Search
  • Follow NativePlanet
Share
» »ಏಷ್ಯಾದ ಅತ್ಯಂತ ದೊಡ್ಡ ವೈಲ್ಡ್‌ ಲೈಫ್‌ ಸಫಾರಿ ಪಾರ್ಕ್ ಇದು

ಏಷ್ಯಾದ ಅತ್ಯಂತ ದೊಡ್ಡ ವೈಲ್ಡ್‌ ಲೈಫ್‌ ಸಫಾರಿ ಪಾರ್ಕ್ ಇದು

ಉತ್ತರ ಪ್ರದೇಶ ಕೇವಲ ಪೌರಾಣಿಕ ಸಂಸ್ಕೃತಿ ಹಾಗೂ ಪ್ರಾಚೀನ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ವಲ್ಡ್‌ ಲೈಫ್ ಎಡ್ವೆಂಚರ್‌ಗೂ ಬಹಳ ಪ್ರಸಿದ್ಧಿಯಾಗಿದೆ. ಉತ್ತರಖಂಡದಿಂದ ಬೇರ್ಪಟ್ಟ ನಂತರವೂ ಇದು ತನ್ನ ವನ ಸಂಪದವನ್ನು ಉಳಿಸಿಕೊಂಡು ಬಂದಿದೆ. ಚಂದ್ರ ಪ್ರಭ ವನ್ಯ ಜೀವ, ಚಂಬಲ್ ಅಭಯಾರಣ್ಯ, ಓಕ್ಲಾ ಪಕ್ಷಿ ಧಾಮ ಇವೆಲ್ಲವೂ ಉತ್ತರ ಪ್ರದೇಶವನ್ನು ಪ್ರಾಕೃತಿಕ ರೂಪದಲ್ಲಿ ವಿಶೇಷವನ್ನಾಗಿಸುತ್ತದೆ.

ಉತ್ತರ ಪ್ರದೇಶದಲ್ಲಿ ಏಷ್ಯಾದ ಅತ್ಯಂತ ದೊಡ್ಡ ವಲ್ಡ್‌ ಲೈಫ್ ಸಫಾರಿ ಪಾರ್ಕ್‌ ನ ರೋಮಾಂಚಕ ಅನುಭವವನ್ನು ಪಡೆಯಬಹುದು. ಹಾಗಾದ್ರೆ ಬನ್ನಿ ವಿಶ್ವ ಪ್ರವಾಸೋಧ್ಯಮಕ್ಕೆ ಒತ್ತು ನೀಡುತ್ತಿರುವ ರಾಜ್ಯದ ಈ ವಿಶೇಷ ಪ್ರಾಜೆಕ್ಟ್‌ ಬಗ್ಗೆ ತಿಳಿಯಿರಿ.

ಇಟಾವಾ ಸಫಾರಿ ಪಾರ್ಕ್

ಇಟಾವಾ ಸಫಾರಿ ಪಾರ್ಕ್

ನೀವು ಕಾಡಿನಲ್ಲಿ ಸಫಾರಿ ಮಾಡುವಲ್ಲಿ ಆಸಕ್ತಿ ಹೊಂದಿದ್ದರೆ ಉತ್ತರ ಪ್ರದೇಶದಲ್ಲಿ ಏಷ್ಯಾದ ಅತ್ಯಂತ ದೊಡ್ಡ ವಲ್ಡ್‌ ಲೈಫ್‌ ಪಾರ್ಕ್ ನಲ್ಲಿ ಸಫಾರಿಯ ಆನಂದವನ್ನು ಪಡೆಯಿರಿ. ಉತ್ತರ ಪ್ರದೇಶದ ಇಟಾವ ನಗರದಲ್ಲಿ ಈ ವಲ್ಡ್‌ಲೈಫ್ ಪಾರ್ಕ್ ನಿರ್ಮಾಣವಾಗಲಿದೆ. ಇಲ್ಲಿ ವನ್ಯ ಜೀವಿಗಳ ಜೊತೆಗೆ ವಿವಿಧ ಪ್ರಾಣಿಗಳನ್ನು ನೋಡಬಹುದಾಗಿದೆ.
ಈ ಸಫಾರಿ ಪಾರ್ಕ್ 8 ಕಿ.ಮೀ ಕ್ಷೇತ್ರವನ್ನು ಆವರಿಸಿದೆ. ಈ ಸಫಾರಿ ಪಾರ್ಕ್‌ಗೆ ಮೊದಲು ಲಯನ್ ಸಫಾರಿ ಇಟಾವ ಎಂದು ಇಡಲಾಗಿತ್ತು. ನಂತರ ಅದನ್ನು ಇಟಾವ ಸಫಾರಿ ಪಾರ್ಕ್ ಎಂದು ಇಡಲಾಗಿದೆ.

4 ಡಿ ಥಿಯೇಟರ್ ಸಫಾರಿ

4 ಡಿ ಥಿಯೇಟರ್ ಸಫಾರಿ

ಈ ಪಾರ್ಕ್‌ನ ನಿರ್ಮಾಣವನ್ನು ವನ್ಯಜೀವಿ ಸುರಕ್ಷದ ಜೊತೆಗೆ ರೋಮಾಂಚಕ ಸಫಾರಿಯನ್ನು ಧ್ಯಾನದಲ್ಲಿಟ್ಟು ನಿರ್ಮಿಸಲಾಗಿದೆ. ಇಲ್ಲಿ ದೇಶ, ವಿದೇಶಗಳಿಂದ ಪ್ರವಾಸಿಗರು ವೈಲ್ಡ್‌ ಲೈಫ್ ಸಪಾರಿಯ ಆನಂದವನ್ನು ಪಡೆಯುತ್ತಾರೆ. ಇಟಾವಾ ಸಫಾರಿ ಪಾರ್ಕ್ ನಲ್ಲಿ ವಿವಿಧ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅವುಗಳಲ್ಲಿ ಲಯನ್ ಸಫಾರಿ, ಕರಡಿ ಸಫಾರಿ ಹಾಗೂ ಚಿರತೆ ಸಫಾರಿ ಕೂಡಾ ಸೇರಿಕೊಂಡಿದೆ.

ರಾಜ್ಯದ ಹಳೆಯ ಪ್ರಾಜೆಕ್ಟ್

ರಾಜ್ಯದ ಹಳೆಯ ಪ್ರಾಜೆಕ್ಟ್

ಇಟಾವ ವೈಲ್ಡ್‌ ಲೈಫ್ ಸಫಾರಿ ಪ್ರಾಜೆಕ್ಟ್ ೨೦೧೨ರಲ್ಲಿ ಪ್ರಾರಂಭಿಸಲಾಗಿದೆ. ಆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಗದಿದ್ದರು. ಈ ಪ್ರಾಜೆಕ್ಟ್ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ಪಾರ್ಕ್‌ನ ನಿರ್ಮಾಣದ ಕೆಲಸವು ಬಹಳ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲಿಯೇ ಏಷ್ಯಾದ ಅತೀ ದೊಡ್ಡ ವೈಲ್ಡ್‌ ಲೈಫ್‌ ಸಫಾರಿ ಪಾರ್ಕ್‌ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ.

ಉತ್ತರ ಪ್ರದೇಶದ ಇತರ ಅಭಯಾರಣ್ಯಗಳು

ಉತ್ತರ ಪ್ರದೇಶದ ಇತರ ಅಭಯಾರಣ್ಯಗಳು

ನೀವು ಭಾರತ-ನೇಪಾಳ ಗಡಿಭಾಗದಲ್ಲಿರುವ ಲೋಕಪ್ರೀಯ ದುದ್‌ವಾ ನ್ಯಾಷನಲ್ ಪಾರ್ಕ್‌ನ್ನು ಸುತ್ತಾಡಬಹುದು. ಇಲ್ಲಿ ನೀವು ವಿವಿಧ ವನ್ಯಜೀವಿಗಳು ಹಾಗೂ ವನಸ್ಪತಿಯನ್ನು ನೋಡಬಹುದು. ಈ ಪಾರ್ಕ್ 1980 ರಲ್ಲಿ ಟೈಗರ್‌ ರಿಸರ್ವ್ ಎಂದು ಘೋಷಿಸಲಾಗಿತ್ತು. ಇಲ್ಲಿ ನೀವು ರಾಯಲ್ ಬೆಂಗಾಲ್ ಟೈಗರ್‌ನ್ನು ನೋಡಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಇಟಾವ ಉತ್ತರ ಪ್ರದೇಶದ ಒಂದು ಪ್ರಸಿದ್ಧ ನಗರವಾಗಿದೆ. ಅಲ್ಲಿ ನೀವು ವಿಮಾನದ ಮೂಲಕ ಹೋಗುವುದಾದರೆ ಗ್ವಾಲಿಯರ್ ಹಾಗೂ ಆಗ್ರಾ ಏರ್‌ಪೋರ್ಟ್ ಸಮೀಪದಲ್ಲಿದೆ. ರೈಲು ಮೂಲಕ ಹೋಗುವುದಾದರೆ ಇಟಾವ ರೈಲು ನಿಲ್ದಾಣದ ಮೂಲಕ ಹೋಗಬಹುದು. ಬಸ್‌ ಮೂಲಕ ಹೋಗುವುದಾದರೆ ದೆಹಲಿಯಿಂದ ಹಾಗೂ ಬೃಹತ್ ನಗರಗಳಿಂದ ಇಟಾವಕ್ಕೆ ಅನೇಕ ಬಸ್ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X