Search
  • Follow NativePlanet
Share
» »ಈ ಪವಿತ್ರ ನದಿಗಳು ಮತ್ತು ಉಗಮ ಸ್ಥಾನಗಳು ಗೊತ್ತೇ ?

ಈ ಪವಿತ್ರ ನದಿಗಳು ಮತ್ತು ಉಗಮ ಸ್ಥಾನಗಳು ಗೊತ್ತೇ ?

By Vijay

ಸನಾತನ ಧರ್ಮ ತಳವೂರಿರುವ ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆ. ಹಿಂದಿನಿಂದಲೂ ನದಿಗಳಿಗೆ ಹಿಂದು ಧರ್ಮದಲ್ಲಿ ಪವಿತ್ರ ಸ್ಥಾನ ಮಾನ ಕಲ್ಪಿಸಲಾಗಿದೆ. ಎಷ್ಟೊ ಪ್ರಸಂಗಗಳಲ್ಲಿ ಸ್ವತಃ ತ್ರಿಮೂರ್ತಿಗಳಿಂದಲೆ, ಋಷಿ, ಸಂತರುಗಳಿಂದಲೆ ನದಿಗಳು ಉದ್ಭವಗೊಂಡಿರುವುದನ್ನು ಪುರಾಣ ಪುಣ್ಯ ಕಥೆಗಳಲ್ಲಿ ಕೇಳಿರುತ್ತೇವೆ.

ನದಿಗಳ ಪಾವಿತ್ರ್ಯತೆ ಎಷ್ಟಿದೆ ಎಂದರೆ ಅವುಗಳಲ್ಲಿ ಭಕ್ತಿಯಿಂದ ಸ್ನಾನ ಮಾಡಿದಾಗ ನಮ್ಮ ಸಕಲ ಪಾಪ ಕರ್ಮಾದಿಗಳು ನಶಿಸಿ ಹೋಗುತ್ತವೆ ಎಂದು ನಂಬಲಾಗುತ್ತದೆ. ಉದಾಹರಣೆಗೆ ಮಹಾಕುಂಭ ಮೇಳದಲ್ಲಿ, ಸಂಗಮ ಹಾಗೂ ತ್ರಿವೇಣಿ ಸಂಗಮಗಳಲ್ಲಿ ಸ್ನಾನ ಮಾಡುವುದು ಪುಣ್ಯದಾಯಿಕವಾಗಿದೆ ಎಂದು ನಂಬಲಾಗುತ್ತದೆ.

ಭಾರತದ ಏಳು ಪವಿತ್ರ ನದಿಗಳ ಪ್ರವಾಸ

ಭಾರತದಲ್ಲಿಯೂ ಸಹ ಸಾಕಷ್ಟು ನದಿಗಳು ಹಾಗೂ ಅವುಗಳ ಉಪನದಿಗಳು ಎಲ್ಲೆಡೆ ಹರಿದಿರುವುದನ್ನು ಕಾಣಬಹುದು. ಅದರಂತೆ ನದಿಗಳು ಸಾಮಾನ್ಯವಾಗಿ ಹುಟ್ಟುವ ಅಥವಾ ಉಗಮಗೊಳ್ಳುವ ಸ್ಥಳಗಳಿಗೂ ಸಹ ವಿಶೇಷವಾದ ಮಹತ್ವವಿರುತ್ತದೆ, ಹಿನ್ನಿಲೆಯಿರುತ್ತದೆ ಹಾಗೂ ಕಾರಣವಿರುತ್ತದೆ ಎಂದು ಕಥೆಗಳ ಮೂಲಕ ತಿಳಿಯಬಹುದಾಗಿದೆ.

ನದಿಗಳಲ್ಲದೆ ಅವುಗಳ ಉಗಮ ಸ್ಥಾನಗಳೂ ಸಹ ಧಾರ್ಮಿಕ ಮಹತ್ವ ಪಡೆದಿದ್ದು ಧಾರ್ಮಿಕ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಿವೆ. ಪ್ರಸ್ತುತ ಲೇಖನದ ಮೂಲಕ ಕೆಲವು ಆಯ್ದ ನದಿಗಳು ಹಾಗೂ ಅವುಗಳ ಉಗಮ ಸ್ಥಾನಗಳು ಯಾವುವೆಂಬುದರ ಕುರಿತು ತಿಳಿಯಿರಿ.

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಗಂಗಾ : ಭಾರತದ ದೊಡ್ಡ ಹಾಗೂ ಅತಿ ಪವಿತ್ರವಾದ ನದಿ ಗಂಗೆಯಾಗಿದೆ. "ಗಂಗಾ ಸ್ನಾನಂ ತುಂಗಾ ಪಾನಂ" ಎಂದು ಹೇಳುವಂತೆ ಈ ನದಿಯಲ್ಲಿ ಮಿಂದಾಗ ಸರ್ವ ಪಾಪಗಳನ್ನು ನಾಶ ಮಾಡುತ್ತದೆಂದು ಹಿಂದುಗಳು ಗಂಗಾ ನದಿಯ ಕುರಿತು ನಂಬಿಕೆ ಹೊಂದಿದ್ದಾರೆ.

ಚಿತ್ರಕೃಪೆ: envybalki

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಈ ಪವಿತ್ರ ಗಂಗಾ ನದಿಯು ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ಎಂಬಲ್ಲಿ ಉಗಮಗೊಳ್ಳುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಗಂಗೋತ್ರಿಯಿಂದ ಕೆಲವು ಕಿ.ಮೀ ಮೇಲ್ಮುಖದಲ್ಲಿ ಕಡಿದಾದ ಹಿಮ ಪರ್ವತಗಳ ಮಧ್ಯೆ ಚಾರಣ ಮಾಡುತ್ತ ಸಾಗಿದಾಗ ಸಿಗುವ ಗೌಮುಖ/ಗೋಮುಖದಲ್ಲಿ ಈ ನದಿಯು ಉಗಮಗೊಂಡು ಹರಿಯುತ್ತದೆ. ಗಂಗೋತ್ರಿಯಲ್ಲಿ ಗಂಗೆ ಮುಡಿಪಾದ ದೇವಾಲಯವೂ ಇದೆ. ಗೋಮುಖ.

ಚಿತ್ರಕೃಪೆ: Barry Silver

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಯಮುನಾ : ಭಾರತದ ಪವಿತ್ರ ನದಿಗಳ ಪೈಕಿ ಯಮುನಾ ನದಿಯೂ ಸಹ ಒಂದಾಗಿದೆ. ಉತ್ತರಾಖಂಡದಲ್ಲಿರುವ ಯಮುನೋತ್ರಿಯನ್ನು ಯಮುನಾ ನದಿಯ ಉಗಮ ಸ್ಥಾನವಾಗಿ ಪರಿಗಣಿಸಲಾಗುತ್ತದೆ ಹಾಗೂ ಇದೊಂದು ತೀರ್ಥಕ್ಷೇತ್ರವಾಗಿದೆ.

ಚಿತ್ರಕೃಪೆ: Souparna

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಭೌಗೋಳಿಕವಾಗಿ, ಯಮುನೆಯು ಸಮುದ್ರ ಮಟ್ಟದಿಂದ 4421 ಮೀಟರ್ ಎತ್ತರದಲ್ಲಿರುವ ಚಾಂಪಸರ್ ಹಿಮನದಿಯಲ್ಲಿ ಹುಟ್ಟುತ್ತಾಳೆ. ವಾಸ್ತವವಾಗಿ ಈ ಹಿಮನದಿಯು ಪವಿತ್ರ ಯಮುನೋತ್ರಿಯಿಂದ ಕೇವಲ 1 ಕಿಮೀ ದೂರದಲ್ಲಿದೆ. ಆದರೂ ಇದನ್ನು ತಲುಪಬೇಕಾದರೆ ಸಾಕಷ್ಟು ಪ್ರಯಾಸ ಪಡಬೇಕಾಗುವುದು. ಇಂಡೋ ಚೀನಾ ಗಡಿಯ ಸಮೀಪದಲ್ಲಿರುವ ಈ ತಾಣವನ್ನು ಕಾಲ್ನಡಿಗೆಯಿಂದ ತಲುಪಬೇಕಾದರೆ ಒಂದಿಡೀ ದಿನವೇ ಬೇಕಾಗುವುದು.

ಚಿತ್ರಕೃಪೆ: Guptaele

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಇಂಡಸ್/ಸಿಂಧು ನದಿ : ಟಿಬೆಟ್ ನಲ್ಲಿ ಹುಟ್ಟಿ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಹರಿಯುತ್ತ ಪಾಕಿಸ್ತಾನ ಪ್ರವೇಶಿಸುವ ಸಿಂಧು ನದಿಯು ಸಾಕಷ್ಟು ಪ್ರಾಮುಖ್ಯತೆ ಪಡೆದ ನದಿಯ್ಯಾಗಿದೆ. ನಿಜ ಹೇಳಬೇಕೆಂದರೆ ಕೆಲವರ ಪ್ರಕಾರ, ಸಿಂಧು ನದಿಯಿಂದಲೆ ಹಿಂದು ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಚಿತ್ರಕೃಪೆ: Avani Tanya

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಏಷಿಯಾದ ಅತಿ ಉದ್ದ ನದಿಗಳ ಪೈಕಿ ಒಂದಾಗಿರುವ ಸಿಂಧು ನದಿಯು ಒಟ್ಟಾರೆ ಮೂರು ಸಾವಿರಕ್ಕೂ ಅಧಿಕ ಕಿ.ಮೀ ಉದ್ದವನ್ನು ಹೊಂದಿದ್ದು ಮೂಲತಃ ಇದು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರ ಸ್ಥಳವೆನ್ನಲಾಗುವ ಮಾನಸ ಸರೋವರದಲ್ಲಿ ಉಗಮಗೊಳ್ಳುತ್ತದೆ. ಮಾನಸರೋವರ.

ಚಿತ್ರಕೃಪೆ: Prateek

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನರ್ಮದಾ : ರೇವಾ ಎಮ್ಬ ಹೆಸರಿನಿಂದಲೂ ಸಹ ಕರೆಯಲ್ಪಡುವ ನರ್ಮದಾ ನದಿಯು ಕೇಂದ್ರೀಯ ಭಾರತದ ಐದನೇಯ ದೊಡ್ಡ ನದಿಯಾಗಿದೆ ಹಾಗೂ ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ನದಿಯಾಗಿದೆ.

ಚಿತ್ರಕೃಪೆ: Ssriram mt

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಮಧ್ಯಪ್ರದೇಶದ ಅನುಪ್ಪೂರ್ ಜಿಲ್ಲೆಯ ಅಮರಕಂಟಕವು ಈ ನದಿಯ ಉಗಮಸ್ಥಾನವಾಗಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಇಲ್ಲಿರುವ ಮೈಕಾಲ್ ಬೆಟ್ಟ ಶ್ರೇಣಿಗಳಲ್ಲಿ ಈ ನದಿಯು ಉಗಮಗೊಂಡು ಹರಿಯುತ್ತದೆ.

ಚಿತ್ರಕೃಪೆ: R Singh

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ತಾಪಿ/ತಪ್ತಿ ನದಿ : ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ನದಿಗಳ ಪೈಕಿ ಒಂದಾಗಿರುವ ತಾಪಿ ನದಿಯು ಒಟ್ಟಾರೆ 724 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿದೆ.

ಚಿತ್ರಕೃಪೆ: Tvthari

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಮಧ್ಯಪ್ರದೇಶದ ಬೇತುಲ್ ಎಂಬ ಪ್ರದೇಶದ ಬಳಿಯಿರುವ ಸತ್ಪುರಾ ಬೆಟ್ಟ ಶ್ರೇಣಿಗಳಲ್ಲಿ ಈ ನದಿಯು ಉಗಮಗೊಳ್ಳುತ್ತದೆ.

ಚಿತ್ರಕೃಪೆ: Abhayashok

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಮಹಾನದಿ : ಛತ್ತೀಸಗಡ್ ಹಾಗೂ ಒಡಿಶಾ ರಾಜ್ಯದಲ್ಲಿ ಹರಿಯುವ ಈ ನದಿಯು ಹೆಸರಿಗೆ ತಕ್ಕ ಹಾಗೆ ಮಹಾನ್ ನದಿಯಾಗೆ ಎರಡು ರಾಜ್ಯದವರಿಂದ ಪರಿಗಣಿಸಲ್ಪಡುತ್ತದೆ.

ಚಿತ್ರಕೃಪೆ: Sujit kumar

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಇದು ಹಲವು ಬೆಟ್ಟಗಳಲ್ಲಿ ಉಗಮಗೊಳ್ಳುವ ಹಲವಾರು ನೀರಿನ ಮೂಲಗಳಿಂದ ರೂಪಗೊಳ್ಳುವುದರಿಂದ ಇದರ ನಿಖರ ಮೂಲದ ಕುರಿತು ಕರಾರುವಕ್ಕಾದ ಮಾಹಿತ್ಯಿಲ್ಲವಾದರೂ ಛತ್ತೀಸ್ಗಡ್ ರಾಜ್ಯದ ಧಮ್ತಾರಿ ಜಿಲ್ಲೆಯಲ್ಲಿರುವ ನಗ್ರಿ ಎಂಬ ಸ್ಥಳವು ಇದರ ಉಗಮ ಸ್ಥಳವೆನ್ನಲಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Manas Nayak

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಬ್ರಹ್ಮಪುತ್ರ : ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ನದಿಯಾಗಿ, ಅಸ್ಸಾಂ ಕಣಿವೆಯಲ್ಲಿ ಬ್ರಹ್ಮಪುತ್ರ ನದಿಯಾಗಿ ಹರಿಯುವ ಇದು ಏಷಿಯಾದ ದೊಡ್ಡ ನದಿಗಳ ಪೈಕಿ ಒಂದಾಗಿದ್ದು ಟಿಬೆಟ್ ನ ಹಿಮಾಲಯ ಭಾಗದ ಅಂಗ್ಸಿ ಹಿಮನದಿಯಿಂದ ರೂಪಗೊಳ್ಳುತ್ತದೆ.

ಚಿತ್ರಕೃಪೆ: Luca Galuzzi

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಬಿಯಾಸ್ ನದಿ : ಹಿಮಾಲಯದಲ್ಲಿ ಹುಟ್ಟುವ ಈ ನದಿಯು ಪ್ರಮುಖವಾಗಿ ಭಾರತದ ವಲಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಹರಿಯುತ್ತದೆ. ಹಿಮಾಲಯದ ಪ್ರಖ್ಯಾತ ಪ್ರ್ವಾಸಿ ಆಕರ್ಷಣೆಯಾದ ರೋಹ್ತಂಗ್ ಪಾಸ್ ನ ಬಿಯಾಸ್ ಕುಂಡ್ ಎಂಬಲ್ಲಿ ಈ ನದಿಯು ಉಗಮಗೊಳ್ಳುತ್ತದೆ.

ಚಿತ್ರಕೃಪೆ: AthulBiju94

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಗೋದಾವರಿ : ಮಹಾರಾಷ್ಟ್ರದಲ್ಲಿ ಹರಿದು ತೆಲಂಗಾಣದ ಮೂಲಕ ಆಂಧ್ರಪ್ರದೇಶಕ್ಕೆ ಪ್ರವೇಶಿಸುವ ಒಂದು ಪ್ರಮುಖ ನದಿ ಇದಾಗಿದ್ದು, ಈ ನದಿಯು ನಾಶಿಕ್ ತ್ರಿಂಬಕೇಶ್ವರದ ಬಳಿಯಿರುವ ಬ್ರಹ್ಮಗಿರಿ ಬೆಟ್ಟಗಳಲ್ಲಿ ಉಗಮಗೊಳ್ಳುತ್ತದೆ.

ಚಿತ್ರಕೃಪೆ: Coolgama

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಕೃಷ್ಣಾ ನದಿ : ದಕ್ಷಿಣ ಭಾರತದ ಪ್ರಮುಖ ನದಿಗಳ ಪೈಕಿ ಒಂದಾಗಿರುವ ಕೃಷ್ಣಾ ನದಿಯು ಮಹಾರಾಷ್ಟ್ರದ ಪ್ರಖ್ಯಾತ ಪ್ರವಾಸಿ ತಾಣವಾದ ಮಹಾಬಲೇಶ್ವರದಲ್ಲಿ ಹುಟ್ಟುತ್ತದೆ. ವಿಶೇಷವೆಂದರೆ ಇದೆ ಸ್ಥಳದಲ್ಲಿ ಇನ್ನೂ ನಾಲ್ಕು ಇತರೆ ನದಿಗಳೂ ಸಹ ಉಗಮಗೊಳ್ಳುವುದರಿಂದ ಇಲ್ಲಿ ದೇವಾಲಯ ನಿರ್ಮಿಸಲಾಗಿದ್ದು ಅದನ್ನು ಪಂಚಗಂಗಾ ದೇವಾಲಯ ಎನ್ನುತ್ತಾರೆ. ಇಲ್ಲಿ ಆಕಳ ಮುಖದಿಂದ ನೀರು ಜಿನುಗುವುದನ್ನು ಕಾಣಬಹುದು.

ಚಿತ್ರಕೃಪೆ: Karthik Easvur

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ನದಿಗಳು ಹಾಗೂ ಅವುಗಳ ಉಗಮಸ್ಥಾನಗಳು:

ಕಾವೇರಿ : ಕರ್ನಾಟಕದ ಜೀವ ನದಿ ಎಂದೆ ಪ್ರಖ್ಯಾತವಾಗಿರುವ ಕಾವೇರಿಯು ಉಗಮಗೊಳ್ಳುವ ಸ್ಥಾನ ತಲಕಾವೇರಿ ಎಂದು ಪರಿಗಣಿಸಲಾಗಿದೆ. ಕೊಡಗಿನಲ್ಲಿರುವ ತಲಕಾವೇರಿಯು ಒಂದು ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು ಸಾವಿರಾರು ಜನರಿಂದ ಭೆಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Pranchiyettan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X