Search
  • Follow NativePlanet
Share
» »ಕರ್ನಾಟಕದ ಮೋಡಿ ಮಾಡುವ ಕಾಡುಗಳು!

ಕರ್ನಾಟಕದ ಮೋಡಿ ಮಾಡುವ ಕಾಡುಗಳು!

By Vijay

ಕಾಡುಗಳು ಒಂದು ರೀತಿಯ ಕುತೂಹಲ ಮೂಡಿಸುವ, ಪ್ರಕೃತಿ ಸೌಂದರ್ಯದಿಂದ ತುಂಬಿರುವ ತಾಣಗಳು. ಹಿತಕರವಾದ ವಾತಾವರಣ, ಕಲ್ಮಶರಹಿತ ಪರಿಸರ, ವೈವಿಧ್ಯಮಯ ಜೀವರಾಶಿಗಳು, ಅಪರೂಪದ ವನಸ್ಪತಿಗಳು, ಜುಳು ಜುಳು ಹರಿಯುವ ನೀರಿನ ತೊರೆಗಳು, ದಟ್ಟ ಹಸಿರಿನ ಗಿಡ ಮರಗಳು ಕಾಡುಗಳ ಪ್ರಮುಖ ಗುಣಲಕ್ಷಣಗಳು.

ಕೇರಳದ ಗಮನಸೆಳೆವ ಕಾಡುಗಳು!

ನಗರ ಜೀವನದಿಂದ ಬಹು ದೂರವಿರುವ, ಪ್ರಶಾಂತಮಯ ವಾತಾವರಣ ಹೊಂದಿರುವ ಕಾಡುಗಳಲ್ಲಿ ಸಫಾರಿ ಮಾಡುವುದಾಗಲಿ, ವಿಹರಿಸುವುದಾಗಲಿ ಪ್ರವಾಸಿಗರಿಗೆ ಒಂದು ರೀತಿಯ ರೋಮಾಂಚನವನ್ನುಂಟು ಮಾಡಬಲ್ಲುದು. ಅದರಂತೆ ನಿಸರ್ಗಪ್ರೀಯರಿಗೆ, ಅಧ್ಯನಕಾರರಿಗೆ, ಛಾಯಾಗ್ರಾಹಕರಿಗೆ ಕಾಡುಗಳೆಂದರೆ ಎಲ್ಲಿಲ್ಲದ ಪ್ರೀತಿ.

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ಕರ್ನಾಟಕದಲ್ಲಿಯೂ ಸಹ ಕೆಲವು ಗುರುತರವಾದ ಕಾಡುಗಳಿದ್ದು ಸಾಹಸಮಯ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತವೆ. ಅಲ್ಲದೆ ಇಲ್ಲಿರುವ ನಿಸರ್ಗ ಸೌಂದರ್ಯ ಎಂಥವರನ್ನು ಮೂಕವಿಮಿತಗೊಳಿಸುತ್ತದೆ. ಪ್ರಸ್ತುತ ಲೇಖನದಲ್ಲಿ ಕರ್ನಾಟಕದಲ್ಲಿರುವ ಆಯ್ದ ಕೆಲವು ಅದ್ಭುತ ಕಾಡುಗಳ ಕುರಿತು ತಿಳಿಸಲಾಗಿದೆ.

ಸಕಲೇಶಪುರ

ಸಕಲೇಶಪುರ

ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ಈ ಅದ್ಭುತ ಕಾಡು ಸ್ಥಿತವಿದೆ. ಗಿಡ ಮರಗಳಿಂದ ತುಂಬಿ ತುಳುಕಿರುವ ಈ ಅದ್ಭುತ ಕಾಡು ಅತ್ಯಾಕರ್ಷಕವಾಗಿ ಕಂಡುಬರುತ್ತದೆ. ಚಾರಣದಂತಹ ಚಟುವಟಿಕೆಗಳನ್ನು ಇಲ್ಲಿ ಮಾಡಲಾಗುತ್ತದೆ. ಇದೊಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಹಾಗಾಗಿ ಮೊದಲೆ ಅನುಮತಿ ಪಡೆದು ಇಲ್ಲಿಗೆ ತೆರಳುವುದು ಸೂಕ್ತ.

ಚಿತ್ರಕೃಪೆ: Manu gangadhar

ಕುಮಾರಧಾರಾ

ಕುಮಾರಧಾರಾ

ಕುಮಾರಧಾರಾ ನದಿ ಹರಿಯುವ ಈ ಸುಂದರ ಕಾಡಿನಲ್ಲಿ ಬಹಳಷ್ಟು ಅಪರೂಪದ ಗಿಡ ಮೂಲಿಕೆಗಳಿವೆ. ಮಳೆಗಾಲದ ಸಮಯದಲ್ಲಂತೂ ಈ ಕಾಡು ಮದುವಣಗಿತ್ತಿಯಂತೆ ಎಲ್ಲೆಡೆ ಹಸಿರಿನಿಂದ ಸಿಂಗರಿಸಿಕೊಂಡಿರುತ್ತದೆ. ಅಲ್ಲಲ್ಲಿ ಜುಳು ಜುಳು ಎಂದು ಹರಿಯುವ ನೀರಿನ ತೊರೆಗಳು ಚಾರಣಿಗರನ್ನು ರೋಮಾಂಚನಗೊಳಿಸುತ್ತವೆ.

ಚಿತ್ರಕೃಪೆ: VivekMalleshappa

ಇತರೆ ಜೀವರಾಶಿ

ಇತರೆ ಜೀವರಾಶಿ

ಈ ಅದ್ಭುತ ಕಾಡು ಪ್ರದೇಶದಲ್ಲಿ ಯ್ಥೇಚ್ಚವಾಗಿ ಗಿಡ ಮರಗಳಿರುವುದನ್ನು ಕಾಣಬಹುದು. ಅಲ್ಲದೆ ಅಪರೂಪದ ಸಸ್ಯ ಹಾಗೂ ಕೀಟ ಸಮ್ಪತ್ತನ್ನು ಇಲ್ಲಿ ಕಾಣಬಹುದು. ಅತಿ ಚಿಕ್ಕ ಗಾತ್ರದ ವಿಶಿಷ್ಟ ಕಪ್ಪೆಯ ಪ್ರಬೇಧವೊಂದಕ್ಕೆ ಆಸರೆಯಾಗಿದೆ ಈ ಅದ್ಭುತ ಕಾಡು. ಅಲ್ಲದೆ ಇತರೆ ವಿಶಿಷ್ಟವಾದ ಜೀವರಾಶಿಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: VivekMalleshappa

ಅದ್ಭುತ ನೋಟ

ಅದ್ಭುತ ನೋಟ

ಬಿಸಿಲೆ ಕಾಡು ಪ್ರಮುಖವಾಗಿ ಇನ್ನೊಂದಕ್ಕೆ ಹೆಸರುವಾಸಿಯಾಗಿದೆ. ಅದೆ ಬಿಸಿಲೆ ಘಾಟಿ ಅಥವಾ ಬಿಸಿಲೆ ಘಾಟು. ಸಕಲೇಶಪುರದಿಂದ 25 ಕಿ.ಮೀ ದೂರದಲ್ಲಿರುವ ಬಿಸಿಲೆ ಗ್ರಾಮದಿಂದ ಈ ಘಾಟು ಪ್ರಾರಂಭವಾಗಿ ಬಹುತೇಕ ಕುಕ್ಕೆ ಸುಬ್ರಮಣ್ಯದವರೆಗೂ ಹರಡಿದೆ. ಇಲ್ಲಿ ವೀಕ್ಷಣಾ ಸ್ಥಳವಿದ್ದು ಅಲ್ಲಿಂದ ಬಿಸಿಲೆ ಘಾಟಿನ ಅತ್ಯಂತ ವಿಹಂಗಮವಾದ ನೋಟವನ್ನು ಸವಿಯಬಹುದಾಗಿದೆ.

ಚಿತ್ರಕೃಪೆ: Lakshmipathi23

ಬೆಂಗಳೂರು ಬಳಿ

ಬೆಂಗಳೂರು ಬಳಿ

ಇದು ದೊಡ್ಡ ಮಟ್ಟದ ಕಾಡೇನೂ ಅಲ್ಲ. ಆದರೆ ಮಹಾನಗರಕ್ಕೆ ಅಂದರೆ ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ಒಂದೆ ದಿನದಲ್ಲಿ ಬೈಕುಗಳಲ್ಲಿ ಭೇಟಿ ನೀಡಿ ಬರಬಹುದಾದ ಹಾಗೂ ವಾರಾಂತ್ಯದ ರಜೆಯನ್ನು ಕಳೆಯಲು ಪ್ರಶಸ್ತವಾದ ನಿಸರ್ಗದ ಗೂಡು.

ಚಿತ್ರಕೃಪೆ: Raghuraj Hegde

ಕನಕಪುರ ರಸ್ತೆ

ಕನಕಪುರ ರಸ್ತೆ

ಇದನ್ನು ಅನಧಿಕೃತವಾಗಿ ಕರಿಷ್ಮಾ ಬೆಟ್ಟ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಬೆಂಗಳೂರಿನ ಬನಶಂಕರಿ ಬಡಾವಣೆಯಿಂದ 13 ಕ್.ಮೀ ಗಳಷ್ಟು ದೂರದಲ್ಲಿ ಕನಕಪುರ ರಸ್ತೆಯಲ್ಲಿ ಸ್ಥಿತವಿರುವ ಚಿಕ್ಕ ಆದರೆ ಚೊಕ್ಕವಾಗಿರುವ ಕಾಡು ಇದಾಗಿದೆ.

ಚಿತ್ರಕೃಪೆ: Sagar Sakre

ತೀರ್ಥಹಳ್ಳಿ

ತೀರ್ಥಹಳ್ಳಿ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಪುಟ್ಟ ಊರು ಆಗುಂಬೆ. ಇದನ್ನು ದಕ್ಷಿಣದ ಚಿರಾಪುಂಜಿ ಎಂತಲೂ ಸಹ ಕರೆಯುತ್ತಾರೆ ಕಾರಣ ಇಲ್ಲಿ ಬೀಳುವ ಅತ್ಯಧಿಕ ಪ್ರಮಾಣದ ಮಳೆ. ಅಲ್ಲದೆ ಇದೊಂದು ಅದ್ಭುತವಾದ ಮಳೆಗಾಡು ಅಥವಾ ರೈನ್ ಫಾರೆಸ್ಟ್. ಅದರ ಸಂಶೋಧನಾ ಕೇಂದ್ರವೂ ಸಹ ಇಲ್ಲಿದೆ.

ಚಿತ್ರಕೃಪೆ: Shashidhara halady

ರಾಜಧಾನಿ

ರಾಜಧಾನಿ

ಇನ್ನೊಂದು ಮಹತ್ವದ ವಿಷಯವೆಂದರೆ ಈ ಕಾಡು ಕಳಿಂಗ ಸರ್ಪಗಳಿಗೆ ಅದ್ಭುತ ಆಶ್ರಯ ನೀಡಿರುವ ತಾಣವಾಗಿದೆ. ಹೆಸರುವಾಸಿ ಉರಗತಜ್ಞ ರೊಮುಲುಸ್ ವಿಟೆಕರ್ ಆಗುಂಬೆಯನ್ನು "ಕಾಳಿಂಗ ಸರ್ಪಗಳ ರಾಜಧಾನಿ" ಎಂದು ಕರೆದಿದ್ದಾರೆ.

ಚಿತ್ರಕೃಪೆ: tontantravel

ಅರಣ್ಯ ಸಂಪತ್ತು

ಅರಣ್ಯ ಸಂಪತ್ತು

ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಬೀಸುವ ಬಿರುಗಾಳಿಗೋ, ಜಡಿಮಳೆಗೋ ದಿನವೂ ಒಂದಲ್ಲ ಒಂದು ಭೂತಾಕಾರದ ಮರ ರಸ್ತೆಗೆ ಅಡ್ಡವಾಗಿ ಬಿದ್ದು ಸಂಚಾರವನ್ನು ತಡೆಯುಂಟಾಗುತ್ತದೆ. ಆ ಕಾರಣ ಇಲ್ಲಿ ತಿರುಗುವ ಬಸ್ಸು ಲಾರಿಗಳು ಸಾಮಾನ್ಯವಾಗಿ ಕೊಡಲಿ ಗರಗಸಗಳನ್ನು ಇಟ್ಟುಕೊಂಡಿರುತ್ತವೆ. ಕರ್ನಾಟಕದ ಅತ್ಯಂತ ದಟ್ಟವಾದ ಅರಣ್ಯ ಸಂಪತ್ತನ್ನು ಇಲ್ಲಿ ನೋಡಬಹುದು.

ಚಿತ್ರಕೃಪೆ: Karunakar Rayker

ನಿತ್ಯಹರಿದ್ವರ್ಣ

ನಿತ್ಯಹರಿದ್ವರ್ಣ

ಇಲ್ಲಿಯ ಪ್ರದೇಶವೆಲ್ಲ ಜಿಗಣಿ ಜಾತಿಯ ಇಂಬುಳ ಎಂಬ ರಕ್ತಹೀರುವ ಕೀಟಗಳಿಂದ ತುಂಬಿದೆ. ತಮ್ಮ ತಾರಸ್ವರದಿಂದ ಕಿವಿಯನ್ನು ಕೊರೆಯುವ ಮರಚಾರಟೆಗಳ ಸಂಗೀತ ಇಲ್ಲಿ ಸರ್ವಸಾಮಾನ್ಯ. ಸಹ್ಯಾದ್ರಿಶ್ರೇಣಿಗಳಿಂದ ಮೇಲಿಂದ ಕೆಳಕ್ಕೆ ಧುಮುಕುವ ಚಿಕ್ಕಚಿಕ್ಕ ಜಲಪಾತಗಳಿಗೆ ಇಲ್ಲಿ ಲೆಕ್ಕವಿಲ್ಲ. ಅರಣ್ಯದ ಸುಮನೋಹರ ಭಯಂಕರತೆಯನ್ನು ಇಲ್ಲಿ ಅನುಭವಿಸಬಹುದು.

ಚಿತ್ರಕೃಪೆ: Dinesh Valke

ಹುಲಿ ಮೀಸಲು ಪ್ರದೇಶ

ಹುಲಿ ಮೀಸಲು ಪ್ರದೇಶ

ಗೋವಾ ಗಡಿಗೆ ಹತ್ತಿರದಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಿತವಿರುವ ಅದ್ಭುತ ಕಾಡು ಪ್ರದೇಶ ಇದಾಗಿದೆ. ಅಣಶಿ ರಾಷ್ಟ್ರೀಯ ಉದ್ಯಾನ ಎಂತಲೂ ಕರೆಯಲ್ಪಡುವ ಇದು ಹುಲಿ ಮೀಸಲು ಪ್ರದೇಶದ ಭಾಗವಾಗಿದೆ. ಹಿಂದೆ ಇದು ದಾಂಡೇಲಿ ವನ್ಯಜೀವಿಧಾಮ ಎಂದು ಕರೆಯಲ್ಪಡುತ್ತಿತ್ತು.

ಚಿತ್ರಕೃಪೆ: Amoghavarsha

ಬಂಗಾಳ ಹುಲಿಗಳು

ಬಂಗಾಳ ಹುಲಿಗಳು

ನಂತರ ಇದರಲ್ಲಿನ ಇಂತಿಷ್ಟು ಭಾಗವನ್ನು ವಿಂಗಡಿಸಿ ಅದನ್ನು ಅಣಶಿ ರಾಷ್ಟ್ರೀಯ ಉದ್ಯಾನ ಎಂದು ಕರೆಯಲಾಯಿತು. ಈ ಒಟ್ಟಾರೆ ಪ್ರದೇಶದಲ್ಲಿ ಬಂಗಾಳ ಹುಲಿಗಳು, ಕರಿ ಚಿರತೆಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ಅಣಶಿ ಹಾಗೂ ದಾಂಡೇಲಿ ಅರಣ್ಯ ಭಾಗಗಳನ್ನು ಒಟ್ಟಾರೆಯಾಗಿ ಇಂದು ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ.

ಚಿತ್ರಕೃಪೆ: Balamurugan Natarajan

ಕಾಳಿ ನದಿ

ಕಾಳಿ ನದಿ

ಈ ಸುಂದರ ಕಾಡು ಪ್ರದೇಶವು ನೋಡಲು ಬಲು ನಯನಮನೋಹರವಾಗಿದೆ. ಶ್ರೀಮಂತ ಸಸ್ಯ ಸಂಪತ್ತು ಹಾಗೂ ಪ್ರಾಣಿ ಸಂಪತ್ತಿನಿಂದ ಕೂಡಿರುವ ಈ ಅದ್ಭುತ ಅರಣ್ಯ ಪ್ರದೇಶದಲ್ಲಿ ಕಾಳಿ ನದಿಯು ಹರಿದಿದ್ದು ಅಲ್ಲಲ್ಲಿ ಜಲಾಶಯಗಳನ್ನು ಈ ಪ್ರದೇಶದ ವ್ಯಾಪ್ತಿಯಲ್ಲಿ ನಿಮ್ರಿಸಲಾಗಿದೆ.

ಚಿತ್ರಕೃಪೆ: Alosh Bennett

ಚಟುವಟಿಕೆಗಳು

ಚಟುವಟಿಕೆಗಳು

ಇಂದು ದಾಂಡೇಲಿಯಂತಹ ಪ್ರದೇಶಗಳಲ್ಲಿ ಕೆಲವು ಪ್ರವಾಸಿ ಸಂಸ್ಥೆಗಳು ಹಲವಾರು ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸುತ್ತವೆ. ರಿವರ್ ರಾಫ್ಟಿಂಗ್ ನಂತಹ ಅದ್ಭುತ ರೋಮಾಂಚನಕಾರಿ ಚಟುವಟಿಕೆಗಳು ಇಂದು ಈ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತವೆ.

ಚಿತ್ರಕೃಪೆ: Ankur P

ಸಸ್ಯಸಂಪತ್ತು

ಸಸ್ಯಸಂಪತ್ತು

ಇನ್ನೊಂದು ವಿಷಯವೆಂದರೆ ಇಲ್ಲಿ ಕೆಲವು ಅಪರೂಪದ ಹಾಗೂ ವಿಶಿಷ್ಟ ಎಂದು ಪರಿಗಣಿಸಲಾಗಿರುವ, ಔಷಧೀಯ ಗುಣಗಳುಳ್ಳ ಗಿಡ ಮೂಲಿಕೆಗಳು ಕಂಡುಬರುತ್ತವೆ. ಹಾಗಾಗಿ ಪ್ರಾಕೃತಿಕವಾಗಿ ಸಾಕಷ್ಟು ಶ್ರೀಮಂತಿಕೆಯನ್ನು ಈ ಸುಂದರ ಕಾಡು ಪ್ರದೇಶ ಒಳಗೊಂಡಿದೆ.

ಚಿತ್ರಕೃಪೆ: L. Shyamal

ಪ್ರಶಾಂತಮಯ

ಪ್ರಶಾಂತಮಯ

ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪದ ಕಾವೇರಿ ನದಿ ತಟದಲ್ಲಿರುವ ಧಾರ್ಮಿಕ ಮಹತ್ವ ಪಡೆದಿರುವ ಮುತ್ತತ್ತಿ ತನ್ನ ಸುತ್ತಲೂ ದಟ್ಟ ಹಸಿರಿನಿ ಗಿಡ ಮರಗಳಿಂದ ಕೂಡಿರುವ ಪ್ರಶಾಂತಮಯ ಕಾಡಿನಿಂದ ಆವೃತವಾಗಿದೆ. ಈ ಕಾಡು ಕಾವೇರಿ ವನ್ಯಜೀವಿಧಾಮದ ಭಾಗವೂ ಆಗಿರುವುದು ವಿಶೇಷ.

ಚಿತ್ರಕೃಪೆ: Karthik Prabhu

ಮುತ್ತತ್ತಿಹನುಮ

ಮುತ್ತತ್ತಿಹನುಮ

ಹಿಂದೆ ತ್ರೇತಾಯುಗದಲ್ಲಿ ನಡೆದಿದ್ದ ರಾಮಾಯಣದ ಸೀತಾ ಹಾಗೂ ರಾಮನ ಪರಮ ಭಕ್ತ ಆಂಜನೇಯನೊಂದಿಗೆ ಈ ಮುತ್ತತ್ತಿ ನಂಟನ್ನು ಹೊಂದಿದೆ. ಆಂಜನೇಯನಿಗೆ ಮುಡಿಪಾದ ದೇವಾಲಯವೊಂದಿದ್ದು ಅಲ್ಲಿ ಪ್ರತಿಷ್ಠಾಪಿತನಾಗಿರುವ ಆಂಜನೇಯ ಮುತ್ತತ್ತಿ ಹನುಮನೆಂದೆ ಪ್ರಸಿದ್ಧಿ ಪಡೆದಿದ್ದಾನೆ.

ಚಿತ್ರಕೃಪೆ: Karthik Prabhu

ತಲುಪಲು ಸುಲಭ

ತಲುಪಲು ಸುಲಭ

ಇಲ್ಲಿನ ದಟ್ಟ ಕಾಡಿನ ಸುಂದರ ಪರಿಸರ ಸಾಕಷ್ಟು ಪ್ರಶಾಂತಮಯವಾಗಿದೆ. ಅಲ್ಲದೆ ಬೆಂಗಳೂರಿನಿಂದ ಈ ಅದ್ಭುತ ಕಾಡು ಪ್ರದೇಶವನ್ನು ತಲುಪುವುದು ಬಹಳ ಸುಲಭವಾಗಿರುವುದರಿಂದ ವಾರಾಂತ್ಯದ ರಜೆಗಳಲ್ಲಿ ಬೆಂಗಳೂರಿನಿಂದ ಭೇಟಿ ನೀಡುವ ಬಹಳಷ್ಟು ಪ್ರವಾಸಿಗರನ್ನು ಈ ಸ್ಥಳ ಪಡೆಯುತ್ತದೆ.

ಚಿತ್ರಕೃಪೆ: Karthik Prabhu

ಕೊಡಗು

ಕೊಡಗು

ಕೊಡಗು ಜಿಲ್ಲೆಯ ಪಶ್ಚಿಮಘಟ್ಟಗಳಲ್ಲಿ ಹರಡಿರುವ ಮನಮೋಹಕ ಅರಣ್ಯ ಪ್ರದೇಶ ಇದಾಗಿದೆ. ಇದನ್ನು ಸೆಪ್ಟಂಬರ್ 1, 1987 ರಂದು ವನ್ಯಜೀವಿಧಾಮವನ್ನಾಗಿ ಘೋಷಿಸಲಾಗಿದೆ. ನಿತ್ಯಹರಿದ್ವರ್ಣದ ನಯನ ಮನೋಹರ ಕಾಡುಗಳಿಂದ ಸುತ್ತುವರೆದಿರುವ ಈ ಕಾಡು ಪ್ರದೇಶ ಅದ್ಭುತ ಎನ್ನಬಹುದಾದ ಅರಣ್ಯ ಸಂಪತ್ತನ್ನು ಹೊಂದಿದೆ.

ಚಿತ್ರಕೃಪೆ: Chidambara

ವೈವಿಧ್ಯಮಯ

ವೈವಿಧ್ಯಮಯ

ಸಾಮಾನ್ಯವಾಗಿ ಪಶ್ಚಿಮಘಟ್ಟಗಳು ಭೌತಿಕವಾಗಿ ವಿಶಿಷ್ಟ ಪ್ರದೇಶವಾಗಿದ್ದು ಹಲವಾರು ವೈವಿಧ್ಯಮಯ ಹಾಗೂ ಅಪರೂಪದ ಜಲರಾಶಿ, ಸಸ್ಯರಾಶಿ ಹಾಗೂ ಜೀವರಾಶಿಗಳಿಂದ ಸಂಪದ್ಭರಿತವಾಗಿದೆ. ಆ ಕಾರಣವಾಗಿ ಇಲ್ಲಿಯೂ ಸಹ ಅಗಾಧ ಜೀವ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಭಾರತೀಯ ಆನೆಗಳು, ಬಂಗಾಳ ಹುಲಿ, ಅಪರೂಪದ ಕೀಟಗಳು, ಸರಿಸೃಪಗಳು, ಜಲಜೀವಿಗಳು ಈ ಸುಂದರ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Shyamal

ಹೋಂಸ್ಟೇ

ಹೋಂಸ್ಟೇ

ಗೌಡಹಳ್ಳಿ ಒಂದು ಆಕರ್ಷಕ ಪ್ರದೇಶವಾಗಿದ್ದು ಅದ್ಭುತವಾದ ಅರಣ್ಯ ಸಮ್ಪತ್ತಿನಿಂದ ಕೂಡಿರುವ ಪ್ರವಾಸಿ ತಾಣವಾಗಿದೆ. ಇಲ್ಲಿ ಇರಲೂ ಹೋಂಸ್ಟೇ ಸಹ ಇರುವುದು ವಿಶೇಷ. ಇಲ್ಲಿಂದ ಕಾಡಿನ ಅತ್ಯದ್ಭುತ ಪ್ರಾಕೃತಿಕ ಸೊಬಗನ್ನು ಸುಂದರವಾಗಿ ಅನುಭವಿಸಬಹುದು. ಇದು ಚಿಕ್ಕಮಗಳೂರಿನಲ್ಲಿದ್ದು ಚಿಕ್ಕಮಗಳೂರು ರೈಲು ನಿಲ್ದಾಣದಿಂದ 31 ಕಿ.ಮೀ ಹಾಗೂ ಬಸ್ಸು ನಿಲ್ದಾಣದಿಂದ ಸುಮಾರು 29 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Arul Raj C

ಜೋಡಿಗೆರೆ

ಜೋಡಿಗೆರೆ

ತಮಿಳುನಾಡು ಗಡಿಗೆ ಹತ್ತಿರವಾಗಿರುವ ಚಾಮರಾಜನಗರ ಜಿಲ್ಲೆಯಲಿರುವ ಬಿಳಿಗಿರಿರಂಗನ ಬೆಟ್ಟದ ಬುಡದಲ್ಲಿ ಕಂಡುಬರುವ ಜೋಡಿಗೆರೆ ಕಾಡು ಪ್ರದೇಶವು ಸಾಕಷ್ತೂ ಅದ್ಭುತವಾದ ಪ್ರದೇಶವಾಗಿದೆ. ಇದೊಂದು ಉತ್ತಮ ಚಾರಣ ಮಾರ್ಗವೂ ಸಹ ಆಗಿದ್ದು ಇಲ್ಲಿನ ಕಾಡು ಸೌಂದರ್ಯ ಕಣ್ಣಿಗೆ ಕಟ್ಟುವಂತಿದೆ.

ಚಿತ್ರಕೃಪೆ: L. Shyamal

ರಾಷ್ಟ್ರೀಯ ಉದ್ಯಾನ

ರಾಷ್ಟ್ರೀಯ ಉದ್ಯಾನ

ರಾಷ್ಟ್ರೀಯ ಉದ್ಯಾನದ ಸ್ಥಾನಮಾನ ಹೊಂದಿರುವ ಅದ್ಭುತ ಕಾಡು ಪ್ರದೇಶ ಇದಾಗಿದೆ. ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಅದ್ಭುತ ಅರಣ್ಯ ಸಂಪತ್ತು ಆಕರ್ಷಕ ಪ್ರವಾಸಿ ತಾಣವೂ ಹೌದು. ಶ್ರೀಮಂತ ಪ್ರಾಣಿ ಸಂಕುಲ, ಸಸ್ಯ ಸಂಕುಲದಿಂದ ತುಂಬಿರುವ ಈ ಕಾಡು ಪ್ರದೇಶ ಅದ್ಭುತ ನಿಸರ್ಗ ಸೌಂದರ್ಯವನ್ನು ಹೊಂದಿದೆ. ಒಮ್ಮೆಯಾದರೂ ಬ್ಭೇಟಿ ಮಾಡಲೇಬೇಕಾದ ಕಾಡು ಪ್ರದೇಶ ಇದಾಗಿದೆ.

ಚಿತ್ರಕೃಪೆ: Abhinavsharmamr

ಚಾಮರಾಜನಗರ

ಚಾಮರಾಜನಗರ

ಚಾಮರಾಜನಗರದಲ್ಲಿರುವ ಇನ್ನೊಂದು ಕರ್ನಾಟಕದ ಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ ಇದಾಗಿದೆ. ಮೈಸೂರಿನಿಮ್ದ 80 ಕಿ.ಮೀ ದೂರದಲ್ಲಿರುವ ಈ ಕಾಡು ಪ್ರದೇಶ ಸಾಕಷ್ಟು ಆಕರ್ಷಕವಾಗಿದ್ದು ಅನೇಕ ಬಗೆ ಬಗೆಯ ಪ್ರಾಣಿ -ಪಕ್ಷಿಗಳ ಸಂತತಿಯನ್ನು ಇಲ್ಲಿ ಕಾಣಬಹುದಾಗಿದೆ. ಜಂಗಲ್ ಸಫಾರಿಯಂತಹ ಚಟುವಟಿಕೆಗಳು ಇಲ್ಲಿ ನಡೆಯುತ್ತದೆ.

ಚಿತ್ರಕೃಪೆ: Yathin S Krishnappa

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more