» »ಇಲ್ಲಿ ಇಲಿಗಳು ನೀಡುತ್ತವಂತೆ ಆಶೀರ್ವಾದ...ರಾಜಸ್ಥಾನದಲ್ಲಿ ನೋಡಲೇ ಬೇಕಾದ ದೇವಾಲಯಗಳಿವು

ಇಲ್ಲಿ ಇಲಿಗಳು ನೀಡುತ್ತವಂತೆ ಆಶೀರ್ವಾದ...ರಾಜಸ್ಥಾನದಲ್ಲಿ ನೋಡಲೇ ಬೇಕಾದ ದೇವಾಲಯಗಳಿವು

Written By: Rajatha

ರಾಜಸ್ಥಾನ ಸುಂದರವಾದ ಅರಮನೆ, ಕೋಟೆಗಳಿಗೆ ಹೆಸರುವಾಸಿಯಾಗಿರುವ ರಾಜ್ಯ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಯಾವಾಗಲೂ ದೇಶದ ಗೌರವದ ವಿಷಯ ಚರ್ಚೆಗೆ ಬಂದಾಗ ರಾಜಸ್ಥಾನದ ವಿಷಯ ಅಂತೂ ಬಂದೇ ಬರುತ್ತದೆ. ನೀವು ರಾಜಸ್ಥಾನದ ಕೋಟೆಗಳು, ಅರಮನೆಗಳನ್ನು ಹೊರತುಪಡಿಸಿ ಅವುಗಳ ಸುಂದರ ಪ್ರಸಿದ್ಧ ಮಂದಿರಗಳ ಬಗ್ಗೆ ನಿಮಗೆ ಅರಿವಿದೆಯೇ? ಈ ದೇವಸ್ಥಾನದ ದರ್ಶನ ಪಡೆಯಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಕರಣಿ ಮಾತಾ ಮಂದಿರ ಬಿಕಾನೆರ್

ಕರಣಿ ಮಾತಾ ಮಂದಿರ ಬಿಕಾನೆರ್

ಕರಣಿ ಮಾತೆ ಮಂದಿರವು ರಾಜಸ್ಥಾನದ ಬಿಕಾನೆರ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿ ದೇಶ್‌ನೋಕ್ ಹಳ್ಳಿಯಲ್ಲಿ ಇದೆ. ಈ ಮಂದಿರ ಇಲಿಯ ಮಂದಿರ ಎಂದೇ ಕರೆಯಲ್ಪಡುತ್ತದೆ. ಕರಣಿ ದೇವಿ ಸಾಕ್ಷಾತ್ ಜಗದಂಬೆಯ ಅವತಾರ. ಅಲ್ಲಿ ಸುಮಾರು ಆರೂನೂರು ವರ್ಷಗಳ ಹಿಂದಿನ ಮಂದಿರ ಇದೆ. ಅಲ್ಲಿ ತಾಯಿ ಗುಹೆಯೊಳಗೆ ಕುಳಿತುಕೊಂಡು ದೇವಿಯ ಪೂಜೆ ಮಾಡುತ್ತಿದ್ದರು. ಈ ಮಂದಿರವನ್ನು ಬಿಮನೇರ್ ರಾಜ ಗಂಗಾಸಿಂಗ್ 20ನೇ ಇಸವಿಯಲ್ಲಿ ನಿರ್ಮಿಸಿದ್ದನು.

ಅಂಬಿಕಾ ಮಾತಾ ಮಂದಿರ ಉದಯಪುರ

ಅಂಬಿಕಾ ಮಾತಾ ಮಂದಿರ ಉದಯಪುರ

ಉದಯಪುರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಅಂಬಿಕಾ ಮಾತೆಯ ಮಂದಿರ ರಾಜಸ್ಥಾನದ ಹಳೆಯ ಮಂದಿರಗಳ ಶ್ರೇಣಿಯಲ್ಲಿ ಬರುತ್ತದೆ. ಸುಮಾರು 10 ನೇ ಶತಮಾನದಲ್ಲಿ ಈ ಮಂದಿರದ ನಿರ್ಮಾಣವಾಯಿತು. ಇಲ್ಲಿ ದುರ್ಗೆಯ ರೂಪದಲ್ಲಿ ಮಾತೆ ಅಂಬಿಕೆಯ ಪೂಜೆ ಮಾಡಲಾಗುತ್ತದೆ. ಈ ಮಂದಿರವೂ ಅಷ್ಟೊಂದು ಲೋಕಪ್ರೀಯವಲ್ಲ. ಯಾತ್ರಿಕರು ಈ ದೇವಸ್ಥಾನದಲ್ಲಿರುವ ವಾಸ್ತುಕಲೆಯನ್ನು ನೋಡಿ ಆಶ್ಚರ್ಯ ಚಕಿತರಾಗುತ್ತಾರೆ.

ಜೈಪುರದ ಬಿರ್ಲಾ ಮಂದಿರ

ಜೈಪುರದ ಬಿರ್ಲಾ ಮಂದಿರ

ಇತರ ಆಕರ್ಷಣೆಯ ಜೊತೆಗೆ ಬಿರ್ಲಾ ಮಂದಿರ ಕೂಡಾ ಜೈಪುರದ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಮೋತಿ ಡಂಗಾರಿ ಬೆಟ್ಟದ ಬಳಿ ಸ್ಥಾಪಿತವಾಗಿರುವ ಈ ದೇವಾಲಯ ಲಕ್ಷ್ಮೀ ನಾರಾಯಣ ದೇವರಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಗೋಡೆಯಲ್ಲಿ ಬುದ್ಧ, ಕ್ರಿಸ್ತ, ಸುಕ್ರಾತ್ ಹಾಗೂ ಇಂತಹದ್ದೇ ಇತರ ವ್ಯಕ್ತಿಗಳ ಮೂರ್ತಿ ಕಾಣಸಿಗುತ್ತದೆ. ಬಿರ್ಲಾ ಮಂದಿರವನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಬ್ರಹ್ಮ ಮಂದಿರ

ಬ್ರಹ್ಮ ಮಂದಿರ

ಪುಷ್ಕರ್‌ನಲ್ಲಿರುವ ಬ್ರಹ್ಮನ ಏಕೈಕ ಮಂದಿರ ಇದೆ. ಇದನ್ನು 14ನೇ ಇಸವಿಯಲ್ಲಿ ಖುಷಿ ವಿಶ್ವಾಮಿತ್ರ ನಿರ್ಮಿಸಿದ ಎಂದು ಹೇಳಲಾಗುತ್ತದೆ. ಸಂಗಮರ್‌ಮರ್ ಕಲ್ಲಿನಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕಾರ್ತಿಕ ಪೂರ್ಣೀಮಾದಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.