Search
  • Follow NativePlanet
Share
» »ಹೊಸಕೆರೆಹಳ್ಳಿಯ ನೆಚ್ಚಿನ ದುರ್ಗಾ ದೇವಾಲಯ

ಹೊಸಕೆರೆಹಳ್ಳಿಯ ನೆಚ್ಚಿನ ದುರ್ಗಾ ದೇವಾಲಯ

By Vijay

ನೊಂದಾಯಿತವಾದ ಶ್ರೀ ದುರ್ಗಾ ದೇವಿ ಟ್ರಸ್ಟ್ ನಡೆಸುತ್ತಿರುವ ದುರ್ಗಾ ದೇವಿಯ ಭವ್ಯ ದೇವಾಲಯ ಇದಾಗಿದೆ. ಕೇವಲ ದುರ್ಗೆ ಮಾತ್ರವಲ್ಲದೆ ಲಕ್ಷ್ಮೀವೆಂಕಟೇಶ್ವರನ ಸನ್ನಿಧಿಯೂ ಸಹ ಇಲ್ಲಿದೆ. ಹಾಗಾಗಿ ಇದು ದುರ್ಗಾ ಹಾಗೂ ಲಕ್ಷ್ಮೀವೆಂಕಟೇಶ್ವರ ನೆಲೆಸಿರುವ ಪವಿತ್ರ ದೇವಾಲಯವಾಗಿದೆ.

ಚಾಮುಂಡೇಶ್ವರಿ ಕ್ಷೇತ್ರ ಮಹಿಮೆ!

ಬೆಂಗಳೂರಿನಲ್ಲಿರುವ ಈ ದೇವಾಲಯ ಇತ್ತೀಚಿನ ಕೆಲ ಸಮಯದಿಂದ ಭಕ್ತ ಜನರ ಗಮನ ಸೆಳೆಯುತ್ತಿದೆ. ಒಂದೆಡೆ ದುಷ್ಟ ಶಕ್ತಿಗಳನ್ನು ನಾಶ ಮಾಡಿ ಜನರನ್ನು ಕಾಪಾಡುವ ದುರ್ಗೆಯು ನೆಲೆಸಿದ್ದರೆ ಇನ್ನೊಂದೆಡೆ ಲಕ್ಷ್ಮಿಯು ವೆಂಕಟೇಶ್ವರನ ಸಮೇತವಾಗಿ ನೆಲೆಸಿದ್ದು ಬೆಡಿಕೊಂಡು ಬರುವ ಭಕ್ತರ ಆರ್ಥಿಕ ಹಾಗೂ ಇತರೆ ತೊಂದರೆಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆಯಿದೆ.

ಹೊಸಕೆರೆಹಳ್ಳಿಯ ನೆಚ್ಚಿನ ದುರ್ಗಾ ದೇವಾಲಯ

ಚಿತ್ರಕೃಪೆ: Brunda Nagaraj

ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಒಳಿತು ಕಂಡವರು ಸಾಕಷ್ಟು ಜನರಿದ್ದು, ಆ ಕಾರಣದಿಂದಾಗಿಯೆ ಈ ದೇವಸ್ಥಾನ ದಿನೆ ದಿನೆ ಹೆಚ್ಚು ಜನಪ್ರೀಯತೆಗಳಿಸುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೂ ಈ ದೇವಸ್ಥಾನದಲ್ಲಿ ವರ್ಷಪೂರ್ತಿ ಆಯಾ ಸಮಯಗಳಲ್ಲಿ ಬರುವ ಹಬ್ಬ ಹರಿದಿನಗಳನ್ನು ಬಲು ಅಚ್ಚುಕಟ್ಟಾಗಿ ಹಾಗೂ ಅಷ್ಟೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಶ್ರಾವಣಮಾಸ, ನವರಾತ್ರಿ, ದುರ್ಗಾಷ್ಟಮಿ, ಚಂಡಿಹೋಮ, ಕಾರ್ತಿಕಮಾಸ, ದೀಪೋತ್ಸವದಂತಹ ಉತ್ಸವಗಳನ್ನು ಬಲು ಸಡಗರ ಹಾಗೂ ಶೃದ್ಧಾ ಭಕ್ತಿಗಳಿಂದ ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಂತೂ ದೇವಿಗೆ ಒಂಭತ್ತು ದಿನಗಳ ಕಾಲ ವಿಶೇಷವಾಗಿ ವಿವಿಧ ದ್ರವ್ಯಗಳಿಂದ ಅಲಂಕರಿಸಿ ಭಕ್ತಿಯಿಂದ ಆರಾಧಿಸಲಾಗುತ್ತದೆ.

ಹೊಸಕೆರೆಹಳ್ಳಿಯ ನೆಚ್ಚಿನ ದುರ್ಗಾ ದೇವಾಲಯ

ಚಿತ್ರಕೃಪೆ: Brunda Nagaraj

ನವರಾತ್ರಿಯ ಒಂಭತ್ತು ದಿನಗಳು ದೇವಿ ದುರ್ಗೆಯ ಒಂಭತ್ತು ಅವತಾರಗಳಿಗೆ ಮೀಸಲಾಗಿರುವುದರಿಂದ ಈ ಸಂದರ್ಭದಲ್ಲಿ ದೇವಿಯನ್ನು ಒಂಭತ್ತು ವಿಧಗಳಲ್ಲಿ ಸಿಂಗರಿಸಿ ಆರಾಧಿಸಲಾಗುತ್ತದೆ. ನಾಣ್ಯಾಲಂಕಾರ, ಕುಂಕುಮಾಲಂಕಾರ, ಬೆಣ್ಣೆ ಅಲಂಕಾರ, ಗಂಧದ ಅಲಂಕಾರ ಹೀಗೆ ಹಲವು ಅಲಂಕಾರಗಳು ದೇವಿಯ ತೇಜಸ್ಸನ್ನು ಹೆಚ್ಚಿಸುವುದಲ್ಲದೆ ಭಕ್ತರ ಮೈಮನ ಪುಳಕಿತಗೊಳ್ಳುವಂತೆ ಮಾಡುತ್ತದೆ.

ಪ್ರಸ್ತುತ ದುರ್ಮುಖಿ ನಾಮ ಸಂವತ್ಸರದ ಶರನ್ನವರಾತ್ರಿಯ ಮಹೋತ್ಸವವು ಅಕ್ಟೋಬರ್ 1, 2016 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 11, 2016 ಮಂಗಳವಾರದವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ದೇವಸ್ಥಾನ ಮಂಡಳಿಯಿಂದ ಹತ್ತು ಹಲವು ವಿಶೇಷ ಪೂಜೆ, ಆರಾಧನೆಗಳನ್ನು ಏರ್ಪಡಿಸಲಾಗಿದೆ.

ಹೊಸಕೆರೆಹಳ್ಳಿಯ ನೆಚ್ಚಿನ ದುರ್ಗಾ ದೇವಾಲಯ

ಚಿತ್ರಕೃಪೆ: Brunda Nagaraj

ಅಕ್ಟೋಬರ್ 9, 2016 ರಂದು ಚಂಡಿ ಹೋಮವನ್ನು ಏರ್ಪಡಿಸಲಾಗಿದ್ದು ಧಾರ್ಮಿಕಾಸಕ್ತರು ಈ ಪೂಜೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬಹುದಾಗಿದೆ. ದೇವಸ್ಥಾನದಲ್ಲಿ ನಡೆಯುತ್ತಿರುವ ಇತರೆ ಪೂಜೆಗಳ ಕುರಿತು ತಿಳಿಯಬಯಸಿದ್ದಲ್ಲಿ ಮೊಬೈಲ್ ಸಂಖ್ಯೆ 9945850722 ಗೆ ಸಂಪರ್ಕಿಸಿ ತಿಳಿಯಬಹುದು.

ನಿಮಗೂ ಏಕಕಾಲದಲ್ಲಿ ದುರ್ಗೆಯ ಹಾಗೂ ಲಕ್ಷ್ಮೀವೆಂಕಟೇಶ್ವರನ ದರ್ಶನ ಮಾಡುವ ಬಯಕೆ ಇದ್ದಲ್ಲಿ ಬೆಂಗಳೂರಿನ ಈ ಆಕರ್ಷಕ ದೇವಸ್ಥಾನಕ್ಕೊಮ್ಮೆ ಭೇಟಿ ನೀಡಬಹುದು. ಇನ್ನೊಂದು ವಿಶೇಷವೆಂದರೆ ಈ ದೇವಸ್ಥಾನಕ್ಕೆ ಮಹಿಳೆಯರು ಹೆಚ್ಚಾಗಿ ಶುಕ್ರವಾರ, ಮಂಗಳವಾರ ಹಾಗೂ ಭಾನುವಾರಗಳಂದು ಭೇಟಿ ನೀಡುತ್ತಾರೆ. ಅಲ್ಲದೆ ರಾಹು ಕಾಲದಲ್ಲಿ ನಿಂಬೆಹಣ್ಣಿನ ದೀಪಾರತಿಯನ್ನು ಮಾಡುತ್ತಾರೆ.

ಹೊಸಕೆರೆಹಳ್ಳಿಯ ನೆಚ್ಚಿನ ದುರ್ಗಾ ದೇವಾಲಯ

ಚಿತ್ರಕೃಪೆ: Brunda Nagaraj

ಬೆಂಗಳೂರಿನ ಹೊಸಕೆರೆಹಳ್ಳಿ ಬಡಾವಣೆಯ ಕೆರೆಪಾಳ್ಯದಲ್ಲಿ 1996 ರಂದು ಸ್ಥಾಪಿತವಾದ ಈ ದೇವಾಲಯ ಇಂದು ಅಪಾರ ಪ್ರಮಾಣದಲ್ಲಿ ಭಕ್ತರನ್ನು ಪಡೆದಿದೆ. ದೇವಾಲಯದಾವರಣದಲ್ಲಿ ಗಣೇಶ ಹಾಗೂ ಸುಬ್ರಹ್ಮಣ್ಯ ದೇವರುಗಳ ಸನ್ನಿಧಿಗಳೂ ಸಹ ಇದ್ದು ಔದುಂಬರ ವೃಕ್ಷದ ಉಪಸ್ಥಿತಿ ಪಾವಿತ್ರ್ಯತೆಯನ್ನು ಹೆಚ್ಚಿಸಿದೆ.

Durga

ಚಿತ್ರಕೃಪೆ: Temple

ಬೆಂಗಳೂರು, ಮೈಸೂರಿನಲ್ಲಿರುವ ಧಾರ್ಮಿಕ ಕ್ಷೇತ್ರಗಳು

ದೇವಸ್ಥಾನದ ಸಂಪೂರ್ಣ ವಿಳಾಸ

ಶ್ರೀ ದುರ್ಗಾ ಹಾಗೂ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯ
4 ನೇಯ ಅಡ್ಡ ರಸ್ತೆ, ದುರ್ಗಾ ನಗರ (ಕೆರೆಪಾಳ್ಯ), ಹೊಸಕೆರೆಹಳ್ಳಿ, ಬೆಂಗಳೂರು - 560085
ದೂರವಾಣಿ : 9945850722, 9740319885

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X