Search
  • Follow NativePlanet
Share
» »ಇಲ್ಲಿಗೆಲ್ಲಾ ಹೋಗಬೇಕಾದ್ರೆ ವಿಮಾನದಲ್ಲೇ ಹೋಗೋದು ಬೆಸ್ಟ್

ಇಲ್ಲಿಗೆಲ್ಲಾ ಹೋಗಬೇಕಾದ್ರೆ ವಿಮಾನದಲ್ಲೇ ಹೋಗೋದು ಬೆಸ್ಟ್

By Mahadevaiah S P

ಪ್ರವಾಸ ಎಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ . ಅದರಲ್ಲೂ ವೈಮಾನಿಕ ಅಂದರೆ ವಿಮಾನದ ಮೂಲಕ ಆಕಾಶಕ್ಕೆ ಜಿಗಿದು ಹಾರಿ ತಮ್ಮ ನೆಚ್ಚಿನ ಪ್ರವಾಸಿ ಸ್ಥಳಗಳನ್ನು ತಲುಪುವುದು ಎಂದರೆ ಪ್ರತಿಯೊಬ್ಬರಿಗೂ ಮೈ ರೋಮಾಂಚನವಾಗುವುದು ಖಂಡಿತ. ವಿಮಾನದಲ್ಲಿ ಹಾರುವುದೇ ಒಂದು ವಿಶೇಷ. ಅದರಲ್ಲೂ ಪ್ರತಿದಿನ ಕಾರು ಬಸ್ಸು ಗಾಡಿಯಲ್ಲಿ ಓಡಾಡುವವರಿಗೆ ಒಮ್ಮೆಲೇ ವಿಮಾನದಲ್ಲಿ ಜಗತ್ತಿನ ಮೇಲೆ ಹತ್ತಿಯ ಉಂಡೆಯಂತಿರುವ ಮೋಡಗಳನ್ನು ಸೀಳಿಕೊಂಡು , ಸೂರ್ಯೋದಯ ಸೂರ್ಯಾಸ್ತವನ್ನು ನೋಡುತ್ತಾ ಪ್ರಕೃತಿಯನ್ನು ಆಸ್ವಾದಿಸುತ್ತಾ ಸಾಗುವುದು ನಿಜಕ್ಕೂ ಅದ್ಭುತವೇ ಸರಿ.

ವೈಮಾನಿಕ ಪ್ರವಾಸ

ಕೆಲವರು ದೂರದ ವೈಮಾನಿಕ ಪ್ರವಾಸವನ್ನು ಆಕಾಶದಲ್ಲಿ ನಿದ್ದೆ ಮಾಡುತ್ತಾ ಖುಷಿ ಪಟ್ಟರೆ ಇನ್ನೂ ಕೆಲವರಿಗೆ ವಿಮಾನದ ಕಿಟಕಿಯ ಮೂಲಕ ಅಕ್ಕ ಪಕ್ಕದ ಪುಟಾಣಿ ವಸ್ತುಗಳಂತಾಗಿರುವ ಭೂಮಿ ಮೇಲಿನ ಎಲ್ಲ ವಸ್ತುಗಳನ್ನು ಅತಿ ಎತ್ತರದಿಂದ ನೋಡಿದ ಅನುಭವ. ಒಟ್ಟಿನಲ್ಲಿ ನೀವು ನೋಡ ಬೇಕೆಂದುಕೊಂಡ ನಿಮ್ಮ ಕನಸಿನ ಪ್ರವಾಸಿ ಸ್ಥಳಕ್ಕೆ ಹಾರಿಕೊಂಡು ಹೋಗುವುದು ಒಂದು ಹೊಚ್ಚ ಹೊಸ ವಿಶೇಷ ಅನುಭವ. ಈಗ ನಾವು ಹೇಳಹೊರಟಿರುವ ಪ್ರವಾಸಿ ತಾಣಗಳು ವಿಮಾನದ ಮೂಲಕ ಯಾವುದೇ ಅಡೆ ತಡೆಗಳಿಲ್ಲದೆ ನೇರವಾಗಿ ಇಳಿಯುವಂತಹ ಮತ್ತು ಪ್ರವಾಸಿಗರಿಗೆಂದೇ ಮೀಸಲಾಗಿರುವ ಸ್ಥಳಗಳು.

ಜೈಸಲ್ಮೇರ್ , ರಾಜಸ್ತಾನ

ಜೈಸಲ್ಮೇರ್ , ರಾಜಸ್ತಾನ

PC: Adrian Sulc
ಜೈಸಲ್ಮೇರ್ , ಗೋಲ್ಡನ್ ಸಿಟಿ ಎಂದೇ ಪ್ರಖ್ಯಾತವಾಗಿರುವ ಈ ಪ್ರವಾಸಿ ತಾಣ ನಮ್ಮ ಭಾರತದ ಭೂಪ್ರದೇಶದ ಪಶ್ಚಿಮ ಭಾಗದಲ್ಲಿದೆ.ಈಗಂತೂ ನಮ್ಮ ಭಾರತ ಸರ್ಕಾರ ಇಲ್ಲಿನ ಪ್ರವಾಸಿ ವೈಶಿಷ್ಟ್ಯಗಳನ್ನು ಮನಗೊಂಡು ಪ್ರವಾಸಿಗರಿಗೆ ಅನುಕೂಲವಾಗಲೆಂದೇ ಇಲ್ಲಿ ಸದಾ ಕಾರ್ಯ ನಿರ್ವಹಿಸುವಂತಹ ಏರ್ಪೋರ್ಟ್ ನ್ನು ಸಹ ಪ್ರಾರಂಭಿಸಿದೆ . ಇಲ್ಲಿಗೆ ಬಂದಿಳಿಯುವ ಪ್ರವಾಸಿಗರಿಗೆ ಅನುಕೂಲವಾಗಲೆಂದೇ ವಾರದಲ್ಲಿ ಪ್ರತಿದಿನ ಅಥವಾ ವಾರಕ್ಕೆ ಕನಿಷ್ಠ 6 ದಿನವಾದರೂ ದೇಶದ ಪ್ರಮುಖ ನಗರಗಳಾದ ನವದೆಹಲಿ , ಮುಂಬೈ , ಅಹಮೆದಾಬಾದ್ , ಸೂರತ್ , ಜೋದ್ಪುರ ಮತ್ತು ಜೈಪುರ ಗಳಿಗೆ ವೈಮಾನಿಕ ಪ್ರಯಾಣದ ನೇರ ಸಂಪರ್ಕವನ್ನು ಏರ್ಪಡಿಸಿದ್ದಾರೆ. ಮೊದಲೇ ಹೇಳಿದಂತೆ ಜೈಸಲ್ಮೇರ್ ಪ್ರವಾಸಿಗರಿಗೆ ನೆಚ್ಚಿನ ಪ್ರವಾಸಿ ಚಟುವಟಿಕೆಗಳ ತಾಣವಾದರೆ ಪ್ರಯಾಣಿಕರಿಗೆ ತನ್ನದೇ ಆದ ವೈಶಿಷ್ಟ್ಯಗಳನ್ನು ಕೊಡಲಿದೆ. ನೋಡುಗರಿಗೆ ಖುಷಿಯನ್ನು ಕೊಡುವುದರ ಜೊತೆಗೆ ಸಾಹಸಿ ಮನೋಭಾವದ ಪ್ರವಾಸಿಗರಿಗೆ ಕ್ವಾಡ್ ಬೈಕಿಂಗ್, ಡ್ಯೂನ್ ಬಾಶಿಂಗ್ ಮತ್ತು ಪ್ಯಾರಾಸೈಲಿಂಗ್ ನಂತಹ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗದಂತಿದೆ. ರಾತ್ರಿ ಹೊತ್ತಿನಲ್ಲಿ ಈ ಗೋಲ್ಡನ್ ಡೆಸರ್ಟ್ ನ ಮರಳು ಹಾಸಿನಲ್ಲಿ ಎಲ್ಲರೊಟ್ಟುಗೂಡಿ ಕ್ಯಾಂಪ್ ಮಾಡುವುದರಲ್ಲಿ ಇರುವ ಮಜವೇ ಬೇರೆ.ಒಟ್ಟಿನಲ್ಲಿ ಜೈಸಲ್ಮೇರ್ ಪ್ರವಾಸಿಗರ ಸಂತಸವನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶಿಮ್ಲಾ , ಹಿಮಾಚಲ ಪ್ರದೇಶ

ಶಿಮ್ಲಾ , ಹಿಮಾಚಲ ಪ್ರದೇಶ

PC: Absharaslam
ಶಿಮ್ಲಾ , ಬ್ರಿಟಿಷರ ಕಾಲದಲ್ಲಿ "ಸಮ್ಮರ್ ಕ್ಯಾಪಿಟಲ್" ಎಂದೇ ಪ್ರಖ್ಯಾತವಾದ ಸ್ಥಳ. ಏಕೆಂದರೆ ಬೇಸಿಗೆಯಲ್ಲಿ ಬಿಸಿಲಿನ ತಾಪ ತಾಳಲಾರದೆ ಬ್ರಿಟಿಷರು ಶಿಮ್ಲಾ ವನ್ನು ರಾಜಧಾನಿಯಾಗಿ ಮಾಡಿಕೊಂಡು ತಮ್ಮ ಆಳ್ವಿಕೆಯನ್ನು ಮುಂದುವರೆಸುತ್ತಿದ್ದರು. ಅಷ್ಟು ಮನಸೋತಿದ್ದರು ಈ ಸ್ಥಳಕ್ಕೆ. ಶಿಮ್ಲಾ , ಭಾರತದ ಪ್ರಸಿದ್ಧ ಹಿಮಾಲಯ ಪರ್ವತಗಳಿಗೆ ಅಂಟಿಕೊಂಡಿರುವ ಸ್ಥಳ. ಎತ್ತ ತಿರುಗಿ ನೋಡಲು ಕಣ್ಣು ಹಾಯಿಸಿದರೂ ಐಸ್ ಗಡ್ಡೆಗಳದ್ದೇ ರಾಜ್ಯಭಾರ. ನೆಲ , ಜಲ , ಗಿಡ , ಮರ ಎಲ್ಲಾ ಶ್ವೇತಮಯ ಮತ್ತು ಇಲ್ಲಿನ ಅನಾದಿಕಾಲದ ಕಟ್ಟಡಗಳ ವಾಸ್ತುಶಿಲ್ಪ ಎಂತಹವರನ್ನೂ ಕೈಬೀಸಿ ತನ್ನತ್ತ ಕರೆಯುತ್ತದೆ. ನೈಸರ್ಗಿಕವಾಗಿ ನಮ್ಮ ಭಾರತಕ್ಕೆ ಒಂದು ವರದಾನವಾಗಿರುವ ಈ ಸ್ಥಳ ಹಲವಾರು ಚರ್ಚ್ ಗಳನ್ನೂ ದೇವಸ್ಥಾನಗಳನ್ನೂ ತನ್ನ ಮಡಿಲಿನಲ್ಲಿ ತಲೆಯೆತ್ತುವಂತೆ ಮಾಡಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ತನ್ನದಾಗಿಸಿಕೊಂಡಿರುವ ಶಿಮ್ಲಾ, ಪ್ರವಾಸಿಗರಿಗೆ ಒಮ್ಮೆ ಬಂದರೆ ಮತ್ತೊಮ್ಮೆ ಬರಬೇಕೆನ್ನುವಂತೆ ಮಾಡಿದೆ. ಆದ್ದರಿಂದಲೇ ನಮ್ಮ ಘನ ಭಾರತ ಸರ್ಕಾರ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗಬಾರದೆಂದು ಇಲ್ಲಿಯೂ ಸಹ ಏರ್ಪೋರ್ಟ್ ನಿರ್ಮಾಣ ಮಾಡಿದೆ. ನವದೆಹಲಿ ಯಿಂದ ಇಲ್ಲಿಗೆ ಸದಾ ನಿರಂತರವಾಗಿ ಏರೋಪ್ಲೇನ್ ಗಳ ಹಾರಾಟ ಇದ್ದೆ ಇರುತ್ತದೆ.

ಗ್ವಾಲಿಯೆರ್ ,ಮದ್ಯ ಪ್ರದೇಶ

ಗ್ವಾಲಿಯೆರ್ ,ಮದ್ಯ ಪ್ರದೇಶ

PC:Manuel Menal

ಗ್ವಾಲಿಯೆರ್ ತನ್ನ ನಯನಮನೋಹರ ಸುಂದರ ಕಣಿವೆಗಳಿಂದಲೇ ಪ್ರಖ್ಯಾತಿ ಪಡೆದಿರುವ ಪ್ರವಾಸಿ ತಾಣ. ಹಲವಾರು ಬಗೆಯ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೂ ನೆಲೆಯಾಗಿದೆ. ನಮ್ಮ ಭಾರತದ 6 ಪ್ರಮುಖ ಏರ್ಪೋರ್ಟ್ ಗಳಲ್ಲಿ ಗ್ವಾಲಿಯರ್ ಏರ್ಪೋರ್ಟ್ ಸಹ ಒಂದು . ಇಲ್ಲಿಂದಲೂ ಸಹ ಇತರ ಪ್ರಮುಖ ನಗರಗಳಿಗೆ ವಿಮಾನಗಳ ಸಂಪರ್ಕ ಇದ್ದು ಇಂಡೋರ್ , ಲಕ್ನೋ ಮತ್ತು ಬೆಂಗಳೂರಿಗೆ ನೇರ ಹಾರಾಟ ನಡೆಸುತ್ತವೆ.ಕಣಿವೆಯ ಸಿರಿ ಸಂಪತ್ತನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರು ಗ್ವಾಲಿಯರ್ ಅನ್ನು ಮಿಸ್ ಮಾಡುವ ಹಾಗೆ ಇಲ್ಲ .
ಸೇಲಂ , ತಮಿಳುನಾಡು

ಸೇಲಂ , ತಮಿಳುನಾಡು

PC:Arulmuru182002
ನಮ್ಮ ದೇಶದ ದಕ್ಷಿಣ ಭಾಗದಲ್ಲಿರುವ ಸದಾ ಕಾರ್ಯನಿರತವಾಗಿರುವ ಏರ್ಪೋರ್ಟ್ ಎಂದರೆ ಅದು ತಮಿಳುನಾಡಿನ ಸೇಲಂ ಏರ್ಪೋರ್ಟ್. ಈ ಏರ್ಪೋರ್ಟ್ ಅನ್ನು ಚೆನ್ನಾಗಿ ನಿರ್ವಹಣೆ ಮಾಡಿರುವುದರಿಂದ ಇಲ್ಲಿ ವಿಮಾನ ತರಬೇತಿ ಮತ್ತು ಪೈಲಟ್ ಗಳಿಗೆ ಹೆಚ್ಚಿನ ಆಧುನಿಕ ರೀತಿಯ ತರಬೇತಿ ಕೊಡಲಾಗುತ್ತದೆ.ಸೇಲಂ ನಗರ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಹಲವಾರು ಪ್ರಾಚೀನ ಸಂಸ್ಕೃತಿ ಹೊಂದಿರುವ ವಾಸ್ತುಶಿಲ್ಪ ಕಟ್ಟಡಗಳನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡಿದೆ. ಜೊತೆಗೆ ಮಿರ ಮಿರ ಮಿನುಗುವ ಜಲಪಾತ ಪಕ್ಕದಲ್ಲೇ ಇರುವ ದೇಗುಲಗಳು ಸೇಲಂ ನಗರದ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚು ಮಾಡಿವೆ.

ಮೈಸೂರು , ಕರ್ನಾಟಕ ರಾಜ್ಯ

ಮೈಸೂರು , ಕರ್ನಾಟಕ ರಾಜ್ಯ

PC:Abgpt
ಮೈಸೂರು ಏರ್ಪೋರ್ಟ್ ಈ ಹಿಂದೆ ಮಂದಕಲ್ಲಿ ಏರ್ಪೋರ್ಟ್ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದಿದೆ. ಇದನ್ನು ಆಗಿನ ಮೈಸೂರು ಸಂಸ್ಥಾನದವರು 1940 ರಲ್ಲಿ ತಮ್ಮ ಖಾಸಗಿ ವೈಮಾನಿಕ ಪ್ರಯಾಣಕ್ಕೆ ಅನುಕೂಲವಾಗಲೆಂದೇ ನಿರ್ಮಿಸಿದ್ದರು ಎನ್ನುವ ಮಾತಿದೆ. ಇಲ್ಲಿಂದ ಚೆನ್ನೈಗೆ ನೇರ ವಿಮಾನಗಳಿವೆ. ಪ್ರವಾಸಿಗರಿಗೆ ಈ ಸ್ಥಳ ಬಹಳ ಅನುಕೂಲಕರವಾಗಿದೆ. ಇಲ್ಲಿನ ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಮೈಸೂರು ಝೋವ್. ಹೀಗೆ ಇಲ್ಲಿ ನೋಡಲು ಅನೇಕ ಪ್ರವಾಸಿ ತಾಣಗಳಿವೆ. ಪ್ರವಾಸಿಗರಿಗೆ ಪ್ರಕೃತಿಯ ನೈಜ ಸೌಂದರ್ಯ ಸೊಬಗಿನ ರಸದೌತಣ ನೀಡುವ ಎಲ್ಲಾ ಗುಣಗಳೂ ಮೈಸೂರಿನಲ್ಲಿ ತುಂಬಿವೆ.ನಿಮ್ಮ ಕುಟುಂಬದವರ ಜೊತೆ ಒಮ್ಮೆ ಮೈಸೂರಿಗೆ ಭೇಟಿ ಕೊಟ್ಟು ನೋಡಿ ಮತ್ತು ಆ ಪ್ರವಾಸದ ಸವಿಯನ್ನು ಸವಿಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X