬ ಇನ್ನೂ ದೂರ ಇದೆಯಲ್ಲಾ ಈಗಲೇ ಗಣೇಶ ಹಬ್ಬದ ಬಗ್ಗೆ ಇಷ್ಟೊಂದು ಮಾಹಿತಿ ನೀಡುತ್ತಿದ್ದಾರಲ್ಲ ಎಂದು ಅಂದುಕೊಳ್ಳಬೇಡಿ. ಇಲ್ಲೊಂದು ಗಣೇಶನ ಮೂರ್ತಿ ಇದೆ. ಆ ಮೂರ್ತಿಯು 6 ತಿಂಗಳು ಬಿಳಿಪಿನಿಂದ ಕೂಡಿದ್ದರೆ ಇನ್ನೂ 6 ತಿಂಗಳು ಗಣೇಶನ

ಗಣೇಶನ ಹಬ್ಬ ಬಂದರೆ ಸಾಕು ಹಾಡು, ಕುಣಿತ, ಗಣಪತಿಯ ಮೂರ್ತಿ ತರಲು ಹಣದ ವಸೂಲಿ, ಸುಂದರವಾದ ಸೀರೆಗಳನ್ನು ತುಟ್ಟ ಮಹಿಳೆಯರು, ಹುಡುಗಿಯರ ಮನ ಸೆಳೆಯಲು ಹುಡುಗರು ಮಾಡುವ ಹಲವಾರು ತಂತ್ರಗಳನ್ನು ಈ ಗಣೇಶನ ಹಬ್ಬದಲ್ಲಿ ಕಾಣಬಹುದಾಗಿದೆ. ಆ ಸಂಭ್ರಮ ಸಡಗರ ನೋಡಲು ಎರಡು ಕಣ್ಣು ಸಾಲದು. ಎಲ್ಲಾ ಹಬ್ಬಗಳಿಗಿಂತ ಗಣೇಶ ಚತುರ್ಥಿಯು ಎಲ್ಲಾ ವಯಸ್ಸಿನವರಿಗೂ ಅಚ್ಚು ಮೆಚ್ಚು.

ಯಾವ ಯಾವ ಏರಿಯಾದಲ್ಲಿ ಯಾವ ಯಾವ ಗಣೇಶವನ್ನು ತಂದಿದ್ದಾರೆ. ಎಷ್ಟೋ ಗ್ರಾಂಡ್ ಆಗಿ ಆಚರಿಸುತ್ತಿದ್ದಾರೆ ಎಂದು ನೋಡಲು ಹೋಗುವುದುಂಟು. ಒಂದೊಂದು ಏರಿಯಾದಲ್ಲಿ ಒಂದೊಂದು ರೀತಿಯ ವಿಭಿನ್ನವಾದ ಗಣೇಶನ ಮೂರ್ತಿಗಳು. ಬಾಹುಬಲಿಯ ಗಣಪತಿ, ಶಿವ ಪಾರ್ವತಿಯ ಮಧ್ಯೆಯಲ್ಲಿ ಕುಳಿತಿರುವ ಗಣಪತಿ, ಟಾಮ್ ಆಂಡ್ ಜೆರ್ರಿಯಲ್ಲಿನ ರೂಪದಲ್ಲಿರುವ ಗಣಪತಿ ಆಹಾ ನೋಡಲು ಅದ್ಭುತವಾಗಿರುತ್ತದೆ.

ಇದೇನೂ ಗಣಪತಿ ಹಬ್ಬ ಇನ್ನೂ ದೂರ ಇದೆಯಲ್ಲಾ ಈಗಲೇ ಗಣೇಶ ಹಬ್ಬದ ಬಗ್ಗೆ ಇಷ್ಟೊಂದು ಮಾಹಿತಿ ನೀಡುತ್ತಿದ್ದಾರಲ್ಲ ಎಂದು ಅಂದುಕೊಳ್ಳಬೇಡಿ. ಇಲ್ಲೊಂದು ಗಣೇಶನ ಮೂರ್ತಿ ಇದೆ. ಆ ಮೂರ್ತಿಯು 6 ತಿಂಗಳು ಬಿಳಿಪಿನಿಂದ ಕೂಡಿದ್ದರೆ ಇನ್ನೂ 6 ತಿಂಗಳು ಗಣೇಶನ ಬಣ್ಣವು ಕಪ್ಪು ರೀತಿಯಾಗಿ ಪರಿರ್ವತನೆಗೊಳ್ಳುತ್ತದೆಯಂತೆ.

ಗಣೇಶನು ಹೀಗೆ ಬಣ್ಣ ಬದಲಾಗಲು ಕಾರಣವಾದರು ಏನು ಎಂಬುದನ್ನು ಈ ಕುರಿತು ಲೇಖನ ಮೂಲಕ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ಆಶ್ಚರ್ಯಕರವಾದ ದೇವಾಲಯವು ತಮಿಳುನಾಡು ರಾಜ್ಯದ ಕೇಲಾರಪುರಂ ಸಮೀಪದ ಥಕಾಲದಲ್ಲಿನ ದೇವಾಲಯ ಒಂದರಲ್ಲಿ ಈ ವಿಸ್ಮಯವಾದ ಗಣೇಶನ ಮೂರ್ತಿಯನ್ನು ಕಾಣಬಹುದಾಗಿದೆ.

ಏನದು ವಿಸ್ಮಯ?

ಏನದು ವಿಸ್ಮಯ?

ಈ ಗಣೇಶನ ದೇವಾಲಯದಲ್ಲಿ ಗಣೇಶನ ವಿಗ್ರಹವು 6 ತಿಂಗಳು ಬಿಳುಪು ಬಣ್ಣ ಇದ್ದರೆ ಉಳಿದ 6 ತಿಂಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎಂತೆ.

"ಕಲರ್ ಫುಲ್"

ಈ ಗಣೇಶನ ದೇವಾಲಯದಲ್ಲಿರುವ ಗಣೇಶನ ವಿಗ್ರಹವನ್ನು "ಕಲರ್ ಫುಲ್" ಗಣೇಶ ಎಂದು ಸಹ ಕರೆಯುತ್ತಾರೆ.

ಬಾವಿ

ಬಾವಿ

ಈ ದೇವಾಲಯದಲ್ಲಿ ಒಂದು ಸುಂದರವಾದ ಬಾವಿ ಇದೆ. ಇಲ್ಲಿಗೆ ಬರುವ ಹಲವಾರು ಭಕ್ತರು ಗಣೇಶನ ದರ್ಶನದ ನಂತರ ಬಾವಿಯನ್ನು ಕೂಡ ಭಕ್ತಿಯಿಂದ ಆರಾಧಿಸುತ್ತಾರೆ.

ಸ್ಥಾಪಿಸಿದವರು ಯಾರು?

ಸ್ಥಾಪಿಸಿದವರು ಯಾರು?

ಈ ವಿಸ್ಮಯವಾದ ದೇವಾಲಯದ ಗಣಪತಿಯನ್ನು ನಿರ್ಮಿಸಿದವರು ತಿರುವಿತನಕರ ರಾಜ ವೀರಕ್ಕರ ವರ್ಮನು ಈ ದೇವಾಲಯವನ್ನು ನಿರ್ಮಿಸಿ ವಿಸ್ಮಯ ಗಣಪತಿಯನ್ನು ಸ್ಥಾಪಿಸಿದವರು.

ಎತ್ತರ

ಎತ್ತರ

ಇನ್ನೊಂದು ಆಶ್ಚರ್ಯಕರವಾದ ವಿಷಯವೆನೆಂದರೆ ದಿನೇ ದಿನೇ ಈ ವಿಸ್ಮಯ ಗಣೇಶ ಬೆಳೆಯುತ್ತಿದ್ದಾನೆ. ಈಗ ಗಣೇಶ ಅರ್ಧ ಅಡಿ ಎತ್ತರವಾಗಿದ್ದಾನೆ ಎಂದು ಸ್ಥಳೀಯರು ತಿಳಿಯುತ್ತಾರೆ.

ಬಣ್ಣ

ಬಣ್ಣ

ಈ ದೇವಾಲಯದಲ್ಲಿನ ವಿನಾಯಕ ಬಣ್ಣ ಬದಲಾಗುತ್ತ ಇರುತ್ತಾನೆ. ಇದು ದೇವರ ಪವಾಡವೊ ಅಥವಾ ಶಿಲ್ಪಿಗಳ ಕಲಾ ಚಾರ್ತುಯವು ತಿಳಿಯದು.

ಬಿಳಿ ಬಣ್ಣ

ಬಿಳಿ ಬಣ್ಣ

6 ತಿಂಗಳ ನಂತರ ಬಿಳಿ ಬಣ್ಣಕ್ಕೆ ತಿರುಗುವ ಈ ವಿಸ್ಮಯ ಗಣೇಶ. ಈ ವಿನಾಯಕನು ಮೊದಲ 6 ತಿಂಗಳು ಬಿಳಿಪು ಅಂದರೆ ಜನವರಿ ತಿಂಗಳಿನಿಂದ ಜೂನ್ ತಿಂಗಳವರೆಗೆ ಹಾಗೂ ಜುಲೈ ತಿಂಗಳಿನಿಂದ ಡಿಸೆಂಬರ್ ತಿಂಗಳ ವರೆಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ತಲೆ ಭಾಗದಿಂದ

ತಲೆ ಭಾಗದಿಂದ

ಗಣೇಶನ ಮೂರ್ತಿಯ ಬಣ್ಣ ಪರಿರ್ವತನೆಯಾಗುವುದು ಮೊದಲು ಶಿರದ ಭಾಗದಿಂದ ಪಾದದರೆಗೆ.

ವಿಜ್ಞಾನಿಗಳು

ವಿಜ್ಞಾನಿಗಳು

ವಿಜ್ಞಾನಿಗಳು ಈ ವಿಸ್ಮಯ ಮೂರ್ತಿಯನ್ನು ಕಂಡು ಏನೋ ರಹಸ್ಯ ಬಣ್ಣ ಬದಲಾಗುವ ಗಣೇಶನ ಮೂರ್ತಿಯಲ್ಲಿ ಅಡಗಿದೆ ಎಂದು ತಿಳಿಸಿದರು.

ಚಂದ್ರ ಕಾಂತ

ಚಂದ್ರ ಕಾಂತ

ಗಣೇಶನ ಮೂರ್ತಿಯು ಸಾಧಾರಣ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಲಿಲ್ಲ. ಬದಲಾಗಿ ಅತ್ಯಂತ ಅಪರೂಪದ ಚಂದ್ರಕಾಂತದಿಂದ ಮೂರ್ತಿಯಾಗಿದೆ ಯಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X