Search
  • Follow NativePlanet
Share
» »ಚಿಕ್ಕಬಳ್ಳಾಪುರದಲ್ಲಿ ನಡೆಯುವ ದ್ರೌಪದಮ್ಮ ಕರಗ ಉತ್ಸವದ ವಿಶೇಷತೆ ಏನು ಗೊತ್ತಾ?

ಚಿಕ್ಕಬಳ್ಳಾಪುರದಲ್ಲಿ ನಡೆಯುವ ದ್ರೌಪದಮ್ಮ ಕರಗ ಉತ್ಸವದ ವಿಶೇಷತೆ ಏನು ಗೊತ್ತಾ?

ಕರಗ ಉತ್ಸವವೆಂದರೆ ಬಹಳ ಫೇಮಸ್. ಅದರಲ್ಲೂ ಬೆಂಗಳೂರು ಸುತ್ತಮುತ್ತ ಅಂತೂ ಕರಗ ಬಹಳ ಪ್ರಸಿದ್ಧ ಜಾತ್ರೆಯಂತಾಗಿಬಿಟ್ಟಿದೆ. ದಕ್ಷಿಣ ಕರ್ನಾಟಕದ ಭಾಗಗಳಾದ ಬೆಂಗಳೂರು, ಹೊಸಕೋಟೆ, ಆನೇಕಲ್, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಈ ಕರಗ ಉತ್ಸವ ಸಾಮಾನ್ಯವಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರದಲ್ಲಿನ ಕರಗ ಸ್ವಲ್ಪ ಡಿಫರೆಂಟ್ ಆಗಿರುತ್ತದೆ. ಅದಕ್ಕೆ ಕಾರಣ ಏನು? ಅಲ್ಲಿನ ವಿಶೇಷತೆ ಏನು ಅನ್ನೋದನ್ನು ನಾವಿಲ್ಲಿ ತಿಳಿಸಿದ್ದೇವೆ.

ದ್ರೌಪದಿಗೆ ಸಂಬಂಧಪಟ್ಟಿದ್ದು

ದ್ರೌಪದಿಗೆ ಸಂಬಂಧಪಟ್ಟಿದ್ದು

PC: youtube

ಬಹುಪಾಲು ಕಥೆಗಳು, ದ್ರೌಪದಿಯ ಮೇಲೆ ಕೇಂದ್ರಿತವಾದವುಗಳು. ಈ ಕರಗ ಧಾರ್ಮಿಕ ಆಚರಣೆಯನ್ನು ವಿವರಿಸುತ್ತದೆ. ಒಂದು ಕಥೆಯ ಪ್ರಕಾರ, ದ್ರೌಪದಿಯು ಹಳದಿ ಸೀರೆಯನ್ನುಟ್ಟು , ಕರಗವನ್ನು ತಲೆಯಲ್ಲಿ ಹೊತ್ತು, ಕಲ್ಲಿದ್ದಲಿನ ಮೇಲೆ ನಡೆದುಕೊಂಡು ಹೋಗುತ್ತಿರುತ್ತಾಳೆ. ಇನ್ನೊಂದು ಕಥೆಯ ಪ್ರಕಾರ ದ್ರೌಪದಿ ತಲೆಯಲ್ಲಿ ಹೊತ್ತುಕೊಂಡಿದ್ದಂತದೇ ಕರಗವನ್ನು ಆದಿಶಕ್ತಿಯು ತಲೆಯಲ್ಲಿ ಹೊತ್ತಿರುತ್ತಾಳೆ. ಆದಿಶಕ್ತಿ ದ್ರೌಪದಿಯನ್ನು ಅಸುರರಿಂದ ರಕ್ಷಿಸಿದಾಕೆ.

ಕರಗ ಹೇಗಿರುತ್ತದೆ

ಕರಗ ಹೇಗಿರುತ್ತದೆ

PC: youtube

ಸಾಮಾನ್ಯವಾಗಿ ಕರಗ ಅಂದರೆ ಕಣ್ಣೆದುರು ಬರುವ ಚಿತ್ರವೆಂದರೆ ಅರ್ಚಕರು ಹಳದಿ ಬಟ್ಟೆಯನ್ನು ತೊಟ್ಟು ತಲೆಮೇಲೆ ಹೂವಿನಿಂದ ಅಲಂಕರಿಸಲಾಗಿರುವ ಕರಗಹೊತ್ತು, ಕೈಯಲ್ಲಿ ಖಡ್ಗ ಹಿಡಿದು ಕಲ್ಲಿದ್ದಲಿನ ಮೇಲೆ ನಡೆಯುತ್ತಾ ಮಹಾಭಾರವನ್ನು ವರ್ಣಿಸುವುದಾಗಿದೆ.

ಚಿಕ್ಕಬಳ್ಳಾಪುರದ ಕರಗ

ಚಿಕ್ಕಬಳ್ಳಾಪುರದ ಕರಗ

PC; youtube

ಚಿಕ್ಕಬಳ್ಳಾಪುರದಲ್ಲಿನ ಈ ಉತ್ಸವದ ವೈಶಿಷ್ಟ್ಯವೆಂದರೆ, ಇಲ್ಲಿ ಕರಗವನ್ನು ಹೊರುವುದು ಮಹಿಳೆ ಅರ್ಚಕಿ, ಹಾಗಾಗಿ ಮಹಿಳಾ ಅರ್ಚಕಿ ಹಳದಿ ಸೀರೆಯನ್ನು ಉಟ್ಟು, ಹೂವಿನಿಂದ ಅಲಂಕರಿಸಿದ ಕರಗವನ್ನು ತಲೆಯಲ್ಲಿ ಹೊತ್ತುಕೊಂಡು, ಕೈಯಲ್ಲಿ ಖಡ್ಗ ಹಿಡಿದು ಕಲ್ಲಿದ್ದಲಿನ ಮೇಲೆ ನಡೆಯುತ್ತಾರೆ.

ಕರಗ ಹೊತ್ತ ಅರ್ಚಕಿ

ಕರಗ ಹೊತ್ತ ಅರ್ಚಕಿ

PC: youtube

ಕರಗ ಹೊತ್ತ ಅರ್ಚಕಿ ಹಾಗೂ ಜೊತೆಯಲ್ಲಿರುವ ವೀರಕುಮಾರರು ಸಾಕಷ್ಟು ಭಕ್ತರು ಹಾಗೂ ದೂರದೂರದ ಊರುಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಕರಗ ಹೊತ್ತ ಅರ್ಚಕರು ಮುಖ್ಯ ರಸ್ತೆ ಮೇಲೆ ನಡೆಯುತ್ತಿದ್ದಂತೆ, ಭಕ್ತರು ಕರಗಕ್ಕೆ ಪ್ರಾರ್ಥನೆ ಸಲ್ಲಿಸಲು ಮುಂದಾಗುತ್ತಾರೆ.

1961ರಿಂದ ಪ್ರಾಂರಭವಾದ ದ್ರೌಪತಮ್ಮ ಕರಗ

1961ರಿಂದ ಪ್ರಾಂರಭವಾದ ದ್ರೌಪತಮ್ಮ ಕರಗ

PC: youtube

ನಗರದ ಬಾಪೂಜಿನಗರದ ಶ್ರೀ ಮಹೇಶ್ವರಮ್ಮ ದೇವಾಲಯದಲ್ಲಿ ಅರುಂಧತಿ ಹರಿಜನ ಅಭಿವೃದ್ಧಿ ಸಂಘ, ದ್ರೌಪತಮ್ಮ ಕರಗ ಮಹೋತ್ಸವ ಸಮಿತಿ ಹಾಗೂ ಮಹೇಶ್ವರಿ ಮಹಿಳಾ ಮಂಡಳಿಯ ಆಶ್ರಯದಲ್ಲಿ 1961ರಿಂದ ದ್ರೌಪತಮ್ಮ ಕರಗ ಮಹೋತ್ಸವವು ನಡೆಯುತ್ತಿದೆ.

ಮಹೇಶ್ವರಿ ದೇವಿಗೆ ಪುಷ್ಪಾಲಂಕಾರ

ಮಹೇಶ್ವರಿ ದೇವಿಗೆ ಪುಷ್ಪಾಲಂಕಾರ

PC: youtube

ಕರಗದ ಪ್ರಯುಕ್ತ ಮಹೇಶ್ವರಿ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗುತ್ತದೆ, ಅಲ್ಲದೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಿಂದ ಪೂಜಾ ಕೈಂಕರ್ಯದಲ್ಲಿ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.

ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗುತ್ತವೆ

ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗುತ್ತವೆ

PC: youtube

ಕರಗ ಮಹೋತ್ಸವದ ಅಂಗವಾಗಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ರಾಜ್ಯ ಸೇರಿದಂತೆ ಇತರ ರಾಜ್ಯಗಳಿಂದ ಆಗಮಿಸಿದ್ದ ಕೀಲು ಕುದರೆ, ಗಾರುಡಿಗೊಂಬೆಗಳು, ಪೂಜಾ ಕುಣಿತ, ನವಿಲು ಕುಣಿತ, ಹುಲಿವೇಷ, ಮಹಿಳೆಯರ ತಮಟೆ ವಾದ್ಯ ಸೇರಿದಂತೆ ಜಾನಪದ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಕಲಾ ಪ್ರದರ್ಶನಗಳು ಭಾಗಿಯಾಗುತ್ತವೆ. ನಿಮಗೂ ಚಿಕ್ಕಬಳ್ಳಾಪುರದ ಕರಗ ಮಹೋತ್ಸವದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದರೆ ಮಿಸ್ ಮಾಡದೇ ಪಾಲ್ಗೊಳ್ಳಿ.

ತಲುಪುವುದು ಹೇಗೆ?

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಚಿಕ್ಕಬಳ್ಳಾಪುರದಿಂದ 56 ಕಿ.ಮೀ ದೂರದಲ್ಲಿದೆ. ಇದು ಹಲವಾರು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ಹೊಂದಿರುವ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ನೀವು ಚಿಕ್ಕಬಳ್ಳಾಪುರ ತನಕ ಟ್ಯಾಕ್ಸಿ ಅಥವಾ ಬಸ್ ತೆಗೆದುಕೊಳ್ಳಬಹುದು.

ಚಿಕ್ಕಬಳ್ಳಾಪುರವು ರಸ್ತೆ ಸಾರಿಗೆ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ನಿರಂತರ ಮಾರ್ಗವನ್ನು ಹೊಂದಿವೆ. ಆಟೋಗಳು ಮತ್ತು ಬಾಡಿಗೆ ಕಾರುಗಳು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ನಡುವೆ ಸುಲಭವಾಗಿ ಲಭ್ಯವಿದೆ. ಟ್ಯಾಕ್ಸಿಯನ್ನು ನೇಮಿಸಿಕೊಳ್ಳುವುದು ಉತ್ತಮ.

ಹತ್ತಿರದ ರೈಲು ನಿಲ್ದಾಣವೆಂದರೆ ಚಿಕ್ಕಬಳ್ಳಾಪುರ ರೈಲ್ವೇ ನಿಲ್ದಾಣ. ಬೆಂಗಳೂರಿನಿಂದ ಮೈಸೂರು ಮತ್ತು ಚಿಕ್ಕಬಳ್ಳಾಪುರವರೆಗೆ ನಿರಂತರ ರೈಲುಗಳು ಇವೆ. ನಿಲ್ದಾಣದಿಂದ, ನಿಮ್ಮ ಅಪೇಕ್ಷಿತ ತಾಣಗಳನ್ನು ತಲುಪಲು ಸ್ಥಳೀಯ ಸಾರಿಗೆಯ ಸಾರಿಗೆಗಾಗಿ ನೀವು ಆರಿಸಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more