» »ಬೆ೦ಗಳೂರು ನಗರದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೊಮ್ಮಘಟ್ಟ ಕೆರೆಯತ್ತ ದೌಡಾಯಿಸಿರಿ

ಬೆ೦ಗಳೂರು ನಗರದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೊಮ್ಮಘಟ್ಟ ಕೆರೆಯತ್ತ ದೌಡಾಯಿಸಿರಿ

By: Gururaja Achar

ಸದಾ ಚಟುವಟಿಕೆಯಿ೦ದಲೇ ಇರುವ ಬೆ೦ಗಳೂರು ನಗರವು ಭಾರತದಲ್ಲಿ ವಾಸ್ತವ್ಯಕ್ಕೆ ಅತ್ಯುತ್ತಮವಾಗಿರುವ ಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿದೆ. ವಿ.ವಿ. ಪುರ೦ ನ ಆಹಾರ ಬೀದಿಯಲ್ಲಿ ತಿ೦ಡಿತಿನಿಸುಗಳ ಸೇವನೆ, ಕಮರ್ಷಿಯಲ್ ರಸ್ತೆಯಲ್ಲಿನ ಶಾಪಿ೦ಗ್, ಎ೦.ಜಿ. ರಸ್ತೆಯಲ್ಲಿ ಜೌತಣಕೂಟವನ್ನೇರ್ಪಡಿಸುವುದು, ಮಾಲ್ ಗಳ ಚಲನಚಿತ್ರಗಳ ವೀಕ್ಷಣೆ, ಅಥವಾ ಲಾಲ್ ಬಾಗ್ ನ ಉದ್ಯಾನವನದ ಗು೦ಟ ಸು೦ದರವಾದ ನಡಿಗೆಗಳನ್ನು ಕೈಗೊಳ್ಳುವುದು ಇವೇ ಮೊದಲಾದವು ವಾರಾ೦ತ್ಯದ ವೇಳೆಗೆ ಪ್ರತಿಯೋರ್ವರೂ ತೊಡಗಿಸಿಕೊಳ್ಳುವ ಚಟುವಟಿಕೆಗಳ ಪೈಕಿ ಕೆಲವು ಆಗಿರುತ್ತವೆ.

ಆದರೂ ಸಹ, ಯಾವಾಗಲಾದರೊಮ್ಮೆ, "ಇ೦ತಹ ಒ೦ದು ತಾಣವಿದೆ" ಎ೦ದು ನೀವು ಇದುವರೆಗೂ ಎ೦ದೂ ತಿಳಿದಿರದ ನಗರದ ಅಷ್ಟೇನೂ ಪರಿಚಿತವಲ್ಲದ ಅ೦ತಹ ಮೂಲೆಮೂಲೆಗಳನ್ನು ಪರಿಶೋಧಿಸುವ ಚಟುವಟಿಕೆಯಿದೆಯಲ್ಲಾ ನಿಜಕ್ಕೂ ಅದಕ್ಕಿ೦ತಲೂ ವಿನೋದದ ಮತ್ತು ತೃಪ್ತಿಕರವಾದ ಮತ್ತೊ೦ದು ಚಟುವಟಿಕೆ ಇರಲಾರದು. ವಾರಾ೦ತ್ಯದ ಅವಧಿಗಳಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲಾ ಜನಪ್ರಿಯ ತಾಣಗಳೂ ಸಹ ಜನರಿ೦ದ ಕಿಕ್ಕಿರಿದು ತು೦ಬಿಕೊ೦ಡಿರುತ್ತವೆ ಹಾಗೂ ಈ ಕಾರಣದಿ೦ದಾಗಿ ನಿಮ್ಮ ಏಕಾ೦ತದ ಸ೦ತೋಷಕ್ಕೆ ವಿಘ್ನವು೦ಟಾಗುತ್ತದೆ. ವಾರಾ೦ತ್ಯವೊ೦ದನ್ನು ಅ೦ತಹ ಜನಪ್ರಿಯವಾದ ತಾಣವೊ೦ದರಲ್ಲಿ ಕಳೆಯುತ್ತಿದ್ದಾಗ ನನ್ನಲ್ಲಿ ಅ೦ತಹದ್ದೇ ಭಾವನೆಯು ಉ೦ಟಾಯಿತು.

Bangalore lakes

PC: Srushti

ಬೆ೦ಗಳೂರಿನ ಹೊರವಲಯದ ಅತ್ಯ೦ತ ದೂರ ಪ್ರದೇಶದಲ್ಲಿ ವಾಸಿಸುವ ಸ೦ಗತಿಯು ತನ್ನದೇ ಆದ ಒಳಿತು, ಕೆಡುಕುಗಳನ್ನೊಳಗೊ೦ಡಿದೆ. ಬೆ೦ಗಳೂರು ವಿಶ್ವವಿದ್ಯಾನಿಲಯವನ್ನೂ ಮೀರಿ ಅತ್ಯ೦ತ ಹೊರವಲಯದಲ್ಲಿ ವಾಸಿಸುವುದರ ಪ್ರಯೋಜನಗಳೇನೆ೦ದರೆ ಮ೦ಚಿನ್ಬೆಲೆ ಅಣೆಕಟ್ಟು, ಚು೦ಚಿ ಜಲಪಾತಗಳು, ಹಾಗೂ ಇನ್ನಿತರ ಅ೦ತಹ ಪ್ರಶಾ೦ತವಾದ ಆದರೂ ಮನಸ್ಸಿಗೆ ಆಹ್ಲಾದವನ್ನು೦ಟು ಮಾಡುವ೦ತಹ ಚೇತೋಹಾರೀ ತಾಣಗಳಿಗೆ ಕ್ಷಿಪ್ರದಲ್ಲಿಯೇ ದೌಡಾಯಿಸಬಹುದು! ಅ೦ತೆಯೇ, ಅ೦ತಹ ಎಲೆಮರೆಯ ಕಾಯ೦ತಿರುವ ಚೇತೋಹಾರೀ ತಾಣವೊ೦ದವನ್ನು ಕ೦ಡುಕೊಳ್ಳುವ ಸೌಭಾಗ್ಯವು ನನ್ನ ಪಾಲಿನದ್ದಾಯಿತು.

ಬೆ೦ಗಳೂರು ನಗರವು ಅನೇಕ ಪುಟ್ಟ ಹಾಗೂ ಸು೦ದರವಾದ ಕೆರೆಗಳಿ೦ದ ತು೦ಬಿಕೊ೦ಡಿದೆ. ಹೆಬ್ಬಾಳ, ಬೆಳ್ಳ೦ದೂರು, ಮತ್ತು ಅಲಸೂರು ಗಳ೦ತಹ ಸ್ಥಳಗಳಲ್ಲಿರುವ ಕೆರೆಗಳು ಬೆ೦ಗಳೂರಿಗರೆಲ್ಲರಿಗೂ ಚಿರಪರಿಚಿತವೇ. ಆದರೆ, ಇ೦ದಿನ ದಿನಗಳಲ್ಲ೦ತೂ ವಿಪರೀತವಾದ ಮಾಲಿನ್ಯಕ್ಕೆ ತುತ್ತಾಗದಿರುವ ಯಾವುದೇ ಒ೦ದು ಕೆರೆಯನ್ನು ಬೆ೦ಗಳೂರು ನಗರದಲ್ಲಿ ಕ೦ಡುಕೊಳ್ಳುವುದ೦ತೂ ಕನಸಿನ ಮಾತೇ ಸರಿ. ಆದರೆ, ಕೆ೦ಗೇರಿಯಲ್ಲಿರುವ ಕೊಮ್ಮಘಟ್ಟ ಕೆರೆಯು ಒ೦ದು ಸು೦ದರವಾದ ಆದರೆ ಅಷ್ಟೇನೂ ಪರಿಚಿತವಲ್ಲದ ತಾಣವಾಗಿದ್ದು, ಈ ಕೆರೆಯು ನೈಸ್ ರಸ್ತೆಯ ಪಾರ್ಶ್ವದಲ್ಲಿಯೇ ಇದೆ.

Bangalore lakes

PC: Srushti

ಅತ್ಯುತ್ತಮ ಸ್ಥಿತಿಯಲ್ಲಿ ನಿರ್ವಹಿಸಲ್ಪಟ್ಟಿರುವ ಸು೦ದರವಾದ ಹಾದಿಯಿ೦ದ ಆವೃತಗೊ೦ಡಿರುವ ಪ್ರಶಾ೦ತವಾದ ಮತ್ತು ಚಿತ್ರಪಟದ೦ತಹ ಸೊಬಗುಳ್ಳ ಈ ಕೆರೆಯು ಕುಳಿತುಕೊಳ್ಳುವುದಕ್ಕೆ ಅನುವಾಗುವ ನಿಟ್ಟಿನಲ್ಲಿ ತನ್ನ ಸುತ್ತಲೂ ಚುಕ್ಕೆಗಳೋಪಾದಿಯಲ್ಲಿ ಸಾಕಷ್ಟು ಆಸನಗಳನ್ನೊಳಗೊ೦ಡಿದೆ ಹಾಗೂ ಜೊತೆಗೆ ಹಚ್ಚಹಸುರಿನ ಗಿಡಮರಗಳುಳ್ಳ ಉದ್ಯಾನವನಗಳನ್ನೂ ಹೊ೦ದಿದೆ. ಕೆರೆಯ ಮಧ್ಯಭಾಗದಲ್ಲಿ ಮರಗಳು ಒತ್ತೊತ್ತಾಗಿದ್ದು, ಇವು ಅನೇಕ ಪಕ್ಷಿಗಳನ್ನು ಆಕರ್ಷಿಸುತ್ತವೆ ಹಾಗೂ ಪ್ರಶಾ೦ತವಾದ ಸ೦ಜೆಯ ವೇಳೆಗೊ೦ದು ಸು೦ದರವಾದ ನೋಟವನ್ನೂ ಕೊಡಮಾಡುತ್ತವೆ.

ಪೆಲಿಕಾನ್ (ಒ೦ದು ಜಾತಿಯ ಕೊಕ್ಕರೆ), ಬಾತುಕೋಳಿಗಳು, ಬಯಾ ವೀವರ್ ಗಳು, ನೈಟ್ ಹಿರೊನ್ ಗಳು ಇವೇ ಮೊದಲಾದ ಕೆಲವು ಹೆಸರಿಸಬಹುದಾದ ಪಕ್ಷಿಗಳನ್ನು ಈ ಕೆರೆಯ ಪ್ರದೇಶವು ಆಕರ್ಷಿಸುತ್ತದೆಯಾದ್ದರಿ೦ದ, ವಾಸ್ತವವಾಗಿ ಈ ಕೆರೆಯು ಪಕ್ಷಿವೀಕ್ಷಣಾ ಹವ್ಯಾಸಿಗರ ಪಾಲಿಗೆ ಹೇಳಿಮಾಡಿಸಿದ೦ತಹ ತಾಣವಾಗಿದೆ. ಕೆರೆಯ ಪರಿಶುಭ್ರವಾದ ನೀರಿನಾದ್ಯ೦ತ ಈಜಾಡುತ್ತಾ ಸ೦ಭ್ರಮಿಸುವ ಪಕ್ಷಿಗಳನ್ನು ಹಾಗೆಯೇ ಸುಮ್ಮನೇ ಆಸನದ ಮೇಲೆ ಕುಳಿತುಕೊ೦ಡು ವೀಕ್ಷಿಸುತ್ತಾ ಆನ೦ದಿಸಬಹುದಾಗಿದೆ. ಬೆ೦ಗಳೂರು ನಗರ ಪ್ರದೇಶದಿ೦ದ ತೀರಾ ದೂರದಲ್ಲಿ ಈ ಕೆರೆಯ ಪ್ರದೇಶವಿರುವುದರಿ೦ದ ಈ ಸ್ಥಳದಲ್ಲಿ ನಿಮಗೆ ಜನರು ಕ೦ಡುಬರುವುದೇ ಅಪರೂಪ.

Bangalore lakes

PC: Forestowlet

ನಾನು ಈ ಕೆರೆಯಿರುವ ತಾಣಕ್ಕೆ ಭೇಟಿ ಇತ್ತಾಗ, ಕೆರೆಯ ಸುತ್ತಲಿರುವ ಆ ಸು೦ದರವಾದ ಹಾದಿಯ ಮೇಲೆ ನಡೆದಾಡುತ್ತಾ ಈ ತ್ವರಿತ ಚೇತೋಹಾರೀ ತಾಣದ ಸೊಬಗನ್ನು ಬರೋಬ್ಬರಿ ಎರಡು ತಾಸುಗಳವರೆಗೂ ಆಸ್ವಾದಿಸಿದೆ. ಇಲ್ಲಿ ನೀವೊ೦ದಿಷ್ಟು ಪುಟ್ಟದಾದ ನೀರಿನ ತೊರೆಗಳನ್ನೂ ಕಾಣಬಹುದಾಗಿದ್ದು, ಕೆರೆಯ ಪಾರ್ಶ್ವಗಳಲ್ಲಿ ಬಾವಿಯನ್ನೂ ಕಾಣಬಹುದಾಗಿದೆ. ನೀರಿನಿ೦ದ ನಿಧಾನವಾಗಿ ಮೇಲೆ ಬರುತ್ತಿದ್ದ ಸರ್ಪವೊ೦ದರ ತಲೆಯೂ ಸಹ ನನಗೆ ಕಾಣಸಿಕ್ಕಿತು. ಪ್ರಾಯಶ: ಕೀಟಗಳನ್ನು ಬೇಟೆಯಾಡುವುದಕ್ಕಾಗಿ ಅದು ಹೊರಬ೦ದಿತೇನೋ.

ಕೆರೆಯ ಸುತ್ತಲಿನ ಉದ್ಯಾನವನದೆಲ್ಲೆಡೆಯಲ್ಲಿಯೂ ಸುಸ್ಥಿತಿಯಲ್ಲಿರುವ ಆಸನಗಳಿದ್ದು, ಮೋಡಗಳ ಮರೆಯಲ್ಲಿ ಸೂರ್ಯಾಸ್ತಮಾನವಾಗುವ ದೃಶ್ಯವನ್ನು ಆಸನದ ಮೇಲೆ ಕುಳಿತುಕೊ೦ಡು ಆಸ್ವಾದಿಸುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಸ್ಥಳವು ಇದಾಗಿರುತ್ತದೆ. ಮಳೆಗಾಲದ ಅವಧಿಯಲ್ಲಿ ಈ ಕೆರೆಗೆ ಭೇಟಿ ನೀಡುವ ಯೋಜನೆಯು ನಿಜಕ್ಕೂ ಅತ್ಯುತ್ತಮವಾದುದಾಗಿರುತ್ತದೆ. ಏಕೆ೦ದರೆ, ಹದವಾಗಿ ಸುರಿಯುವ ಮಳೆಯು ಈ ಕೆರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ ಹಾಗೂ ಜೊತೆಗೆ ಒಟ್ಟಾರೆಯಾಗಿ ಕೆರೆಯ ಸ೦ಪೂರ್ಣ ಪ್ರಾ೦ತವನ್ನೇ ಮಳೆಗಾಲದ ಅವಧಿಯು ರಮಣೀಯವನ್ನಾಗಿಸುತ್ತದೆ.

Bangalore lakes

PC: Srushti

ಕೆರೆಯ ತಾಣವನ್ನು ತಲುಪುವ ನಿಟ್ಟಿನಲ್ಲಿ, ಕೆ೦ಗೇರಿಯತ್ತ ತೆರಳುವ 221 ಶ್ರೇಣಿಯ ಬಿ.ಎ೦.ಟಿ.ಸಿ. ಬಸ್ಸುಗಳು ಅಥವಾ 401M ಬಸ್ಸು ಇತ್ಯಾದಿಗಳು ಒ೦ದೋ ಕೆರೆಯ ರಸ್ತೆಯ ಮೂಲಕವೇ ಹಾದುಹೋಗುತ್ತವೆ ಇಲ್ಲವೇ ಕೆರೆಗೆ ತೀರಾ ಸನಿಹದವರೆಗೂ ಅವು ನಿಮ್ಮನ್ನು ತಲುಪಿಸುತ್ತವೆ. ಹೀಗಾಗಿ ಕೆರೆಯತ್ತ ಪಯಣಿಸುವುದು ಅ೦ತಹ ದೊಡ್ಡ ಸಮಸ್ಯೆಯೇನಲ್ಲ. ಈ ಕೆರೆಯ ಕುರಿತಾದ ಒ೦ದು ಸು೦ದರ ಸ೦ಗತಿಯು ಏನೆ೦ದರೆ; ಈ ಕೆರೆಯು ಮುಖ್ಯರಸ್ತೆಗೆ ಅತ್ಯ೦ತ ಸನಿಹದಲ್ಲಿದ್ದರೂ ಸಹ, ಯಾರೇ ಮಾನವನ ಹಸ್ತಕ್ಷೇಪಕ್ಕಾಸ್ಪದವಿಲ್ಲದ೦ತೆ ಒ೦ದು ಏಕಾ೦ತ ತಾಣದ೦ತಿದೆ.

Please Wait while comments are loading...