Search
  • Follow NativePlanet
Share
» »ಹಾಸನ ಜಿಲ್ಲೆಯಲ್ಲಿರುವ ಕಣ್ಸೆಳೆಯುವ ದೇವಾಲಯಗಳಿವು

ಹಾಸನ ಜಿಲ್ಲೆಯಲ್ಲಿರುವ ಕಣ್ಸೆಳೆಯುವ ದೇವಾಲಯಗಳಿವು

By Manjula Balaraj Tantry

ಭಾರತದ ಮಧ್ಯಕಾಲೀನ ಅವಧಿಯ ಹೊಯ್ಸಳ ಸಾಮ್ರಾಜ್ಯದ ಸಮಯದಲ್ಲಿ ಹಾಸನವು ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿತ್ತು ಮತ್ತು ಇಲ್ಲಿಯ ಪ್ರಾಚೀನ ಸ್ಮಾರಕಗಳು ಅದರಲ್ಲೂ ದೇವಾಲಯಗಳು ಮತ್ತು ಅನೇಕ ಧಾರ್ಮಿಕ ತಾಣಗಳು ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದುಕೊಂಡಿವೆ.

ಈ ಪ್ರದೇಶದ ಪ್ರಮುಖ ದೇವತೆಯಾದ ಹಾಸನಾಂಬೆಯ ಹೆಸರನ್ನು ಹಾಸನಕ್ಕೆ ಇಡಲಾಗಿದೆ. ದಾಖಲೆಗಳ ಪ್ರಕಾರ ಹಾಸನದ ಇತಿಹಾಸವು ಹೊಯ್ಸಳ ಸಾಮ್ರಾಜ್ಯಕ್ಕೂ ಹಳೆಯದಾದ ಇತಿಹಾಸವನ್ನು ಹೊಂದಿದ್ದು ಈ ಸಮಯದಲ್ಲಿ ಇದರ ಕೀರ್ತಿ ಮತ್ತು ಅಭಿವೃದ್ದಿಯು ಉತ್ತುಂಗದಲ್ಲಿತ್ತು. ನಂತರ ಇದು ಅನೇಕ ಸಾಮ್ರಾಜ್ಯದಿಂದ ಆಳಲ್ಪಟ್ಟಿತ್ತು. ಅವುಗಳಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಮೊಘಲ್ ಸಾಮ್ರಾಜ್ಯವೂ ಸೇರಿದೆ.

ಆದುದರಿಂದ ಇಲ್ಲಿ ನೀವು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಇದರ ಗಡಿಯೊಳಗೆ ಕಾಣಬಹುದಾಗಿದೆ. ಇದು ಇತಿಹಾಸದ ದಂತಕಥೆಗಳನ್ನು ಪ್ರತಿಬಿಂಬಿಸುತ್ತವೆ. ಅಲ್ಲದೆ ಇಲ್ಲಿಯ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಹೊಯ್ಸಳರ ಯುಗದ ದೇವಾಲಯದ ರೂಪದಲ್ಲಿರುವ ವಾಸ್ತುಶಿಲ್ಪ ಅದ್ಬುತಗಳನ್ನು ಕಾಣಬಹುದಾಗಿದೆ. ಆದುದರಿಂದ ಇಲ್ಲಿಯ ಕಡೆಗೆ ಹೆಚ್ಚಿನ ಗಮನ ಹರಿಸಿ ಈ ಕಣ್ಮನ ಸೆಳೆಯುವ ಹಾಗೂ ಅಸಾಧಾರಣ ಕಲಾಕೃತಿಯನ್ನು ಹೊಂದಿರುವ ಹಾಸನದ ಕೆಲವು ಅದ್ಬುತಗಳ ಕಡೆಗೆ ನೋಡೋಣ

ಬುಸ್ಸೇಶ್ವರ ದೇವಾಲಯ

ಬುಸ್ಸೇಶ್ವರ ದೇವಾಲಯ

ಹಾಸನದ ಪ್ರಮುಖ ಸೌಂದರ್ಯವೆಂದರೆ ಅದು ಇಲ್ಲಿನ ಬುಸ್ಸೇಶ್ವರ ದೇವಾಲಯ. ಇದು ನಗರದಿಂದ ಸುಮಾರು 10 ಕಿ.ಮೀ ಅಂತರದಲ್ಲಿರುವ ಒಂದು ಸಣ್ಣ ಹಳ್ಳಿಯಾದ ಕೊರವಾಂಗಲದಲ್ಲಿದೆ. ಇದು ಹೊಯ್ಸಳ ಯುಗದ ಒಂದು ಅತ್ಯಂತ ಅದ್ಬುತವಾದ ಕಲಾವೈಭವಗಳಲ್ಲೊಂದಾಗಿದೆ. ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಬುಸಿ ಎಂಬ ಹೊಯ್ಸಳರ ಸೇನಾ ನಾಯಕನಿಂದ ರಾಜನ ಪಟ್ಟಾಭಿಷೇಕದ ಗೌರವಾರ್ಥವಾಗಿ ನಿರ್ಮಿಸಲಾಯಿತು

ಇದರ ಹತ್ತಿರದಲ್ಲಿ ಇನ್ನೂ ಎರಡು ದೇವಾಲಯಗಳನ್ನು ನಿರ್ಮಿಸಲಾಗಿದೆ. ಇದನ್ನು ಬುಸೀಯ ಸಹೋದರರು ನಿರ್ಮಿಸಿದರು ಎಂದು ನಂಬಲಾಗುತ್ತದೆ. ಈ ಎಲ್ಲಾ ದೇವಾಲಯಗಳ ಗೋಡೆಗಳಲ್ಲಿ ಮತ್ತು ದೇವಾಲಯದ ಕಂಬಗಳಲ್ಲಿ ಕೆತ್ತಲಾದ ವಿಭಿನ್ನ ಶೈಲಿಯ ಮತ್ತು ಸುಂದರವಾದ ವಿನ್ಯಾಸಗಳನ್ನು ಗಮನಿಸಿದರೆ ಇವುಗಳು ಆ ಕಾಲಕ್ಕೆ ಸಂಬಂಧಿಸಿದ ವಾಸ್ತುಶಿಲ್ಪ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಇಂದು, ಈ ದೇವಾಲಯಗಳು ಭಾರತೀಯ ಪುರಾತತ್ವ ಶಾಸ್ತ್ರ ಸಮೀಕ್ಷೆಯ ವ್ಯಾಪ್ತಿಯಲ್ಲಿ ನಿರ್ವಹಿಸಲ್ಪಡುತ್ತಿದೆ. ಮತ್ತು ಸಾವಿರಾರು ಪ್ರವಾಸಿಗರೂ ಅದರಲ್ಲೂ ಇತಿಹಾಸ ಪ್ರಿಯರಿಂದ ಭೇಟಿ ನೀಡಲ್ಪಡುತ್ತಿದೆ. ಈ ದೇವಾಲಯದ ಸುತ್ತಮುತ್ತ ಪ್ರದೇಶದಲ್ಲಿರುವ ದಟ್ಟವಾದ ಹಸಿರುಮಯ ಪ್ರದೇಶವು ಈ ಸ್ಥಳಕ್ಕೆ ನೈಸರ್ಗಿಕ ವಾತಾವರಣದ ಮೆರುಗನ್ನು ನೀಡುತ್ತದೆ.

ಚೆನ್ನಕೇಶವ ದೇವಾಲಯ

ಚೆನ್ನಕೇಶವ ದೇವಾಲಯ

PC: Dineshkannambadi

ಹಾಸನ ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬೇಲೂರಿನಲ್ಲಿ ಈ ಚೆನ್ನಕೇಶವ ದೇವಾಲಯವು ನೆಲೆಸಿದ್ದು ನಿಸ್ಸಂದೇಹವಾಗಿಯೂ ಹಾಸನ ಜಿಲ್ಲೆಯ ಒಂದು ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ದೇವಾಲಯಗಳಲ್ಲೊಂದಾಗಿದೆ. 12ನೇ ಶತಮಾನಗಳ ಹಳೆಯದಾದ ಇತಿಹಾಸವನ್ನು ಹೊಂದಿರುವ ಈ ದೇವಾಲಯವನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಆದೇಶಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ.

ಈ ದೇವಾಲಯದ ನಿರ್ಮಾಣವು ಪೂರ್ಣಗೊಳ್ಳಲು ಸುಮಾರು 103 ವರ್ಷಗಳ ಸಮಯವನ್ನು ತೆಗೆದುಕೊಂಡಿತು. ವಿಷ್ಣು ದೇವರಿಗೆ ಸಮರ್ಪಿತವಾದ ಈ ದೇವಾಲಯದ ಬಗ್ಗೆ ಹಲವಾರು ಪ್ರಾಚೀನ ಬರಹಗಳಲ್ಲಿ ಉಲ್ಲೇಖಿಸಲಾಗಿದೆ.

ಈ ದೇವಾಲಯವನ್ನು ಹಿಂದೂ ಧರ್ಮದವರಲ್ಲಿ ಒಂದು ಪ್ರಮುಖವಾದ ಯಾತ್ರೀ ಸ್ಥಳವೆಂದೂ ಕೂಡಾ ಪರಿಗಣಿಸಲಾಗಿದೆ. ಈ ದೇವಾಲಯವು ಯಾಗಚಿ ನದಿ ದಂಡೆಯ ಮೇಲೆ ನೆಲೆಸಿರುವುದರಿಂದ ದೇವಾಲಯದ ಆವರಣವು ಆರಾಮದಾಯಕ ಮತ್ತು ಅನುಕೂಲಕರವಾಗಿರುತ್ತದೆ.

ವಾಸ್ತು ಶಿಲ್ಪಕ್ಕೆ ಸಂಬಂಧಿಸಿದಂತೆ ಈ ದೇವಾಲಯವು ಗಮನಸೆಳೆಯುವ ರಚನಾತ್ಮಕ ರಚನೆಯನ್ನು ಹೊಂದಿದ್ದು ಇವುಗಳು ಹೊಯ್ಸಳ ಸಾಮ್ರಾಜ್ಯದ ಜನರ ಸಾಮಾನ್ಯ ಜೀವನವನ್ನು ಚಿತ್ರಿಸುವ ಮಾದರಿಗಳು, ಕೆತ್ತನೆಗಳು, ಪ್ರತಿಮೆಗಳು ಇತ್ಯಾದಿಗಳನ್ನು ಹೊಂದಿವೆ.ಇಂತಹ ದೇವಾಲಯಗಳಿಗೆ ನೀವು ಹಾಸನ ಅಥವಾ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿದ್ದಾಗ ಭೇಟಿ ಕೊಡುವುದನ್ನು ತಪ್ಪಿಸಬಾರದು.

ಲಕ್ಷ್ಮಿ ನರಸಿಂಹ ದೇವಾಲಯ

ಲಕ್ಷ್ಮಿ ನರಸಿಂಹ ದೇವಾಲಯ

PC: Bikashrd

ಪ್ರಾಚೀನ ಅದ್ಬುತಗಳಲ್ಲಿ ಇನ್ನೊಂದೆಂದರೆ ಅದು ಲಕ್ಷ್ಮೀ ನರಸಿಂಹ ದೇವಾಲಯ ಇದು ಹಾಸನದಿಂದ 40 ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿಯಾದ ಜಾವಗಲ್ ನಲ್ಲಿದ್ದು ಸುಮಾರು 13ನೇ ಶತಮಾನದ ಇತಿಹಾಸವನ್ನು ಹೊಂದಿದೆ.

ಇನ್ನಿತರ ದೇವಾಲಯಗಳಂತೆ ಈ ದೇವಾಲಯವೂ ಕೂಡಾ ಹೊಯ್ಸಳ ಯುಗಕ್ಕೆ ಸಂಬಂಧಿಸಿದ್ದಾಗಿದ್ದು ವಾಸ್ತುಶಿಲ್ಪ ಜಾಣ್ಮೆಗೆ ಹೆಸರುವಾಸಿಯಾಗಿದೆ. ಈ ದೇವಾಲಯವು ವಿಷ್ಣು ದೇವರ ಅವತಾರವಾದ ಲಕ್ಷ್ಮೀ ನರಸಿಂಹ ದೇವರಿಗೆ ಸಮರ್ಪಿತವಾದುದಾಗಿದೆ. ಈ ದೇವಾಲಯವು ಎತ್ತರದ ಒಂದು ಚೌಕಟ್ಟಿನಲ್ಲಿ ನಿರ್ಮಿತವಾಗಿದ್ದು ಒಂದೇ ಗಾತ್ರದ ಮೂರು ದೇವಾಲಯಗಳನ್ನು ಹೊಂದಿದೆ ಮತ್ತು ಶಿಲ್ಪಗಳು ಮತ್ತು ಕೆತ್ತನೆಗಳು ಮತ್ತು ಅಲಂಕಾರಿಕ ವಸ್ತುಗಳಿಂದ ನಿರ್ಮಿಸಲಾಗಿದೆ.

ಇಲ್ಲಿ ಅನನ್ಯವಾದ ವಾಸ್ತುಶಿಲ್ಪ ಸೌಂದರ್ಯವನ್ನು ಹೊರತುಪಡಿಸಿ ಅನ್ವೇಷಿಸುವಂತಹ ವಿಷಯಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿದ್ದರೂ ಪ್ರತೀವರ್ಷ ಸಾವಿರಾರು ಇತಿಹಾಸ ಪ್ರಿಯರು ಮತ್ತು ಸ್ಥಳೀಯರು ಭೇಟಿ ಕೊಡುತ್ತಾರೆ. ಈ ದೇವಾಲಯದ ಸಂಕೀರ್ಣದ ಗಡಿಯೊಳಗೆ ಒಮ್ಮೆ ನೀವು ಪ್ರವೇಶಿಸಿದಲ್ಲಿ, ನಿಮಗೆ ಸಮಯ ಕಳೆದಿರುವುದೇ ತಿಳಿಯುವುದಿಲ್ಲ ಅಂತಹ ಒಂದು ಐತಿಹಾಸಿಕ ಸೌಂದರ್ಯತೆಯ ಸೆಳವು ಈ ದೇವಾಲಯದಲ್ಲಿದೆ.

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

PC:Nittavinoda

ಕೇದಾರೇಶ್ವರ ದೇವಾಲಯವು ಹಳೇಬೀಡಿನ ಒಂದು ಅತ್ಯಂತ ಜನಪ್ರಿಯ ದೇವಾಲಯಗಳಲ್ಲೊಂದಾಗಿದೆ. ಹೊಯ್ಸಳ ಸಾಮ್ರಾಜ್ಯವು ಹಾಸನದಿಂದ 12ನೇ ಶತಮಾನದ ಸಮಯದಲ್ಲಿ ಸ್ಥಳಾಂತರವಾದ ನಂತರ ಇದು ಹೊಯ್ಸಳರ ಹಳೇಬೀಡು ಹೊಯ್ಸಳರ ರಾಜಧಾನಿಯಾಗಿತ್ತು.

ಮತ್ತು ಈ ದೇವಾಲಯವು ಶಿವ ದೇವರಿಗೆ ಸಮರ್ಪಿತವಾಗಿದ್ದು ಇದನ್ನು ಏಕಶಿಲೆಯಿಂದ ನಿರ್ಮಿಸಲಾಗಿದೆ. ಎತ್ತರದ ಚೌಕಟ್ಟಿನಲ್ಲಿ ನಿರ್ಮಿತವಾದ ಅದ್ಬುತವಾದ ಇನ್ನಿತರ ದೇವಾಲಯಗಳ ಪಟ್ಟಿಯಲ್ಲಿ ಈ ದೇವಾಲಯವೂ ಸೇರಿದ್ದು ಇದೂ ಕೂಡಾ ಮೂರು ಗೋಪುರಗಳನ್ನು ಹೊಂದಿದೆ.

ಆದರೂ ಗೋಡೆ ಮತ್ತು ಕಂಬದ ಮೇಲೆ ಕೆತ್ತಲಾದ ಮಾದರಿಗಳು ಮತ್ತು ವಿನ್ಯಾಸಗಳು ಒಂದು ದೇವಾಲಯದಿಂದ ಇನ್ನೊಂದು ದೇವಾಲಯಕ್ಕೆ ವಿಭಿನ್ನವಾಗಿದೆ. ಈ ದೇವಾಲಯವು ಸುಂದರವಾದ ತೋಟದಿಂದ ಸುತ್ತುವರಿಯಲ್ಪಟ್ಟಿದ್ದು ಕೇದಾರೇಶ್ವರ ದೇವಾಲಯದ ವಾತಾವರಣವು ನಿಮ್ಮ ಮೈಮನಗಳನ್ನು ವಿಶ್ರಾಂತಿಗೊಳಿಸುತ್ತದೆ.ಆದುದರಿಂದ ಇಂತಹ ವಾಸ್ತುಶಿಲ್ಪ ಅದ್ಬುತಕ್ಕೆ ಭೇಟಿ ಕೊಟ್ಟು ಇದರ ಇತಿಹಾಸವನ್ನು ಈ ಋತುವಿನಲ್ಲಿ ಅನ್ವೇಷಣೆ ಮಾಡಿದರೆ ಹೇಗೆ?

ಹೊಯ್ಸಳೇಶ್ವರ ದೇವಾಲಯ

ಹೊಯ್ಸಳೇಶ್ವರ ದೇವಾಲಯ

PC: Ashwin Kumar

ಎಲ್ಲಾ ದೇವಾಲಯಗಳಿಗಿಂತಲೂ ಅತ್ಯಂತ ಹೆಚ್ಚಿ ಪ್ರಸಿದ್ದಿ ಪಡೆದ ದೇವಾಲಯವೆಂದರೆ ಅದು ಹೊಯ್ಸಳೇಶ್ವರ ದೇವಾಲಯ ಇದು ಹಾಸನದಿಂದ 30 ಕಿ.ಮೀ ದೂರದಲ್ಲಿರುವ ಹಳೇಬೀಡಿನಲ್ಲಿ ನೆಲೆಸಿದೆ ಮತ್ತು ಇದು ಹೊಯ್ಸಳ ಚಕ್ರಾದಿಪತಿ ವಿಷ್ಣುವರ್ಧನನಿಂದ ನಿರ್ಮಿತವಾದ ಇನ್ನೊಂದು ದೇವಾಲಯವಾಗಿದೆ. ಈ ದೇವಾಲಯವೂ ಕೂಡ ಶಿವ ದೇವರಿಗೆ ಸಮರ್ಪಿತವಾದುದಾಗಿದೆ ಮತ್ತು 12ನೇ ಶತಮಾನದ ಹಳೆಯ ಇತಿಹಾಸವನ್ನು ಹೊಂದಿದೆ ಮತ್ತು ಇದು ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿತವಾದ ಅತ್ಯಂತ ಹಳೆಯ ದೇವಾಲಯವಾಗಿದೆ.

ಈ ದೇವಾಲಯಗಳು ಅನೇಕ ಮುಸಲ್ಮಾನ ದಾಳಿಕೋರರಿಂದ ಲೂಟಿಗೊಳಗಾಗಿ ಇಂದು ಅವಶೇಷಗಳ ಸ್ಥಿತಿಯಲ್ಲಿದ್ದರೂ ಕೂಡ ಕರ್ನಾಟಕದ ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ದೇವಾಲಯಗಳಲ್ಲಿ ಒಂದೆನಿಸಿದೆ. ಆದುದರಿಂದ ಇದು ಪ್ರತೀ ಇತಿಹಾಸ ಪ್ರಿಯರು ಮತ್ತು ವಾಸ್ತುಶಿಲ್ಪ ವೀಕ್ಷಿಸುವ ಉತ್ಸಾಹಿಗಳು ಭೇಟಿ ಕೊಡಲೇ ಬೇಕೆನಿಸುವಂತಹ ಸ್ಥಳಗಳಾಗಿದೆ. ಈ ಒಂದು ಅಸಾಧಾರಣ ಕಲಾಕೃತಿಯ ಕಡೆಗೆ ಒಂದು ಪ್ರವಾಸಕ್ಕೆ ಆಯೋಜಿಸಿದರೆ ಹೇಗಿರಬಹುದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X