Search
  • Follow NativePlanet
Share
» »ನವರಾತ್ರಿ ಸ್ಪೆಷಲ್: ವರ್ಷಕ್ಕೆ ಎರಡೇ ಬಾರಿ ತೆರೆಯುವ ಸ್ಕಂದ ಮಾತ ದೇವಸ್ಥಾನ

ನವರಾತ್ರಿ ಸ್ಪೆಷಲ್: ವರ್ಷಕ್ಕೆ ಎರಡೇ ಬಾರಿ ತೆರೆಯುವ ಸ್ಕಂದ ಮಾತ ದೇವಸ್ಥಾನ

ನವರಾತ್ರಿಯ ಐದನೇ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತನನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್‌. ಕಾರ್ತೀಕೇಯನ ತಾಯಿಯೇ ಈ ಸ್ಕಂದ ಮಾತ. ಕಾರ್ತೀಕೆಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ಕಾಣಸಿಗುತ್ತಾಳೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

PC: Jonoikobangali

ದೇವಾಲಯದ ಇತಿಹಾಸದ ಪ್ರಕಾರ, ದುಷ್ಟ ರಾಕ್ಷಸ ದುರ್ಗಾಸುರ ತನ್ನ ಅಲೌಕಿಕ ಶಕ್ತಿಯಿಂದ ನಿಷ್ಠಾವಂತ ಜನರನ್ನು ಚಿತ್ರಹಿಂಸೆಗೊಳಿಸುತ್ತಿದ್ದಾಗ ಶಿವನು ಪಾರ್ವತಿಯನ್ನು ರಾಕ್ಷಸನ ಸಂಹಾರಕ್ಕೆ ಕಳುಹಿಸಿದನು. ರಾಕ್ಷಸನನ್ನು ಕೊಂದ ನಂತರ ದುರ್ಗಾ ದೇವಿ ರೂಪವನ್ನು ತೆಗೆದುಕೊಂಡ ನಂತರ, ದುರ್ಗಾ ದೇವಿಯು ಕಾಶಿಯನ್ನು ರಕ್ಷಿಸುತ್ತಾಳೆ.

ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ ! ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !

ಕಮಲದ ಹೂವು

ಕಮಲದ ಹೂವು

ಸ್ಕಂದ ಮಾತ ದೇವಸ್ಥಾನವು ಉತ್ತರ ಪ್ರದೇಶದ ಹಿಂದೂ ದೇವಸ್ಥಾನಗಳಲ್ಲಿ ಒಂದಾಗಿದೆ. ದುರ್ಗಾ ದೇವಿಯ ವಿಗ್ರಹವು ನಾಲ್ಕು ಕೈಗಳಿಂದ ಕಾಣಿಸಿಕೊಳ್ಳುತ್ತದೆ. ಆಕೆಯು ಮೇಲಿನ ಎರಡು ಕೈಗಳಲ್ಲಿ ಕಮಲದ ಹೂವನ್ನು ಹೊಂದಿದ್ದಾಳೆ.

ಪದ್ಮಾಸನ ದೇವಿ

ಪದ್ಮಾಸನ ದೇವಿ

ಎಡಗೈಯಿಂದ ಆಶೀರ್ವಾದವನ್ನು ನೀಡುವ ನಿಲುವು. ಅವಳ ರೂಪ ಮಂಗಳಕರವಾಗಿರುತ್ತದೆ ಮತ್ತು ಅವಳು ಕಮಲದ ಹೂವಿನ ಮೇಲೆ ಆಸನಳಾಗಿದ್ದಾಳೆ. ಆದರಿಂದ ಆಕೆಯನ್ನು ಪದ್ಮಾಸನ ದೇವಿ ಎಂದು ಕರೆಯಲಾಗುತ್ತದೆ.

ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ಸಿಂಹ ವಾಹನ

ಸಿಂಹ ವಾಹನ

ಸ್ಕಂದ ಮಾತೆಯ ವಾಹನ ಸಿಂಹ. ಸ್ಕಂದ ಮಾತೆಯನ್ನು ಆರಾಧಿಸುವವರು ಹೆಚ್ಚು ಶಾಂತಿ ಮತ್ತು ಸಂತೋಷದ ಜೀವನವನ್ನು ಪಡೆಯುತ್ತಾರೆ ಮತ್ತು ಮೋಕ್ಷದ ಮಾರ್ಗವು ಸುಲಭವಾಗುತ್ತದೆ.

 ಎರಡು ದಿನ ಮಾತ್ರ ತೆರೆದಿರುತ್ತದೆ

ಎರಡು ದಿನ ಮಾತ್ರ ತೆರೆದಿರುತ್ತದೆ

ಒಂದು ವರ್ಷದಲ್ಲಿ ಕೇವಲ ಎರಡು ದಿನಗಳು ಮಾತ್ರ ಈ ವಾಗೇಶ್ವರಿ ದೇವಿ (ಅಶ್ವಾ ರೂಡಾ) ಅನ್ನು ಪೂಜಿಸಲಾಗುತ್ತದೆ. ಇತರ ದಿನಗಳಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲ್ಪಡುತ್ತದೆ ಮತ್ತು ಉಳಿದ ದಿನಗಳಲ್ಲಿ ಭಕ್ತರು ಕೇವಲ ಬಾಗಿಲನ್ನು ಪೂಜಿಸುತ್ತಾರೆ.

ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

ಸ್ಕಂದಮಾತ ದೇವಸ್ಥಾನವು ವಾರಣಾಸಿಯ ಜೈತ್‌ಪುರದಲ್ಲಿದೆ. ವಾರಣಾಸಿ ಪೊಲೀಸ್‌ ಸ್ಟೇಶನ್‌ ಬಳಿ ಇದೆ. ಭಕ್ತರು ನವರಾತ್ರಿಯ ಐದನೇ ದಿನ ಇಲ್ಲಿಗೆ ಬಂದು ಪೂಜೆ ಮಾಡುತ್ತಾರೆ.

ಸ್ಕಂದ ಮಾತೆ

ಸ್ಕಂದ ಮಾತೆ

ಸ್ಕಂದ ಮಾತೆಯು ಮಗುವನ್ನು ಸ್ಕಂದನನ್ನು (ಕಾರ್ತಿಕೇಯ) ತನ್ನ ತೊಡೆಯ ಮೇಲೆ ಕುಳ್ಳಿರಿಸಿದ್ದಾಳೆ ಹಾಗಾಗಿ ಆಕೆಯನ್ನು ಸ್ಕಂದ ಮಾತೆ ಎನ್ನಲಾಗುತ್ತದೆ. ಸ್ಕಂದ ಮಾತೆಯು ಕಾರ್ತೀಕೇಯನನ್ನು ತೊಡೆಯ ಮೇಲೆ ಕುಳ್ಳಿರಿಸಿ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X