• Follow NativePlanet
Share
» »ಭಾರತದ ಅದ್ಬುತವಾದ ಈ ರಾಜ್ಯಗಳ ಅನ್ವೇಷಣೆ

ಭಾರತದ ಅದ್ಬುತವಾದ ಈ ರಾಜ್ಯಗಳ ಅನ್ವೇಷಣೆ

Written By: Manjula Balaraj Tantry

29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ ಭಾರತವುಗೆ, ವಿಶ್ವದ ಅತ್ಯಂತ ವರ್ಣರಂಜಿತ ಮತ್ತು ರೋಮಾಂಚಕ ರಾಷ್ಟ್ರಗಳಲ್ಲಿ ಒಂದಾಗಿದೆ. ಇದರ ಘನತೆ ಮತ್ತು ಜೀವಂತಿಕೆಯ ಆಳವು ಅಗಾಧವಾಗಿದೆ. ಇಲ್ಲಿಯ ಶಾಶ್ವತವಾದ ಆಕರ್ಷಣೆಗಳು ಮತ್ತು ಶ್ರೇಷ್ಟತೆ ದೇಶದ ಸೌಂದರ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ನಿಸ್ಸಂಶಯವಾಗಿ ಭಾರತವು ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದೆನ್ನುವುದನ್ನು ಆಶ್ಚರ್ಯವೆನಿಸಿದರೂ ಅಲ್ಲಗಳೆಯುವಂತಿಲ್ಲ.

ಇದು ಪ್ರಕ್ರೃತಿಯ ಮಡಿಲಲ್ಲಿರುವ ಅದ್ಬುತವಾದ ರೋಮಾಂಚಕ ಸೌಂದರ್ಯತೆಯನ್ನೊಳಗೊಂಡ ಇನ್ನೂ ಅನೇಕ ಸ್ಥಳಗಳು ಹೊರ ಜಗತ್ತಿಗೆ ಪರಿಚಯವಾಗಬೇಕಿದೆ. ಭಾರತದಲ್ಲಿ ಹಲವು ಪ್ರಶಂಸನೀಯ ರಾಜ್ಯಗಳಿದ್ದು ಅಲ್ಲಿ ನಿಮ್ಮನ್ನು ಮೋಡಿ ಮಾಡುವಂತಹ ಅವುಗಳ ಇತಿಹಾಸವನ್ನು ಕಾಣಬಹುದಾಗಿದೆ ಮತ್ತುಅವುಗಳು ಹೊಂದಿರುವ ನಿಜವಾದ ನಿರಂತರ ಶ್ರಮ ಮತ್ತು ಚೈತನ್ಯದ ಬಗ್ಗೆ ತಿಳಿದುಕೊಳ್ಳಬಹುದು

ಆದುದರಿಂದ ಇಂತಹ ಸ್ಥಳಗಳಿಗೆ ನೀವು ಏಕೆ ಭೇಟಿ ನೀಡಬಾರದು? ಅವುಗಳ ಪ್ರಕಾಶಮಾನವಾದ ಮತ್ತು ಉತ್ತೇಜಕ ಗುಣಲಕ್ಷಣಗಳ ಕಡೆಗೆ ಒಂದು ನೋಟಹರಿಸಿ. ಹಾಗಾದರೆ ಭಾರತದ ಇಂತಹ ಉತ್ಕೃಷ್ಟ ರಾಜ್ಯಗಳ ಬಗ್ಗೆ ತಿಳಿದುಕೊಳ್ಳೋಣ ಮತ್ತು ಇದು ಖಂಡಿತವಾಗಿಯೂ ಈ ವರ್ಷದ ನಿಮ್ಮ ಪ್ರಯಾಣದ ಪಟ್ಟಿಯಲ್ಲಿರಲಿ.

1) ತ್ರಿಪುರ

1) ತ್ರಿಪುರ

ಈಶಾನ್ಯ ಭಾರತದ ಒಂದು ಗುಡ್ಡಗಾಡು ರಾಜ್ಯವಾದ ತ್ರಿಪುರವು ಏಳು ಸಹೋದರಿ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿ ಸರಾಸರಿ 95% ಸಾಕ್ಷರತೆಯನ್ನು ಹೊಂದಿದ್ದು ಭಾರತದ ಒಂದು ಅತ್ಯಂತ ಸಾಕ್ಷರತೆಯನ್ನು ಹೊಂದಿದ ರಾಜ್ಯವೆನಿಸಿದೆ. ಈ ಸುಂದರವಾದ ಸಣ್ಣ ರಾಜ್ಯವು ತನ್ನಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಜಾನಪದ ಕಲೆಯನ್ನು ಹೊಂದಿದೆ ಇದರ ಜೊತೆಗೆ ಬೆರಗುಗೊಳಿಸುವಂತಹ ಪರ್ವತಗಳ ನೋಟ, ಕಣಿವೆಗಳು ಮತ್ತು ಸೊಂಪಾದ ಬಯಲು ಮುಂತಾದುವುಗಳನ್ನು ಹೊಂದಿದೆ.

ನೀವು ಶಾಂತಿ ಪ್ರೀಯರಾಗಿದ್ದಲ್ಲಿ ನೀವು ಖಂಡಿತವಾಗಿಯೂ ಈ ಪ್ರಶಾಂತವಾದ ಮತ್ತು ಶಾಂತಿಮಯವಾದ ರಾಜ್ಯದಲ್ಲಿ ನಿಮ್ಮನ್ನು ನೀವು ಪ್ರಕೃತಿಯ ಮಡಿಲಲ್ಲಿ ಮತ್ತು ಸುತ್ತಲೂ ಹಸಿರುಮಯ ವಾತಾವರಣದಲ್ಲಿ ತೊಡಗಿಸಿಕೊಳ್ಳಬಹುದು

ಭೇಟಿ ನೀಡಲು ಸೂಕ್ತ ಸಮಯ - ಸೆಪ್ಟೆಂಬರ್ ನಿಂದ ಮಾರ್ಚ್


PC- Soman

2) ಜಾರ್ಖಂಡ್

2) ಜಾರ್ಖಂಡ್

ನೈಸರ್ಗಿಕ ಕಾಡುಗಳಿಂದ ಹರಡಿರುವ ಸುಂದರ ಸೌಂದರ್ಯತೆಯನ್ನು ಹೊಂದಿರುವ ಮತ್ತೊಂದು ಗುಪ್ತ ರಾಜ್ಯವೆಂದರೆ ಅದು ಜಾರ್ಖಂಡ್. ಇದನ್ನು ಕಾಡುಗಳ ನೆಲವೆಂದೂ ಕರೆಯಲಾಗುತ್ತದೆ. ಈ ಇನ್ನೂ ಹೊರ ಜಗತ್ತಿಗೆ ಬಹಿರಂಗವಾಗದ ರಾಜ್ಯವು ಕಾಡುಗಳಿಂದ ಆವರಿಸಲ್ಪಟ್ಟಿದೆ ಮತ್ತು ಇದರಿಂದಾಗಿ ಅಳಿವಿನಂಚಿನಲ್ಲಿರುವ ಕೆಲವು ಅಪರೂಪದ ಜಾತಿಯ ಜೀವವೈವಿಧ್ಯಗಳನ್ನು ನೋಡಬಹುದಾಗಿದೆ.

ವಾಣಿಜ್ಯೀಕರಣದಿಂದ ಇನ್ನೂ ದೂರ ಉಳಿದಿರುವ ಜಾರ್ಖಂಡ್ ತನ್ನ ನೈಸರ್ಗಿಕ ಸೌಂದರ್ಯತೆಯ ಚಿತ್ರಣವನ್ನು ಉಳಿಸಿಕೊಂಡಿದೆ ಮತ್ತು ಇದರ ಸ್ವಚ್ಚವಾದ ಸೌಂದರ್ಯತೆಯು ನಿಜವಾಗಿಯೂ ಅದ್ಬುತವಾಗಿದ್ದು ಇಂತಹ ಭೂಪ್ರದೇಶವನ್ನು ನೀವು ಭೇಟಿ ಕೊಡಲು ಇಚ್ಚಿಸಿದಲ್ಲಿ ಅಂತಹ ಆಕರ್ಷಕ ಅವಕಾಶವನ್ನು ಖಂಡಿತವಾಗಿಯೂ ತಪ್ಪಿಸಬೇಡಿ.

ಇಲ್ಲಿ, ಹೋಂಡ್ರು ನಂತಹ ಸುಂದರವಾದ ಜಲಪಾತಗಳ ಜೊತೆಗೆ ನೀವು ಇಲ್ಲಿಯ ಸಾಂಪ್ರದಾಯಿಕ ಜೀವನಶೈಲಿಯನ್ನು ಅನ್ವೇಷಿಸಬಹುದು. ಈ ಸ್ಥಳವು ಅನೇಕ ಚಾರಣಿಗರು ಮತ್ತು ಪ್ರಕೃತಿ ಪ್ರಿಯರಿಗೆ ಸಹ ಅನುಕೂಲವಾಗಿದೆ.

ಭೇಟಿ ನೀಡಲು ಸೂಕ್ತ ಸಮಯ - ನವೆಂಬರ್ ನಿಂದ ಮಾರ್ಚ್

PC- SDAkashdass81

3) ನಾಗಾಲ್ಯಾಂಡ್

3) ನಾಗಾಲ್ಯಾಂಡ್

ಈಶಾನ್ಯ ಭಾರತದ ಪರ್ವತ ರಾಜ್ಯ, ಹಾಗೂ ಶ್ರೀಮಂತ ಜೀವವೈವಿಧ್ಯದೊಂದಿಗಿನ ಈ ರಾಜ್ಯವು ನಿಮ್ಮ ಮುಂದಿನ ಗಮ್ಯಸ್ಥಾನವಾಗಿರುತ್ತದೆ. ತಮ್ಮದೇ ಆದ ಭಾಷೆ ಮತ್ತು ಸಂಪ್ರದಾಯಗಳೊಂದಿಗೆ ಒಟ್ಟು 16 ಸ್ಥಳೀಯ ನಾಗಾ ಬುಡಕಟ್ಟು ಜನಾಂಗದವರು ಈ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ.

ವೈವಿಧ್ಯಮಯ ಸಾಂಸ್ಕೃತಿಕ ಜೀವನಶೈಲಿ ಮತ್ತು ಸಸ್ಯ ವರ್ಗದಲ್ಲಿ ಸಮೃದ್ಧವಾಗಿರುವ ಈ ರಾಜ್ಯವು ತನ್ನ ಹೇರಳವಾದ ಸೌಂದರ್ಯದೊಂದಿಗೆ ಇನ್ನೂ ಅಖಂಡವಾಗಿದೆ ಮತ್ತು ಹೊಳೆಯುತ್ತಿದೆ. ನೀವು ಶತಮಾನಗಳ-ಹಳೆಯ ಬುಡಕಟ್ಟು ಜನಾಂಗದವರ ಜೀವನವನ್ನು ಅನುಭವಿಸಲು ಮತ್ತು ಅವರ ಪದ್ದತಿಗಳು ಮತ್ತು ದೈನಂದಿನ ಜೀವನ ಶೈಲಿಯನ್ನು ಕಲಿಯಲು ಬಯಸಿದರೆ, ನಿಸ್ಸಂದೇಹವಾಗಿ, ಈ ಸ್ಥಳವು ನೀವು ಬಯಸಿದ ಸ್ಥಳವಾಗಿದೆ.

PC- Dhrubazaanphotography


4) ಅರುಣಾಚಲ ಪ್ರದೇಶ

4) ಅರುಣಾಚಲ ಪ್ರದೇಶ

ಇದು ಭಾರತದ ಆರ್ಕಿಡ್ ರಾಜ್ಯ ಎಂದೂ ಸಹ ಕರೆಯಲ್ಪಡುತ್ತದೆ, ಏಳು ಸಹೋದರಿ ರಾಜ್ಯಗಳಲ್ಲಿ ಇದು ಅತ್ಯಂತ ದೊಡ್ಡದಾಗಿದೆ. ಇದು ಇದರ ನೈಸರ್ಗಿಕ ಸೌಂದರ್ಯತೆಗೆ ಹೆಸರುವಾಸಿಯಾಗಿದ್ದು, ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗವೆನಿಸಿದೆ. ಜಲಪಾತಗಳಿಂದ ಹಿಡಿದು ಬೆಟ್ಟಗಳವರೆಗೆ ಮತ್ತು ಸಮೃದ್ದವಾದ ಬಯಲಿನಿಂದ ಶ್ರೀಮಂತ ಕಾಡುಗಳವರೆಗೆ ಎಲ್ಲ ಪ್ರಕೃತಿ ಸೌಂದರ್ಯಗಳನ್ನು ಅರುಣಾಚಲ ಪ್ರದೇಶವು ತನ್ನಲ್ಲಿ ಹುದುಗಿಸಿಕೊಂಡಿದೆ.

ಈ ನೈಸರ್ಗಿಕ ಸ್ವರ್ಗವನ್ನು ಎಲ್ಲರಿಗೂ ಭೇಟಿ ಮಾಡಲು ಅಸಾಧ್ಯವಾದುದಾಗಿದೆ ಮತ್ತು ಅದ್ಬುತವಾದ ದೃಶ್ಯಗಳು ವಿಸ್ಮಯರಾಗಲು ಸಾಧ್ಯವಾಗುವುದಿಲ್ಲ. ಹಲವಾರು ಆಳವಾದ ಕಣಿವೆಗಳಿಂದ ಪುರಾತನ ಸ್ಮಾರಕಗಳವರೆಗೆ , ಅರುಣಾಚಲ ಪ್ರದೇಶವು ಈಶಾನ್ಯ ಭಾರತದ ಅಚ್ಚರಿಯ ನೆಲವೆನಿಸಿದೆ.

ಈ ರಾಜ್ಯವು ಚೀನಾದೊಂದಿಗೆ ಹಲವಾರು ಸಂಘರ್ಷಗಳನ್ನು ಹೊಂದಿದ್ದರೂ, ಇದರಿಂದ ಎಲ್ಲಾ ಸಂಪನ್ಮೂಲಗಳ ಸಮೃದ್ಧಿಯನ್ನು ತಡೆಯಲು ಸಾಧ್ಯವಾಗಿಲ್ಲ. ಈ ಸ್ಥಳಗಳಿಗೆ ಭೇಟಿ ಕೊಟ್ಟು ಇದರ ಬಗ್ಗೆ ಇನ್ನೂ ಹೆಚ್ಚಿನದನ್ನು ಅನ್ವೇಷಿಸಬಾರದೇಕೆ? ಈ ಅದ್ಬುತ ನೆಲಕ್ಕೆ ಭೇಟಿ ಕೊಡಲು ನಿಮ್ಮನ್ನು ನೀವು ತಯಾರು ಮಾಡಿಕೊಳ್ಳಿ.

ಭೇಟಿ ನೀಡಲು ಉತ್ತಮ ಸಮಯ - ವರ್ಷವಿಡೀ

PC- Krish9


5) ಛತ್ತೀಸಗಢ

5) ಛತ್ತೀಸಗಢ

ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ಈ ರಾಜ್ಯದಲ್ಲಿ ಸುತ್ತಾಡಲು ಅನೇಕ ಸ್ಥಳಗಳಿವೆ ಮತ್ತು ಅನೇಕ ಗುಪ್ತ ವಿಷಯಗಳನ್ನು ಕಂಡುಹಿಡಿಯಬಹುದಾಗಿದೆ. ಇಲ್ಲಿಯ ನಕ್ಸಲೈಟ್ ಗಳಿಂದ ಕುಖ್ಯಾತಿಗೊಳಗಾದ ಈ ರಾಜ್ಯವು ಪ್ರತೀ ಹೆಜ್ಜೆಗೂ ಅಚ್ಚರಿಗಳನ್ನೊಳಗೊಂಡಿದೆ. ಸಿರ್ಪುರದ ಪ್ರಾಚೀನ ಅವಶೇಷಗಳಿಂದ ಕೈಲಾಶ್ ಗುಹೆಗಳವರೆಗೂ, ಛತ್ತೀಸಗಢವು ತನ್ನ ಸಂದರ್ಶಕರನ್ನು ವಿಸ್ಮಯಗೊಳಿಸುವುದನ್ನು ನಿಲ್ಲಿಸುವುದಿಲ್ಲ. ಅಲ್ಲದೆ ಭಗವಾನ್ ರಾಮನು ತನ್ನ ಗಡಿಪಾರು ಸಂಧರ್ಬದಲ್ಲಿ ಈ ರಾಜ್ಯದಲ್ಲಿ ಹೆಚ್ಚಿನ ಸಮಯವನ್ನು ಕಳೆದರು ಎನ್ನಲಾಗುತ್ತದೆ.

ಕೋಸಾ ರೇಷ್ಮೆ ಮತ್ತು ಮೇಣದ ಕಲೆಗೆ ಹೆಸರುವಾಸಿಯಾಗಿದೆ.ಈ ಸುಂದರವಾದ ಹಳೆಯ ರಾಜ್ಯವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಛತ್ತೀಸ್ ಗಢವು ಜಾರ್ಖಂಡ್ನಂತಹ ಕಾಡಿನ ಪ್ರದೇಶವನ್ನು ಹೊಂದಿದ್ದು ದೇಶಕ್ಕೆ ವಿದ್ಯುತ್ ಮತ್ತು ಉಕ್ಕಿನ ದೊಡ್ಡ ಮೂಲವಾಗಿದೆ.

ಆದ್ದರಿಂದ, ಇವುಗಳು ಭಾರತದಲ್ಲಿ ಕಡಿಮೆ-ಭೇಟಿ ನೀಡಲ್ಪಡುವ , ವಿಸ್ಮಯಕಾರಿ ರಾಜ್ಯಗಳಾಗಿವೆ.ಆದ್ದರಿಂದ ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ವಿಹಾರಕ್ಕೆ ಯೋಜನೆ ಮಾಡಿ ಮತ್ತು ಭಾರತದ ಅದ್ಭುತ ರಾಜ್ಯಗಳ ಶ್ರೀಮಂತ ಜೀವವೈವಿಧ್ಯತೆಗಳ ಆನಂದ ಪಡೆಯಿರಿ. ವಿಲಕ್ಷಣ ಸ್ವರೂಪವನ್ನು ಅನುಭವಿಸುವ ಮತ್ತು ಭಾರತದ ಈ ಮನರಂಜಿಸುವ ರಾಜ್ಯಗಳಲ್ಲಿ ಇತಿಹಾಸದ ಕೆಲವು ಪುಟಗಳನ್ನು ಮೆಲುಕು ಹಾಕುವ ಅವಕಾಶವನ್ನು ಕಳೆದುಕೊಳ್ಳಬೇಡಿ.

PC- Tanvirkhan89


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ