• Follow NativePlanet
Share
Menu
» »ಪ್ರಪಂಚದಲ್ಲಿ ಎರಡನೇ ಅತ್ಯಂತ ದೊಡ್ಡ ಗೋಡೆ ಎಲ್ಲಿದೆ ಗೊತ್ತ?

ಪ್ರಪಂಚದಲ್ಲಿ ಎರಡನೇ ಅತ್ಯಂತ ದೊಡ್ಡ ಗೋಡೆ ಎಲ್ಲಿದೆ ಗೊತ್ತ?

Written By:

ದೇಶದಲ್ಲಿ ನಿರ್ಮಿಸಲಾಗಿರುವ ಚಾರಿತ್ರಾತ್ಮಿಕವಾದ ಕಟ್ಟಡಗಳಲ್ಲಿ "ಕುಂಬಾಲ್ ಘಡ್ ಕೋಟ" ಎಷ್ಟೋ ವಿಶೇಷವಾದುದು. ಇದು ರಾಜಸ್ಥಾನದ ರಾಜಸಮಂದ ಜಿಲ್ಲೆಯ ಚಾರಿತ್ರಿಕ ಪ್ರದೇಶವಾಗಿದೆ. ಕುಂಬಾಲ್ ಘಡ್‍ನಲ್ಲಿ ಅದ್ಭುತವಾದ ಒಂದು ಕೋಟೆ ಇದೆ. ಆರಾವಳಿ ಪ್ರದೇಶದಲ್ಲಿ ಸುಮಾರು 36 ಕಿ.ಮೀ ದೂರದಲ್ಲಿ ವಿಸ್ತಾರಗೊಂಡಿರುವ ಈ ಕೋಟೆಯನ್ನು 15 ನೇ ಶತಮಾನದಲ್ಲಿ "ರಾಣಾ ಕುಂಭ" ಎಂಬ ಮಹಾರಾಜನು ನಿರ್ಮಾಣ ಮಾಡಿದನು.

ಈ ಕೋಟೆಯಲ್ಲಿ ಸಾಲಾಗಿ 36 ದೇವಾಲಯಗಳು, 250 ಕಟ್ಟಡಗಳ ಜೊತೆಗೆ ರಕ್ಷಣೆಗಾಗಿ ಚೀನಾ ಗೇಟ್‍ನ ಮಾದರಿಯಲ್ಲಿಯೇ ಇಂಡಿಯನ್ ವಾಲ್ ಇದೆ. ಮೇವಾರ್ ನದಿ ತೀರದಲ್ಲಿ ಈ ಕೋಟೆ ಇದೆ. ಇಲ್ಲಿ 13 ಶಿಖರಗಳು, ವಾಚ್ ಟವರ್‍ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಮಹಾರಾಣಾ ಫತೆ ಸಿಂಗ್ ನಿರ್ಮಾಣ ಮಾಡಿದ ಗೋಪುರ ಪ್ಯಾಲೆಸ್ ಕೂಡ ಇದೆ.

ಶತ್ರುಗಳ ದಾಳಿಯಿಂದ ರಕ್ಷಣೆ

ಶತ್ರುಗಳ ದಾಳಿಯಿಂದ ರಕ್ಷಣೆ

ಅತ್ಯಂತ ಎತ್ತರವಾದ ಕುಂಬಾಲ್ ಘಡ್ ಕೋಟೆಯ ಗೋಡೆಯು ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯುವುದಕ್ಕಾಗಿ ನಿರ್ಮಾಣ ಮಾಡಿದ್ದರು.

ಎರಡನೇ ಎತ್ತರದ ಗೋಡೆ

ಎರಡನೇ ಎತ್ತರದ ಗೋಡೆ

ಗ್ರೇಟ್ ವಾಲ್ ಆಫ್ ಚೈನದ ನಂತರ ಎರಡನೇ ಅತ್ಯಂತ ಎತ್ತರದ ಗೋಡೆ ಈ ಕುಂಬಾಲ್ ಘಡ್ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ವಿಶೇಷಗಳು

ವಿಶೇಷಗಳು

ಎಷ್ಟೊ ಅದ್ಭುತವಾಗಿರುವ ಈ ಕೋಟೆಯು ಪ್ರವಾಸಿಗರಿಗೆ ಆಶ್ಚರ್ಯಕ್ಕೆ ಗುರಿ ಮಾಡುವ ಹಲವಾರು ವಿಶೇಷತೆಗಳು ಅಡಗಿಸಿಕೊಂಡಿದೆ.

ಪ್ರಧಾನ ಆರ್ಕಷಣೆಗಳು

ಪ್ರಧಾನ ಆರ್ಕಷಣೆಗಳು

ಈ ಕೋಟೆಯ ಪ್ರಾಗಂಣದಲ್ಲಿ 360 ಹಿಂದೂ ಮತ್ತು ಜೈನ ದೇವಾಲಯಗಳಿವೆ. ಇವುಗಳಲ್ಲಿ ನೀಲಕಂಠ ಮಹಾದೇವನ ದೇವಾಲಯ ಪ್ರಧಾನವಾದ ಆರ್ಕಷಣೆಯಾಗಿದೆ.

6 ಅಡಿ ಎತ್ತರದ ಶಿವಲಿಂಗ

6 ಅಡಿ ಎತ್ತರದ ಶಿವಲಿಂಗ

ಈ ದೇವಾಲಯದಲ್ಲಿ ಮಹಾ ಶಿವನು ನೆಲೆಸಿದ್ದಾನೆ. ಇಲ್ಲಿನ ಶಿವಲಿಂಗವು 6 ಅಡಿ ಎತ್ತರದಲ್ಲಿದ್ದಾನೆ. ಈ ಶಿವಲಿಂಗವು ದೇಶದ ಅತಿ ದೊಡ್ಡದಾದ ಶಿವಲಿಂಗಳಲ್ಲಿ ಒಂದಾಗಿದೆ.

ರಾಣಾ ಕುಂಬಾರ್

ರಾಣಾ ಕುಂಬಾರ್

ಕುಂಬಾಲ್ ಘಡ್ ಕೋಟೆಯಲ್ಲಿನ ಹನುಮಾನ್ ಪೋಲ್ ಸಮೀಪದಲ್ಲಿ ಜೈನ ದೇವಾಲಯವಿದೆ. ಈ ದೇವಾಲಯವನ್ನು ರಾಣಾ ಕುಂಬಾರ್ ನಿರ್ಮಾಣ ಮಾಡಿದರು.

ಪರಮರಾಮನ ದೇವಾಲಯ

ಪರಮರಾಮನ ದೇವಾಲಯ

ಈ ದೇವಾಲಯದಲ್ಲಿ ಜೈನರ ಜೀವನ ಚಿತ್ರಗಳನ್ನು ಪ್ರತಿಬಿಂಬಿಸುವ ಹಲವಾರು ಕಲಾಕೃತಿಗಳನ್ನು ಕಾಣಬಹುದಾಗಿದೆ. ಕೋಟಗಳಲ್ಲೇ ಪುರಾತನವಾದ ಗುಹೆಗಳಲ್ಲಿ ಪರುಶುರಾಮನ ದೇವಾಲಯವಿದೆ.

ಶ್ರೀ ರಾಮನ ಆರ್ಶಿವಾದ

ಶ್ರೀ ರಾಮನ ಆರ್ಶಿವಾದ

ಈ ದೇವಾಲಯದಲ್ಲಿ ಪರಶುರಾಮನಿಗೆ ಒಂದು ವಿಗ್ರಹವಿರುತ್ತದೆ. ಪುರಾಣದ ಪ್ರಕಾರ ಪರಶುರಾಮನು ಇಲ್ಲಿ ಧ್ಯಾನ ಮಾಡಿದನು ಎಂದೂ, ನಂತರ ಶ್ರೀರಾಮನ ಆರ್ಶಿವಾದ ಪಡೆದನು ಎಂದು ಹೇಳುತ್ತಾರೆ.

ಎರಡು ಸುಂದರವಾದ ಮಹಲ್‍ಗಳು

ಎರಡು ಸುಂದರವಾದ ಮಹಲ್‍ಗಳು

ಕುಂಭಾಲ್ ಘಡ್‍ನಲ್ಲಿ ಪ್ಯಾಲೆಸ್ ಕೂಡ ಇದೆ. ಇದನ್ನು ಮೇಘಾಲಯ ಪ್ಯಾಲೆಸ್ ಎಂದು ಕರೆಯುತ್ತಾರೆ. ಈ ಕೋಟೆಯಲ್ಲಿ 2 ಅದ್ಭುತವಾದ ಪ್ಯಾಲೆಸ್‍ಗಳು ಇವೆ.

ವಿಧಾನಗಳು

ವಿಧಾನಗಳು

ತಂಪಾದ ಗಾಳಿಯನ್ನು ಇಲ್ಲಿ ಅಸ್ವಾಧಿಬಹುದು. ಇಲ್ಲಿನ ಹಲವಾರು ದೇವಾಲಯಗಳನ್ನು ಕಾಣಬಹುದು. ಇದೇ ಅಲ್ಲದೇ ಅರಮನೆಗಳ ವೈಭವವನ್ನು ಕಣ್ಣುತುಂಬಿಕೊಳ್ಳಬಹುದು. ಕೇವಲ ಇಷ್ಟೆ ಅಲ್ಲ....

ಅದ್ಭುತಗಳು

ಅದ್ಭುತಗಳು

ಈ ಕೋಟೆಯಲ್ಲಿನ ಸೌಂದರ್ಯ ಎಂಥವರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಇಲ್ಲಿನ ಕಲುಶಿತವಿಲ್ಲದ ಗಾಳಿಯನ್ನು ಅಸ್ವಾಧಿಸಲು ದೇಶ, ವಿದೇಶಗಳಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಎಲ್ಲಾ ಸುಂದರವಾದ ಪ್ರವಾಸಿ ತಾಣಗಳನ್ನು ಕೇವಲ ಒಂದು ದಿನದಲ್ಲಿ ಕಾಣಲು ಸಾಧ್ಯವಿಲ್ಲ.

3500 ಅಡಿ

3500 ಅಡಿ

3500 ಅಡಿಗಳ ಎತ್ತರದಲ್ಲಿನ ಈ ಕೋಟೆ ಸುಮಾರು 36 ಕಿ.ಮೀ ವಿಸ್ತೀರ್ಣ ವ್ಯಾಪಿಸಿದ ಕಾರಣ ನೋಡುವುದಕ್ಕೆ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ.

ಮೇವಾರ್ ಕೋಟೆ

ಮೇವಾರ್ ಕೋಟೆ

ಕುಂಭಾಲ್ ಘಡ್ ಕೋಟೆ 15 ನೇ ಶತಮಾನದಲ್ಲಿ ರಾಜ ರಾಣಾ ಕುಂಭಾ ನಿರ್ಮಾಣ ಮಾಡಿದನು. ಈ ಮೇವಾರ್ ಕೋಟೆ ಬಾಣಾ ನದಿಗೆ ಅಡ್ಡಾಲಾಗಿದೆ.

ಎರಡನೇ ಅತ್ಯಂತ ಮುಖ್ಯವಾದ ಕೋಟೆ

ಎರಡನೇ ಅತ್ಯಂತ ಮುಖ್ಯವಾದ ಕೋಟೆ

ಇದು ರಾಜಸ್ಥಾನದಲ್ಲಿನ 2 ನೇ ಅತಿ ದೊಡ್ಡ ಮುಖ್ಯವಾದ ಕೋಟೆ. ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಕೋಟೆಗೆ ಭೇಟಿ ನೀಡುತ್ತಾರೆ.

ಶಿಖರಗಳು

ಶಿಖರಗಳು

ಈ ಬೃಹತ್ ಕೋಟೆ 13 ಶಿಖರಗಳನ್ನು, ವಾಚ್ ಟವರ್‍ಗಳನ್ನು ಹೊಂದಿದೆ.

ಗೋಪುರ ಪ್ಯಾಲೆಸ್

ಗೋಪುರ ಪ್ಯಾಲೆಸ್

ಕುಂಭಾಲ್ ಘಡ್ ಕೋಟೆ ಆರಾವಳಿ ಪ್ರದೇಶದಲ್ಲಿ ಸುಮಾರು 36 ಕಿ.ಮೀ ಇದೆ. ಇವುಗಳಲ್ಲಿ ಮಹಾರಾಣಾ ಫತೆ ಸಿಂಗ್ ನಿರ್ಮಾಣಮಾಡಿದ ಗೋಪುರ ಪ್ಯಾಲೆಸ್ ಇದೆ.

 ಗ್ರೇಟ್ ವಾಲ್ ಆಫ್ ಚೀನ

ಗ್ರೇಟ್ ವಾಲ್ ಆಫ್ ಚೀನ

ಎತ್ತರದಲ್ಲಿನ ಈ ಗೋಡೆಯನ್ನು ಶತ್ರುಗಳು ದಾಡಲು ಅಸಾಧ್ಯವಾಗಿರುವುದರಿಂದ ರಕ್ಷಣೆಯ ದೃಷ್ಠಿಯಿಂದ ಈ ಗೋಡೆಯನ್ನು ನಿರ್ಮಾಣ ಮಾಡಿದರು. ಗ್ರೇಟ್ ವಾಲ್ ಆಫ್ ಚೈನ ನಂತರ ಇದು ಎರಡನೇ ಎತ್ತರದ ಗೋಡೆಯಾಗಿದೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ನಿಲ್ದಾಣ ಕುಂಭಾಲ್ ಘಟ್‍ಗೆ ಸಮೀಪದಲ್ಲಿ ರೈಲು ಸ್ಟೇಷನ್ ಫಲ್ನಾಲ್. ಇದು ಮುಂಬೈ, ಅಜ್ಮಿರ, ದೆಹಲಿ, ಅಹಮದಾಬಾದ್, ಜೈಪುರ ಮತ್ತು ಜೋಧ ಪುರ್‍ಗೆ ರೈಲ್ವೆ ಸೌಕರ್ಯವಿದೆ. ಇಲ್ಲಿಂನಿಂದ ಕುಂಭಾಲ್ ಘಡ್‍ಗೆ ಟ್ಯಾಕ್ಸಿಯ ಮೂಲಕ ತೆರಳಬಹುದು.

ವಿಮಾನ ಮಾರ್ಗವಾಗಿ

ವಿಮಾನ ಮಾರ್ಗವಾಗಿ

ಕುಂಭಾಲ ಘಡ್ ಪ್ರದೇಶಕ್ಕೆ ಮಹಾರಾಣಾ ಪ್ರತಾಪ್ ವಿಮಾನ ನಿಲ್ದಾಣದ ಮೂಖಾಂತರ ತಲುಪಬಹುದು. ಇಲ್ಲಿಂದ ಕುಂಭಾಲ ಘಡ್‍ಗೆ ಟ್ಯಾಕ್ಸಿಯ ಮುಖಾಂತರ ತೆರಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ