Search
  • Follow NativePlanet
Share
» »ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?

ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?

ಬಳ್ಳಾರಿಯಲ್ಲಿರುವ ಗಾಣಾಗಟ್ಟೆ ಮಾಯಮ್ಮಳ ಬಗ್ಗೆ ಕೇಳಿದ್ದೀರಾ? ಈಕೆಯನ್ನು ಕೊಲ್ಲಾಪುರದ ಮಹಾಲಕ್ಷ್ಮೀಯ ಪ್ರತಿರೂಪ ಈ ಮಾಯಮ್ಮ ಎನ್ನಲಾಗುತ್ತದೆ. ಇಲ್ಲಿ ಹರಕೆ ಹೊತ್ತರೆ ಬಯಕೆ ಈಡೆರುತ್ತದಂತೆ. ನೂರಾರು ಇತಿಹಾಸ ಇರುವ ಈ ದೇವಾಲಯ ಈಗ ಇಡೀ ಕರ್ನಾಟಕದಾದ್ಯಂತ ಪ್ರಸಿದ್ಧಿ ಹೊಂದಿದೆ. ಗಾಣಾಗಟ್ಟೆಯಲ್ಲಿ ದುಡ್ಡಿನ ಹರಕೆ ಕೊಟ್ರೆ ನಿಮ್ಮ ಬಯಕೆ ಈಡೇರುತ್ತದಂತೆ.

ಎಲ್ಲಿದೆ ಈ ದೇವಾಲಯ ?

ಎಲ್ಲಿದೆ ಈ ದೇವಾಲಯ ?

PC: Facebook

ಬಳ್ಳಾರಿ ಜಲ್ಲೆಯ ಕೂಡ್ಲಗಿಯ ಗಾಣಾಗಟ್ಟೆ ಗ್ರಾಮದಲ್ಲಿರುವ ಗಾಣಾಗಟ್ಟೆ ಮಾಯಮ್ಮ ದೇವಾಲಯವಿದೆ. ಇದು ಬಳ್ಳಾರಿಯಿಂದ ಸುಮಾರು 120 ಕಿ.ಮೀ ದೂರದಲ್ಲಿದೆ.

ಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿ

ಕಲ್ಲಿನಿಂದ ರೂಪ

ಕಲ್ಲಿನಿಂದ ರೂಪ

PC: Facebook

ಗಾಣಾಗಟ್ಟೆಯಲ್ಲಿ ಈ ದೇವಿಯು ಕೊಲ್ಲಾಪುರದ ಕೋಣದ ವ್ಯಾಪಾರಿಗಳ ಜೊತೆಗೆ ಬಂದಿದ್ದು ಎನ್ನಲಾಗುತ್ತದೆ. ಆದರೆ ನಿಕರವಾದ ಮಾಹಿತಿ ಮಾತ್ರ ಇಲ್ಲ. ಕಲ್ಲಿನಿಂದ ರೂಪ ಪಡೆದಳು ಮಾಯಮ್ಮ ಎನ್ನಲಾಗುತ್ತದೆ.

ನೋಟಿನ ಮಾಲೆ

ನೋಟಿನ ಮಾಲೆ

PC: Facebook

ದೇವಿಗೆ ನೋಟಿನ ಮಾಲೆ ಮಾಡಿ ಹಾಕುತ್ತಾರೆ. ಹೀಗೂ ಹರಕೆ ತೀರಿಸೋದು ಇಲ್ಲಿನ ವಿಶೇಷ, ದೇವಿಗೆ ಅಲಂಕಾರವೂ ದುಡ್ಡಿನಿಂದಲೇ ಮಾಡಲಾಗುತ್ತದೆ. ಹಾಗಾಗಿ ಈ ಮಾಯಮ್ಮನನ್ನು ದುಡ್ಡಿನ ಪ್ರಿಯೆ ಎನ್ನಲಾಗುತ್ತದೆ. ಈಕೆ ಲಕ್ಷಾಂತರ ಭಕ್ತರನ್ನು ಹೊಂದಿದ್ದಾಳೆ.

ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು<br /> ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ಚೀಟಿ ಪವಾಡ

ಚೀಟಿ ಪವಾಡ

PC: Facebook

ಇಲ್ಲಿ ಗ್ರಾಮಸ್ಥರು ಯಾವುದಾದರೂ ಒಂದು ಕೆಲಸ ಪ್ರಾರಂಭಿಸುವಾಗ ಭಕ್ತರು ಎರಡು ಚೀಟಿಯನ್ನು ತಂದು ದೇವರ ಮುಂದಿಡಬೇಕು. ಒಂದು ಚೀಟಿಯಲ್ಲಿ ಕೆಲಸ ಆಗುತ್ತೆ ಎಂದು ಇನ್ನೊಂದು ಚೀಟಿಯಲ್ಲಿ ಕೆಲಸ ಆಗೋದಿಲ್ಲ ಎಂದು ಬರೆದಿರುತ್ತದೆ. ದೇವರ ಪಲ್ಲಕ್ಕಿ ಯಾವ ಚೀಟಿಯ ಬಳಿ ಬರುತ್ತದೋ ಅದರಂತೆಯೇ ನಡೆಯುತ್ತದೆ.

ತುಲಾಭಾರ

ತುಲಾಭಾರ

PC: Facebook

ಸಂತಾನ ಪ್ರಾಪ್ತಿಗಾಗಿ ಜನರು ತುಲಾಭಾರದ ಹರಕೆ ಹೇಳುತ್ತಾರೆ. ಮಗು ಹುಟ್ಟಿದ ನಂತರ ಮಗುವಿನ ತುಲಾಭಾರ ಮಾಡಿಸುತ್ತಾರೆ. ಮಗುವಿನ ಭಾರದಷ್ಟು ತುಲಾಭಾರದಲ್ಲಿ ದುಡ್ಡನ್ನು ಹಾಕುತ್ತಾರೆ.

ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ಮಂತ್ರಿಸಿದ ನೀರು

ಮಂತ್ರಿಸಿದ ನೀರು

PC: Facebook

ಪ್ರತಿ ಅಮವಾಸ್ಯೆ ಹುಣ್ಣಿಮೆಯಂದು ರೋಗಪೀಡಿತರು ಇಲ್ಲಿ ಬಂದು ಇಲ್ಲಿ ಮಂತ್ರಿಸಿದ ನೀರನ್ನು ಮೈಮೇಲೆ ಸಿಂಪಡಿಸುತ್ತಾರೆ. ಹೀಗೆ ಮಾಡುವುದರಿಂದ ದೆವ್ವ, ಪಿಶಾಚಿಗಳು ಸೇರಿದಂತೆ ರೋಗ ನಿವಾರಣೆಯಾಗುತ್ತದೆ ಎನ್ನುವುದು ಜನರ ನಂಬಿಕೆ.

ಕೋಳಿ ಬಲಿ

ಕೋಳಿ ಬಲಿ

PC: Facebook

ಊರ ಹೊರಗೆ ಈ ರೋಗ ಪೀಡಿತ ವ್ಯಕ್ತಿಗೆ ಕೋಳಿ ಬಲಿ ನೀಡಲಾಗುತ್ತದೆ. ಕೋಳಿ ಬಲಿ ನೀಡುವುದರಿಂದ ಎಲ್ಲಾ ರೀತಿಯ ರೋಗ ನಿವಾರಣೆಯಾಗುತ್ತದೆ ಎನ್ನುತ್ತಾರೆ. ಹಾಗಾಗಿ ಬಹಳಷ್ಟು ಜನ ಕೋಳಿ ಬಲಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X