Search
  • Follow NativePlanet
Share
» »ಭಾರತದಲ್ಲಿನ ಫ್ಯಾಶನ್‌ ಸಿಟಿಗಳಿವು, ಇಲ್ಲಿ ಇರುವವರೂ ಫ್ಯಾಶನ್‌, ಲೈಫ್‌ ಸ್ಟೈಲೂ ಫ್ಯಾಶನ್

ಭಾರತದಲ್ಲಿನ ಫ್ಯಾಶನ್‌ ಸಿಟಿಗಳಿವು, ಇಲ್ಲಿ ಇರುವವರೂ ಫ್ಯಾಶನ್‌, ಲೈಫ್‌ ಸ್ಟೈಲೂ ಫ್ಯಾಶನ್

By Manjula Balaraj Tantry

ಭಾರತವು ತನ್ನದೇ ಆದ ನ್ಯೂಯಾರ್ಕ್, ಪ್ಯಾರಿಸ್ ಮತ್ತು ಮಿಲಾನ್ ಗಳನ್ನು ತನ್ನಲ್ಲಿ ವಿವಿಧ ರಾಜ್ಯಗಳಲ್ಲಿ ಹೊಂದಿದೆ. ಹೌದು, ನೀವು ಊಹಿಸಿದ್ದು ಸರಿ. ನಾವು ಈಗ ಭಾರತದ ಅತ್ಯಂತ ಫ್ಯಾಶನ್ ನಗರಗಳ ಬಗ್ಗೆ ತಿಳಿಸುತ್ತಿದ್ದೇವೆ. ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ವೈವಿಧ್ಯತೆಗಳನ್ನು ಒಳಗೊಂಡಿರುವ ದೇಶವಾಗಿದೆ. ಇಲ್ಲಿಯ ಸಂಸ್ಕೃತಿಯು ತನ್ನದೇ ಆದ ಉಡುಪುಗಳನ್ನೂ ಹೊಂದಿದೆ. ಕೇರಳದ ಬಿಳಿ ಮತ್ತು ಬಂಗಾರದ ಬಣ್ಣದ ಸೀರೆಗಳಿಂದ ಹಿಡಿದು ರಾಜಸ್ಥಾನದ ಬಂಧೇಜ್ ಪ್ರಿಂಟ್ ಗಳವರೆಗೆ ಭಾರತವು ತನ್ನಲ್ಲಿ ಯಾವಾಗಲೂ ಹೊಳೆಯುವಂತಹ ಮತ್ತು ಯಾವಾಗಲೂ ವರ್ಣರಂಜಿತ ಫ್ಯಾಶನ್ ಅನ್ನು ಹೊಂದಿರುತ್ತದೆ.

ಶ್ರೀಮಂತ ಸಾಂಪ್ರದಾಯಿಕ ಬೇರುಗಳು ಫ್ಯಾಶನ್ ಅನ್ನು ಆವರಿಸಿಕೊಂಡಿದ್ದರೂ ಕೂಡಾ ನಾವು ಇದು ಫ್ಯಾಶನ್ ನ ಮುಖ್ಯವಾಹಿನಿಯ ಬಗ್ಗೆ ತಿಳಿಯಲು ಹೊರಟಿದ್ದೇವೆ. ಕಳೆದ 5 ವರ್ಷಗಳಿಂದ ಈ ಕೆಳಗಿನ ಪಟ್ಟಿ ಮಾಡಿರುವ ರಾಜ್ಯಗಳು ಫ್ಯಾಶನ್ ಉಡುಗೆಗಳನ್ನು ತೊಡುವುದರಲ್ಲಿ ಗಮನಾರ್ಹ ವಾಗಿ ಬೆಳೆದಿದೆ.

ಶಿಲ್ಲಾಂಗ್ ಮತ್ತು ಇಂಫಾಲ್

ಶಿಲ್ಲಾಂಗ್ ಮತ್ತು ಇಂಫಾಲ್

ಫ್ಯಾಶನ್ ಪಟ್ಟಿಯಲ್ಲಿ ಎರಡು ಈಶಾನ್ಯ ಸಹೋದರಿಯರು ಸ್ಥಾನ ಪಡೆದಿದ್ದಾರೆ. ಹೌದು ! ಮೊದಲ ಸ್ಥಾನದಲ್ಲಿ ನವದೆಹಲಿ ಅಥವಾ ಮುಂಬೈ ಅಲ್ಲ ಬದಲಿಗೆ ಈ ಈಶಾನ್ಯ ನಗರಗಳು ಮೊದಲ ಸ್ಥಾನದಲ್ಲಿದೆ. ನವ ದೆಹಲಿ ಮತ್ತು ಮುಂಬೈ ನಲ್ಲಿ ಫ್ಯಾಶನ್ ಮರೆಯಾಗಿ ತಮ್ಮ ಶೈಲಿಯನ್ನು ಕಳೆದುಕೊಂಡಿವೆ. ಆದರೆ ಈಶಾನ್ಯದಲ್ಲಿ ಇಂದಿಗೂ ಹಾಗೆಯೇ ಉಳಿದಿದೆ. ಕ್ರೀಡಾ ಉಡುಪುಗಳಿಂದ ಹಿಡಿದು ಉತ್ತಮ ಬೀದಿ ಫ್ಯಾಶನ್ ನ ಬಿಡಿ ಭಾಗಗಳವರೆಗೆ ಈ ಎರಡು ನಗರದ ಜನರು ಉತ್ತಮ ರೀತಿಯ ಆವಿಷ್ಕಾರ ನಡೆಸಿ ಅವುಗಳ ಮೇಲೆ ತಮ್ಮ ಕೆಲಸವನ್ನು ಉತ್ತಮವಾಗಿ ಮಾಡುತ್ತಾರೆ.

ಫ್ಯಾಶನ್ ವಾರ್ಡ್ ರೋಬ್

ಫ್ಯಾಶನ್ ವಾರ್ಡ್ ರೋಬ್

ಈ ಎರಡು ನಗರಗಳಿಂದ ಖಂಡಿತವಾಗಿಯೂ ಫ್ಯಾಶನ್ ನ ಬಗ್ಗೆ ನಾವು ಪಾಠ ಕಲಿಯಬಹುದಾಗಿದೆ. ಇಲ್ಲಿ ಫ್ಯಾಶನ್ ಗಾಗಿ ಉಪಯೋಗಿಸುವ ಮೂಲ ಅಂಶವೆಂದರೆ ಅವರು ತಮ್ಮ ಮೂಲಭೂತ ಅಂಶಗಳನ್ನೇ ಬಳಸುತ್ತಿರುವುದು. ಇಲ್ಲಿಯ ಜನರು ಕೆಲವು ಮೂಲಭೂತ ಅಂಶಗಳನ್ನು ಮುಖ್ಯವಾಗಿ ಬಳಸುತ್ತಾರೆ ಮತ್ತು ತಮ್ಮ ವಾರ್ಡ್ ರೋಬ್ ನಲ್ಲಿ ಈ ಎಲ್ಲಾ ಅಂಶಗಳನ್ನು ಒಟ್ಟಿಗೆ ಸೇರಿಸಿ ಕೆಲಸ ಮಾಡುತ್ತಾರೆ ಇದು ಅವರಿಗೆ ಅವರು ಹೆಚ್ಚು ಮೌಲ್ಯವನ್ನು ಮತ್ತು ಬಯಸಿದ್ದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಖಂಡಿತವಾಗಿಯೂ ನವದೆಹಲಿ ಮತ್ತು ಮುಂಬೈ ಈ ವಿಷಯದಲ್ಲಿ ಇಲ್ಲಿಯವರಿಂದ ಕಲಿಯಬೇಕಾದುದು ಬಹಳಷ್ಟಿದೆ.

ನವದೆಹಲಿ

ನವದೆಹಲಿ

ಪಟ್ಟಿಯಲ್ಲಿ ಖಂಡಿತವಾಗಿಯೂ ಸೇರಿಸಲೇ ಬೇಕಾದುದು ! ಆದರೆ ಇರಿ! ನವದೆಹಲಿಯನ್ನು ನಾವು ತಪ್ಪಿಸಲು ಸಾಧ್ಯವೇ ಇಲ್ಲ. ಇದು ಫ್ಯಾಶನ್ ಎನ್ನುವುದು ಹುಟ್ಟಿದಂತಹ ನಗರವಾಗಿದೆ ಮತ್ತು ಇಲ್ಲಿ ಆಯಾ ವರ್ಷದ ಹೊಸ ರೀತಿಗಳು ಮತ್ತು ಬಣ್ಣಗಳನ್ನು ಜಗತ್ತಿಗೆ ಹೊರಗೆ ಪ್ರವೃತ್ತಿಗೆ ಬರುವಲ್ಲಿ ಮಾಡುತ್ತದೆ. ಮುಂಬೈಯಲ್ಲಿ ನಡೆಯುವ ಪಾರ್ಟಿಗಳು ಚರ್ಚೆಯ ವಿಚಾರಗಳಲ್ಲದೇ ಇದ್ದರೂ ನವದೆಹಲಿಯಲ್ಲಿರುವ ವಿವಾಹದ ವಾರ್ಡ್ ರೋಬ್ ಗಳು ಅವುಗಳ ಶೈಲಿಗಳಿಂದಾಗಿ ಯಾವಾಗಲೂ ಒಂದು ಉನ್ನತವಾದ ಸ್ಥಾನವನ್ನು ಪಡೆಯುತ್ತದೆ.

ಇಲ್ಲಿ ಒಂದು ಸಾಮಾನ್ಯ ಶುಕ್ರವಾರದ ರಾತ್ರಿಗಳೂ ಕೂಡಾ ರೆಡ್ ಕಾರ್ಪೆಟ್ ನ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಆದುದರಿಂದ ನಾವು ಈ ಪಟ್ಟಿಯಲ್ಲಿ ದೆಹಲಿಯನ್ನು ಸೇರಿಸದೇ ಇರಲು ಸಾಧ್ಯವೆ? ನೀವೇನಾದರೂ ಸೂಕ್ಷ್ಮ ಜೀವನ ಶೈಲಿಯನ್ನು ಅನುಸರಿಸುವವರಾದಲ್ಲಿ ನವದೆಹಲಿಯ ಈ ಶೈಲಿಗಳು ವೆಚ್ಚದಾಯಕವೆನಿಸುವ ಕಾರಣದಿಂದಾಗಿ ನಿಮಗೆ ಸೂಕ್ತವಾದುದು ಅಲ್ಲ ಎಂದು ಅನಿಸ ಬಹುದು.

ರೆಟ್ರೋ ಫ್ಯಾಶನ್

ರೆಟ್ರೋ ಫ್ಯಾಶನ್

ಇಲ್ಲಿ ಹೈಹೀಲ್ಸ್ ನ ರೆಟ್ರೋ ಫ್ಯಾಶನ್ ನಿಂದ ಹಿಡಿದು ನವ ವಿನ್ಯಾಸದ ಪೈಜಾಮಗಳವರೆಗೆ ಈ ನಗರವು ಫ್ಯಾಶನ್ ಲೋಕಕ್ಕೆ ಒಂದು ಹೊಸ ಆಯಾಮವನ್ನು ಸೃಷ್ಟಿಸುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ.

ದೆಹಲಿಯಲ್ಲಿ ವಾಸಿಸುವ ಜನರು ಫ್ಯಾಶನ್ ಅನ್ನು ಪ್ರೀತಿಸುವವರಾಗಿದ್ದು, ಅದಕ್ಕೆ ಸರಿಯಾಗಿ ಫ್ಯಾಶನ್ ಅವರನ್ನೂ ಇಷ್ಟ ಪಡುವಂತೆ ಕಾಣುತ್ತದೆ. ಅಲ್ಲದೆ ಇಲ್ಲಿ ನಡೆಸಲಾಗುವ ಫ್ಯಾಶನ್ ಪ್ರದರ್ಶನಗಳು ಅನೇಕರಿಂದ ಆರಾಧಿಸಲ್ಪಡುತ್ತದೆ ಮತ್ತು ಇಲ್ಲಿ ಫ್ಯಾಶನ್ ಈವೆಂಟ್‌ಗಳು ಮಾಡಲೇಬೇಕೆನ್ನುವಂತೆ ನಡೆಯುತ್ತವೆ.

ಇಲ್ಲಿ ಹೈ ಹೀಲ್ಡ್ಸ ಹಾಕದೇ ಇರುವ ಹುಡುಗಿಯರನ್ನು ಕಾಣದೇ ಇರುವುದು ತುಂಬಾ ವಿರಳ. ಒಟ್ಟಾರೆ ಹೇಳಬೇಕೆಂದರೆ ಫ್ಯಾಶನ್ ಎನ್ನುವುದು ದೆಹಲಿಯಲ್ಲಿ ಒಂದು ದೊಡ್ಡ ವ್ಯವಹಾರವೇ ಆಗಿದೆ. ಅಗ್ಗದ ಬೆಲೆಗೆ ಅತ್ಯುತ್ತಮ ಬಟ್ಟೆಗಳನ್ನು ಪ್ರದರ್ಶಿಸುವ ಪ್ಲೀ ಮಾರುಕಟ್ಟೆಗಳಲ್ಲಿಯೂ ಉತ್ತಮ ರೀತಿಯ ಬಟ್ಟೆಗಳು ಲಭ್ಯವಿರುತ್ತದೆ. ಇದು ವಿಭಿನ್ನ ರೀತಿಯ ಶೈಲಿಯು ಅಸ್ತಿತ್ವಕ್ಕೆ ಬರಲು ಸುಲಭವಾಗುತ್ತದೆ.

ಮುಂಬೈ

ಮುಂಬೈ

ಮುಂಬೈನ ವಿಷಯಕ್ಕೆ ಬಂದಾಗ ಇಲ್ಲಿ ಬೀದಿಗಳಲ್ಲಿಯೂ ಕೂಡಾ ಸೂಕ್ಷ್ಮವಾದ ಮತ್ತು ಉತ್ತಮವಾದ ಫ್ಯಾಶನ್ ಶೈಲಿಗಳು ಕಾಣಲು ಸಿಗುತ್ತದೆ. ನೀವೇನಾದರೂ ದೆಹಲಿಯೇ ದೊಡ್ಡದು ಎಂದು ಭಾವಿಸಿದರೆ ಮುಂಬೈ ಇದರ ವಿಷಯದಲ್ಲಿ ಪ್ರೀತಿಗೆ ಬೀಳುತ್ತೀರಿ.

ಮುಂಬೈ ಜನರು ತಮ್ಮದೇ ಶೈಲಿಯ ಫ್ಯಾಶನ್ ಅನ್ನು ಅನುಸರಿಸುತ್ತಾರೆ. ಇಲ್ಲಿಯ ಜನರು ಹೊಸ ವಿಧಗಳು ಮತ್ತು ಹೆಚ್ಚುಗಾರಿಕೆಯ ಬಗ್ಗೆ ಯೋಚನೆ ಮಾಡುವುದಿಲ್ಲ ಆದರೆ ತಾವು ಉತ್ತಮವಾಗಿ ಕಾಣುವುದರ ಬಗ್ಗೆ ಹೆಚ್ಚಿನ ನಂಬಿಕೆ ಇಡುತ್ತಾರೆ. ಸರಳವಾದ ಮೇಕಪ್ , ಸಡಿಲವಾದ ಪ್ಯಾಂಟು, ತಟಸ್ಥ ಬಣ್ಣಗಳು ಮತ್ತು ಫ್ಲಾಟ್ ಗಳು ... ಇವೆಲ್ಲವು ಸೇರಿ ಒಂದು ರೀತಿಯಲ್ಲಿ, ಮುಂಬೈಯನ್ನು ತನ್ನದೇ ಶೈಲಿಯಲ್ಲಿ ಕಲಾತ್ಮಕವಾಗಿಸಿದೆ.

ವಾರ್ಡ್ ರೋಬ್

ವಾರ್ಡ್ ರೋಬ್

ಇಲ್ಲಿಯ ಬೀದಿಗಳಲ್ಲಿಯ ಫ್ಯಾಶನ್ ಕೂಡಾ ಮನಮೋಹಕವಾದುದಾಗಿದೆ. ಇಲ್ಲಿ ಫ್ಯಾಶನ್ ಶೋ ಗಳು, ಬೀದಿಗಳು ಮತ್ತು ಫ್ಯಾಶನ್ ಈವೆಂಟುಗಳು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಈ ಜನರು ಜೋರಾದ ಮತ್ತು ಭಾರವೆನಿಸುವ ಬಟ್ಟೆಗಳಿಗಿಂತ ಇಲ್ಲಿಯ ಸುಂದರವಾದ ಮತ್ತು ಮನಮೋಹಕ ಸ್ಪರ್ಶವಿರುವ ಬಟ್ಟೆಗಳನ್ನು ತಮ್ಮ ವಾರ್ಡ್ ರೋಬ್ ಗಳಲ್ಲಿ ಅಲಂಕರಿಸಲು ಹಾತೊರೆಯುತ್ತಿರುತ್ತಾರೆ.

ಪುಣೆ

ಪುಣೆ

ಪುಣೆಯ ಫ್ಯಾಶನ್ ಒಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸುವಂತಹುದಾಗಿದೆ, ಆದುದರಿಂದ ಇದು ಹದಿ ಹರೆಯದವರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಎಮೋ ಫ್ಯಾಷನ್, ಸೀಳಿರುವ ಜೀನ್ಸ್, ಏಕವರ್ಣದ ಛಾಯೆಗಳು ಮತ್ತು ಕಿಕ್ ಗಳು ನಗರದ ಮೆಚ್ಚಿನವುಗಳು. ಪುಣೆ ಮತ್ತು ಮುಂಬೈಗೆ ಹೋಲಿಸಿದರೆ ಪುಣೆ ಹೆಚ್ಚಿನ ಹಿಪ್ಸ್ಟರ್ ಶೈಲಿಯನ್ನು ಹೊಂದಿದೆ ಎಂದು ನೀವು ಗಮನಿಸಬಹುದು.ಇದು ಮುಂಬೈ ಮತ್ತು ಬೆಂಗಳೂರಿನ ಫ್ಯಾಶನ್ ಪ್ರಮಾಣದ ನಡುವಿನ ಸ್ಥಾನವನ್ನು ಪಡೆಯುತ್ತದೆ.

ಇಲ್ಲಿ ನೀವು ಎಲ್ಲಾ ಹೊಸತನ್ನು ಕಾಣ ಬಹುದಾಗಿದೆ. ಇದು ಏಕೆಂದರೆ ಪುಣೆಯ ಜನರು ಹಿಪ್ಸ್ಟರ್ ಶೈಲಿಯನ್ನು ಇಷ್ಟ ಪಡುವವರಾದುದರಿಂದ ಇವರು ಹೊಸ ಶೈಲಿಯನ್ನು ಪ್ರಯತ್ನಿಸುವುದನ್ನು ಇಷ್ಟ ಪಡುತ್ತಾರೆ ಮತ್ತು ಇದನ್ನು ಇನ್ನಿತರ ನಗರಗಳಿಗೆ ಪರಿಚಯಿಸುತ್ತಾರೆ. ಈ ನಗರದಲ್ಲಿ ದೈನಂದಿನ ಫ್ಯಾಷನ್ ಇನ್ನೂ ಯುವ, ಉತ್ಸಾಹಭರಿತ ಮತ್ತು ಅನಿಮೇಟೆಡ್ ಆಗಿದೆ.

ಬೆಂಗಳೂರು

ಬೆಂಗಳೂರು

ಕಟ್ಟ ಕಡೆಯದಾಗಿ ಬೆಂಗಳೂರಿನ ಫ್ಯಾಶನ್ ಅನ್ನು ನಾವು ಗಮನಿಸದೇ ಇರಲು ಸಾಧ್ಯವೆ ಇಲ್ಲ. ಬೆಂಗಳೂರಿನ ಜನರು ಶಾಂತ ಪ್ರವೃತ್ತಿಯವರಾಗಿದ್ದು ಅವರ ಫ್ಯಾಶನ್ ನ ದೃಷ್ಟಿಕೋನವೂ ಕೂಡಾ ಅದಕ್ಕೆ ಸರಿಯಾಗಿ ಸಂಯೋಜಿಸಲಾಗುತ್ತದೆ. ನೀವು ಮೃದು ವಾರ್ಡ್ರೋಬ್ ಗಳಿಂದ ಇಲ್ಲಿಯ ಜನರನ್ನು ಕಾಣುತ್ತೀರಿ.

ಹೆಚ್ಚು ಕಡಿಮೆ ಮುಂಬೈನಂತೆಯೇ ಇಲ್ಲಿಯೂ ಕೂಡಾ ಹೆಚ್ಚು ಸೂಕ್ಷ್ಮ ಮತ್ತು ಸೊಗಸಾದ ... ಫ್ಲಾಟ್ ಗಳು, ದಕ್ಷಿಣ ಭಾರತೀಯ ಲಕ್ಷಣಗಳು, ಸಾಂಪ್ರದಾಯಿಕ ಉಡುಗೆಗಳ ಬಿಡಿಭಾಗಗಳು ಮತ್ತು ಹತ್ತಿಯ ಕುರ್ತಾಗಳು ಇವೆಲ್ಲವನ್ನೂ ತನ್ನಲ್ಲಿ ಹೊಂದಿದೆ.

ಬೆಂಗಳೂರಿನ ಫ್ಯಾಶನ್ ಒಂದು ಸಂಗೀತವಾದರೆ ಮಳೆಗಾಲದಲ್ಲಿ ಇದು ಗಿಟಾರ್ ಆಗುತ್ತದೆ. ಇಲ್ಲಿಯ ಫ್ಯಾಶನ್ ಒಂದು ಚಮತ್ಕಾರಿ ಸುವಾಸನೆ ಮತ್ತು ಅದ್ಬುತಗಳನ್ನು ಹೊಂದಿದೆ. ನೀವೇನಾದರೂ ಫ್ಯಾಶನ್ ಅನ್ನು ಚುರುಕಾಗಿ ನೋಡಬೇಕೆಂದಿದ್ದಲ್ಲಿ ಬೆಂಗಳೂರು ನಿಮಗೆ ಸೂಕ್ತವಾದ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more