• Follow NativePlanet
Share
» »ಭಾರತದಲ್ಲಿ ಉಪ್ಪಿನ ಮರುಭೂಮಿ ಕೂಡಾ ಇದೆ ಗೊತ್ತಾ?

ಭಾರತದಲ್ಲಿ ಉಪ್ಪಿನ ಮರುಭೂಮಿ ಕೂಡಾ ಇದೆ ಗೊತ್ತಾ?

Posted By: Manjula Balaraj Tantry

ರಾನ್‌ ಆಫ್ ಕಚ್‌ನ್ನು ಗ್ರೇಟ್ ರಾನ್ ಆಫ್ ಕಚ್ ಎಂದೂ ಕರೆಯಲಾಗುತ್ತದೆ. ಇದು ಗುಜರಾತಿನಲ್ಲಿರುವ ಅತ್ಯಂತ ಗಮನಾರ್ಹ ಮತ್ತು ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಇಲ್ಲಿನ ಸುಮಾರು 10,000 ಚದರ ಕಿ.ಮೀ ಗಿಂತಲೂ ಹೆಚ್ಚಿನ ಭಾಗವನ್ನು ಉಪ್ಪಿನ ಮರುಭೂಮಿಯು ಆವರಿಸಿಕೊಂಡಿದೆ. ಭಾರತದಲ್ಲಿಯ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಈ ಮರುಭೂಮಿಯು ನೀರಿನೊಳಗಿರುತ್ತದೆ ಎಂಬುದೇ ಒಂದು ಆಶ್ಚರ್ಯಕರವಾದುದಾಗಿದೆ. ವರ್ಷದ ಉಳಿದ ಎಂಟು ತಿಂಗಳುಗಳ ಕಾಲ, ಇದು ಬಿಳಿ ಉಪ್ಪುಗಳನ್ನು ಒಳಗೊಂಡಿರುತ್ತದೆ.

ಗ್ರೇಟ್ ರಾನ್ ಆಫ್ ಕಚ್ ಎಲ್ಲಿದೆ?

ಗ್ರೇಟ್ ರಾನ್ ಆಫ್ ಕಚ್ ಎಲ್ಲಿದೆ?

Nagarjun Kandukuru

ಕಚ್ ಜಿಲ್ಲೆಯ ಮೇಲಿರುವ ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರಕ್ಕೆ ವಿಶಾಲವಾದ ಗ್ರೇಟ್ ರಾನ್ ಆಫ್ ಕಚ್ ಇದೆ . ಭುಜ್ ನ ಮೂಲಕ ಇದನ್ನು ತಲುಪಬಹುದಾಗಿದೆ. ಭುಜ್ನ ಸುಮಾರು 1.5 ಗಂಟೆಗಳ ಉತ್ತರವನ್ನು ಗುಜರಾತ್ ಸರಕಾರವು ರಾನ್ ಗೆ ಗೇಟ್ವೇ ಎಂದು ಅಭಿವೃದ್ಧಿಪಡಿಸಿದೆ.ಧಾರ್ಡೊ ಉಪ್ಪು ಮರುಭೂಮಿಯ ಅಂಚಿನಲ್ಲಿದೆ. ಅಲ್ಲಿಯೇ ಹತ್ತಿರದ ಹೊಡ್ಕಾದಲ್ಲಿ ಉಳಿಯಲು ಇದು ಅತ್ಯಂತ ಅನುಕೂಲಕರವಾಗಿದೆ.

ಇಲ್ಲಿ ಉಳಿಯುವುದು ಎಲ್ಲಿ ?

ಇಲ್ಲಿ ಉಳಿಯುವುದು ಎಲ್ಲಿ ?

Leamington boy

ಉಳಿಯಲು ಅತ್ಯಂತ ಉತ್ತಮ ಆಯ್ಕೆಯೆಂದರೆ ಡಾರ್ಡೊನಲ್ಲಿನ ರಾನ್ ರೆಸಾರ್ಟ್. ಇದು ಮಣ್ಣಿನಿಂದ ಮಾಡಲಾಗಿರುವ ಗುಡಿಸಲುಗಳು. ಇದು ಸಾಂಪ್ರದಾಯಿಕವಾಗಿ ಕರಕುಶಲತೆಯಿಂದ ಅಲಂಕರಿಸಲ್ಪಟ್ಟಿದೆ. ಊಟದಿಂದ ಹಿಡಿದು ರಾತ್ರಿ ತಂಗಲು ಇಲ್ಲಿ ಏರ್ ಕಂಡೀಷನ್ ಡಬಲ್ ರೂಮುಗಳಿಗೆ ಸೇರಿ 4,800 ರೂ. ದರಗಳಿಂದ ಪ್ರಾರಂಭವಾಗುತ್ತದೆ. ಪ್ರವಾಸಿ ತಂಗುದಾಣವನ್ನು ಗುಜರಾತ್ ಸರಕಾರದಿಂದ ನಿರ್ಮಿಸಲಾಗಿದೆ. ಅವುಗಳಲ್ಲಿ ಟೊರಾನ್ ರಾನ್ ರೆಸಾರ್ಟ್ ಕೂಡಾ ಒಂದು. ಇದು ಉಪ್ಪು ಮರುಭೂಮಿ ಪ್ರವೇಶದ್ವಾರದಲ್ಲಿರುವ ಆರ್ಮಿ ಚೆಕ್‌ಪಾಯಿಂಟ್ ಮುಂದುಗಡೆ ಇದೆ. ಇಲ್ಲಿಯ ಸ್ಥಳವು ವಿಶೇಷವಾಗಿ ದೃಶ್ಯಾತ್ಮಕವಾದುದಲ್ಲವಾದರೂ ಉಪ್ಪಿನ ಮರುಭೂಮಿಗೆ ಈ ರೆಸಾರ್ಟ್ ಹತ್ತಿರದಲ್ಲಿದೆ.

ಇಲ್ಲಿಗೆ ಹೋಗುವುದು ಯಾವಾಗ?

ಇಲ್ಲಿಗೆ ಹೋಗುವುದು ಯಾವಾಗ?

Nagarjun Kandukuru

ಪ್ರತೀ ವರ್ಷ ಅಕ್ಟೋಬರ್ ತಿಂಗಳುಗಳಲ್ಲಿ ರಾನ್ ಕಚ್ ಬರಿದಾಗುತ್ತದೆ ಮತ್ತು ಇದು ಈ ಸಮಯದಲ್ಲಿ ಸ್ಥಿರವಾದ ನಿರ್ಜನ ಮತ್ತು ಅತಿವಾಸ್ತವಿಕವಾದ ಉಪ್ಪು ಮರುಭೂಮಿಯಾಗಿ ರೂಪಾಂತರಗೊಳ್ಳುತ್ತದೆ. ಪ್ರವಾಸಿಗರ ಭೇಟಿ ಕೊಡುವುದು ಮಾರ್ಚ್ ವರೆಗೂ ನಡೆಯುತ್ತದೆ. ಮತ್ತು ಈ ಮೇಲೆ ಹೇಳಲಾದ ವಾಸಸ್ಥಾನಗಳು ಮಾರ್ಚ್ ಕೊನೆಯಲ್ಲಿ ಮುಚ್ಚಲಾಗುತ್ತದೆ. ನೀವು ಹೆಚ್ಚು ಜನಸಂದಣಿಯನ್ನು ಇಷ್ಟ ಪಡುವುದಿಲ್ಲವಾದಲ್ಲಿ ಮತ್ತು ಶಾಂತಿಯುತ ವಾತಾವರಣವನ್ನು ಬಯಸುವಲ್ಲಿ ಪ್ರವಾಸಿಗರ ಭೇಟಿಯ ಕೊನೆಯ ಸಮಯವಾದ ಮಾರ್ಚ್ ತಿಂಗಳುಗಳಲ್ಲಿ ಭೇಟಿ ನೀಡುವುದು ಒಳ್ಳೆಯದು. ಭುಜ್ ನಿಂದ ಒಂದು ದಿನದ ಪ್ರವಾಸ ಮಾಡುವುದರ ಮೂಲಕ ನೀವು ಉಪ್ಪಿನ ಮರುಭೂಮಿಯನ್ನು ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿಯೂ ಕೂಡಾ ಭೇಟಿ ನೀಡಬಹುದಾಗಿದೆ. ಇಲ್ಲಿ ದಿನದಲ್ಲಿ ತಾಪಮಾನವು ಜಾಸ್ತಿಯಾಗಿರುತ್ತದೆ. ಜೊತೆಗೆ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು (ಆಹಾರ, ನೀರು ಮತ್ತು ಶೌಚಾಲಯಗಳು) ಕೂಡಾ ಇಲ್ಲಿ ಇಲ್ಲ.

ರಾನ್ ಉತ್ಸವ

ರಾನ್ ಉತ್ಸವ

Nagarjun Kandukuru

ರಾನ್ ಉತ್ಸವವನ್ನು ಗುಜರಾತ್ ಸರಕಾರದಿಂದ ಹಮ್ಮಿ ಕೊಳ್ಳಲಾಗುತ್ತದೆ. ಇದು ನವಂಬರ್ ತಿಂಗಳಿನಿಂದ ಪ್ರಾರಂಭಗೊಂಡು ಫೆಬ್ರವರಿ ತಿಂಗಳವರೆಗೆ ವಿಸ್ತರಿಸಲಾಗುತ್ತದೆ. ನೂರಾರು ಐಷಾರಾಮಿ ಡೇರೆಗಳನ್ನು ಹೊಂದಿರುವ ಡೇರೆ ನಗರವು ಪ್ರವಾಸಿಗರಿಗೆ ಧಾರ್ಡೊನಲ್ಲಿನ ರಾನ್ ರೆಸಾರ್ಟ್ ನ ಪ್ರವೇಶದ್ವಾರದಲ್ಲಿ ನಿರ್ಮಿಸಲಾಗಿದ್ದು ಇದರ ಜೊತೆಗೆ ಆಹಾರದ ಅಂಗಡಿಗಳ ಸಾಲು ಮತ್ತು ಕರಕುಶಲ ಅಂಗಡಿಗಳ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ.

ಕಚ್ ನ ರಾನ್ ನಲ್ಲಿ ನೋಡಬಹುದಾದ ದಾರಿಗಳು

ಕಚ್ ನ ರಾನ್ ನಲ್ಲಿ ನೋಡಬಹುದಾದ ದಾರಿಗಳು

Nagarjun Kandukuru

ನೀವು ರನ್ ಆಫ್ ಕಚ್ ಅನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕೆಂದರೆ , ಇಲ್ಲಿಯ ವಿಶಾಲ ನೋಟವನ್ನು ನೀಡುವ ಸಮುದ್ರ ಮಟ್ಟದಿಂದ 458 ಮೀಟರ್ ಗಳಷ್ಟು ಮೇಲಿರುವ ಕಲಾ ದುಂಗಾರ್ (ಬ್ಲ್ಯಾಕ್ ಹಿಲ್) ನಿಂದ ನೋಡಬೇಕು. ಇಲ್ಲಿಂದ ಪಾಕಿಸ್ತಾನಿ ಗಡಿರೇಖೆಯವರೆಗೂ ನೀವು ಎಲ್ಲವನ್ನೂ ನೋಡಬಹುದು. ಕಲಾ ದುಂಗಾರ್ ಅನ್ನು 25 ಕಿಲೋಮೀಟರ್ ದೂರದಲ್ಲಿರುವ ಖವ್ಡಾ ಗ್ರಾಮ ಮತ್ತು ಭುಜ್ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿ ಪ್ರವೇಶಿಸಬಹುದು, ಈ ಗ್ರಾಮವು ಪಾಕಿಸ್ಥಾನದ ಅಜ್ರಾಕ್ ಬ್ಲಾಕ್ ಮುದ್ರಣ ಸೇರಿದಂತೆ ಬ್ಲಾಕ್ ಮುದ್ರಣದಲ್ಲಿ ಪರಿಣತಿ ಹೊಂದಿದ ಕರಕುಶಲ ಕರ್ಮಿಗಳ ನೆಲೆಯಾಗಿದೆ. ಇಲ್ಲಿ ಸಾರ್ವಜನಿಕ ಪ್ರಯಾಣ ವ್ಯವಸ್ಥೆಯು ಸರಾಗವಾಗಿ ಇಲ್ಲದೇ ಇರುವ ಕಾರಣದಿಂದಾಗಿ ನಿಮ್ಮ ಖಾಸಗೀ ವಾಹನದ ಮೂಲಕ ಪ್ರಯಾಣಿಸಬಹುದಾಗಿದೆ. ಪ್ರಾಚೀನ ಲಕ್ ಪತ್ ಕೋಟೆಯೂ (ಭುಜ್ ನಿಂದ 140 ಕಿ.ಮೀ ದೂರದಲ್ಲಿರುವ ) ಸಹ ನಿಮಗೆ ಕಚ್ ನ ರಾನ್ ನ ಸುಂದರವಾದ ನೋಟವನ್ನು ನೀಡುತ್ತದೆ.

Read more about: gujarat

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ