• Follow NativePlanet
Share
» »ಪ್ರಯಾಣ- ರೇವಾಗೆ- ಜಗತ್ತಿನ ಮೊದಲ ಬಿಳಿ ಹುಲಿ -ವನ್ಯಧಾಮ

ಪ್ರಯಾಣ- ರೇವಾಗೆ- ಜಗತ್ತಿನ ಮೊದಲ ಬಿಳಿ ಹುಲಿ -ವನ್ಯಧಾಮ

Posted By: Manjula Balaraj Tantry

ಮಧ್ಯಪ್ರದೇಶದ ಈಶಾನ್ಯ ಭಾಗದ ಕಡೆಗೆ ಇರುವ ಸುಂದರವಾದ ಮತ್ತು ಪ್ರಶಾಂತವಾದ ಜಿಲ್ಲೆಯೆ ರೇವಾ. ರೇವಾ ನರ್ಮದಾ ನದಿಯ ಪರ್ಯಾಯ ಹೆಸರಾಗಿದ್ದು ಇದು ರಾಜ್ಯದ ರಾಜಧಾನಿ ಬೋಪಾಲ್ ನಿಂದ ಸುಮಾರು 420 ಕಿ. ಮೀ ದೂರದಲ್ಲಿದೆ. ಈ ಪ್ರದೇಶವು ಪ್ರಕೃತಿಯ ಮಡಿಲಲ್ಲಿ ನೆಲೆಸಿದ್ದು, ಪ್ರಶಾಂತ ಜಲಪಾತಗಳು ಮತ್ತು ಹಸಿರು ಪ್ರದೇಶಗಳು ಈ ಪ್ರದೇಶದಲ್ಲಿ ಹರಡಿವೆ.

ಇಲ್ಲಿಯ ಪ್ರಮುಖ ವಿಶೇಷತೆಯೆಂದರೆ ಇದು ಜಗತ್ತಿನ ಮೊದಲ ಬಿಳಿಹುಲಿ ಧಾವವನ್ನು ಹೊಂದಿರುವುದು. ಇದು ಇಲ್ಲಿಯ ಒಂದು ಮುಕುಂದ್ ಪುರ್ ಅನ್ನುವ ಒಂದು ಸಣ್ಣ ಹಳ್ಳಿಯಲ್ಲಿದೆ. ಮುಕುಂದ್ ಪುರ್ ರೇವಾ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ ಮತ್ತು ಇದು ಬಿಳಿ ಹುಲಿಗಳ ವಾಸಸ್ಥಾನವಾಗಿದೆ. ಇವುಗಳು ಬಂಗಾಳ ಹುಲಿಗಳ ಜೀನ್ ರೂಪಾಂತರದ ಪರಿಣಾಮದಿಂದ ಆಗಿರುವುದಾಗಿದೆ.

ಬಿಳಿ ಹುಲಿಗಳ ಇತಿಹಾಸ

ಈಗ ಮುಕುಂದ್ ಪುರ್ ಝೂ ಗಳಲ್ಲಿ ಕಾಣ ಸಿಗುವ ಈ ಬಿಳಿಹುಲಿಗಳನ್ನು ಮೊದಲ ಬಾರಿಗೆ 1951ರಲ್ಲಿ ಮಾರ್ತಾಂಡ್ ಸಿಂಗ್ ಅವರು ಸಿಧಿ ಜಿಲ್ಲೆಯ ಬರ್ಗಾಡಿ ಅರಣ್ಯದಲ್ಲಿ ಸೆರೆಹಿಡಿದು ರೇವಾ ಜಿಲ್ಲೆಗೆ ಪರಿಚಯಿಸಿದರು. ಅದನ್ನು ಮೋಹನ್ ಎಂದು ಹೆಸರಿಸಲಾಯಿತು ಮತ್ತು ಇದರ ಜೊತೆಗೆ ಇನ್ನೆರಡು ಬಿಳಿ ಹೆಣ್ಣು ಹುಲಿಗಳನ್ನು ಸಂತಾನಾಭಿವೃದ್ದಿ ದೃಷ್ಟಿಯಿಂದ ಬಿಡಲಾಗಿ ಇಲ್ಲಿ ಸಂರಕ್ಷಿಸಲಾಯಿತು. ನಿಮ್ಮ ಮೃಗಾಲಯದ ಭೇಟಿಯ ಸಮಯದಲ್ಲಿ ಹೆಣ್ಣು ಹುಲಿಗಳು, ವಿಂಧ್ಯಾವನ್ನು ನೋಡ ಬಹುದಾಗಿದೆ.

ಸಫಾರಿ ಸಮಯವು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಮತ್ತು ವಯಸ್ಕರಿಗೆ ಬಸ್ ಸಫಾರಿಗಾಗಿ ರೂ 100 ಮತ್ತು 12 ವರ್ಷಗಳವರೆಗೆ ಮಕ್ಕಳಿಗೆ 50 ರೂ ಇರುತ್ತದೆ. ಗಾಲ್ಫ್ ಬಂಡಿಗಳು ಮತ್ತು ವಾಕಿಂಗ್ ಟೂರ್ ಗಳು ಸಹ ಲಭ್ಯವಿದೆ. ವಾಣಿಜ್ಯ ಚಿತ್ರೀಕರಣಕ್ಕಾಗಿ ಈ ಅಭಯಾರಣ್ಯವು ತೆರೆದಿರುತ್ತದೆ ಇದರ ದರ ದಿನಕ್ಕೆ 4000 ರೂ ಆಗಿರುತ್ತದೆ.

ಈ ಅಭಯಾರಣ್ಯದಲ್ಲಿ ನೀವು ವೀಕ್ಷಿಸಬಹುದಾದ ಇತರ ಕೆಲವು ಪ್ರಾಣಿಗಳೆಂದರೆ ಚಿಂಕಾರ, ಗೌರ್, ಪ್ಯಾಂಥರ್, ಕಪ್ಪು ಬಕ್, ಇತ್ಯಾದಿ.ವಿಶ್ವದ ಮೊಟ್ಟಮೊದಲ ಬಿಳಿ ಹುಲಿ ಸಫಾರಿಗಾಗಿ ಮುಕುಂದಪುರಕ್ಕೆ ಭೇಟಿ ನೀಡಿ ಮತ್ತು ಈ ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ತಿರುಗಾಡುವುದು ಕಂಡುಬರುತ್ತವೆ.

                                        PC: Tony Hisgett

ರೇವಾ ಜಗತ್ತಿನ ಮೊದಲ ಬಿಳಿ ಹುಲಿ ವನ್ಯಧಾಮ

ರೇವಾದ ಜಲಪಾತಗಳು

ರೇವಾದಲ್ಲಿಯ ಒಂದು ಗಮನಾರ್ಹ ವಿಷಯವೆಂದರೆ ಇಲ್ಲಿಯ ಪ್ರಶಾಂತವಾದ ಪ್ರಕೃತಿ ಮತ್ತು ಈ ಜಾಗದ ಸುತ್ತಮುತ್ತಲಿರುವ ಅನೇಕ ಸುಂದರವಾದ ಜಲಪಾತಗಳು. ಇವುಗಳಲ್ಲಿ ಪೂರ್ವಾ ಜಲಪಾತವು ಪ್ರಸಿದ್ದವಾದುದಾಗಿದ್ದು ಸುಂದರವಾದುದಾಗಿದೆ ಇಲ್ಲಿ ಜಲಪಾತವು ಸುಮಾರು 230 ಅಡಿ ಎತ್ತರದಿಂದ ಕೆಳಗೆ ಬೀಳುತ್ತದೆ. ಕೆಯೋಟಿ ಜಲಪಾತವು ಇನ್ನೊಂದು ಸುಂದರವಾದ ಜಲಪಾತವಾಗಿದ್ದು ಇದು ಸುಮಾರು 321 ಅಡಿ ಎತ್ತರದಿಂದ ಧುಮುಕುತ್ತದೆ. ಮತ್ತು ಇದು ಸುತ್ತ ಮುತ್ತಲಿನ ಕೃಷಿಕ ಜನರಿಗೆ ಕುಡಿಯುವ ನೀರನ್ನು ಪೂರೈಸುತ್ತದೆ.

ಗೋವಿಂದಘರ್ ಅರಮನೆ

ರೇವಾ ಈ ಸುಂದರವಾದ ಅರಮನೆ ಮಹಾರಾಜ ರೇವಾ ಅವರಿಂದ ಬೇಸಿಗೆಯಲ್ಲಿ ರಾಜಧಾನಿಯಾಗಿ ಬಳಸಲ್ಪಡುತ್ತಿತ್ತು ರೇವಾ, ವಾಸ್ತವವಾಗಿ, ಅನೇಕ ರಾಜಪ್ರಭುತ್ವಕ್ಕೆ ಒಳಗಾದ ರಾಜ್ಯವೆನಿಸಿದೆ.ಗೋವಿಂದಗಡ್ ಅಕ್ಷರಶಃ ಮಿನಿ ವೃಂದಾವನಕ್ಕೆ ಹೋಲುತ್ತದೆ ಮಾರ್ತಾಂದ್ ಸಿಂಗ್ ಅವರು ಹಿಡಿದ ಮೊದಲ ಬಿಳಿ ಹುಲಿ ಮೋಹನ್, ಅನ್ನು ಬಿಟ್ಟಿರುವ ಪ್ರದೇಶವಾಗಿದೆ.

ಇಲ್ಲಿಯ ಹಸಿರುಮಯ ಸುಂದರವಾದ ವಾತವರಣವಲ್ಲದೆ ಈ ಅರಮನೆಯು ಹಲವಾರು ದೇವಾಲಯಗಳಿಂದ ಸುತ್ತುವರಿಯಲ್ಪಟ್ಟಿದೆ. ಅವುಗಳಲ್ಲಿ ಪಂಚಮುಖಿ ದೇವಾಲಯ, ಶಿವ ದೇವಾಲಯ, ಹನುಮಾನ್ ದೇವಾಲಯ ಪ್ರಮುಖವಾದುದು.

                                                 PC: Syedzohaibullah

ರೇವಾ ಜಗತ್ತಿನ ಮೊದಲ ಬಿಳಿ ಹುಲಿ ವನ್ಯಧಾಮ

ರೇವಾದಲ್ಲಿಯ ಇತರ ಆಸಕ್ತಿದಾಯಕ ವಿಷಗಳು

ರೇವಾವು ಕೇವಲ ನೈಸರ್ಗಿಕ ಸಂಪತ್ತು ಮತ್ತು ಬಿಳಿ ಹುಲಿಗಳ ನೆಲೆ ಮಾತ್ರವಲ್ಲದೆ, ಹಿಂದಿನ ಕಾಲದ ಅನೇಕ ಶ್ರೀಮಂತ ಪರಂಪರೆಗಳಿಗೆ ಹೆಸರುವಾಸಿಯಾಗಿದೆ. ಬಾಘೆಲಾ ಸಾಮ್ರಾಜ್ಯದ ಸಮಯದ ಬಾಗ್ಲಾ ಮ್ಯೂಸಿಯಂ, ಶಸ್ತ್ರಾಸ್ತ್ರ ಮತ್ತು ಅಸ್ತ್ರಗಳ ಸಂಗ್ರಹಗಳ ನೆಲೆಯಾಗಿದೆ. ಇದರ ಜೊತೆಗೆ ವೈಟ್ ಹುಲಿ, ಮೋಹನ್ ಗೌರವಾರ್ಥವಾಗಿ ನಿರ್ಮಿಸಿರುವ ಗ್ಯಾಲರಿಗೆ ಭೇಟಿ ನೀಡಿ.

ಇಲ್ಲಿಯ ದಿಯೋರ್ ಕೋತಾರ್ ಪ್ರದೇಶದಲ್ಲಿ ರಾಜಾ ಅಶೋಕನ ಕಾಲಕ್ಕೆ ಸೇರಿದ ಬೌದ್ದ ಸ್ತೂಪಗಳನ್ನು ಉತ್ಖನನ ಮಾಡಲಾಗಿದೆ. ಈ ಜಾಗದಲ್ಲಿ ಪತ್ತೆಯಾದ ಸ್ತಂಭಗಳ ಮೇಲೆ ಇರುವ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿರುವುದು ಕಂಡುಬಂದಿದೆ. ವಿಯಾಂಕತ್ ಭವನ್ ಮತ್ತು ಭೈರವ ನಾಥ್ ಪ್ರತಿಮೆ ಇಲ್ಲಿಯ ಇತರ ಕೆಲವು ಆಸಕ್ತಿಯ ಸ್ಥಳಗಳಾಗಿವೆ.

                                          PC: MP Tourism Official Site

ರೇವಾ ಜಗತ್ತಿನ ಮೊದಲ ಬಿಳಿ ಹುಲಿ ವನ್ಯಧಾಮ

ರೇವಾದಲ್ಲಿ ಮಾಡಬಹುದಾದ ವಿಷಯಗಳು

ಇಲ್ಲಿ ಬಿಳಿಹುಲಿ ವನ್ಯಧಾಮಕ್ಕೆ ಸಫಾರಿ ಮತ್ತು ಸುತ್ತಮುತ್ತಲಿನ ನೋಟಗಳ ವೀಕ್ಷಣೆ ಮಾತ್ರವಲ್ಲದೆ ಇಲ್ಲಿಯ ಯಾವುದಾದರೂ ಸ್ಥಳೀಯ ಅಂಗಡಿಗಳಲ್ಲಿ ಭೇಟಿ ನೀಡಬಹುದು ಇಲ್ಲಿ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ರೇವಾವು ಕರಕುಶಲಗಾರಿಕೆಗಳಾದ ಟೆರಾಕೋಟಾ, ಪೈಂಟಿಂಗ್, ಅಮೃತಶಿಲೆ ಕಲಾಕೃತಿಗಳು, ಮುಂತಾದುವುಗಳಿಗೆ ಪ್ರಸಿದ್ದವಾಗಿದೆ. ಆದ್ದರಿಂದ, ಕರಕುಶಲ ರೂಪದಲ್ಲಿ ಸ್ಮಾರಕವು ಸೂಕ್ತವಾಗಿದೆ.

                                 PC: McKay Savage

ರೇವಾ ಜಗತ್ತಿನ ಮೊದಲ ಬಿಳಿ ಹುಲಿ ವನ್ಯಧಾಮ

ವಿಂಧ್ಯಾ ಮಹೋತ್ಸವಕ್ಕೆ ಭೇಟಿ ಕೊಡಿ, ವಿಂಧ್ಯಾ ಪ್ರದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವುದರೊಂದಿಗೆ ಮಧ್ಯಪ್ರದೇಶ ಪ್ರವಾಸೋದ್ಯಮ ಆಯೋಜಿಸಿದ ಉತ್ಸವದಲ್ಲಿ ಭಾಗವಹಿಸಿ. ಇಲ್ಲಿ ಮಧ್ಯಪ್ರದೇಶದ ಕಲೆ, ನೃತ್ಯ ಮತ್ತು ಸಂಗೀತವನ್ನು ಪ್ರದರ್ಶಿಸಲಾಗುತ್ತದೆ. ಉತ್ಸವವು ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ