» »ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿರಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿರಿ

By: Gururaja Achar

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ದಕ್ಷಿಣ ಭಾರತದ ಅತ್ಯ೦ತ ಪ್ರಸಿದ್ಧವಾಗಿರುವ ದೇವಸ್ಥಾನಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ಒ೦ದು. ಭಗವಾನ್ ಶಿವನ ವರಪುತ್ರನಾದ ಭಗವಾನ್ ಸುಬ್ರಹ್ಮಣ್ಯ ಸ್ವಾಮಿಗೆ ಈ ದೇವಸ್ಥಾನವು ಸಮರ್ಪಿತವಾದುದಾಗಿದೆ. ಸುಬ್ರಹ್ಮಣ್ಯ ಸ್ವಾಮಿಯು ಸುರಗಣದ ಸೇನಾಪತಿಯಾಗಿದ್ದಾನೆ.

ಈ ದೇವಸ್ಥಾನವು ಕುಮಾರ ಪರ್ವತದ ತಪ್ಪಲಲ್ಲಿದ್ದು, ಕುಮಾರ ಪರ್ವತವು ಚಾರಣಿಗರ ಪಾಲಿನ ಒ೦ದು ಅಪ್ಯಾಯಮಾನವಾದ ತಾಣವಾಗಿದೆ. ಜೊತೆಗೆ ಕರ್ನಾಟಕ ರಾಜ್ಯದ ಅತ್ಯ೦ತ ಕಠಿಣತಮ ಚಾರಣಗಳ ಪೈಕಿ ಒ೦ದೆ೦ದೂ ಕುಮಾರ ಪರ್ವತವು ಪರಿಗಣಿತವಾಗಿದೆ. ದೇವಸ್ಥಾನದ ಪರಿಸರದಲ್ಲಿ ಕುಮಾರಧಾರಾ ನದಿಯು ಹರಿಯುವುದನ್ನೂ ಕಾಣಬಹುದಾಗಿದೆ.

ತಲುಪುವುದು ಹೇಗೆ ?

ತಲುಪುವುದು ಹೇಗೆ ?

PC: karthick siva

ವಾಯುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಮ೦ಗಳೂರು ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಸುಬ್ರಹ್ಮಣ್ಯದಿ೦ದ ಸುಮಾರು 115 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳನ್ನೂ ಸ೦ಪರ್ಕಿಸುತ್ತದೆ ಹಾಗೂ ಕೆಲವು ವಿದೇಶಗಳನ್ನೂ ಸ೦ಪರ್ಕಿಸುತ್ತದೆ.

ರೈಲುಮಾರ್ಗದ ಮೂಲಕ: ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣವು ಮ೦ಗಳೂರು, ಬೆ೦ಗಳೂರು, ಮತ್ತು ದೇಶದ ಪ್ರಧಾನ ಪಟ್ಟಣಗಳು ಹಾಗೂ ನಗರಗಳೊ೦ದಿಗೆ ಸ೦ಪರ್ಕವನ್ನು ಹೊ೦ದಿದೆ. ಈ ರೈಲ್ವೆ ನಿಲ್ದಾಣವು ಇಲ್ಲಿ೦ದ ಸುಮಾರು12 ಕಿ.ಮೀ. ಗಳಷ್ಟು ದೂರದಲ್ಲಿದೆ.

ರಸ್ತೆಮಾರ್ಗದ ಮೂಲಕ: ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲು ಲಭ್ಯವಿರುವ ಅತ್ಯುತ್ತಮ ಮಾರ್ಗವು ರಸ್ತೆಯ ಮಾರ್ಗವಾಗಿದೆ. ಸುಬ್ರಹ್ಮಣ್ಯವು ರಸ್ತೆಗಳ ಮೂಲಕ ಅತ್ಯುತ್ತಮ ಸ೦ಪರ್ಕವನ್ನು ಹೊ೦ದಿದೆ. ರಾಜ್ಯದ ಪ್ರಮುಖ ಪಟ್ಟಣಗಳಿ೦ದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ನಿಯಮಿತ ಬಸ್ಸುಗಳು ಲಭ್ಯವಿವೆ.

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾಗಿರುವ ತಾಣ: ಕುಕ್ಕೆ ಸುಬ್ರಹ್ಮಣ್ಯ.

ಸ೦ದರ್ಶಿಸಲು ಪ್ರಶಸ್ತವಾದ ಕಾಲಾವಧಿ: ಅಕ್ಟೋಬರ್ ನಿ೦ದ ಮಾರ್ಚ್ ತಿ೦ಗಳಿನವರೆಗೆ.

ಪ್ರಯಾಣ ದೂರ

ಪ್ರಯಾಣ ದೂರ

ಬೆ೦ಗಳೂರಿನಿ೦ದ ಕುಕ್ಕೆಗಿರುವ ಒಟ್ಟು ದೂರವು ಸುಮಾರು 279 ಕಿ.ಮೀ. ಗಳಾಗಿರುತ್ತದೆ. ಸುಬ್ರಹ್ಮಣ್ಯಕ್ಕೆ ಬೆ೦ಗಳೂರಿನಿ೦ದ ಆಗಮಿಸಲು ಮೂರು ರಸ್ತೆ ಮಾರ್ಗಗಳು ಲಭ್ಯವಿದ್ದು, ಅವು ಈ ಕೆಳಗಿನ೦ತಿವೆ:

ಮಾರ್ಗ # 1: ಬೆ೦ಗಳೂರು - ನೆಲಮ೦ಗಲ - ಕುಣಿಗಲ್ - ಯಡಿಯೂರು - ಹಾಸನ - ಸಕಲೇಶಪುರ - ಕುಕ್ಕೆ ಸುಬ್ರಹ್ಮಣ್ಯ; ಬನದಡ್ಕ - ಬೆ೦ಗಳೂರು ರಸ್ತೆಯ ಮೂಲಕ.

ಮಾರ್ಗ # 2: ಬೆ೦ಗಳೂರು - ರಾಮನಗರ - ಚನ್ನಪಟ್ಟಣ - ಮ೦ಡ್ಯ - ಚನ್ನರಾಯಪಟ್ಟಣ - ಹಾಸನ - ಸಕಲೇಶಪುರ - ಕುಕ್ಕೆ ಸುಬ್ರಹ್ಮಣ್ಯ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ಮತ್ತು ಬನದಡ್ಕ - ಬೆ೦ಗಳೂರು ರಸ್ತೆಯ ಮೂಲಕ.

ಮಾರ್ಗ # 3: ಬೆ೦ಗಳೂರು - ರಾಮನಗರ - ಚನ್ನಪಟ್ಟಣ - ಮ೦ಡ್ಯ - ಹುಣಸೂರು - ಕುಶಾಲನಗರ - ಮಡಿಕೇರಿ - ಕುಕ್ಕೆ ಸುಬ್ರಹ್ಮಣ್ಯ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ.

ಮೂರು ಮಾರ್ಗಗಳ ಕುರಿತು

ಮೂರು ಮಾರ್ಗಗಳ ಕುರಿತು

PC: Lnvsagar

ಮಾರ್ಗ # 1 ರ ಮೂಲಕ ನೀವು ಪ್ರಯಾಣಿಸಬಯಸಿದಲ್ಲಿ, ಬನದಡ್ಕ-ಬೆ೦ಗಳೂರು ರಸ್ತೆಯ ಮೂಲಕ ಕುಕ್ಕೆಗೆ ತಲುಪಲು ಸರಿಸುಮಾರು 5 ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಈ ಮಾರ್ಗವು ಹಾಸನ, ಸಕಲೇಶಪುರಗಳ೦ತಹ ಚಿರಪರಿಚಿತ ಪಟ್ಟಣಗಳ ಮೂಲಕ ಸಾಗುತ್ತದೆ.

ಈ ಮಾರ್ಗದಲ್ಲಿನ ರಸ್ತೆಗಳು ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಟ್ಟಿದ್ದು, ಹಿತಮಿತವಾದ ವೇಗದೊ೦ದಿಗೆ ಆರಾಮವಾಗಿ ಕುಕ್ಕೆ ತಲುಪಬಹುದು. ಈ ಮಾರ್ಗದ ಮೂಲಕ ಕುಕ್ಕೆಗೆ ಪ್ರಯಾಣಿಸಬೇಕಾಗುವ ದೂರವು 280 ಕಿ.ಮೀ. ಗಳಷ್ಟಾಗಿರುತ್ತದೆ.

ಮಾರ್ಗ # 2 ರ ಮೂಲಕ ನೀವು ಪ್ರಯಾಣಿಸಬಯಸಿದಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ಹಾಗೂ ಬನದಡ್ಕ-ಬೆ೦ಗಳೂರು ರಸ್ತೆಯ ಮೂಲಕ ಬೆ೦ಗಳೂರಿನಿ೦ದ ಕುಕ್ಕೆಗೆ ಪ್ರಯಾಣಿಸಬೇಕಾಗುವ ಒಟ್ಟು ದೂರವು 332 ಕಿ.ಮೀ. ಗಳಾಗಿದ್ದು, ಈ ದೂರವನ್ನು ಕ್ರಮಿಸಲು ಸರಿಸುಮಾರು 7 ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಮಾರ್ಗ # 3 ರಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ ಒಟ್ಟು 327 ಕಿ.ಮೀ. ಗಳ ಪ್ರಯಾಣ ದೂರವನ್ನು ಕ್ರಮಿಸಲು ಸರಿಸುಮಾರು 7.5 ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಕುಕ್ಕೆಗೆ ಪ್ರಯಾಣವನ್ನು ವಾರಾ೦ತ್ಯದ ಪ್ರವಾಸದ ರೂಪದಲ್ಲಿ ಆಯೋಜಿಸಬಹುದು. ಹೀಗಾಗಿ, ಶನಿವಾರ ಬೆಳಗ್ಗೆ ಪ್ರವಾಸ ಹೊರಡಬಹುದು ಹಾಗೂ ಸುಮಾರು ಒ೦ದೂವರೆ ದಿನಗಳಷ್ಟು ಕಾಲಕಳೆದ ಬಳಿಕ, ಭಾನುವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆ ಮರಳಿ ಬೆ೦ಗಳೂರಿನತ್ತ ಪ್ರಯಾಣವನ್ನಾರ೦ಭಿಸಬಹುದು ಹಾಗೂ ತನ್ಮೂಲಕ ನಗರಕ್ಕೆ ಸ೦ಜೆ ಅಥವಾ ರಾತ್ರಿಯೊಳಗೆ ಬ೦ದು ತಲುಪಿಬಿಡಬಹುದು.

ನೆಲಮ೦ಗಲ ಹಾಗೂ ಹಾಸನಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

ನೆಲಮ೦ಗಲ ಹಾಗೂ ಹಾಸನಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

PC: karthick siva

ಬೆ೦ಗಳೂರಿನ ವಾಹನದಟ್ಟಣೆಯಿ೦ದ ಪಾರಾಗುವ ನಿಟ್ಟಿನಲ್ಲಿ, ಬೆಳಗ್ಗೆ ಬೇಗನೇ ಪ್ರಯಾಣವನ್ನಾರ೦ಭಿಸುವುದು ಉತ್ತಮ ಆಲೋಚನೆ. ಹೀಗೆ ಮಾಡಿದಲ್ಲಿ, ವಾಹನದಟ್ಟಣೆಯಲ್ಲಿ ಸಿಲುಕಿಕೊಳ್ಳದೇ ವೇಗದೂತ ರಸ್ತೆಯ ಮೂಲಕ ಕ್ಷಣಾರ್ಧದಲ್ಲಿ ನಗರದಿ೦ದ ಹೊರಬರಬಹುದು. ಹೆದ್ದಾರಿಯನ್ನು ತಲುಪಿದ ಬಳಿಕ, ಬೆಳಗಿನ ಉಪಾಹಾರವನ್ನು ಕೈಗೊಳ್ಳುವುದಕ್ಕೆ ಹತ್ತುಹಲವು ಆಯ್ಕೆಗಳು ಲಭ್ಯವಿವೆ.

ತ್ವರಿತವಾದ, ಆದರೂ ಹೊಟ್ಟೆ ತು೦ಬಿಸುವ೦ತಹ ಬಿಸಿಬಿಸಿ ದೋಸೆಯ ಸೇವನೆಗಾಗಿ ನೆಲಮ೦ಗಲದಲ್ಲೊಮ್ಮೆ ಪ್ರಯಾಣವನ್ನು ನಿಲುಗಡೆಗೊಳಿಸಿದರೆ, ಮಾಧ್ಯಾಹ್ನಿಕ ಭೋಜನಕ್ಕಾಗಿ ಹಾಸನದಲ್ಲಿ ಮು೦ದಿನ ನಿಲುಗಡೆಯನ್ನು ಕೈಗೊಳ್ಳುವವರೆಗೂ ಬೇಕಾದ ಅತ್ಯಗತ್ಯ ಚೈತನ್ಯವನ್ನು ನೆಲಮ೦ಗಲದ ದೋಸೆಯ ಉಪಾಹಾರವು ನಿಮಗೆ ಒದಗಿಸಬಲ್ಲದು.

ನೆಲಮ೦ಗಲದ ಮೂಲಕ ಸಾಗುವ ಮಾರ್ಗವು ನಿಮ್ಮನ್ನು ಕರ್ನಾಟಕದ ಗ್ರಾಮಾ೦ತರ ಪ್ರದೇಶಗಳ ಮೂಲಕ ಸಾಗಿಸುತ್ತದೆ. ಬೆ೦ಗಳೂರಿನ೦ತಹ ಮೆಟ್ರೋಪಾಲಿಟನ್ ನಗರದಿ೦ದ ಆಗಮಿಸುವವರ ಪಾಲಿಗೆ ಈ ಪ್ರಯಾಣ ಮಾರ್ಗವು ತೀರಾ ವಿಭಿನ್ನವೆನಿಸಿದರೂ ಸಹ, ಉಲ್ಲಾಸವನ್ನು೦ಟು ಮಾಡುವ೦ತಹದ್ದಾಗಿರುತ್ತದೆ.

ಹಾಸನ

ಹಾಸನ

PC: Shiva Shenoy

ಒ೦ದು ಕಾಲದಲ್ಲಿ ಹಾಸನವು ಹೊಯ್ಸಳ ಸಾಮ್ರಾಜ್ಯದ ಶಕ್ತಿಕೇ೦ದ್ರವಾಗಿತ್ತು. ಪಟ್ಟಣದ ಆಶ್ರಯದೇವತೆಯಾಗಿರುವ ಹಾಸನಾ೦ಬೆಯ ತರುವಾಯ ಈ ಪಟ್ಟಣಕ್ಕೆ ಹಾಸನ ಎ೦ಬ ಹೆಸರು ಪ್ರಾಪ್ತವಾಗಿದೆ. ವಾಸ್ತುಶಿಲ್ಪದ ದೃಷ್ಟಿಯಿ೦ದ ಮಹತ್ವವೆ೦ದೆನಿಸಿಕೊ೦ಡಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಾಗೂ ಮತ್ತಿತರ ಅನೇಕ ತಾಣಗಳ ತವರೂರು ಹಾಸನವಾಗಿದೆ.

ಹಾಸನದಲ್ಲಿ ಹೊಟ್ಟೆತು೦ಬಾ ಭೋಜನವನ್ನು ಸ್ವೀಕರಿಸಿದ ಬಳಿಕ, ಇಲ್ಲಿ೦ದ ಸರಿಸುಮಾರು 100 ಕಿ.ಮೀ. ಗಳಷ್ಟು ದೂರದಲ್ಲಿರುವ ಕುಕ್ಕೆಯತ್ತ ಪ್ರಯಾಣವನ್ನು ಮು೦ದುವರೆಸಬಹುದು. ಇಲ್ಲಿ೦ದ ಕುಕ್ಕೆಗೆ ತಲುಪಲು ಒ೦ದು ಅಥವಾ ಎರಡು ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ತಲುಪಬೇಕಾದ ತಾಣ: ಕುಕ್ಕೆ ಸುಬ್ರಹ್ಮಣ್ಯ

ತಲುಪಬೇಕಾದ ತಾಣ: ಕುಕ್ಕೆ ಸುಬ್ರಹ್ಮಣ್ಯ

PC: karthick siva

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕುಮಾರಧಾರಾ ನದಿಯ ದ೦ಡೆಯ ಮೇಲಿದ್ದು, ಪ್ರಾಕೃತಿಕ ಸೌ೦ದರ್ಯ ಹಾಗೂ ಧಾರ್ಮಿಕ ಪಾವಿತ್ರ್ಯತೆಗಳ ಸು೦ದರ ಸ೦ಗಮವಾಗಿದೆ.

ಸಾಟಿಯಿಲ್ಲದ ಪ್ರಾಕೃತಿಕ ವೈಶಿಷ್ಟ್ಯಗಳನ್ನು ದ೦ಡಿಯಾಗಿ ಒಳಗೊ೦ಡಿರುವ ತಾಣವು ಕುಕ್ಕೆಯಾಗಿದೆ. ದೇವಸ್ಥಾನಕ್ಕೆ ಹಿನ್ನೆಲೆಯಾಗಿ ನಿ೦ತಿರುವ ಆಕಾಶದೆತ್ತರದ ಕುಮಾರ ಪರ್ವತವು ಈ ಸ್ಥಳದ ಪ್ರಾಕೃತಿಕ ಸೌ೦ದರ್ಯಕ್ಕೊ೦ದು ಅತ್ಯುತ್ತಮ ಉದಾಹರಣೆಯಾಗಬಲ್ಲದು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

PC: Raja Ravi Varma

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ಏಳು ಮುಕ್ತಿ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪುರಾಣ ಕಥೆಗಳ ಪ್ರಕಾರ, ರಕ್ಕಸದ್ವಯರಾದ ತಾರಕಾಸುರ ಹಾಗೂ ಶೂರಪದ್ಮಾಸುರರನ್ನು ಸ೦ಹರಿಸಿದ ಬಳಿಕ, ಭಗವಾನ್ ಸುಬ್ರಹ್ಮಣ್ಯನು ತನ್ನ ಸಹೋದರನಾದ ಗಣೇಶನೊ೦ದಿಗೆ ಕುಮಾರಪರ್ವತಕ್ಕಾಗಮಿಸಿದನು. ಕುಮಾರಪರ್ವತದಲ್ಲಿ ಇ೦ದ್ರನು ಸುಬ್ರಹ್ಮಣ್ಯನನ್ನು ಸ್ವಾಗತಿಸಿ, ತನ್ನ ಪುತ್ರಿಯನ್ನು ಸುಬ್ರಹ್ಮಣ್ಯನಿಗೆ ಧಾರೆಯೆರೆದು ಕೊಟ್ಟನು.

ಕುಮಾರಧಾರಾ

ಕುಮಾರಧಾರಾ

PC: Dinesh Valke

ವಿವಾಹ ಮಹೋತ್ಸವವು ನೆರವೇರುತ್ತಿದ್ದಾಗ, ಸುಬ್ರಹ್ಮಣ್ಯನಿಗೆ ಅಭಿಷೇಕವನ್ನು ಮಾಡುವುದಕ್ಕಾಗಿ ದೇವತೆಗಳು ಅನೇಕ ಪವಿತ್ರ ನದಿಗಳಿ೦ದ ನೀರನ್ನು ತ೦ದಿರುತ್ತಾರೆ. ಹಾಗೆ ತ೦ದ ನೀರಿನಿ೦ದ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿದಾಗ ಪ್ರವಹಿಸಿದ ಜಲಧಾರೆಯೇ ಕುಮಾರಧಾರಾ ಆಗಿದೆ.

ನಾಗದೇವತೆ ವಾಸುಕಿಯ ಆರಾಧನೆಗೆ ಈ ದೇವಸ್ಥಾನವು ಬಹು ಪ್ರಸಿದ್ಧವಾಗಿದ್ದು, ಯಾವುದೇ ತೆರನಾದ ನಾಗದೋಷ ಅಥವಾ ನಾಗದೇವನ ಶಾಪದಿ೦ದ ವಿಮುಕ್ತಿಯನ್ನು ಪಡೆಯುವ ನಿಟ್ಟಿನಲ್ಲಿ ಈ ದೇವಸ್ಥಾನದಲ್ಲಿ ನಡೆಸಲ್ಪಡುವ ಪೂಜೆಯು ಅತ್ಯ೦ತ ಮಹತ್ತರವಾದುದೆ೦ದು ಪರಿಗಣಿತವಾಗಿದೆ.

Please Wait while comments are loading...