Search
  • Follow NativePlanet
Share
» »ಭೀಮೇಶ್ವರಿಯಲ್ಲಿರುವ ಗಾಳಿಬೋರ್‌ನಲ್ಲಿ ಆರಾಮವಾಗಿ ಕಾಲ ಕಳೆಯಿರಿ

ಭೀಮೇಶ್ವರಿಯಲ್ಲಿರುವ ಗಾಳಿಬೋರ್‌ನಲ್ಲಿ ಆರಾಮವಾಗಿ ಕಾಲ ಕಳೆಯಿರಿ

PC:Joshua Singh

ಬೆಂಗಳೂರಿನಿಂದ 110 ಕಿಮೀ ಹಾಗೂ ಸಂಗಮದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಗಾಳಿಬೋರ್, ತನ್ನ ಚಿತ್ರಸದೃಶ ದೃಶ್ಯಗಳಿಂದ ಕರ್ನಾಟಕದಲ್ಲಿರುವ ಜನಪ್ರಿಯ ರಮಣೀಯ ತಾಣಗಳಲ್ಲಿ ಒಂದಾಗಿದೆ. ಇದು ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಳವಾಗಿದ್ದು, ಕಾವೇರಿ ವನ್ಯಮೃಗ ಅಭಯಾರಣ್ಯದ ಎಲೆಯುದುರುವ ಕಾಡುಗಳ ಮಧ್ಯೆ ನೆಲೆಸಿರುವ, ಒಂದು ನಿರ್ಜನ ಪ್ರದೇಶವಾಗಿದೆ.

ಗಾಳಿಬೋರ್ ಬೆಟ್ಟದ ಹೆಸರು

ಗಾಳಿಬೋರ್ ಬೆಟ್ಟದ ಹೆಸರು

PC:Chesano

ಕಾವೇರಿಯ ತಟದಲ್ಲಿರುವ ಗಾಳಿಬೋರ್ ಒಂದು ಪ್ರಸಿದ್ಧ ಮೀನುಗಾರಿಕಾ ಮತ್ತು ಪ್ರಾಕೃತಿಕ ಶಿಬಿರವಾಗಿದ್ದು, ಸಮೃದ್ಧವಾಗಿ ಮರಗಳಿಂದ ಸುತ್ತುವರೆಯಲ್ಪಟ್ಟಿದೆ. ಈ ಶಿಬಿರದ ಹಿಂದಿರುವ ಗಾಳಿಬೋರ್ ಎಂಬ ಬೆಟ್ಟದ ಹೆಸರನ್ನೇ ಇಲ್ಲಿರುವ ಪ್ರದೇಶಕ್ಕೆ ಇಡಲಾಗಿದೆ. ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟ ಗಾಳಿಬೋರ್ ಶಿಬಿರವು ಸಸ್ಯರಾಶಿಯಿಂದಲೂ ಕಾವೇರಿಯ ಪ್ರಶಾಂತ ನೋಟದಿಂದಲೂ ಕೂಡಿದೆ.

ಮೀನಿಗೆ ಗಾಳ ಹಾಕಬಹುದು

ಮೀನಿಗೆ ಗಾಳ ಹಾಕಬಹುದು

PC:Chesano

ಭೀಮೇಶ್ವರಿಯಲ್ಲಿರುವ ಗಾಳಿಬೋರ್ ಪ್ರಾಕೃತಿಕ ಚೈತನ್ಯದಿಂದ ಕೂಡಿದ ಚಿತ್ರಸದೃಶ್ಯ ರಜಾ ತಾಣವಾಗಿದ್ದು, ಗಾಳ ಹಾಕಿ ಮೀನು ಹಿಡಿಯಲು ಪ್ರಸಿದ್ದವಾದ ತಾಣವಾಗಿದೆ. ಆದರೆ ಸಾಮಾನ್ಯವಾಗಿ ಇಲ್ಲಿಗೆ ವೃತ್ತಿಪರ ಮೀನುಗಾರರು ಹೆಚ್ಚಾಗಿ ಭೇಟಿ ನೀಡುವರು. ಗಾಳಿಬೋರ್ ನಲ್ಲಿ ಮೀನುಹಿಡಿಯುವ ಪ್ರವಾಸಿಗರು ಮೀನನ್ನು ಹಿಡಿದು ಮತ್ತೆ ಬಿಡುವ ಫಿಶಿಂಗ್ ನೀತಿಯನ್ನು ಅನುಸರಿಸುತ್ತಿದ್ದು, ಈ ವೇಳೆ ಕ್ಯಾಮರಾ ಚಿತ್ರೀಕ್ರಣವನ್ನೂ ಮಾಡಿಕೊಳ್ಳಬಹುದು. ಗಾಳಹಾಕಿ ಮೀನು ಹಿಡಿಯುವವರು ಕಾವೇರಿ ನದಿಯಲ್ಲಿ ಪ್ರಮುಖವಾಗಿ ಕಾಣಸಿಗುವ ಹಾಗೂ ಅಳಿವಿನಂಚಿನಲ್ಲಿರುವ ಮಶೇರ್ ಜಾತಿಯ ಮೀನನ್ನು ಹಿಡಿಯಲು ಬಯಸುತ್ತಾರೆ. ಮಶೇರ್ ಗಳಲ್ಲದೇ ಕಾರ್ಪ್, ಮಾರ್ಜಾಲ ಮೀನು ಮತ್ತು ಅನೇಕ ಸಣ್ಣಪುಟ್ಟ ಮೀನುಗಳನ್ನೂ ಹಿಡಿಯಲಾಗುತ್ತದೆ.

ಪಕ್ಷಿ ವೀಕ್ಷಣೆ

ಪಕ್ಷಿ ವೀಕ್ಷಣೆ

PC: Prosthetic Head

ಮೀನುಗಾರಿಕೆಯಷ್ಟೇ ಅಲ್ಲದೇ ಗಾಳಿಬೋರ್ ನಲ್ಲಿ ವನ್ಯಜೀವಿ ವೀಕ್ಷಣೆ ಹಾಗೂ ಪಕ್ಷಿ ವೀಕ್ಷಣೆಗೂ ಅವಕಾಶವಿದೆ. ಇಲ್ಲಿ ನೀರು ಕಾಗೆ, ಸ್ಪಾಟ್ ಕೊಕ್ಕಿನ ಬಾತುಕೋಳಿಗಳು, ಚಿಕ್ಕ ಪೈಡ್ ಮಿಂಚುಳ್ಳಿಗಳು, ಕಂದು ಹಳದಿಯ ಹದ್ದುಗಳು, ಪೈಡ್ ಜುಟ್ಟುಳ್ಳ ಕೋಗಿಲೆಗಳು, ಕಪ್ಪು ಉದರದ ನದಿ ಟೆರ್ನ್, ಆಸ್ಪ್ರೇಸ್, ಬೂದು ತಲೆಯ ಮೀನುಹಿಡಿಯುವ ಹದ್ದುಗಳು ಮತ್ತು ಜೇನು ಬುಝರ್ಡ್ಗಳನ್ನೊಳಗೊಂಡಂತೆ ಸುಮಾರು 220 ಪಕ್ಷಿ ಜಾತಿಗಳು ವಾಸವಾಗಿರುವವು ಎಂದು ಅಂದಾಜಿಸಲಾಗಿದೆ.

ಪ್ರಾಣಿ ವೀಕ್ಷಣೆ

ಪ್ರಾಣಿ ವೀಕ್ಷಣೆ

PC:Charles J Sharp

ಈ ಪ್ರದೇಶದಲ್ಲಿ ಕಾಣಸಿಗುವ ಪ್ರಾಣಿಗಳೆಂದರೆ, ಚುಕ್ಕೆ ಜಿಂಕೆ, ಆನೆ, ಚಿರತೆಗಳು, ಕಾಡು ಗಂಡು, ನರೆಗೂದಲಿನ ದೈತ್ಯ ಅಳಿಲುಗಳು, ಮಲಬಾರ್ ದೈತ್ಯ ಅಳಿಲುಗಳು, ನರಿಗಳು ಮತ್ತು ಸಾಂಬಾರ್ ಗಳು. ಇವೇ ಅಲ್ಲದೇ ಹಾವುಗಳಾದ ಹೆಬ್ಬಾವು, ಕೋಬ್ರಾಸ್, ರಸೆಲ್ ವೈಪರ್ ಮತ್ತು ಬ್ಯಾಂಡೆಡ್ ಕ್ರೈಟ್‌ಗಳು ಹಾಗೂ ಜವುಗು ಮೊಸಳೆಗಳು, ಆಮೆಗಳು, ಗೋಸುಂಬೆಗಳನ್ನು, ಮತ್ತು ಲೇಯ್ತ್ ನ ಮೃದು ಚಿಪ್ಪಿನ ಆಮೆಗಳು ಗಾಳಿಬೋರ್ ನಲ್ಲಿ ಕಂಡುಬರುತ್ತವೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Chesano

ಗಾಳಿಬೋರ್ ನಲ್ಲಿ ಜಲ ಕ್ರೀಡೆಗಳನ್ನು ಪ್ರಚೋದಿಸುವ ದೃಷ್ಟಿಯಿಂದ ಕಾವೇರಿ ನದಿಯಲ್ಲಿ ದೋಣಿ ಸವಾರಿಯನ್ನು ಆಯೋಜಿಸಲಾಗಿದೆ. ಅಲ್ಲದೇ ಪ್ರಯಾಣಿಕರಿಗೆ ಚಾರಣ ಅಯ್ಕೆಯೂ ಇದ್ದು ಕಾಡುಗಳ ಒಳಗೆ ಹೋದಂತೆಲ್ಲ ನೈಸರ್ಗಿಕ ಕಾಲ್ದಾರಿಗಳು ಚಾರಣಿಗರಿಗೆ ಮಾರ್ಗ ದರ್ಶನ ನೀಡುತ್ತವೆ. ಪಕ್ಷಿ ವೀಕ್ಷಕರು ಜೂನ್ ಹಾಗೂ ಆಗಸ್ಟ್‌ ತಿಂಗಳ ನಡುವಿನ ಕಾಲದಲ್ಲಿ ಗಾಳಿಬೋರ್ ಗೆ ಭೇಟಿ ನೀಡಬೇಕು. ಆ ಕಾಲದಲ್ಲಿ ವಿವಿಧ ಜಾತಿಯ ಭೂ ಹಾಗೂ ಜಲ ಆಧಾರಿತ ಪಕ್ಷಿಗಳು ಈ ಪ್ರದೇಶದಲ್ಲಿ ಕಿಕ್ಕಿರಿದು ತುಂಬಿರುತ್ತವೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಮಧ್ಯದ ವರೆಗೆ ಗಾಳದ ಮೀನುಗಾರಿಕೆಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ದಕ್ಷಿಣದ ವಿವಿಧ ಕಾರ್ಪೊರೇಟ್ ಮನೆಗಳು ಗಾಳಿಬೋರ್ ಗೆ ಆದ್ಯತೆ ನೀಡುತ್ತವೆ ಮತ್ತು ಅವರು ಇಲ್ಲಿ ತಮ್ಮ ಬಯಲು ಪ್ರದೇಶದ ಮತ್ತು ಹೊರಾಂಗಣ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Chesano

ಈ ಸ್ಥಳಕ್ಕೆ ಒಳ್ಳೆಯ ರಸ್ತೆ ವ್ಯವಸ್ಥೆ ಇದ್ದು ಬೆಂಗಳೂರಿನಿಂದ ಕನಕಪುರ-ಸಂಗಮ ರಸ್ತೆ ಮೂಲಕ ಕೇವಲ ಎರಡು ಗಂಟೆಗಳ ಪ್ರಯಾಣದಲ್ಲಿ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ ನಿಖರವಾಗಿ ನೂರು ಕಿಲೋಮೀಟರ್, ಕನಕಪುರದಲ್ಲಿ ಒಂದು ಸೈನ್‌ಬೋರ್ಡ್‌ ನೀವು ಎಡಕ್ಕೆ ಹಳ್ಳಿಯ ರಸ್ತೆಗೆ ತಿರುಗಲು ಮಾರ್ಗದರ್ಶನ ನೀಡುತ್ತದೆ, ಇದು ನಿಮ್ಮನ್ನು ಅರ್ಕಾವತಿ ಮತ್ತು ಕಾವೇರಿ ಎಂಬ ಎರಡು ನದಿಗಳ ಸಂಗಮ ಸಂಗಮಕ್ಕೆ ಕರೆದೊಯ್ಯುತ್ತದೆ.

ಇಲ್ಲಿಂದ, ಮತ್ತೊಂದು ಸೈನ್‌ಬೋರ್ಡ್‌ ಅನ್ನು ಅನುಸರಿಸುವಾಗ, ಶಿಬಿರಕ್ಕೆ, ಕೆಲವು ನಿರ್ಜನವಾದ, ಕಾಡು ಪ್ರದೇಶದ ಮೂಲಕ, ಒಂದು ಕಲ್ಲಿದ್ದಲು ಟ್ರ್ಯಾಕ್‌ನಲ್ಲಿ ಸುಮಾರು ಹತ್ತು ಕಿಲೋಮೀಟರ್‌ಗಳಷ್ಟು ಚಿಕ್ಕದಾದ ಡ್ರೈವ್ ಆಗಿದೆ. ಇದು ಸರಿಹೊಂದದ ರಸ್ತೆಯಾಗಿದ್ದರೂ, ಗಾಲಿಬೋರ್‌ಗೆ ಕಾರುಗಳು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more