» »ಭಾರತದಲ್ಲೂ ಇದೆಯಂತೆ ಹಾರುವ ಕಪ್ಪೆ, ಹಲ್ಲಿ.. ನೋಡಬೇಕಾದ್ರೆ ಎಲ್ಲಿಗೆ ಹೋಗಬೇಕು ಗೊತ್ತಾ?

ಭಾರತದಲ್ಲೂ ಇದೆಯಂತೆ ಹಾರುವ ಕಪ್ಪೆ, ಹಲ್ಲಿ.. ನೋಡಬೇಕಾದ್ರೆ ಎಲ್ಲಿಗೆ ಹೋಗಬೇಕು ಗೊತ್ತಾ?

Written By: Rajatha

ಪಕ್ಷಿಗಳು ಆಕಾಶದಲ್ಲಿ ಹಾರುತ್ತವೆ ಅನ್ನೋದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆದರೆ ಭಾರತದಲ್ಲಿ ಹಾರುವ ಪ್ರಾಣಿಗಳು ಇವೆ ಅನ್ನೋದು ಗೊತ್ತಾ? ಹಾರುವ ಪ್ರಾಣಿಗಳನ್ನು ಕೇವಲ ವಿದೇಶದಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ನೀವು ತಿಳಿದಿದ್ದರೆ ಅದು ನಿಮ್ಮ ತಪ್ಪು ತಿಳುವಳಿಕೆ. ಭಾರತದಲ್ಲೂ ಪ್ರಾಣಿಗಳ ವಿವಿಧ ಪ್ರಜಾತಿ ಕಾಣಸಿಗುತ್ತದೆ. ಅವುಗಳು ಹಾರುತ್ತವೆ. ಹಾಗಾದ್ರೆ ಅವು ಯಾವ್ಯಾವು ಅನ್ನೋದು ನಿಮಗೆ ಗೊತ್ತಾ?

ದೆವ್ವ ಬಿಡಿಸೋಕೆ ಇಲ್ಲೂ ಇದೆಯಂತೆ ದೇವಸ್ಥಾನ, ಇಲ್ಲಿಗೆ ಹೋಗ್ಲಿಕ್ಕೆ ಗುಂಡಿಗೆ ಗಟ್ಟಿ ಬೇಕು

 

ಹಾರುವ ಹಲ್ಲಿ

ಹಾರುವ ಹಲ್ಲಿ

Pc:Psumuseum

ಹಲ್ಲಿ ಅಂದ್ರೆನೇ ಬಹುತೇಕರಿಗೆ ಹೆದರಿಕೆ ಇನ್ನು ಹಾರುವ ಹಲ್ಲಿಯನ್ನು ನೋಡಿದ್ರೆ ಭಯ ಆಗದೆ ಇರುತ್ತಾ? ದಕ್ಷಿಣ ಭಾರತದ ಬೆಟ್ಟಗಳ ಕಾಡಿನಲ್ಲಿ ಈ ಹಾರುವ ಹಲ್ಲಿ ಕಾಣಸಿಗುತ್ತದೆ. ಈ ಹಲ್ಲಿ ಭೂಮಿಯಿಂದ ೩೦ಫೀಟ್ ಎತ್ತರಕ್ಕೆ ಹಾರಿ ೧೯೫ ಫೀಟ್ ದೂರ ಹಾರಬಲ್ಲದು.ಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನ

ಹಾರುವ ತೋಳ

ಹಾರುವ ತೋಳ

Pc:Ann Hudgins
ಇದು ಕೇಳಲು ಸ್ವಲ್ಪ ವಿಚಿತ್ರ ಅನಿಸಬಹುದು. ತೋಳ ಸಾಮಾನ್ಯವಾಗಿ ಭೂಮಿಯ ಮೇಲೆ ಓಡಾಡುವಂತಹ ಪ್ರಾಣಿ. ಆದ್ರೆ ಇದು ಹಾರುತ್ತಂತೆ. ಇದರ ಮುಖ, ಬಾಲ ಎಲ್ಲಾ ತೋಳವನ್ನೇ ಹೋಳುತ್ತದಂತೆ. ಇದು ಉಷ್ಣವಲಯದ ಅರಣ್ಯಗಳು ಹಾಗೂ ಜೌಗು ಪ್ರದೇಶದಲ್ಲಿ ಕಾಣಸಿಗುತ್ತದೆ.

ಹಾರುವ ಹಾವು

ಹಾರುವ ಹಾವು


ಈವರೆಗೂ ನೆಲದಲ್ಲಿ ತೆವಳುವ ಹಾವನ್ನು ಮಾತ್ರ ನೋಡಿರುವುವಿರಿ. ಆದರೆ ಹಾರುವ ಹಾವು ಕೂಡಾ ಇದೆ. ಇವು ಹಾವಿನ ಪ್ರಜಾತಿಯಾಗಿದೆ. ೩ರಿಂದ ೪ ಫೀಟ್ ಉದ್ದ ಇರುವ ಈ ಹಾವು ಒಂದು ಮರದಿಂದ ಇನ್ನೋಂದು ಮರಕ್ಕೆ ಹಾರಿಕೊಂಡು ಹೋಗುತ್ತದೆ. ಈ ಹಾವನನ್ನು ಗುಜರಾತ್‌ನಲ್ಲಿ ನೋಡಬಹುದು.

ಹಾರುವ ಅಳಿಲು

ಹಾರುವ ಅಳಿಲು

Pc:Angie spuc
ಅಳಿಲು ಮರ ಹತ್ತಿ ಓಡುವುದನ್ನು ನೋಡಿದ್ದೀರಿ ಆದ್ರೆ ಹಾರುವ ಅಳಿಲು ಕೂಡಾ ಇದೆಯಂತೆ ಭಾರತದಲ್ಲಿ. ಇಡೀ ವಿಶ್ವದಲ್ಲಿ ಅಳಿಲಿನ ೪೫ ಪ್ರಜಾತಿಗಳಿವೆ. ಅವುಗಳಲ್ಲಿ ೧೨ ಪ್ರಜಾತಿ ಭಾರತದಲ್ಲಿಯೇ ಇದೆ. ಈ ಹಾರುವ ಅಳಿಲು ಕೇಬಲ ರಾತ್ರಿ ಹೊತ್ತಿನಲ್ಲಿ ಮಾತ್ರ ಹೊರಬರುತ್ತದೆ. ಇದು ಉಳಿದ ಅಳಿಲಿಗಿಂತ ಸ್ವಲ್ಪ ದೊಡ್ಡದಾಗಿದೆ. ಈಶಾನ್ಯ ಭಾರತದಲ್ಲಿ ಈ ಪ್ರಜಾತಿಗಳು ಕಾಣಸಿಗುತ್ತವೆ.

ಹಾರುವ ಕಪ್ಪೆ

ಹಾರುವ ಕಪ್ಪೆ


ಮಳೆಗಾಲದಲ್ಲಿ ಟರ್...ಟರ್.. ಎಂದು ಸದ್ದು ಮಾಡುವುದನ್ನು ಬಿಟ್ಟು ಕಪ್ಪೆ ಹಾರೋದನ್ನು ಯಾವತ್ತಾದರೂ ನೋಡಿದ್ದೀರಾ? ಇದು ಭಾರತದಲ್ಲಿ ಸಿಗುವ ದುರ್ಲಬ ಪ್ರಜಾತಿಯಾಗಿದೆ.ಕಪ್ಪೆಗಳು ಉಪೋಷ್ಣವಲಯದ ಅಥವಾ ಉಷ್ಣವಲಯದ ತೇವಾಂಶದ ಕಡಿಮೆ ಅರಣ್ಯ, ಉಪ-ಉಷ್ಣವಲಯ ಅಥವಾ ಉಷ್ಣವಲಯದ ತೇವಾಂಶದ ಪರ್ವತಗಳು ಮತ್ತು ನದಿಗಳಲ್ಲಿ ಕಂಡುಬರುತ್ತವೆ.

Read more about: animals, india