Search
  • Follow NativePlanet
Share
» »ಕೇರಳದ ಗುಪ್ತ ಗಿರಿಧಾಮಗಳ ಅನ್ವೇಷಣೆ ಮಾಡಿ

ಕೇರಳದ ಗುಪ್ತ ಗಿರಿಧಾಮಗಳ ಅನ್ವೇಷಣೆ ಮಾಡಿ

By Manjula Balaraj Tantry

ಕೇರಳದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಸಿದ್ಧ ಜಿಲ್ಲೆಗಳಲ್ಲಿ ಇದೂ ಒಂದಾಗಿದ್ದು ಪಟಾನಂತಿಟ್ಟ ಅನೇಕ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಇನ್ನೂ ತಿಳಿಯದೇ ಇರುವ ಸ್ಥಳವಾಗಿದೆ. ಇಲ್ಲಿ ಯಾತ್ರಿ ಸ್ಥಳದಿಂದ ಹಿಡಿದು ಜಲಪಾತಗಳವರೆಗೆ ಮತ್ತು ಬೆಟ್ಟಗಳಿಂದ ಹಿಡಿದು ಸುಂದರವಾದ ತೋಟಗಳವರೆಗೆ ಈ ಕಡಿಮೆ ಅನ್ವೇಷಿತ ಗಡಿಯೊಳಗೆ ಪ್ರವಾಸಿಗರನ್ನು ಬೆರಗುಗೊಳಿಸುವಂತಹ ಎಲ್ಲವನ್ನೂ ಹೊಂದಿದೆ.

ಪ್ರತಿಯೊಬ್ಬ ಪ್ರಯಾಣಿಕರು ಇಲ್ಲಿಯ ಅಡಗಿರುವ ಸೌಂದರ್ಯತೆ ಮತ್ತು ಇಲ್ಲಿಯ ಹಸಿರು ಪರಿಸರ ಮತ್ತು ಪ್ರಕೃತಿಯ ಇರುವಿಕೆಯನ್ನು ಅನುಭವಿಸಲೇಬೇಕು ಮತ್ತು ಇಲ್ಲಿಗೆ ಭೇಟಿ ಕೊಡಲೇಬೇಕಾದುದು.

ಇಲ್ಲಿಯ ಕಡಿಮೆ ಜನಸಂದಣಿ ಮತ್ತು ಮಾಲಿನ್ಯರಹಿತ ವಾತಾವರಣದ ಕಾರಣದಿಂದಾಗಿ ಇದು ಆಪ್ಬೀಟ್ ಪ್ರಯಾಣಿಕರಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಆದುದರಿಂದ ನೀವು ಅಸಂಪ್ರದಾಯಿಕ ಪ್ರವಾಸಿಗರಲ್ಲಿ ನೀವೂ ಒಬ್ಬರಾಗಿದ್ದಲ್ಲಿ, ಮತ್ತು ಪರಿಮಿತಿಗೂ ಮೀರಿ ಅನ್ವೇಷಣೆ ಮಾಡ ಬಯಸುತ್ತಿದ್ದಲ್ಲಿ ಪಟಾನಂತಿಟ್ಟ ಈ ಋತುವಿನಲ್ಲಿ ನಿಮಗೆ ಭೇಟಿ ಕೊಡಲು ಯೋಗ್ಯವಾದ ಸ್ಥಳವಾಗಿದೆ.

1. ಚಿತ್ತಾರ್

1. ಚಿತ್ತಾರ್

Chinchu.c

ಪಟಾನಂತಿಟ್ಟಾದಿಂದ 20 ಕಿ.ಮೀ ಅಂತರದಲ್ಲಿ ಈ ಜಾಗವು ಇದ್ದು ಚಿತ್ತಾರವು ರಬ್ಬರ್ ತೋಟ ಮತ್ತು ಅನಾನಾಸ್ , ಶುಂಠಿ ಮತ್ತು ಕರಿಮೆಣಸಿನ ಕೃಷಿಗಾಗಿ ಹೆಸರುವಾಸಿಯಾಗಿದೆ. ಆದುದರಿಂದ ಚಿತ್ತಾರ್ ನ ಸುತ್ತಮುತ್ತಲಿನ ಪ್ರದೇಶವು ಸೊಂಪಾದ ಸಸ್ಯವರ್ಗದಿಂದ ಚಿತ್ರಿಸಲ್ಪಟ್ಟಿದೆ. ಆದರೂ ಇದು ಕಾಫಿ ಮತ್ತು ಟೀ ತೋಟಗಳ ಕೇಂದ್ರವೂ ಆಗಿತ್ತು.

2. ಪ್ರಶಾಂತ ವಾತಾವರಣ

2. ಪ್ರಶಾಂತ ವಾತಾವರಣ

Goutham ps

ಇಲ್ಲಿ ಹೆಚ್ಚಿನ ಈ ಹಸಿರುಮಯ ಸ್ಥಳವಲ್ಲದೆ ಇಲ್ಲಿ ಹೆಚ್ಚಿನದೇನೂ ನೋಡಲು ಇಲ್ಲವಾದರು ಶಾಂತಯುತವಾದ ಮತ್ತು ಪ್ರಶಾಂತ ವಾತಾವರಣದ ಪ್ರಕೃತಿಯ ಮಧ್ಯೆ ನಗರದಲ್ಲಿರುವಂತೆ ಸದ್ದು ಗದ್ದಲಗಳ ತೊಂದರೆ ಇಲ್ಲದೆ ಶಾಂತಿಯುತವಾಗಿ ಕಳೆಯಬಹುದಾಗಿದೆ. ಈ ಸಂಯೋಜಿತ ಪ್ರದೇಶದಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳಬೇಕೆಂದು ಬಯಸುವುದಿಲ್ಲವೇ ?

3. ಗವಿ

3. ಗವಿ

Samson Joseph

ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ನಯನ ಮನೋಹರ ದೃಶ್ಯಗಳನ್ನು ನೋಡಲು ಸೂಕ್ತವಾದ ಸ್ಥಳವೆಂದು ಪರಿಗಣಿಸಲ್ಪಡುವ ಪಟಾನಂತಿಟ್ಟದಿಂದ ಸ್ವಲ್ಪ ದೂರದಲ್ಲಿರುವ ಗವಿಯು ಸಣ್ಣ ಸ್ವರ್ಗವನ್ನೇ ಸೃಷ್ಟಿಸುತ್ತದೆ.

ಇದು ಪಟಾನಂತಿಟ್ಟದ ನಗರ ಪ್ರದೇಶದಿಂದ ಸುಮಾರು 80 ಕಿ.ಮೀ ಅಂತರದಲ್ಲಿದೆ. ಸುಂದರವಾದ ಮತ್ತು ಶ್ರೀಮಂತವಾದ ಕಾಡುಗಳಿಂದ ಆವರಿಸಲ್ಪಟ್ಟಿದ್ದು ಮತ್ತು ಹಲವಾರು ದೃಶ್ಯ ಗಳನ್ನು ವೀಕ್ಷಿಸುವ ಸ್ಥಳಗಳನ್ನು ತನ್ನಲ್ಲಿ ಹೊಂದಿದೆ ಅಲ್ಲದೆ ಗವಿಯ ನೆಲವು ಪೆರಿಯಾರಿ ಹುಲಿಗಳ ರಕ್ಷಣೆ ಮಾಡುವ ಒಂದು ಭಾಗವಾಗಿದೆ ಆದುದರಿಂದ ಇದು ವರ್ಷವಿಡಿ ವೈವಿಧ್ಯಮಯ ಪ್ರಾಣಿ ಜೀವಿಗಳನ್ನು ತನ್ನಲ್ಲಿ ಹೊಂದುತ್ತದೆ.

4. ಅಳಿವಂಚಿನಲ್ಲಿರುವ ಪ್ರಾಣಿ

4. ಅಳಿವಂಚಿನಲ್ಲಿರುವ ಪ್ರಾಣಿ

Arun Suresh

ಇಲ್ಲಿ ಹೂಬಿಡುವ ಸಸ್ಯಗಳಿಂದ ಹಿಡಿದು ಅಳಿವಂಚಿನಲ್ಲಿರುವ ಪ್ರಾಣಿಗಳವರೆಗೆ ಮತ್ತು ದಟ್ಟವಾದ ಹುಲ್ಲುಗಾವಲುಗಳಿಂದ ಹಿಡಿದು ಜಲಪಾತಗಳವರೆಗೆ ಗವಿಯ ಪ್ರತಿಯೊಂದು ಮೂಲೆಯಲ್ಲಿಯೂ ಅನ್ವೇಷಿಸಬೇಕಾದಂತಹ ಅನೇಕ ವಿಷಯಗಳನ್ನು ಹೊಂದಿದೆ.

ಗವಿಯ ಗಡಿಯೊಳಗಿರುವ ವಾತಾವರಣದಲ್ಲಿಯ ಈ ತಾಜಾತನವು ಇದರೊಳಗೆ ಹೋಗುವಂತೆ ಇಲ್ಲಿಗೆ ಭೇಟಿ ಕೊಡುವವರನ್ನು ಪ್ರೇರೇಪಿಸುತ್ತದೆ. ಆದುದರಿಂದ ನೀವು ಇನ್ನೂ ಯಾಕಾಗಿ ಕಾಯುತ್ತಿರುವಿರಿ? ನಿಮ್ಮ ಬ್ಯಾಗುಗಳನ್ನು ಪ್ಯಾಕ್ ಮಾಡಿಕೊಂಡು ಕೇರಳದ ಗವಿಯ ಕಡೆ ಪ್ರಯಾಣ ಬೆಳೆಸಿ.

5. ರಾನ್ನಿ

5. ರಾನ್ನಿ

Tonynirappathu

ಪಟಾನಂತಿಟ್ಟದ ನಗರ ಪ್ರದೇಶದಿಂದ 40ಕಿ.ಮೀ ದೂರದಲ್ಲಿರುವ ರಾನ್ನಿಯು ದಟ್ಟವಾದ ಕಾಡುಗಳಿಂದಾಗಿ ಸ್ಥಳೀಯರಲ್ಲಿ ಹೆಸರುವಾಸಿಯಾಗಿದೆ. ಈ ಕಾಡುಗಳಲ್ಲಿ ಬೆಟ್ಟಗಳು ಜಲಪಾತಗಳು ಮತ್ತು ವನ್ಯಜೀವಿಗಳನ್ನು ಕಾಣಬಹುದಾಗಿದೆ. ಮಳೆಗಾಲದ ಸಮಯದಲ್ಲಿ ರಾನ್ನಿಯು ಸುತ್ತಲೂ ಹಸಿರಿನಿಂದ ಸುತ್ತುವರಿಯಲ್ಪಡುತ್ತದೆ. ಆದುದರಿಂದ ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆಯಲು ಒಂದು ಸೂಕ್ತವಾದ ಸ್ಥಳವನ್ನು ಒದಗಿಸಿಕೊಡುತ್ತದೆ.

6. ಸಾವಿರಾರು ವರ್ಷಗಳ ಇತಿಹಾಸ

6. ಸಾವಿರಾರು ವರ್ಷಗಳ ಇತಿಹಾಸ

Anandtr2006

ಪಂಪಾ ನದಿ ದಡದಲ್ಲಿರುವ ರಾನ್ನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಆದುದರಿಂದ ಇಲ್ಲಿ ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವುಳ್ಳ ಸ್ಥಳಗಳನ್ನು ಕಾಣಬಹುದಾಗಿದೆ. ಕೇರಳದ ಗುಪ್ತ ಅದ್ಬುತವನ್ನು ನೋಡಲು ಬಯಸುತ್ತಿದ್ದಲ್ಲಿ ನೀವು ರಾನ್ನಿಗೆ ಭೇಟಿ ಕೊಡಬೇಕು.

7. ಅಚಾಂಕೋವಿಲ್

7. ಅಚಾಂಕೋವಿಲ್

REPhotography06

ಕೇರಳದ ಪಟಾನಂ ತಿಟ್ಟ ಜಿಲ್ಲೆಯ ಅತ್ಯಂತ ಶ್ರೇಷ್ಠವಾದ ಸ್ಥಳವೆಂದರೆ ಅದು ಅಚಾಂಕೋವಿಲ್ ಇದು ಭೇಟಿ ಕೊಡಲೇ ಬೇಕಾದಂತಹ ಸ್ಥಳವಾಗಿದ್ದು ಯಾವುದೇ ಪ್ರಯಾಣಿಕರು ಅಥವಾ ಪ್ರವಾಸಿಗರು ಭೇಟಿ ಕೊಡಲು ಮರೆಯಲೇ ಬಾರದಂತಹ ಸ್ಥಳವಾಗಿದೆ. ಇದರ ಅದ್ಬುತ ಸೌಂದರ್ಯವು ಇದರ ಕಾಡುಗಳಲ್ಲಿದೆ ಮತ್ತ ಎತ್ತರದಿಂದ ಬೀಳುವ ಜಲಪಾತಗಳ ಮಧುರ ಸ್ವರಗಳು ಇವೆಲ್ಲವನ್ನು ಹೊಂದಿರುವ ಅಚಾಂಕೋವಿಲ್ ಒಂದು ನೈಸರ್ಗಿಕ ಸ್ಥಳವು ಏನೆಲ್ಲ ಸೌಂದರ್ಯತೆಯನ್ನು ಹೊಂದಿರಬೇಕೋ ಅವೆಲ್ಲವನ್ನೂ ಹೊಂದಿದೆ. ಕೇರಳದಲ್ಲಿ ವಿಸ್ತಾರವಾಗಿ ಹರಡಿರುವ ಅಚಾಂಕೋವಿಲ್ ನದಿಯ ಹೆಸರನ್ನೆ ಈ ಸ್ಥಳಕ್ಕೆ ಇಡಲಾಗಿದ್ದು ಈ ಪ್ರದೇಶವು ಸಮೃದ್ಧ ಸಸ್ಯವರ್ಗ ಮತ್ತು ಅಭಿವೃದ್ಧಿ ಹೊಂದುತ್ತಿರುವ ವನ್ಯಜೀವಿಗಳನ್ನು ಒಳಗೊಂಡಿದೆ.

8. ಅಚಾಂಕೋವಿಲ್

8. ಅಚಾಂಕೋವಿಲ್

Jaseem Hamza

ಇದು ಪಟಾನಂತಿಟ್ಟಾ ಪಟ್ಟಣದಿಂದ ಸುಮಾರು 60 ಕಿ.ಮೀ ಅಂತರದಲ್ಲಿದೆ ಇದನ್ನು ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ನೀವು ಪ್ರಕೃತಿಯ ಗುಪ್ತ ಸೌಂದರ್ಯದ ಮಾಂತ್ರಿಕ ಮೋಡಿಯನ್ನು ಹೊಂದಿರುವ ಸ್ಥಳವನ್ನು ನೋಡಲು ಬಯಸುತ್ತಿದ್ದಲ್ಲಿ ಈ ಋತುವಿನಲ್ಲಿ ಅಚಾಂಕೋವಿಲ ನಿಮಗೆ ಅನ್ವೇಷಣೆ ಮಾಡಲು ಸೂಕ್ತವಾದ ಸ್ಥಳವಾಗಿದೆ.

9. ಕೊನ್ನಿ

9. ಕೊನ್ನಿ

ACKSEN

ಕೇರಳದ ಸೊಂಪಾದ ಹಸಿರುಮನೆಗಳ ಮಧ್ಯೆ ಹರಡಿರುವ ಮತ್ತೊಂದು ಸೌಂದರ್ಯವೆನಿಸಿರುವ ಕೊನ್ನಿ ಸುಂದರವಾದ ಪಟ್ಟಣವಾಗಿದ್ದು, ಇದನ್ನು ಸಾಮಾನ್ಯವಾಗಿ ಸ್ಥಳೀಯರಲ್ಲಿ ಆನೆಗಳ ತರಬೇತಿ ಕೇಂದ್ರವೆಂದು ಹೆಸರುವಾಸಿಯಾಗಿದೆ. ಇದಲ್ಲದೆ ಕೊನ್ನಿಯು ಅನೇಕ ಪ್ರವಾಸಿ ಆಕರ್ಷಣೆಗಳಿಗೂ ಹೆಸರುವಾಸಿಯಾಗಿದೆ ಇದು ಶ್ರಿ ಮಹಾದೇವರ್ ದೇವಾಲಯ ಮತ್ತು ಕುಂಬ್ವರುಟ್ಟಿ ಜಲಪಾತಗಳಂತಹ ಆಕರ್ಷಣೆಗಳನ್ನು ಒಳಗೊಂಡಿದೆ.

10. ಅದಾವಿ ಪರಿಸರ ಪ್ರವಾಸೋದ್ಯಮ

10. ಅದಾವಿ ಪರಿಸರ ಪ್ರವಾಸೋದ್ಯಮ

Sujithnairv

ನೀವು ಕಟ್ಟತಿಪಾರ ಮತ್ತು ಅದಾವಿ ಪರಿಸರ ಪ್ರವಾಸೋದ್ಯಮವನ್ನು ಇಲ್ಲಿಗೆ ಭೇಟಿ ನೀಡಬಹುದು. ಕೊನ್ನಿ ಪ್ರದೇಶದ ಗಡಿಯೊಳಗೆ ಅನೇಕ ಸ್ಥಳಗಳಿಲ್ಲವಾದರು ಇದರ ಪ್ರದೇಶದ ಹೊರಗಡೆ ಅನ್ವೇಷಣೆ ಮಾಡಬೇಕಾಗುತ್ತದೆ. ಇದು ಸಾಮಾನ್ಯವಾಗಿ ಹಸಿರು ಸಸ್ಯವರ್ಗದಿಂದ ಮುಚ್ಚಲ್ಪಟ್ಟಿದೆ. ಆದುದರಿಂದ ಈ ಋತುವಿನಲ್ಲಿ ಇಂತಹ ಕಡಿಮೆ ಪರಿಶೋಧಿತ ಪ್ರದೇಶವನ್ನು ಭೇಟಿ ಕೊಡಲು ಇನ್ನೂ ಯೋಚನೆ ಮಾಡುತ್ತಿರುವಿರ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more