• Follow NativePlanet
Share
Menu
» »ದ್ವೀಪದಲ್ಲಿ ಕಂಗೊಳಿಸುವ ಗುಹಾಲಯ

ದ್ವೀಪದಲ್ಲಿ ಕಂಗೊಳಿಸುವ ಗುಹಾಲಯ

Posted By: Divya

ಭಾರತದಲ್ಲಿ ಪುರಾತನ ಕಾಲದ ಅನೇಕ ಆಕರ್ಷಕ ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ಗುಹಾಂತರ ದೇವಾಲಯಗಳು ಸೇರಿಕೊಂಡಿವೆ. ವಿಶಿಷ್ಟ ಇತಿಹಾಸ, ಆಕಾರ ಹಾಗೂ ಆಕರ್ಷಣೆಯನ್ನು ತಳೆದ ಈ ದೇವಾಲಯಗಳು ಪ್ರವಾಸಿಗರು ಹಾಗೂ ಭಕ್ತಾಧಿಗಳನ್ನು ಕೈಬೀಸಿ ಕರೆಯುತ್ತವೆ. ಗತಕಾಲದಲ್ಲಿ ನಿರ್ಮಾಣಗೊಂಡ ಸೂಕ್ಷ್ಮ ಕಲಾಕೃತಿಯ ದೇಗುಲಗಳಲ್ಲಿ ಹಲವಾರು ದೇವಾಲಯಗಳು ಅವನತಿ ಕಂಡಿವೆ. ಕೆಲವು ಮಾತ್ರ ಉಳಿದುಕೊಂಡಿವೆ.

ವಿಸ್ಮಯ ಹಾಗೂ ಕುತೂಹಲವನ್ನು ಕೆರಳಿಸುವ ಗುಹಾಲಯವು ಭಾರತದ ಹಲವೆಡೆ ಇರುವುದನ್ನು ಕಾಣಬಹುದು. ಅಜಂತಾ, ಎಲ್ಲೋರಾ, ಹಳೆಬೀಡು ಹಾಗೂ ಪಟ್ಟದ ಕಲ್ಲು ಗುಹಾಲಯವು ಅಪರೂಪದ ಕಲಾಕೃತಿಗಳಿಂದಲೂ ಆಕರ್ಷಿತಗೊಂಡಿವೆ. ಅಂತರ ಗುಹಾಲಯದ ಸಾಲಲ್ಲಿ ಎಲಿಫೆಂಟಾ ಗುಹಾಲಯವು ನಿಲ್ಲುತ್ತದೆ. ಬೆಂಗಳೂರಿನಿಂದ 993.1 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ತಾಣದಲ್ಲಿ ಉತ್ತಮ ಸಾರಿಗೆ ಸಂಪರ್ಕ ಹಾಗೂ ವಸತಿ ಸೌಲಭ್ಯವನ್ನು ಹೊಂದಬಹುದು.

ಎಲಿಫೆಂಟಾ ಗುಹೆ

ಎಲಿಫೆಂಟಾ ಗುಹೆ

ಮುಂಬೈ ನಗರದ ಸಮೀಪದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿ ಈ ಗುಹಾಲಯವಿದೆ. ಇದನ್ನು ಮೊದಲು ಘಾರಾಪುರಿ ಎಂದು ಕರೆಯುತ್ತಿದ್ದರು. ನಂತರ ಪೋರ್ಚುಗೀಸರು ಎಲಿಫೆಂಟಾ ಎಂದು ಬದಲಾಯಿಸಿದರು ಎನ್ನಲಾಗುತ್ತದೆ. 1987ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿತು.
PC: wikipedia.org

ಇತಿಹಾಸ

ಇತಿಹಾಸ

ಈ ಗುಹಾಲಯವು 9 ರಿಂದ 13ನೇ ಶತಮಾನದಲ್ಲಿದ್ದ ಸಿಲ್ಹರ ಅರಸರ ಕಾಲದ್ದು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿರುವ ಕೆಲವು ಕೆತ್ತನೆ ಹಾಗೂ ಮೂರ್ತಿಗಳು ಮಾನ್ಯಖೇಟರು ಹಾಗೂ ರಾಷ್ಟ್ರಕೂಟರ ಕಾಲದ್ದು ಎನ್ನುವುದನ್ನು ಬಿಂಬಿಸುತ್ತವೆ.
PC: wikipedia.org

ಸುತ್ತಳತೆ

ಸುತ್ತಳತೆ

60,000 ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿರುವ ಈ ದೇಗುಲಕ್ಕೆ ಮೂರು ಪ್ರವೇಶ ದ್ವಾರಗಳಿವೆ. ಮೊಗಸಾಲೆಗಳು, ಹಜಾರಗಳು ಹಾಗೂ ಅನೇಕ ಗುಡಿಗಳಿರುವುದನ್ನು ಕಣಬಹುದು. ಬಂಡೆಯಿಂದಲೇ ಈ ಗುಹಾಲಯವನ್ನು ಕೊರೆದಿರುವುದು ವಿಶೇಷ.
PC: wikipedia.org

ಪರಿಸರದ ಸೌಂದರ್ಯ

ಪರಿಸರದ ಸೌಂದರ್ಯ

ಇದೊಂದು ದ್ವೀಪದಲ್ಲಿರುವುದರಿಂದ ಸುತ್ತಲ ಪರಿಸರ ಅಮೋಘವಾಗಿ ಆಕರ್ಷಿಸುತ್ತದೆ. ತಂಪಾದ ಗಾಳಿ ಹಾಗೂ ಪ್ರಶಾಂತವಾದ ವಾತಾವರಣ ಎಲ್ಲವೂ ಮನಸ್ಸಿಗೆ ಹಿತವನ್ನು ನೀಡುತ್ತವೆ.
PC: wikipedia.org

ಮೂರ್ತಿಗಳ ನಾಶ

ಮೂರ್ತಿಗಳ ನಾಶ

ಇಲ್ಲಿರುವ ವಿಶೇಷ ಮೂರ್ತಿಗಳು ಗುಹಾಲಯದ ಪ್ರಮುಖ ಆಕರ್ಷಣೆಗಳು. ಹೆಚ್ಚಿನ ಶಿಲಾ ಮೂರ್ತಿಗಳನ್ನು ಪೋರ್ಚುಗೀಸರು ವಿರೂಪಗೊಳಿಸಿದರು ಎನ್ನಲಾಗುತ್ತದೆ. ಇನ್ನು ಕೆಲವು ಕಿಡಿಗೇಡಿಗಳಿಂದ ಹಾಗೂ ವಾತಾವರಣದ ವೈಪರಿತ್ಯದಿಂದ ಹಾಳಾಗಿವೆ ಎಂದು ಅಂದಾಜಿಸಲಾಗಿದೆ.
PC: wikipedia.org

ವಿಶೇಷ ಕೆತ್ತನೆ

ವಿಶೇಷ ಕೆತ್ತನೆ

ಮೂರು ಮುಖಗಳ ಸದಾಶಿವ ವಿಗ್ರಹ, ನಟರಾಜ, ಅರ್ಧನಾರೀಶ್ವರ ಹಾಗೂ ಅಲ್ಲಲ್ಲಿ ಅನೇಕ ಪೌರಾಣಿಕ ಹಾಗೂ ಸಾಮಾಜಿ ಧಾರ್ಮಿಕ ಕಾರ್ಯಗಳ ಕೆತ್ತನೆಗಳನ್ನು ಒಳಗೊಂಡಿದೆ. ವಿಶಾಲ ಆಕೃತಿಯ ಕಂಬಗಳು ಹಾಗೂ ಅವುಗಳ ಕೆತ್ತನೆಗಳು ರಮಣೀಯವಾಗಿವೆ. ಇಲ್ಲಿ ಒಂದು ಶಿವಾಲಯವು ಪ್ರಧಾನವಾಗಿರುವುದನ್ನು ಕಾಣಬಹುದು.
PC: wikipedia.org

ಅನೇಕ ಗುಹೆಗಳು

ಅನೇಕ ಗುಹೆಗಳು

ಈ ಗುಹಾಲಯದಲ್ಲಿ ಒಳ ಹೊಕ್ಕಿದರೆ ಶಿವ ಗುಹೆ, ಯೋಗೀಶ್ವರ ಮತ್ತ ನಟರಾಜ ಗುಹೆ, ಈಸ್ಟ ವಿಂಗ್ ಮತ್ತು ವೆಸ್ಟ್ ವಿಂಗ್ ಗುಹೆ ಹಾಗೂ ಮಹೇಶ ಮೂರ್ತಿ ಗುಹೆ ಎನ್ನುವ ಬೇರೆ ಬೇರೆ ಗುಹಾಲಯವಿದೆ.
PC: wikipedia.org

ಹತ್ತಿರದ ಆಕರ್ಷಣೆ

ಹತ್ತಿರದ ಆಕರ್ಷಣೆ

ಈ ತಾಣಕ್ಕೆ ಹತ್ತಿರ ಇರುವ ಸಿದ್ಧಿವಿನಾಯಕ ದೇಗುಲ, ಬಬುಲ್‍ನಾಥ ದೇಗುಲ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ ಹಾಗೂ ಗಿರ್ಗಾಂವ್ ಚೌಪಾಟಿ ಸಮುದ್ರ ತೀರಕ್ಕೆ ಭೇಟಿ ನೀಡಬಹುದು.
PC: wikipedia.org

Read more about: ಮುಂಬೈ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ