• Follow NativePlanet
Share
» »ಬೆಂಗಳೂರಿನ ಸಮೀಪ ಇರುವ ಈ ತಾಜಾ ಕ್ಯಾಂಪಿಂಗ್ ತಾಣಗಳನ್ನು ಅನ್ವೇಷಿಸಿ

ಬೆಂಗಳೂರಿನ ಸಮೀಪ ಇರುವ ಈ ತಾಜಾ ಕ್ಯಾಂಪಿಂಗ್ ತಾಣಗಳನ್ನು ಅನ್ವೇಷಿಸಿ

Posted By: Manjula Balaraj Tantry

ಭಾರತದಲ್ಲಿಯ ಹೇರಳವಾದ ಹಾಗೂ ಅತ್ಯಂತ ಸುಂದರ ಸ್ಥಳಗಳಿಂದಾಗಿ ಪ್ರವಾಸೋದ್ಯಮದಲ್ಲಿ ಹೆಚ್ಚಳ ಕಂಡುಬಂದಿದೆ. ಯಾವಾಗಲೂ ಪ್ರವಾಸ ಮಾಡುವ ಪ್ರಯಾಣಿಗರ ಪಟ್ಟಿಯಲ್ಲಿ ಈ ಆಪ್ಬೀಟ್ ತಾಣಗಳು ತಮ್ಮ ಜಾಗವನ್ನು ಮಾಡಿಕೊಳ್ಳುವುದರಲ್ಲಿ ಎಂದಿಗೂ ಹಿಂದೆ ಉಳಿದಿಲ್ಲ. ಇಂತಹ ಪ್ರಯಾಣಿಗರಲ್ಲಿ ನೀವೂ ಒಬ್ಬರಾಗಿದ್ದಲ್ಲಿ, ನಿಮಗಾಗಿ ಇಲ್ಲಿ ಕೆಲವು ಜಾಗಗಳಿವೆ ಇಲ್ಲಿ ನೀವು ಕ್ಯಾಂಪಿಂಗ್ ಮಾಡಬಹುದು ಮತ್ತು ಈ ಸ್ಠಳಗಳ ಮೂಲ ಸೌಂದರ್ಯವನ್ನು ಅನ್ವೇಷಣೆ ಮಾಡಬಹುದಾಗಿದೆ.

ನಾವೆಲ್ಲರು ನಮ್ಮ ನಿರಂತರ ಜೀವನದಿಂದ ಹೊರಬಂದು ಎಲ್ಲಾದರೂ ದಟ್ಟ ಹಸಿರಿನ ಮಧ್ಯೆ ಮತ್ತು ಶ್ರೀಮಂತ ಪ್ರಕೃತಿಯ ಮಧ್ಯೆ ಕಳೆಯಲು ಇಷ್ಟ ಪಡುತ್ತೇವೆ. ಅವುಗಳಲ್ಲಿ ಕ್ಯಾಂಪಿಂಗ್ ಕೂಡಾ ಒಂದಾಗಿದ್ದು ಇದರಿಂದಾಗಿ ನೀವು ಪ್ರಕೃತಿಯ ಜೊತೆ ಒಂದು ಸಂಪರ್ಕವನ್ನು ಹೊಂದಬಹುದು ಮತ್ತು ಅದರ ಸುಂದರವಾದ ಸೌಂದರ್ಯತೆಯನ್ನು ಅನುಭವಿಸಬಹುದು. ಆದುದರಿಂದ ಈ ಋತುವಿನಲ್ಲಿ ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕ್ಯಾಂಪಿಂಗ್ ಮಾಡಿದರೆ ಹೇಗಿರಬಹುದು?

ಸರಿ, ನೀವು ಸ್ಥಳಗಳಲ್ಲಿ ಸುತ್ತಾಡಲು ಮತ್ತು ಅವುಗಳಲ್ಲಿ ಹುದುಗಿರುವ ಸೌಂದರ್ಯತೆಯನ್ನು ಅನ್ವೇಷಣೆ ಮಾಡುವುದಕ್ಕೆ ಎಂದಿಗೂ ಸುಸ್ತಾಗದಿದ್ದಲ್ಲಿ, ನೀವು ಬೆಂಗಳೂರಿನ ಹತ್ತಿರವಿರುವ ಕ್ಯಾಂಪಿಂಗ್ ತಾಣಗಳಿಗೆ ಭೇಟಿ ಕೊಟ್ಟು ಈ ಭವ್ಯವಾದ ಮತ್ತು ಶಾಂತವಾದ ಅದ್ಭುತ ಸ್ಥಳಗಳಲ್ಲಿ ನಿಮ್ಮನ್ನು ನೀವು ವಿಶ್ರಾಂತಿಗೊಳಿಸಿಕೊಳ್ಳಿ

ಒಂಬತ್ತು ಗುಡ್ಡ

ಒಂಬತ್ತು ಗುಡ್ಡ

ಬೆಂಗಳೂರಿನಿಂದ 265 ಕಿ.ಮೀ ಅಂತರ

ಸುತ್ತಲೂ ಮೋಡಗಳಿಂದ ಆವರಿಸಿ ಉಸಿರಾಡಲು ತಾಜಾ ಗಾಳಿ ಇರುವ ಬೆಟ್ಟದ ತುದಿಯಲ್ಲಿ ಕ್ಯಾಂಪ್ ಮಾಡಲು ನೋಡುತ್ತಿರುವಿರ? ಹಾಗಿದ್ದಲ್ಲಿ, ಒಂಬತ್ತು ಗುಡ್ಡ ಒಂದು ಕಳಂಕರಹಿತ ಪ್ರಕೃತಿಯ ಎಲ್ಲಾ ಸಾರವನ್ನೂ ಹೊಂದಿರುವ ಸೂಕ್ತ ಸ್ಥಳವಾಗಿದೆ. ಇದರ ಹೆಸರು " ಒಂಬತ್ತು ಬೆಟ್ಟಗಳು " ಎಂದು ಅರ್ಥೈಸುತ್ತದೆ.

ತುಂಬಾ ಸಮಯದಿಂದಲೂ ಒಂಬತ್ತು ಗುಡ್ಡ ಕ್ಯಾಂಪಿಂಗ್ ಮಾಡುವವರಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಆದುದರಿಂದ ಒಂಬತ್ತು ಗುಡ್ಡದ ಈ ಸುಂದರವಾದ ಪರಿಸರದಲ್ಲಿ ವಿಶ್ರಾಂತಿ ಪಡೆದು ಮೋಡಗಳ ಜೊತೆಗೆ ಇದ್ದ ಸ್ಮರಣೀಯ ಅನುಭವವನ್ನು ನಿಮ್ಮೊಂದಿಗೆ ಕೊಂಡೊಯ್ದರೆ ಹೇಗಿರಬಹುದು ?

ಬಂಡಜೆ ಅರ್ಬಿ

ಬಂಡಜೆ ಅರ್ಬಿ

PC- Sumesh


ಬೆಂಗಳೂರಿನಿಂದ 300 ಕಿ.ಮೀ ಅಂತರ


ಪಶ್ಚಿಮ ಘಟ್ಟಗಳ ಒಂದು ಭಾಗವಾಗಿರುವ ಬಂಡಜೆ ಅರ್ಬಿ ಸುಂದರವಾದ ಜಲಪಾತ , ಶ್ರೀಮಂತ ವನ್ಯಜೀವಿ, ದಟ್ಟಾವಾದ ಸಸ್ಯಗಳು, ಹಿತವಾದ ಪರಿಸರದಿಂದ ಅಲಂಕರಿಸಲ್ಪಟ್ಟಿದೆ. ಈ ಶ್ರೀಮಂತ ಘಾಟಿನ ಸಮೃದ್ದ ಪರಿಸರದಲ್ಲಿ ಹಗಲು ಅಥವಾ ರಾತ್ರಿ ಯಾರು ಕಳೆಯ ಬಯಸುವುದಿಲ್ಲ?

ನೀವು ಡೇರೆ ಕಟ್ಟುವುದು ಮತ್ತು ಸುತ್ತಲಿನ ವಾತಾವರಣವನ್ನು ಆಸ್ವಾದಿಸುವುದರ ಹೊರತಾಗಿಯೂ ಇಲ್ಲಿ ಬಂಡಜೆ ಅರ್ಬಿ ಜಲಪಾತಕ್ಕೆ ಭೇಟಿ ಕೊಡಬಹುದು ಮತ್ತು ಮೇಲಿಂದ ಕೆಳಗೆ ಮಧುರವಾಗಿ ಬೀಳುವ ಸದ್ದನ್ನು ಕೇಳಿ ನೋಡಿ ಆನಂದಿಸಬಹುದಾಗಿದೆ.

ಬಾಣಂತಿ ಬೆಟ್ಟ

ಬಾಣಂತಿ ಬೆಟ್ಟ

ಬೆಂಗಳೂರಿನಿಂದ 62 ಕಿ.ಮೀ ಅಂತರ

ಬಾಣಂತಿ ಬೆಟ್ಟವು ಬೆಂಗಳೂರಿಗೆ ತುಂಬಾ ಹತ್ತಿರದಲ್ಲಿರುವ ಸ್ಥಳವಾಗಿದ್ದು ಇದು ಕ್ಯಾಂಪರ್ಸ್ ಗಳಿಗೆ ಮತ್ತು ಟ್ರಕ್ಕಿಂಗ್ ಮಾಡುವವರಿಗೆ ಸೂಕ್ತವಾದ ಸ್ಥಳವಾಗಿದೆ. ನೀವು ಬೆಂಗಳೂರಿನ ಗಡಿಯೊಳಗೇ ಇರಬೇಕೆಂದು ಬಯಸಿದಲ್ಲಿ ಬಾಣಂತಿ ಬೆಟ್ಟವು ನೀವು ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ. ಈ ಬಾಣಂತಿ ಬೆಟ್ಟದ ಹಸಿರು ಹಾಸಿನ ಮೇಲೆ ಮಲಗುವುದನ್ನು ಎಂದಿಗೂ ತಪ್ಪಿಸದಿರಿ. ಮತ್ತು ಇಲ್ಲಿಯ ನಿಷ್ಕಲ್ಮಶ ಸೌಂದರ್ಯವನ್ನು ಸವಿಯುವ ಅವಕಾಶವನ್ನು ತಪ್ಪಿಸದಿರಿ.

ಕೆಮ್ಮಣ್ಣು ಗುಂಡಿ

ಕೆಮ್ಮಣ್ಣು ಗುಂಡಿ

PC- Yathin S Krishnappa

ಬೆಂಗಳೂರಿನಿಂದ 255 ಕಿ.ಮೀ ಅಂತರ

ಕೆಮ್ಮಣ್ಣು ಗುಂಡಿಯು ಕರ್ನಾಟಕದ ಕಡಿಮೆ ಭೇಟಿ ಕೊಡಲ್ಪಡುವ ಗಿರಿಧಾಮಗಳಲ್ಲಿ ಒಂದಾಗಿದೆ. ಆದುದರಿಂದ ಇಲ್ಲಿ ನಿಮಗೆ ಇದರ ಸೌಂದರ್ಯತೆ ಮತ್ತು ಆಳದ ಮೂಲೆಗಳನ್ನು ಅನ್ವೇಷಿಸುವ ಅವಕಾಶವಿದೆ. ಈ ಸಣ್ಣ ಹಾಗೂ ಭವ್ಯವಾದ ಗಿರಿಧಾಮದ ಬೆರಗುಗೊಳಿಸುವ ಭೂದೃಶ್ಯ ಮತ್ತು ಅದ್ಬುತವಾದ ಕಣಿವೆಗಳು ನಿಮ್ಮನ್ನು ಖಚಿತವಾಗಿಯೂ ಅಚ್ಚರಿಗೊಳಿಸುತ್ತದೆ. ನೀವು ಕರ್ನಾಟಕ ಅಥವಾ ಬೆಂಗಳೂರಿನಿಂದ ದಾಟಿ ಹೋಗುವ ದಾರಿಯಲ್ಲಿರುವ ಈ ಸೌಂದರ್ಯವನ್ನು ನೋಡುವುದನ್ನು ಮರೆಯಲು ಸಾಧ್ಯವೇ ಇಲ್ಲ.

ಬೆಟ್ಟಗಳು, ಹೊಳೆಗಳು, ಜಲಪಾತಗಳು, ತೋಟಗಳು, ಕಣಿವೆಗಳು ಮತ್ತು ಉದ್ಯಾನವನಗಳನ್ನು ಹೊಂದಿರುವ ಕೆಮ್ಮನಗುಂಡಿ ಖಂಡಿತವಾಗಿಯೂ ಕ್ಯಾಂಪಿಂಗ್ ಮತ್ತು ಅದರ ಕಾಣದ ವೈಭವದ ಸುತ್ತಲೂ ಆಡಲು ಸೂಕ್ತವಾದ ಸ್ಥಳವಾಗಿದೆ.

ಕಣ್ಣೂರು ಕೋಟೆ

ಕಣ್ಣೂರು ಕೋಟೆ

ಬೆಂಗಳೂರಿನಿಂದ 280 ಕಿ.ಮೀ ಅಂತರ

ಪ್ರಾಚೀನ ಇತಿಹಾಸದಿಂದ ಸುತ್ತುವರಿದ ಜಾಗದಲ್ಲಿ , ನೈಸರ್ಗಿಕ ಸೌಂದರ್ಯತೆ , ಪ್ರಣಯಭರಿತ ತಾಣಗಳು, ಇವೆಲ್ಲವನ್ನು ಹೊಂದಿರುವ ಸ್ಥಳಗಳಲ್ಲಿ ಕ್ಯಾಂಪಿಂಗ್ ಮಾಡುವುದು ರೋಮಾಂಚಕ ಮತ್ತು ಉತ್ಸಾಹಭರಿತ ಅನುಭವವನ್ನು ನೀಡುತ್ತದೆ. ಕಣ್ಣೂರು ಕೋಟೆ ಇಂತಹುದೇ ಒಂದು ಸ್ಥಳವಾಗಿದ್ದು ಇದರ ಸಂದರ್ಶಕರಿಗೆ ಜಗತ್ತಿನ ಅಪ್ರತಿಮ ಸೌಂದರ್ಯತೆಯ ಎಂದೂ ಮಾಸದ ನೆನಪುಗಳನ್ನು ಖಚಿತವಾಗಿಯೂ ನೀಡುತ್ತದೆ.

ಹೌದು, ಇಲ್ಲಿಯ ಅಭುವೃದ್ದಿ ಹೊಂದುತ್ತಿರುವ ಪ್ರದೇಶಗಳಲ್ಲಿ ಕ್ಯಾಂಪಿಗ್ ಮಾಡಿ ಆನಂದಿಸುವುದರೆ ಹೊರತಾಗಿಯೂ ನೀವು ಇಲ್ಲಿಯ ನೆಲೆಸಿರುವ ಕಣ್ಣೂರು ಕೋಟೆಗೆ ಭೇಟಿ ಕೊಡಬಹುದು. ಕಣ್ಣೂರು ಕೋಟೆಯ ಉಲ್ಲಾಸಭರಿತ ವಾತಾವರಣದಲ್ಲಿ ನೀವು ಕಾಲ ಕಳೆಯಿರಿ ಮತ್ತು ಇಲ್ಲಿಯ ರೋಮಾಂಚಕ ಜೀವನದೊಂದಿಗೆ ಬೆರೆಯಿರಿ.

ಎತ್ತಿನ ಭುಜ

ಎತ್ತಿನ ಭುಜ

ಬೆಂಗಳೂರಿನಿಂದ 300 ಕಿ.ಮೀ ಅಂತರ

ಎತ್ತಿನ ಭುಜದಲ್ಲಿ ಕ್ಯಾಂಪಿಂಗ್ ಮತ್ತು ಟ್ರಕ್ಕಿಂಗ್ ಮಾಡಿದರೆ ಹೇಗಿರಬಹುದು? ಹೌದು ನೀವು ಎತ್ತಿನ ಭುಜದ ಇಳಿಜಾರಿನ ಮೇಲೆ ಕ್ಯಾಂಪಿಂಗ್ ಮತ್ತು ಎತ್ತಿನ ಭುಜದ ಶಿಖರಗಳಲ್ಲಿ ಕ್ಯಾಂಪಿಂಗ್ ಮಾಡಲು ಬಯಸಿದಲ್ಲಿ ನೀವು ಖಚಿತವಾಗಿಯೂ ಇಲ್ಲಿಯ ಹುಲ್ಲುಗಾವಲಿನ ನೆಲದಲ್ಲಿ , ಸಣ್ಣ ತೊರೆಗಳಲ್ಲಿ, ಮತ್ತು ಕಾಡುಗಳಲ್ಲಿ ಟ್ರಕ್ಕಿಂಗ್ ಮಾಡಬೇಕಾಗುತ್ತದೆ.

ಅನ್ವೇಷಣೆಗೊಳಗಾಗದೆ ಇರುವ ಪ್ರದೇಶವನ್ನು ಅನ್ವೇಶಿಸಿದ ನಂತರ ಅವುಗಳ ಹಸಿರುಮಯ ಪ್ರಕೃತಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. ನೀವು ಅಚ್ಚರಿಗಳನ್ನೊಳಗೊಂಡ ಪ್ರದೇಶಗಳಲ್ಲಿ, ಅಸಾಧಾರಣ ಜಾಗಗಳಲ್ಲಿ, ಅಥವಾ ಆಶ್ಚರ್ಯಕರ ಸ್ಥಳಗಳಲ್ಲಿ ಕ್ಯಾಂಪಿಂಗ್ ಮಾಡಲು ಇಷ್ಟ ಪಡುವವರಾಗಿದ್ದಲ್ಲಿ ಖಂಡಿತವಾಗಿಯೂ ಎತ್ತಿನ ಭುಜ ಕ್ಕೆ ಭೇಟಿ ಕೊಡಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ