Search
  • Follow NativePlanet
Share
» »ಐದು ತಲೆಯ ಕಾಳಿಂಗನನ್ನು ಹೋಲುವ ಜಲಪಾತವನ್ನು ನೋಡಿದ್ದೀರಾ?

ಐದು ತಲೆಯ ಕಾಳಿಂಗನನ್ನು ಹೋಲುವ ಜಲಪಾತವನ್ನು ನೋಡಿದ್ದೀರಾ?

ನೀವು ಇಲ್ಲಿಯವರೆಗೆ ಸಾಕಷ್ಟು ಜಲಪಾತಗಳನ್ನು ನೋಡಿರುವಿರಿ. ಆದರೆ ಯಾವತ್ತಾದರೂ ಐದು ಜಲಪಾತವನ್ನು ಒಟ್ಟಿಗೆ ನೋಡಿದ್ದೀರಾ? ನಾವಿಂದು ಅಂತಹ ಜಲಪಾತದ ಬಗ್ಗೆ ತಿಳಿಸಲಿದ್ದೇವೆ. ಇದು ತಮಿಳುನಾಡಿನ ತೆಂಕಾಸಿಯಲ್ಲಿದೆ.

ತೆಂಕಾಸಿ

ತೆಂಕಾಸಿ

PC:Ruthran BalaGanesh

ತೆಂಕಾಸಿ ಇದು ಪಶ್ಚಿಮ ಘಟ್ಟಗಳು ಮೂರು ಕಡೆಗಳಲ್ಲಿ ತಿರುನೆಲ್ವೆಲಿ ಜಿಲ್ಲೆಯ ಎರಡನೇ ದೊಡ್ಡ ಪಟ್ಟಣವಾಗಿದೆ. ಚಿತ್ತಾರ್ ಎಂಬ ನದಿಯು ಪಟ್ಟಣದ ಮೂಲಕ ಹರಿಯುತ್ತದೆ. ದಕ್ಷಿಣ ತಮಿಳುನಾಡನ್ನು ದೀರ್ಘಕಾಲದಿಂದ ಆಳಿದ ಪಾಂಡನ್ ರಾಜರು ತೆಂಕಾಸಿ ಸ್ಥಾಪಿಸಿದರು. ತೆಂಕಾಸಿ ಎಂದರೆ ಕಾಶಿ ಆಫ್ ದಿ ಸೌತ್ ಎಂದರ್ಥ. ಅಂದರೆ ಪಟ್ಟಣದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನವನ್ನು ಉಲ್ಲೇಖಿಸುತ್ತದೆ. ಆದರೆಈ ದೇವಾಲಯವು ಮಿಂಚಿನಿಂದ ಛಿದ್ರವಾಯಿತು. 1990 ರ ದಶಕದಲ್ಲಿ ದೇವಾಲಯವು ಪುನಃಸ್ಥಾಪನೆಯಾಯಿತು ಮತ್ತು 2006 ರಲ್ಲಿ ಮತ್ತೆ ಹೊಸ ಬಣ್ಣವನ್ನು ನೀಡಲಾಯಿತು. ಇಲ್ಲಿ ಪ್ರಮುಖ ದೇವತೆ ಕಾಶಿ ವಿಶ್ವನಾಥರ್ ಅಂದರೆ ಶಿವ.

ಬೆಂಗಳೂರಿನಲ್ಲಿರುವ ಬಾಣಂತಿಮಾರಿ ಬೆಟ್ಟಕ್ಕೆ ಹೋಗಿದ್ದೀರಾ?

ಐದು ಜಲಪಾತ

ಐದು ಜಲಪಾತ

PC:Aronrusewelt

ಕುಟ್ರಾಲಂ ಮುಖ್ಯ ಜಲಪಾತದಿಂದ 4 ಕಿ.ಮೀ ದೂರದಲ್ಲಿ, ಕುಟ್ರಾಲಂ ಬಸ್ ನಿಲ್ದಾಣದಿಂದ 4 ಕಿ.ಮೀ ಮತ್ತು ತೆಂಕಾಸಿಗೆ 11 ಕಿ.ಮೀ ದೂರದಲ್ಲಿ, ಐದು ಜಲಪಾತ ಅಥವಾ ಐಂತರುವಿ ಎನ್ನುವುದು ಕುರ್ಟಾಲಮ್‌ನಲ್ಲಿರುವ ಮತ್ತೊಂದು ಪ್ರಮುಖ ಜಲಪಾತವಾಗಿದೆ. ಇದು ಅತ್ಯಂತ ಪ್ರಸಿದ್ಧ ಜಲಪಾತವಾಗಿದೆ .

ಕಾಳಿಂಗನನ್ನು ಹೋಲುವ ಜಲಪಾತ

ಕಾಳಿಂಗನನ್ನು ಹೋಲುವ ಜಲಪಾತ

ಇಲ್ಲಿ ನೀರು ಐದು ಭಾಗಗಳಲ್ಲಿ ವಿಭಜನೆಯಾಗಿ ಐದು ಫಾಲ್ಸ್ ಆಗಿ ಬೀಳುತ್ತದೆ. ಹಾಗಾಗಿ ಇದನ್ನು ಐದು ಜಲಪಾತ ಎಂದು ಕರೆಯುತ್ತಾರೆ. 5-ತಲೆಯ ಕಾಳಿಂಗವನ್ನು ಹೋಲುವ ಈ ಜಲಪಾತದ ನೀರು ಐದು ದಿಕ್ಕುಗಳಲ್ಲಿ ಹರಿಯುವುದು ವಿಶಿಷ್ಟವಾಗಿದೆ. ಸ್ಥಳೀಯರು ಇದನ್ನು ಆದಿಶೇಶನಿಗೆ ಹೋಲಿಸುತ್ತಾರೆ.

ಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇ

ಮಹಿಳೆಯರಿಗೆ, ಪುರುಷರಿಗೆ ಬೇರೆ ಬೇರೆ ಜಲಪಾತ

ಮಹಿಳೆಯರಿಗೆ, ಪುರುಷರಿಗೆ ಬೇರೆ ಬೇರೆ ಜಲಪಾತ

PC: PREVRAVANTH

ಈ ಐದು ಜಲಪಾತಗಳಲ್ಲಿ, ಮೂರು ಪುರುಷರಿಗೆ ಮತ್ತು ಎರಡು ಮಹಿಳೆಯರಿಗೆ ತೆರೆದಿರುತ್ತವೆ. ಈ ಜಲಪಾತದ ಸಮೀಪದಲ್ಲಿ ಒಂದು ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ವಿನಾಯಕನ ದೇವಾಲಯವಿದೆ. ಇಲ್ಲಿ ಸ್ನಾನ ಮಾಡುವುದು ತುಂಬಾ ಸುರಕ್ಷಿತ ಮತ್ತು ಆಹ್ಲಾದಿಸಬಹುದಾದ ಚಟುವಟಿಕೆಯಾಗಿದೆ. ಇಲ್ಲಿ ಇಕೋ ಪಾರ್ಕ್ ಮತ್ತು ದೋಣಿ ಮನೆ ಕೂಡ ಇದೆ.

100 ಮೀಟರ್ ನಡೆಯಬೇಕು

100 ಮೀಟರ್ ನಡೆಯಬೇಕು

PC: rajaraman sundaram

ಜಲಪಾತದ ಹತ್ತಿರ ರಸ್ತೆ ಇದೆ. ಇಲ್ಲಿ ವಾಹನಗಳು ಜಲಪಾತದ ಸಮೀಪದ ವರೆಗೆ ಹೋಗುವುದಿಲ್ಲ. ಜಲಪಾತವನ್ನು ತಲುಪಲು ಪಾರ್ಕಿಂಗ್ ಪ್ರದೇಶದಿಂದ ಸುಮಾರು 100 ಮೀಟರ್ ನಡೆದುಕೊಂಡು ಹೋಗಬೇಕು.

ಹುಬ್ಬಳ್ಳಿ ಸುತ್ತಮುತ್ತ ನೀವು ನೋಡಲೇ ಬೇಕಾದ ತಾಣಗಳು ಇವು

ಪಜತೋಟ್ಟ ಅರುವಿ ಜಲಪಾತ

ಪಜತೋಟ್ಟ ಅರುವಿ ಜಲಪಾತ

PC: Jeya2lakshmi

ಫಾರೆಸ್ಟ್ ಗಾರ್ಡನ್ ಜಲಪಾತ ಅಥವಾ ಪಜತೋಟ್ಟ ಅರುವಿ ಐದು ಜಲಪಾತದ ಮೇಲಿದೆ. ಈ ಸಣ್ಣ ಜಲಪಾತವು ಆಳವಾದ ಕಾಡಿನ ವ್ಯಾಪ್ತಿಯ ಮಧ್ಯೆ ಇದೆ. ಇದನ್ನು ವಿಐಪಿ ಫಾಲ್ಸ್ ಅಥವಾ ಆರ್ಚರ್ಡ್ ಫಾಲ್ಸ್ ಎಂದು ಕರೆಯಲಾಗುತ್ತದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಇಲ್ಲಿನ ನೀರಿನಲ್ಲಿ ಸ್ನಾನ ಮಾಡಲು ಅವಕಾಶ ನೀಡಲಾ

300 ಅಡಿ ಎತ್ತರ

300 ಅಡಿ ಎತ್ತರ

ಪಲರುವಿ ಅಥವಾ ಹೊಸ ಜಲಪಾತವು ಕೇರಳ ರಾಜ್ಯದ ಗಡಿ ಭಾಗದಲ್ಲಿ ಕುಟ್ರಾಲಂನಿಂದ 28 ಕಿಮೀ ದೂರದಲ್ಲಿದೆ. ಪಾಲರುವಿ ಎನ್ನುವುದು ಹಾಲಿನ ಪ್ರವಾಹ ಎಂದರ್ಥ. 300 ಅಡಿ ಎತ್ತರದಿಂದ ಬೀಳುವ ಕೇರಳದ ಅತ್ಯಂತ ಸುಂದರವಾದ ಜಲಪಾತ.

ಶಿವನಸಮುದ್ರಕ್ಕೆ ಒಂದು ದಿನದ ಪ್ರವಾಸ ಕೈಗೊಂಡು ನೋಡಿ

 ಶ್ರೀ ಕಾಶಿ ವಿಶ್ವನಾಥರ್ ದೇವಾಲಯ

ಶ್ರೀ ಕಾಶಿ ವಿಶ್ವನಾಥರ್ ದೇವಾಲಯ

PC:pandiaeee

ತೆಂಕಾಸಿ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿ, ಕುಟ್ರಾಲಂನಿಂದ 5 ಕಿ.ಮೀ ದೂರದಲ್ಲಿ ಮತ್ತು ತಿರುನೆಲ್ವೆಲಿಯಿಂದ 55 ಕಿ.ಮೀ ದೂರದಲ್ಲಿ, ಶ್ರೀ ಕಾಶಿ ವಿಶ್ವನಾಥರ್ ದೇವಾಲಯವು ತೆಂಕಾಸಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಪಾಂಡ್ಯ ರಾಜರು ನಿರ್ಮಿಸಿದ ಈ ದೇವಸ್ಥಾನದ ಬೃಹತ್ ಗೋಪುರವು ತಮಿಳುನಾಡಿನಲ್ಲಿ ಎರಡನೇ ಅತಿದೊಡ್ಡ ಗೋಪುರವಾಗಿದೆ. ಈ ದೇವಸ್ಥಾನವು ಉಲಗಮ್ಮನ್ ದೇವಾಲಯ ಎಂದೂ ಕರೆಯಲಾಗುತ್ತದೆ.

ಶ್ರೀ ಅಯ್ಕುಡಿ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ

ಶ್ರೀ ಅಯ್ಕುಡಿ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ

PC: Harivel17

ಅಯಿಕುಡಿ ಬಸ್ ಸ್ಟಾಪ್‌ನಿಂದ 7 ಕಿ.ಮೀ ದೂರದಲ್ಲಿ, ತೆನ್ಕಾಶಿಯಿಂದ 7 ಕಿ.ಮೀ ದೂರದಲ್ಲಿ, ಕುಟ್ರಾಲಂನಿಂದ 12 ಕಿ.ಮೀ ಮತ್ತು ತಿರುನೆಲ್ವೇಲಿಯಿಂದ 60 ಕಿ.ಮೀ ದೂರದಲ್ಲಿ, ಶ್ರೀ ಅಯ್ಕುಡಿ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಹನುಮಾನ್ ನದಿಯ ದಡದಲ್ಲಿ ಅಯಿಕುಡಿ ಗ್ರಾಮದಲ್ಲಿ ನೆಲೆಗೊಂಡಿದೆ. ಲಂಕಾಗೆ ಪ್ರಯಾಣಿಸುವಾಗ ಹನುಮಾನ್, ಈ ನದಿಯ ದಡದಲ್ಲಿ ನೆಲೆಸಿದ್ದಾನೆಂದು ನಂಬಲಾಗಿದೆ.

ಕುಟ್ರಾಲಂ ಜಲಪಾತ

ಕುಟ್ರಾಲಂ ಜಲಪಾತ

PC: Mdsuhail

ತೆಂಕಾಸಿಯಿಂದ 7 ಕಿ.ಮೀ ಹಾಗೂ ಮಧುರೈನಿಂದ 160 ಕಿ.ಮೀ ದೂರದಲ್ಲಿರುವ ಕುಟ್ರಾಲಂ, ಅಥವಾ ಕುತ್ರಾಲಂ ತಮಿಳುನಾಡಿನ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಕುಟ್ರಾಲಂ ಜಲಪಾತಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳಗಳಲ್ಲಿ ಮಳೆಗಾಲದಲ್ಲಿ ತಮಿಳುನಾಡು ಪ್ರವಾಸ ಕೈಗೊಳ್ಳುವುದು ಸೂಕ್ತ. ಕುಟ್ರಾಲಂ 'ಸ್ಪಾ ಆಫ್ ಸೌತ್' ಎಂದೇ ಪ್ರಸಿದ್ಧವಾಗಿದೆ.

ಚಿಕ್ಕಮಗಳೂರಿನಲ್ಲಿರುವ ಹಾರ್ಸ್ ಶೂ ವ್ಯೂಪಾಯಿಂಟ್ ನೋಡಿದ್ದೀರಾ?

ಶಿವಮತಂಗೈ ಫಾಲ್ಸ್

ಶಿವಮತಂಗೈ ಫಾಲ್ಸ್

ಮೈನ್ ಫಾಲ್ಸ್ನಿಂದ 8 ಕಿ.ಮೀ ದೂರದಲ್ಲಿ, ಕುಟ್ರಾಲಂ ಬಸ್ ನಿಲ್ದಾಣದಿಂದ 8 ಕಿ.ಮೀ ಮತ್ತು ತೆಂಕಾಸಿಗೆ 11 ಕಿ.ಮೀ ದೂರದಲ್ಲಿ, ಪಝಹಯಾ ಕೋರ್ಟ್ಲ್ಲರುವಿ ಅಥವಾ ಓಲ್ಡ್ ಕೋರ್ಟ್ಲ್ಯಾಮ್ ಇದೆ. ಇದನ್ನು ಶಿವಮತಂಗೈ ಫಾಲ್ಸ್ ಎಂದು ಕೂಡ ಕರೆಯುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ತೆಂಕಾಸಿಗೆ ಚೆನ್ನೈ, ಮಧುರೈ, ತಿರುನೆಲ್ವೇಲಿಯಿಂದ ಸೆಂಗೋಟ್ಟೈಗೆ ರೈಲು ಸಂಪರ್ಕವನ್ನು ಹೊಂದಿದೆ. ಇದು ಮಧುರೈ, ತಿರುನೆಲ್ವೇಲಿ, ಕೊಲ್ಲಂ, ಕನ್ಯಾಕುಮಾರಿ, ಮುಂತಾದ ಕಡೆಗಳಿಂದ ಉತ್ತಮ ಬಸ್ ಸಂಪರ್ಕವನ್ನೂ ಹೊಂದಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಪ್ರತಿವರ್ಷ ಜುಲೈ ನಿಂದ ಅಕ್ಟೋಬರ್ ವರೆಗೆ ಪ್ರವಾಸಿಗರು ಜಲಪಾತಗಳ ಋತುವನ್ನು ಆನಂದಿಸಬಹುದು. ಹಾಗಾಗಿ ಇದು ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಕಾಲವಾಗಿದೆ. ಪೊಂಗಲ್, ಗಣೇಶ ಚತುರ್ಥಿ, ತಮಿಳು ಹೊಸ ವರ್ಷ, ತೆಂಕಾಸಿಯಲ್ಲಿ ನಡೆಯುವ ಮಹಾ ಶಿವರಾತ್ರಿ ಪ್ರಸಿದ್ಧ ಉತ್ಸವಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more