• Follow NativePlanet
Share
» »ಭಾರತದ ಅದ್ಭುತವಾದ ಗೋಪುರ ಗಡಿಯಾರಗಳು ಇವು....

ಭಾರತದ ಅದ್ಭುತವಾದ ಗೋಪುರ ಗಡಿಯಾರಗಳು ಇವು....

Written By:

ನಾವು ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿದೇಶದ ಎತ್ತರವಾದ ಗೋಪುರಗಳನ್ನು ಕಂಡು ವಾವ್..... ಎಂದು ಹೇಳುತ್ತೇವೆ. ಆ ಗೋಪುರಗಳು ಪ್ರವಾಸಿಗರಿಗೆ ಆಕರ್ಷಿಸದೇ ಇರದು. ಅಂತಹ ಸುಂದರವಾದ ಗಡಿಯಾರದ ಗೋಪುರಗಳನ್ನು ಕಾಣುತ್ತಲೇ ಮೈಮರೆಯುತ್ತಿರುತ್ತೇವೆ. ಎಲ್ಲಾ ಗೋಪುರಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಬದಲಾಗಿ ಪ್ರತಿಯೊಂದು ಗಡಿಯಾರ ಗೋಪುರವು ತನ್ನದೇ ಆದ ಆಕಾರ, ಎತ್ತರ ಹಾಗು ವಿಷೇಶತೆಗಳನ್ನು ಹೊಂದಿರುತ್ತದೆ.

ಸಾಮಾನ್ಯವಾಗಿ ದೇವಾಲಯಗಳ ಗೋಪುರಗಳನ್ನು ಕಾಣುತ್ತಲೇ ಮೈಮರೆಯುವ ನಾವು ಆಧುನಿಕವಾದ ಗೋಪುರ ಕಂಡರೆ ಹೇಗಿರುತ್ತದೆ ಅಲ್ಲವೇ?. ವಿದೇಶದಲ್ಲಿನ ಗೋಪುರವನ್ನು ಕಾಣಲು ವಿದೇಶ ಪ್ರವಾಸಕ್ಕೆ ತೆರಳುತ್ತೇವೆ. ಅಲ್ಲಿಯತನಕ ಏಕೆ? ನಮ್ಮ ಭಾರತ ದೇಶದಲ್ಲಿಯೇ ಸುಂದರವಾದ ಗಡಿಯಾರದ ಗೋಪುರಗಳನ್ನು ಒಮ್ಮೆ ಭೇಟಿ ನೀಡೊಣ ಬನ್ನಿ....

ರಾಜ ಬೈ ಗಡಿಯಾರ ಗೋಪುರ

ರಾಜ ಬೈ ಗಡಿಯಾರ ಗೋಪುರ

ಈ ಸುಂದರವಾದ ಗಡಿಯಾರ ಗೋಪುರವು ಮುಂಬೈನ ವಿಶ್ವವಿದ್ಯಾಲಯದ ಅವರಣದಲ್ಲಿದೆ. ಇದನ್ನು 1869ರಲ್ಲಿ ನಿರ್ಮಾಣ ಮಾಡಲಾಯಿತು. ಈ ಗೋಪುರದ ಎತ್ತರ ಸುಮಾರು 280 ಅಡಿ ಎತ್ತರದಲ್ಲಿದೆ. ಇದರ ವಾಸ್ತು ಶಿಲ್ಪಿ ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್. ಆಶ್ಚರ್ಯ ಏನಪ್ಪ ಎಂದರೆ ಮುಂಬೈನ ಸ್ಟಾಕ್ ಎಕ್ಸ್ ಚೇಂಜ್ ಸ್ಥಾಪಕ ಪ್ರೇಮ್ ಚಂದ್ ರಾಯ್ ಅವರು ತಮ್ಮ ತಾಯಿಯ ಹೆಸರನ್ನು ಈ ಗೋಪುರಕ್ಕೆ ಇಟ್ಟಿದ್ದಾರೆ.

PC: wikipedia.org

ಫಝಿಲ್ಕಾ ಗಡಿಯಾರ ಗೋಪುರ

ಫಝಿಲ್ಕಾ ಗಡಿಯಾರ ಗೋಪುರ

ಈ ಗಡಿಯಾರ ಗೋಪುರವು ಪಂಜಾಬ್‍ನಲ್ಲಿದೆ. ಇದನ್ನು 1996 ರಲ್ಲಿ ನಿರ್ಮಾಣ ಮಾಡಲಾಯಿತು. ಈ ಗೋಪುರದ ಎತ್ತರ 1000 ಅಡಿ. ಇದು ಭಾರತದ ಎರಡನೇ ಅತಿ ಎತ್ತರದ ಗೋಪುರ ಗಡಿಯಾರ ಎಂದು ಗುರುತಿಸಲಾಗಿದೆ.


PC: flickr.com

ಲಕ್ನೋ ಗಡಿಯಾರ ಗೋಪುರ

ಲಕ್ನೋ ಗಡಿಯಾರ ಗೋಪುರ

ಸರ್ ಜಾರ್ಜ್ ಕೂಪರ್ ಅವರ ಆಗಮನದ ಗುರುತಿಗಾಗಿ ನವಾಬ್ ನಾಸಿರ್-ಉದ್ ಹೈದರ್ 1881ರಲ್ಲಿ ನಿರ್ಮಾಣ ಮಾಡಲಾಯಿತು. ಆ ಕಾಲದಲ್ಲಿ ಇದರ ನಿರ್ಮಾಣಕ್ಕಾಗಿ ಸುಮಾರು 1.75 ಲಕ್ಷ ರೂಪಾಯಿ ವೆಚ್ಚ ಮಾಡಲಾಯಿತು. ಇದು 219 ಅಡಿ ಎತ್ತರದಲ್ಲಿದೆ.

PC: wikipedia.org

ಸಿಕಂದರ್ ಬಾದ್ ಗಡಿಯಾರ ಗೋಪುರ

ಸಿಕಂದರ್ ಬಾದ್ ಗಡಿಯಾರ ಗೋಪುರ

ಈ ಗೋಪುರವು 120 ಅಡಿ ಎತ್ತರದಲ್ಲಿದೆ. 1897ರಲ್ಲಿ ನಿಜಾಂ ಎಂಬುವವರು ಈ ಗೋಪುರದ ವಿನ್ಯಾಸ ಮಾಡಿದವರು. ಸಿಕಂದರ್ ಬಾದ್ ಕ್ಯಾಂಟೋನ್ಮೆಂಟ್ ಫೋಸ್ಟ್‍ನಲ್ಲಿದ್ದ ಬ್ರಿಟಿಷ್ ಅಧಿಕಾರಿಯೊಬ್ಬರ ನೆನಪಿಗಾಗಿ ಈ ಗೋಪುರವನ್ನು ನಿರ್ಮಾಣ ಮಾಡಲಾಯಿತು.


PC: wikipedia.org

ಡೆಹ್ರಾಡೂನ್ ಗಡಿಯಾರ ಗೋಪುರ

ಡೆಹ್ರಾಡೂನ್ ಗಡಿಯಾರ ಗೋಪುರ

ಈ ಸುಂದರವಾದ ಗೋಪುರವು ಡೆಹ್ರಾಡೂನ್‍ನ ಪಲ್ತಾನ್ ಮಾಡುಕಟ್ಟೆಯ ನಗರ ಭಾಗದಲ್ಲಿ ಈ ಗೋಪುರ ಇದೆ. ವಿಶೇಷವೆನೆಂದರೆ ಈ ಗೋಪುರಕ್ಕೆ ಆರು ಮುಖಗಳಿವೆ. ಇದನ್ನು "ಬಲ್ಭೀರ್ ಟವರ್" ಎಂತಲೂ ಸಹ ಕರೆಯುತ್ತಾರೆ. ಭಾರತದ ಸ್ವಾತಂತ್ಯ್ರದ ಸಂಭ್ರಮದ ನೆನಪಿಗಾಗಿ ಈ ಗೋಪುರವನ್ನು ನಿರ್ಮಾಣ ಮಾಡಲಾಯಿತು.

PC: wikipedia.org

ಕೊಲ್ಲಂ ಗಡಿಯಾರ ಗೋಪುರ

ಕೊಲ್ಲಂ ಗಡಿಯಾರ ಗೋಪುರ

ಈ ಅದ್ಭುತವಾದ ಗೋಪುರ ಗಡಿಯಾರವು 1944 ರಲ್ಲಿ ನಿರ್ಮಾಣ ಮಾಡಲಾಯಿತು. ಈ ಗೋಪುರವನ್ನು ಮಾಜಿ ಕೊಲ್ಲಂನ ಮುನ್ಸಿಪಲ್ ಅಧ್ಯಕ್ಷ ಕೆ.ಜಿ ಪರಮೇಶ್ವರನ್ ಪಿಳ್ಳೈರವರ ಸ್ಮರಣಾರ್ಥವಾಗಿ ನಿರ್ಮಾಣ ಮಾಡಲಾಯಿತು.


PC: wikimedia.org

ಬಹರೈಚ್ ಗಡಿಯಾರ ಗೋಪುರ

ಬಹರೈಚ್ ಗಡಿಯಾರ ಗೋಪುರ

ಉತ್ತರ ಪ್ರದೇಶದಲ್ಲಿರುವ ಈ ಗಡಿಯಾರ ಗೋಪುರವು ಸರಯು ನದಿ ದಡದ ಮೇಲೆ ಇದೆ. ಇದು ಲಕ್ನೋದಿಂದ ಸುಮಾರು 125 ಕಿ.ಮೀ ದೂರದಲ್ಲಿ ಈ ಬಹರೈಚ್ ಗಡಿಯಾರವನ್ನು ಕಾಣಬಹುದಾಗಿದೆ.


PC: wikipedia.org

ಮುರ್ಷಿದಾಬಾದ್ ಗಡಿಯಾರ ಗೋಪುರ

ಮುರ್ಷಿದಾಬಾದ್ ಗಡಿಯಾರ ಗೋಪುರ

ಈ ಗೋಪುರ ಗಡಿಯಾರವು ನಿಜಾಮತ್ ಉದ್ಯಾನವನದಲ್ಲಿದೆ. ಇದು ಗಟ್ಟಿಯಾದ ಶಬ್ಧವನ್ನು ಹೊರ ಹೊಮ್ಮಿಸುತ್ತದೆ. ಇದನ್ನು ಸಗೂರ್ ಮಿಸ್ಟ್ರೀ ವಿನ್ಯಾಸಗೊಳಿಸಿದವರು. ಈ ಗೋಪುರ ಗಡಿಯಾರದ ಮುಖವು ಭಾಗಿರಥಿ ನದಿಯ ಕಡೆಗೆ ನೋಡುತ್ತಿದೆ.


PC: wikipedia.org

ಮೈಸೂರು ಗೋಪುರ ಗಡಿಯಾರ

ಮೈಸೂರು ಗೋಪುರ ಗಡಿಯಾರ

ಈ ಗೋಪುರ ಗಡಿಯಾರ ಮೈಸೂರಿನ ಹೊಸ ಬಸ್ ಸ್ಟಾಂಡ್ ಬಳಿ ಇದೆ. ದೇವರಾಜ ಮಾರುಕಟ್ಟೆ ಎದುರು ನಿಂತಿರುವ ಈ ಸುಂದರವಾದ ಗೋಪುರವು "ಡೆಫರಿನ್ನ ಗೋಪುರ ಗಡಿಯಾರ" ಎಂದು ಕರೆಯುತ್ತಾರೆ. ಈ ಗೋಪುರವನ್ನು 1886 ರಲ್ಲಿ ನಿರ್ಮಾಣ ಮಾಡಲಾಯಿತು.

PC: wikipedia.org

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ