Search
  • Follow NativePlanet
Share
» »ಗೋವಾದಲ್ಲಿರುವ ಪ್ರಸಿದ್ಧವಾದ ದೇವಾಲಯಗಳು ಇವು..

ಗೋವಾದಲ್ಲಿರುವ ಪ್ರಸಿದ್ಧವಾದ ದೇವಾಲಯಗಳು ಇವು..

ಗೋವಾ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಗೋವಾವನ್ನು ಯುವಕರಿಂದ ಹಿಡಿದು ವಯಸ್ಸಾದವರಿಗೂ ಕೂಡ ಅತ್ಯಂತ ಪ್ರಿಯವಾದ ಸ್ಥಳವಾಗಿದೆ. ಗೋವಾದಲ್ಲಿನ ಸುಂದರವಾದ ಬೀಚ್‍ಗಳು, ಕೋಟೆಗಳು, ಷಾಪಿಂಗ್, ನೈಟ್ ಪಾರ್ಟಿಗಳು ಇನ್ನು ಹಲವಾರು ಸಂತೋಷದಾಯಕ ಮೂಡಿಸುವ ಆಕರ್ಷಣೆಗಳನ್ನು ನಾವು ಕಾಣಬಹುದು. ಇಲ್ಲಿ ಕೇವಲ ಬೀಚ್‍ಗಳೇ ಅಲ್ಲದೇ ಆಧ್ಯಾತ್ಮಿಕತೆಯನ್ನು ಹೊಂದಿರುವ ಪ್ರವಾಸಿಗರಿಗೆ ಕೇಲವು ದೇವಾಲಯಗಳು ಕೂಡ ಇಲ್ಲಿ ಭೇಟಿ ನೀಡಬಹುದು. ಪ್ರವಾಸಿಗರು ಹೆಚ್ಚಾಗಿ ಬೀಚ್‍ಗಳಲ್ಲಿಯೇ ಕಾಲ ಕಳೆಯುವುದರಿಂದ ಈ ದೇವಾಲಯಗಳ ಬಗ್ಗೆ ಅಷ್ಟು ಮಾಹಿತಿ ತಿಳಿದಿರುವುದಿಲ್ಲ. ಹಾಗಾದರೆ ಬನ್ನಿ ಗೋವಾದ ಅದ್ಭುತವಾದ ದೇ ವಾಲಯದ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ತಿಳಿಯೋಣ.

ಇಲ್ಲಿನ ದೇವಾಲಯಗಳು ಅತ್ಯಂತ ಸುಂದರವಾಗಿದ್ದು, ಆನೇಕ ಆಧ್ಯಾತ್ಮಿಕತೆಯನ್ನು ಹೊಂದಿರುವ ಪ್ರವಾಸಿಗರು ಈ ದೇವಾಲಯಕ್ಕೆ ತೆರಳುತ್ತಾರೆ. ಅಥವಾ ಗೋವಾದಂಥಹ ಸುಂದರವಾದ ಪ್ರದೇಶದಲ್ಲಿ ಶಕ್ತಿಯುತವಾದ ದೇವಾಲಯವಿದೆ ಎಂಬುದು ತಿಳಿದಿಲ್ಲ ಎನ್ನಬಹುದು. ಹಾಗಾದರೆ ಬನ್ನಿ ಗೋವಾದಲ್ಲಿನ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡೋಣ.

1.ಶಾಂತದುರ್ಗಾ ದೇವಾಲಯ

1.ಶಾಂತದುರ್ಗಾ ದೇವಾಲಯ

PC: Nkodikal

ಈ ದೇವಾಲಯವು ಪೊಂಡಾ ತಾಲ್ಲೂಕಿನಲ್ಲಿರುವ ಕವಲೇಮ್ ಎಂಬ ಗ್ರಾಮದಲ್ಲಿನ ಬೆಟ್ಟದ ಬುಡದಲ್ಲಿ ಈ ದೇವಾಲಯವಿದೆ. ಗೋವಾ ರಾಜಧಾನಿಯಾದ ಪಣಜಿಯಿಂದ ಸುಮಾರು 33 ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ ದೇವಿ ದುರ್ಗೆಯ ಅವತಾರವನ್ನು ಹೊಂದಿರುವ ಶಾಂತದುರ್ಗಾ ದೇವಿಗೆ ಮುಡಿಪಾದ ದೇವಾಲಯವಾಗಿದೆ. ಈ ದೇವಿಯನ್ನು ಸ್ಥಳೀಯರು "ಶಾಂತೇರಿ" ಎಂದು ಕೂಡ ಕರೆಯುತ್ತಾರೆ.

2.ಮಂಗೇಶಿ ದೇವಾಲಯ

2.ಮಂಗೇಶಿ ದೇವಾಲಯ

PC:Vivo78

ಗೋವಾದ ಪೊಂಡಾ ತಾಲ್ಲೂಕಿನಲ್ಲಿರುವ ಪ್ರಿಯೋಲ್ ಎಂಬ ಪ್ರದೇಶದ ಮಂಗೇಶಿ ಎಂಬ ಗ್ರಾಮದಲ್ಲಿ ಶಿವನಿಗೆ ಮುಡಿಪಾದ ಈ ದೇವಾಲಯವು ಅತ್ಯಂತ ಸುಂದರ ಹಾಗು ಬೃಹತ್ತಾಗಿದೆ. ಈ ಶಕ್ತಿವಂತ ದೇವಾಲಯವು ಪಣಜಿಯಿಂದ ಸುಮಾರು 21 ಕಿ.ಮೀ ಹಾಗು ಮಡಗಾಂವ್‍ನಿಂದ ಸುಮಾರು 26 ಕಿ.ಮೀಗಳಷ್ಟು ದೂರದಲ್ಲಿದೆ. ಈ ದೇವಾಲಯದಲ್ಲಿ ಮಹಾಶಿವನು ನೆಲೆಸಿದ್ದಾನೆ.

3.ಶ್ರೀ ಬೇತಾಳ ದೇವಾಲಯ

3.ಶ್ರೀ ಬೇತಾಳ ದೇವಾಲಯ

PC:Agawas

ಆಶ್ವರ್ಯ ಪಡಬೇಡಿ, ಬೇತಾಳನಿಗೂ ಒಂದು ದೇವಾಲಯವಿದೆಯೇ ಎಂದು. ಶಿವನ ಯೋಧ ರೂಪವಾದ ರುದ್ರನ ಅವತಾರವಾಗಿ ಬೇತಾಳನಿಗೆ ಪೂಜಿಸಲಾಗುತ್ತದೆ. ಇದು ಗೋವಾದ ಬಿಂಚೋಲಿಂ ಎಂಬ ತಾಲ್ಲೂಕಿನಲ್ಲಿರುವ ಅಮೋನಾ ಹಳ್ಳಿಯಲ್ಲಿ ಈ ದೇವಾಲಯವಿದೆ. ಶಿನಾರಿ, ಗಾವಾ, ಫಡಾಡೆ ಮುಂತಾದ ಕುಟುಂಬಗಳಿಂದ ಪೂಜಿಸಲ್ಪಡುವ ಬೇತಾಳನನ್ನು ಈ ಹಳ್ಳಿಯ ಗ್ರಾಮ ದೇವತೆಯಾಗಿ ಪೂಜಿಸುತ್ತದ್ದಾರೆ.

4.ಸಪ್ತಕೋಟೇಶ್ವರ ದೇವಾಲಯ

4.ಸಪ್ತಕೋಟೇಶ್ವರ ದೇವಾಲಯ

PC:~Beekeeper~

ಗೋವಾದಲ್ಲಿರುವ ನರ್ವೆ ಎಂಬ ಒಂದು ಪುಟ್ಟದಾದ ಹಳ್ಳಿ ಇದೆ. ಅದು ಪಣಜಿಯಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಸಪ್ತಕೋಟೇಶ್ವರ ದೇವಾಲಯದಿಂದ ಹಳ್ಳಿಯು ಪ್ರಸಿದ್ಧಿಯನ್ನು ಪಡೆದಿದೆ. ಈ ಸುಂದರವಾದ ದೇವಾಲಯವನ್ನು ಕದಂಬ ದೊರೆಯೊಬ್ಬನು ತನ್ನ ಪತ್ನಿ ಕಮಲಾದೇವಿಗಾಗಿ ನಿರ್ಮಾಣ ಮಾಡಿದ ದೇವಾಲಯ ಇದಾಗಿದೆ. ವಿಶೇಷವೆನೆಂದರೆ ಈ ದೇವಾಲಯಕ್ಕೆ ದೋಣಿಯ ಮೂಲಕವೇ ಸಾಗಬೇಕು. ಇದು ದೇವಿಗೆ ಮುಡಿಪಾದ ದೇವಾಲಯವಾಗಿದೆ.

5.ಕಾಮಾಕ್ಷಿ ಅಮ್ಮನ್ ದೇವಾಲಯ

5.ಕಾಮಾಕ್ಷಿ ಅಮ್ಮನ್ ದೇವಾಲಯ

PC:Karunakar Rayker

ಗೋವಾದಲ್ಲಿರುವ ಪೊಂಡಾ ತಾಲ್ಲೂಕಿನ ಶಿರೋಡಾ ಎಂಬ ಗ್ರಾಮದಲ್ಲಿ ಕಾಮಾಕ್ಷಿ ಅಮ್ಮನ್ ದೇವಾಲಯವಿದೆ. ಹಲವಾರು ಹಿಂದೂ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಭಕ್ತರಿಗೆ ತಂಗಲು ದೇವಾಲಯವು ವ್ಯವಸ್ಥೆ ಮಾಡಿದೆ. ಇತ್ತೀಚೆಗಷ್ಟೆ ಈ ದೇವಾಲಯಕ್ಕೆ ವಿದೇಶಿಯರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಅದಕ್ಕೆ ಅವರ ಬಟ್ಟೆಗಳೇ ಕಾರಣವಾಗಿತ್ತು. ಈ ದೇವಾಲಯದ ಸಂಕೀರ್ಣದಲ್ಲಿ ಶಾಂತದುರ್ಗ ಹಾಗು ಲಕ್ಷ್ಮೀ ನಾರಾಯಣರ ದೇವಾಲಯವನ್ನು ಕೂಡ ಕಾಣಬಹುದು.

6.ಗೋಪಾಲ ಗಣಪತಿ ದೇವಾಲಯ

6.ಗೋಪಾಲ ಗಣಪತಿ ದೇವಾಲಯ

PC:Agawas

ಈ ದೇವಾಲಯ ಫೊಂಡಾದಿಂದ ಪಣಜಿಗೆ ತೆರಳುವ ದಾರಿಯಲ್ಲಿ ಕೇವಲ ಮೂರೇ ಕಿ.ಮೀ ದೂರದಲ್ಲಿದೆ. ಈ ಗೋಪಾಲ ಗಣಪನ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ.

7.ನಾಗೇಶಿ ದೇವಾಲಯ

7.ನಾಗೇಶಿ ದೇವಾಲಯ

PC: Konkani Manis

ಶಿವನಿಗೆ ಮುಡಿಪಾದ ಮಂಗೇಶಿಯ ಹಾಗೆಯೇ ಪೊಂಡಾದಲ್ಲಿ ನಾಗೇಶಿ ದೇವಾಲಯವು ಸಹ ಇದೆ. ಇಲ್ಲಿ ಸಾಮಾನ್ಯವಾಗಿ ಗೋವಾದ ಬಹುತೇಕ ಹಿಂದೂ ದೇವಾಲಯಗಳ ಮೂಲ ವಿಗ್ರಹಗಳನ್ನು ಬೇರೆಡೆಯಿಂದ ತರಲಾಗಿದೆ ಎಂದು ಗುರುತಿಸಲಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more