Search
  • Follow NativePlanet
Share
» »ತಾಜ್‌ಮಹಲ್ ನಿರ್ಮಿಸಲು ಆ ಕಾಲದಲ್ಲಿ ಶಹಜಹಾನ್ ಎಷ್ಟು ಖರ್ಚು ಮಾಡಿದ್ದರು ಗೊತ್ತಾ?

ತಾಜ್‌ಮಹಲ್ ನಿರ್ಮಿಸಲು ಆ ಕಾಲದಲ್ಲಿ ಶಹಜಹಾನ್ ಎಷ್ಟು ಖರ್ಚು ಮಾಡಿದ್ದರು ಗೊತ್ತಾ?

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್‌ಮಹಲ್ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಇಂತಹ ಒಂದು ಅದ್ಭುತ ಶಿಲ್ಪಕಲೆಯ ನಿರ್ಮಾಣದ ಹಿಂದಿನ ಕೆಲವು ವಿಷ್ಯಗಳು ಬಹುತೇಕರಿಗೆ ತಿಳಿದಿಲ್ಲ. ತಾಜ್ ಮಹಲ್ ಒಂದು ಸುಂದರ ಐತಿಹಾಸಿಕ ಸ್ಮಾರಕವಾಗಿದ್ದು, ಸುಂದರವಾಗಿ ಮತ್ತು ವಿವೇಕದಿಂದ ವಿನ್ಯಾಸಗೊಳಿಸಲಾಗಿದೆ. ಸ್ಮಾರಕದ ಉಜ್ವಲ ಮತ್ತು ಪ್ರಕಾಶಮಾನವಾದ ಹಿಮಭರಿತ ನೋಟಕ್ಕೆ ಬಿಳಿಯ ಸಂಗಮರ್‌ಮರ್ ಮಾರ್ಬಲ್ಸ್ ಏಕೈಕ ಕಾರಣವಾಗಿದೆ.

 ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು

ರಾಜ ಶಹಜಹಾನ್ ಈ ಭವ್ಯವಾದ, ಸೊಗಸಾದ ಮತ್ತು ಸಾಮ್ರಾಜ್ಯದ ಎಪಿಟೋಮ್ ಅನ್ನು ರಾಣಿ ಮುಮ್ತಾಜ್ ಮಹಲ್‌ಳ ನೆನಪಿಗಾಗಿ ನಿರ್ಮಿಸಿದ್ದ. ಇದಲ್ಲದೆ, ಪ್ರತಿವರ್ಷವೂ ವಿವಿಧ ಜನರ ಮನಸ್ಸನ್ನು ಆಕರ್ಷಿಸುವ ದೊಡ್ಡ ಕಲಾತ್ಮಕ ಮೋಡಿ ಇದಾಗಿದೆ. ದೇಶ, ವಿದೇಶಗಳಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಬಣ್ಣ ಬದಲಾಯಿಸುತ್ತದೆ

ಬಣ್ಣ ಬದಲಾಯಿಸುತ್ತದೆ

ತಜ್ಞರ ಪ್ರಕಾರ ತಾಜ್ ಮಹಲ್ ದಿನದಲ್ಲಿ ಹಲವು ಬಾರಿ ಬಣ್ಣ ಬದಲಾಯಿಸುತ್ತದೆ ಎನ್ನಲಾಗುತ್ತದೆ. ಇದು ಸೂರ್ಯನ ಕಿರಣಗಳಿಗೆ ಅನುಗುಣವಾಗಿ ತನ್ನ ಬಣ್ಣ ಬದಲಾಯಿಸುತ್ತದೆ. ಸಂಗಮರ್‌ಮರ್‌ ಮಾರ್ಬಲ್‌ನಿಂದ ಮಾಡಲಾಗಿರುವ ಈ ವಾಸ್ತುಶಿಲ್ವವು ಬೆಳಗ್ಗೆ ಗುಲಾಬಿ ಬಣ್ಣದಲ್ಲಿದ್ದರೆ, ಮಧ್ಯಾಹ್ನ ಬಿಳಿ ಬಣ್ಣಕ್ಕೆ ತಿರುಗುತ್ತದೆ. ರಾತ್ರಿ ಗೋಲ್ಡನ್ ಬಣ್ಣಕ್ಕೆ ತಿರುಗುತ್ತದೆ.

ಈ ಲವರ್ಸ್ ಪಾಯಿಂಟ್‌ಗೆ ನಿಮ್ಮ ಸಂಗಾತಿ ಜೊತೆ ಸುತ್ತಾಡಲೇ ಬೇಕು ಈ ಲವರ್ಸ್ ಪಾಯಿಂಟ್‌ಗೆ ನಿಮ್ಮ ಸಂಗಾತಿ ಜೊತೆ ಸುತ್ತಾಡಲೇ ಬೇಕು

ಬೆಲೆಬಾಳುವ ಕಲ್ಲುಗಳ ಬಳಕೆ

ಬೆಲೆಬಾಳುವ ಕಲ್ಲುಗಳ ಬಳಕೆ

ರೆಡ್ ಸ್ಯಾಂಡ್ಸ್ಟೋನ್ ಅನ್ನು ಪಂಜಾಬ್‌ನದ ಜಾಸ್ಪರ್‌ನ ಫತೇಪುರ ಸಿಕ್ರಿಯಿಂದ ತರಲಾಗಿದೆ. ಜೇಡ್ ಮತ್ತು ಕ್ರಿಸ್ಟಲ್ ಚೀನಾದಿಂದ, ಟರ್ಕೋಯಿಸ್ ನ್ನು ಟಿಬೆಟ್‌ನಿಂದ , ಲ್ಯಾಪಿಸ್ ಲಾಜುಲಿ ಮತ್ತು ಸ್ಯಾಫೈರ್‌ನ್ನು ಶ್ರೀಲಂಕಾದಿಂದ , ಕಲ್ಲಿ ಮತ್ತು ಕಾಮೆಲಿಯನ್‌ನ್ನು ಅರೇಬಿಯಾದಿಂದ ಮತ್ತು ವಜ್ರವನ್ನುಪನ್ನಾದಿಂದ ತರಲಾಗಿದೆ. ತಾಜ್ ಮಹಲ್‌ನಲ್ಲಿನ ಕಸೂತಿ ಕೆಲಸಕ್ಕೆ ಎಲ್ಲಾ 28 ವಿಧದ ಅಪರೂಪದ, ಅರೆ ಬೆಲೆಬಾಳುವ ಮತ್ತು ಅಮೂಲ್ಯವಾದ ಕಲ್ಲುಗಳನ್ನು ಬಳಸಲಾಗಿದೆ.

ಭೂಕಂಪ ನಿರೋಧಕ ಸಮಾಧಿ

ಭೂಕಂಪ ನಿರೋಧಕ ಸಮಾಧಿ

ಇಲ್ಲಿನ ನಾಲ್ಕು ಮಿನಾರ್‌ಗಳನ್ನು ಹೊರಮುಖವಾಗಿ ನಿರ್ಮಿಸಲಾಗಿದೆ. ಭೂ ಕಂಪ ಅಥವಾ ಇನ್ಯಾವುದೇ ನೈಸರ್ಗಿಕ ವಿಕೋಪಗಳು ಉಂಟಾದಾಗ ಮಿನಾರ್‌ಗಳು ಹೊರಮುಖವಾಗಿ ಬೀಳುತ್ತವೆ . ಇದರಿಂದ ನಡುವಿನಲ್ಲಿರುವ ಗೋರಿಗೆ ಯಾವುದೇ ಹಾನಿಯಾಗುವುದಿಲ್ಲ.

ಎಷ್ಟು ಖರ್ಚಾಯ್ತು ಗೊತ್ತಾ?

ಎಷ್ಟು ಖರ್ಚಾಯ್ತು ಗೊತ್ತಾ?

ಈ ಮಹಾನ್ ವಾಸ್ತುಶಿಲ್ಪವನ್ನು ನಿರ್ಮಿಸಲು 1632-1653ರ ಅವಧಿಯಲ್ಲಿ ಶಹಜಹಾನ್ ಸುಮಾರು 32 ಮಿಲಿಯನ್ ರೂಪಾಯಿಗಳನ್ನು ಖರ್ಚುಮಾಡಿದ್ದ. ತಾಜ್‌ಮಹಲ್‌ನ ನಿರ್ಮಾಣದ ಸಮಯದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ನಿರ್ಮಾಣಕಾರರು ಆನೆಗಳನ್ನು ಬಳಸಿದ್ದರು ಎನ್ನಲಾಗಿದೆ.

ಕಪ್ಪು ತಾಜ್‌ಮಹಲ್

ಕಪ್ಪು ತಾಜ್‌ಮಹಲ್

ಶಹಜಹಾನ್ ತನ್ನ ಪತ್ನಿ ಮುಮ್ತಾಜ್‌ಳಿಗಾಗಿ ಬಿಳಿಯ ತಾಜ್‌ಮಹಲ್‌ನ್ನು ನಿರ್ಮಿಸಿ ಆ ನಂತರ ಯಮುನಾ ನದಿಯಯ ಇನ್ನೊಂದು ದಡದಲ್ಲಿ ಕಪ್ಪು ತಾಜ್‌ಮಹಲ್ ನಿರ್ಮಿಸುವ ಮೂಲಕ ತನಗೇ ಗೋರಿ ನಿರ್ಮಿಸುವ ಆಲೋಚನೆಯಲ್ಲಿದ್ದ. ಆದರೆ ಆತನ ಮಗ ಔರಂಗಜೇಬನೇ ಆತನನನ್ನು ಬಂಧಿಸಿ ಬಲವಂತವಾಗಿ ಕಾರಾಗ್ರಹಕ್ಕೆ ತಳ್ಳಿದ ಕಾರಣ ಕಪ್ಪು ತಾಜ್‌ಮಹಲ್ ಕನಸು ನೆರವೇರಲಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X